Business Trip: ವಿಶ್ವದ ಅತ್ಯಂತ ದುಬಾರಿ ನಗರಗಳು, ಇಲ್ಲಿ ಬ್ಯುಸಿನೆಸ್​ ಟ್ರಿಪ್​ ಮಾಡೋಕೂ ಬೇಕು ಲಕ್ಷ ಲಕ್ಷ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೇರೆ ಬೇರೆ ದೇಶಗಳ ಜೊತೆ ವ್ಯಾಪಾರ ಸಂಬಂಧ ಹೊಂದಿರುವಾಗ ಸಹಜವಾಗಿಯೇ ಕೆಲಸ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಕಂಪನಿಯ ಉದ್ಯಮಿಗಳು, ಉದ್ಯೋಗಿಗಳು ದೇಶದಿಂದ ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ (Business Trip) ಬೆಳೆಸುವುದು ಅನಿವಾರ್ಯ.

  • Share this:

ಈಗ ವ್ಯಾಪಾರ (Business) ಎಂದರೆ ಕೇವಲ ಆ ದೇಶಕ್ಕೆ (Country) ಮತ್ತು ಅದರೊಳಗೆ ಸೀಮಿತವಾಗಿಲ್ಲ. ವ್ಯವಹಾರಿಕ ಸಂಬಂಧಗಳು ದೇಶದಾಚೆಯೂ ಪಸರಿಸಿದೆ. ತಮ್ಮ ಉತ್ಪನ್ನಗಳನ್ನು ದೇಶದ ಹೊರಗೂ ತಲುಪಿಸುವ ಉದ್ದೇಶದಿಂದಾಗಿ ಅಂತರಾಷ್ಟ್ರೀಯ ವ್ಯಾಪಾರಕ್ಕೆ (International Business) ಪ್ರತಿ ಕಂಪನಿ, ಉದ್ಯಮಗಳು ಹಾತೊರೆಯುತ್ತವೆ. ಹೀಗೆ ಬೇರೆ ಬೇರೆ ದೇಶಗಳ ಜೊತೆ ವ್ಯಾಪಾರ ಸಂಬಂಧ ಹೊಂದಿರುವಾಗ ಸಹಜವಾಗಿಯೇ ಕೆಲಸ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಕಂಪನಿಯ ಉದ್ಯಮಿಗಳು, ಉದ್ಯೋಗಿಗಳು ದೇಶದಿಂದ ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ (Business Trip) ಬೆಳೆಸುವುದು ಅನಿವಾರ್ಯ ಮತ್ತು ಅಗತ್ಯವಾಗಿರುತ್ತದೆ.


ವ್ಯಾಪಾರ ಪ್ರಯಾಣದ ದುಬಾರಿ ನಗರಗಳ ಪಟ್ಟಿ ಬಿಡುಗಡೆ


ವ್ಯಾಪಾರ ನಿಮಿತ್ತ ದೇಶದ ಅನೇಕ ನಗರಗಳಿಗೆ ಪ್ರವಾಸ ಕೈಗೊಳ್ಳುವಾಗ ಅನೇಕ ಖರ್ಚುವೆಚ್ಚ ಕೂಡ ಬರುತ್ತದೆ. ವ್ಯಾಪಾರ ಪ್ರಯಾಣ ಕೂಡ ಈಗ ಮೊದಲಿನಂತಿಲ್ಲ, ಅದರ ಪ್ರಯಾಣ ವೆಚ್ಚ ಕೂಡ ಹೆಚ್ಚಾಗಿದೆ. ಹೀಗೆ ವ್ಯಾಪಾರ ಪ್ರಯಾಣಕ್ಕಾಗಿ ಹೋಗುವ ವಿಶ್ವದ ದುಬಾರಿ ನಗರಗಳ ಪಟ್ಟಿಯನ್ನು ಕನ್ಸಲ್ಟಿಂಗ್ ಫರ್ಮ್ ಇಸಿಎ ಇಂಟರ್‌ನ್ಯಾಶನಲ್ ಬಿಡುಗಡೆ ಮಾಡಿದೆ.


ಕನ್ಸಲ್ಟಿಂಗ್ ಫರ್ಮ್ ಇಸಿಎ ಇಂಟರ್‌ನ್ಯಾಶನಲ್ ಪ್ರಕಾರ, ಬಿಗ್ ಆಪಲ್ ತನ್ನ ಸಮೀಕ್ಷೆಯ ಭಾಗವಾಗಿ ನಾಲ್ಕು-ಸ್ಟಾರ್ ಹೋಟೆಲ್‌ಗಳು, ಊಟಗಳು, ಟ್ಯಾಕ್ಸಿಗಳು, ಪಾನೀಯಗಳು ಇತರೆ ಸಾಂಧರ್ಬಿಕ ಖರ್ಚುಗಳನ್ನು ಎಣಿಕೆ ಮಾಡಿ ಈ ಫಲಿತಾಂಶಗಳನ್ನು ಬಹಿರಂಗಪಡಿಸಿದೆ.


ನ್ಯೂಯಾರ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಾಪಾರ ಪ್ರವಾಸ ನಗರ


2022 ರ ಈ ಪಟ್ಟಿಯಲ್ಲಿ ಅಮೆರಿಕಾದ ನ್ಯೂಯಾರ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಾಪಾರ ಪ್ರವಾಸ ತಾಣವಾಗಿ ಸ್ಥಾನ ಪಡೆದಿದೆ. ವ್ಯಾಪಾರ ಪ್ರಯಾಣ ಮತ್ತು ಪ್ರವಾಸೋದ್ಯಮವು ಹಿಂದಿನ ವರ್ಷಕ್ಕಿಂತ 8% ವೆಚ್ಚವನ್ನು ಹೆಚ್ಚಿಸಿದ್ದು, ಈ ಕಾರಣಕ್ಕಾಗಿಯೇ ನ್ಯೂಯಾರ್ಕ್‌ ವಿಶ್ವದ ದುಬಾರಿ ವ್ಯಾಪಾರ ಪ್ರಯಾಣ ನಗರವಾಗಿದೆ.


ನಂತರ ಯಾವೆಲ್ಲಾ ನಗರಗಳಿವೆ?


ವಿಶೇಷ ಎಂದರೆ ಈ ಪಟ್ಟಿಯ ಶ್ರೇಯಾಂಕದಲ್ಲಿ ಅಮೇರಿಕಾ ದೇಶವೇ ಪ್ರಾಬಲ್ಯ ಸಾಧಿಸಿದೆ. ನ್ಯೂಯಾರ್ಕ್‌ ನಂತರ ಯುಎಸ್‌ನ ವಾಷಿಂಗ್ಟನ್ DC ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಪಟ್ಟಿಯಲ್ಲಿ ಮೂರು ಮತ್ತು ಐದನೇ ಸ್ಥಾನ ಪಡೆದಿವೆ. ಎರಡನೇ ‌ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್ ನ ಜಿನೀವಾ ಮತ್ತು ನಾಲ್ಕನೇ ಸ್ಥಾನದಲ್ಲಿ ಜುರಿಚ್‌ ಸ್ಥಾನ ಪಡೆದುಕೊಂಡಿವೆ.


ಏಷ್ಯಾದಲ್ಲಿ ಅತ್ಯಂತ ದುಬಾರಿ ತಾಣ ಹಾಂಗ್‌ ಕಾಂಗ್


ಹಾಂಗ್ ಕಾಂಗ್ ಏಷ್ಯಾದಲ್ಲಿ ಅತ್ಯಂತ ದುಬಾರಿ ತಾಣವಾಗಿದೆ, ಸರಾಸರಿ ದೈನಂದಿನ ವೆಚ್ಚ $520 ಆಗಿದ್ದು, ಪ್ರತಿಸ್ಪರ್ಧಿ ಸಿಂಗಾಪುರಕ್ಕಿಂತ ಕೇವಲ $5 ಹೆಚ್ಚಾಗಿದೆ. ಲಂಡನ್ ಮತ್ತು ಪ್ಯಾರಿಸ್ ತಮ್ಮ ಮೊದಲ ಹತ್ತು ಸ್ಥಾನಗಳನ್ನು ಉಳಿಸಿಕೊಂಡಿವೆ ಮತ್ತು ಅಂಗೋಲಾದ ಲುವಾಂಡಾ ಆಫ್ರಿಕಾದಲ್ಲಿ ಅತ್ಯಂತ ಬೆಲೆಬಾಳುವ ಸ್ಥಳವಾಗಿದೆ.


ಇದನ್ನೂ ಓದಿ: 8 ಸಾವಿರ ಇದ್ರೆ ಸಾಕು, ಇಷ್ಟೆಲ್ಲಾ ಸ್ಥಳಗಳಿಗೆ ಫ್ಯಾಮಿಲಿ ಜೊತೆ ಟ್ರಿಪ್​ ಹೋಗ್ಬೋದು!


ವಾಸಿಸಲು ಅತ್ಯಂತ ದುಬಾರಿ ನಗರಗಳಲ್ಲಿಯೂ ನ್ಯೂಯಾರ್ಕ್‌ಗೆ ಸ್ಥಾನ


ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ನ ವರ್ಲ್ಡ್‌ವೈಡ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆಯಲ್ಲೂ ನ್ಯೂಯಾರ್ಕ್ ಮತ್ತು ಸಿಂಗಾಪುರ ವಾಸಿಸಲು ಅತ್ಯಂತ ದುಬಾರಿ ನಗರಗಳು ಎಂದು ಗುರುತಿಸಲ್ಪಟ್ಟಿದ್ದವು. ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯು ವಿಶ್ವದಾದ್ಯಂತ 173 ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿನ ಜೀವನ ವೆಚ್ಚವನ್ನು ಹೋಲಿಸಿ ಈ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು.


ಇನ್ನೂ ಸಮೀಕ್ಷೆಯ ಪ್ರಕಾರ ಸಿರಿಯಾದ ರಾಜಧಾನಿ ಡಮಾಸ್ಕಸ್ ಮತ್ತು ಲಿಬಿಯಾದ ಟ್ರಿಪೋಲಿ ವಿಶ್ವದ ಅತ್ಯಂತ ಅಗ್ಗದ ಸ್ಥಳವಾಗಿದೆ.

First published: