• Home
  • »
  • News
  • »
  • business
  • »
  • Indians: ಜಪಾನ್‌, ಚೀನಾ, ಪಾಕ್‌ ಹಿಂದಿಕ್ಕಿ ಆದಾಯ ಗಳಿಕೆಯಲ್ಲಿ ಅಮೆರೀಕಾದಲ್ಲಿ ಭಾರತೀಯರೇ ಟಾಪ್!

Indians: ಜಪಾನ್‌, ಚೀನಾ, ಪಾಕ್‌ ಹಿಂದಿಕ್ಕಿ ಆದಾಯ ಗಳಿಕೆಯಲ್ಲಿ ಅಮೆರೀಕಾದಲ್ಲಿ ಭಾರತೀಯರೇ ಟಾಪ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಗತ್ತಿನಾದ್ಯಂತ ಭಾರತೀಯರ ಪ್ರಾಬಲ್ಯ ಒಂದು ಕೈ ಮೇಲಿದೆ ಎನ್ನಬಹುದು. ಬ್ರಿಟನ್‌ನಲ್ಲಿ ಭಾರತೀಯ ಮೂಲದವರೇ ಪ್ರಧಾನಿಯಾದ್ದರಿಂದ ಹಿಡಿದು ಭಾರತೀಯರು ಯುಎಸ್‌ನಲ್ಲಿ ಅತಿ ಹೆಚ್ಚು ಗಳಿಸುವ ಜನಸಂಖ್ಯೆ ಎಂಬ ಹೆಗ್ಗಳಿಕೆವರೆಗೂ ಹವಾ ಮಾಡುತ್ತಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಅಮೆರಿಕಾ (America) ದಲ್ಲಿ ಭಾರತಿಯರ (Indians) ಹವಾ ಜೋರಾಗಿದೆ. ಉದ್ಯೋಗ (Job) ಪಡೆಯುವುದರಲ್ಲಿ, ಆದಾಯ (Income) ಗಳಿಕೆಯಲ್ಲಿ ಯುಎಸ್‌ (US) ಜನತೆಯನ್ನೇ ಮೀರಿಸುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತಿದೆ. ಇತ್ತೀಚೆಗೆ ಅಮೆರಿಕದ ಟಾಪ್ ಶಾಸಕ ರಿಚ್ ಮೆಕ್‌ಕಾರ್ಮಿಕ್ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತೀಯ-ಅಮೆರಿಕನ್ನರು ಅಮೆರಿಕದ ಜನಸಂಖ್ಯೆಯಲ್ಲಿ ಶೇಕಡ ಒಂದರಷ್ಟಿದ್ದು, ಶೇಕಡ ಆರರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


ಅಮೆರಿಕಾದಲ್ಲಿ ಭಾರತಿಯರದ್ದೇ ಹವಾ


ಹೌದು, ಜಗತ್ತಿನಾದ್ಯಂತ ಭಾರತೀಯರ ಪ್ರಾಬಲ್ಯ ಒಂದು ಕೈ ಮೇಲಿದೆ ಎನ್ನಬಹುದು. ಬ್ರಿಟನ್‌ನಲ್ಲಿ ಭಾರತೀಯ ಮೂಲದವರೇ ಪ್ರಧಾನಿಯಾದ್ದರಿಂದ ಹಿಡಿದು ಭಾರತೀಯರು ಯುಎಸ್‌ನಲ್ಲಿ ಅತಿ ಹೆಚ್ಚು ಗಳಿಸುವ ಜನಸಂಖ್ಯೆ ಎಂಬ ಹೆಗ್ಗಳಿಕೆವರೆಗೂ ಹವಾ ಮಾಡುತ್ತಿದ್ದಾರೆ.


ಪಾಕಿಸ್ತಾನ, ಚೀನಾ ಮತ್ತು ಜಪಾನ್‌ ಹಿಂದಿಕ್ಕಿದ ಭಾರತೀಯರು


ಅಮೇರಿಕಾದಲ್ಲಿ ಪಾಕಿಸ್ತಾನ, ಚೀನಾ ಮತ್ತು ಜಪಾನ್‌ನಂತಹ ದೇಶಗಳ ಉದ್ಯೋಗಿಗಳನ್ನು ಹಿಂದಿಕ್ಕಿರುವ ಭಾರತೀಯರು ಆದಾಯ ಗಳಿಕೆಯಲ್ಲಿ ಮುಂದಿದ್ದಾರಂತೆ. ಇನ್ನೂ ವಿಶೇಷ ಎಂದರೆ ಅವರ ದೇಶದಲ್ಲಿ ಅವರನ್ನೇ ಹಿಂದಿಕ್ಕಿ ಆದಾಯ ಗಳಿಸುತ್ತಿದ್ದಾರೆ ಭಾರತೀಯರು.


ಎಷ್ಟಿದೆ ಭಾರತೀಯರ ಆದಾಯ?


US ಸೆನ್ಸಸ್ ಬ್ಯೂರೋ, 2013-15 ರ ಅಮೇರಿಕನ್ ಸಮುದಾಯ ಸಮೀಕ್ಷೆಯ ಪ್ರಕಾರ, ಭಾರತೀಯ-ಅಮೆರಿಕನ್ನರು (USD 100,500) ಜೋ ಬಿಡೆನ್ ನೇತೃತ್ವದ ದೇಶದಲ್ಲಿ ಅತಿ ಹೆಚ್ಚು ಸರಾಸರಿ ಮನೆಯ ಆದಾಯವನ್ನು ಹೊಂದಿದ್ದಾರೆ. ಅವರು ಶ್ರೀಲಂಕಾ, ಜಪಾನ್, ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳ ಜನರಿಗಿಂತ ಮುಂದಿದ್ದಾರೆ ಎಂದು ತಿಳಿಸಿತ್ತು.


ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಆಗಸ್ಟ್ 2021 ರ ವರದಿಯು ಸಹ ಇದನ್ನೇ ಹೇಳಿದೆ. ಈ ವರದಿಯ ಪ್ರಕಾರ, ಯುಎಸ್‌ನಲ್ಲಿನ ಭಾರತೀಯರು USD 123,700 ಮತ್ತು ಕಾಲೇಜು ಪದವೀಧರರಲ್ಲಿ ಶೇಕಡಾ 79 ರಷ್ಟು ಸರಾಸರಿ ಕುಟುಂಬ ಗಳಿಕೆಯೊಂದಿಗೆ, ಸಂಪತ್ತು ಮತ್ತು ಕಾಲೇಜು ಶಿಕ್ಷಣದ ವಿಷಯದಲ್ಲಿ ಒಟ್ಟಾರೆ ಅಮೇರಿಕನ್ ಜನಸಂಖ್ಯೆಯನ್ನು ಮೀರಿಸಿದ್ದಾರೆ ಎಂದು ತಿಳಿಸಿದೆ.


ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಳ


US ನಲ್ಲಿನ ಇತ್ತೀಚಿನ ಜನಗಣತಿಯ ಮಾಹಿತಿಯ ಪ್ರಕಾರ, ಕಳೆದ ಮೂರು ದಶಕಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಏಷ್ಯನ್ ಎಂದು ಗುರುತಿಸುವ ಜನರ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಮತ್ತು ಏಷ್ಯನ್ನರು ಈಗ ರಾಷ್ಟ್ರದ ನಾಲ್ಕು ಜನಾಂಗೀಯ ಗುಂಪುಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ ಎಂದು ವರದಿಗಳು ಹೇಳಿವೆ.


ಭಾರತೀಯರು ಅತಿ ಹೆಚ್ಚು ಆದಾಯ ಹೊಂದಲು ಕಾರಣವೇನು?


ಯುಎಸ್‌ನಲ್ಲಿ ಭಾರತೀಯರು ಹೇಗೆ ಹೆಚ್ಚು ಸಂಪಾದಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಭಾರತೀಯರ ಶಿಕ್ಷಣ. ಅಮೆರಿಕಾವು ಶಿಕ್ಷಣ, ಪದವಿಗೆ ಹೆಚ್ಚು ಒತ್ತು ನೀಡುವುದರಿಂದ ಉತ್ತಮ ಶಿಕ್ಷಣ ಪಡೆದವರಿಗೆ ಒಳ್ಳೆಯ ವೇತನದ ಕೆಲಸ ಸಿಗುತ್ತದೆ, ಭಾರತೀಯರು ಒಳ್ಳೊಳ್ಳೆ ಪದವಿ ಪಡೆಯುವುದರಿಂದ ಅವರಿಗೆ ಕೈತುಂಬಾ ಸಂಬಳ ಸಿಗುವ ಉದ್ಯೋಗಗಳು ಲಭಿಸುತ್ತವೆ.


ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಭಾರತೀಯ ಅಮೆರಿಕನ್ನರು ಯುಎಸ್‌ನಲ್ಲಿ ಅತಿ ಹೆಚ್ಚು ಸರಾಸರಿ ಮನೆಯ ಆದಾಯವನ್ನು ಹೊಂದಿದ್ದಾರೆಂದು ತೋರಿಸುವ ಚಾರ್ಟ್ ಅನ್ನು ಹಂಚಿಕೊಂಡಿದ್ದು, "ನಾವು ಉತ್ತಮ ಶಿಕ್ಷಣವನ್ನು ಗೌರವಿಸುತ್ತೇವೆ ಮತ್ತು ಹೆಚ್ಚು ವಿದ್ಯಾವಂತ ಜನಾಂಗೀಯ ಗುಂಪು ಎಂಬ ಕಾರಣಕ್ಕಾಗಿ ಭಾರತೀಯರು ಯುಎಸ್‌ನಲ್ಲಿ ಮಿಂಚುತ್ತಿದ್ದಾರೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕೇವಲ 22 ವರ್ಷಕ್ಕೆ ಬುಕ್ ಬ್ಯುಸಿನೆಸ್ ಮೂಲಕ ಯಶಸ್ವಿ ಉದ್ಯಮಿಯಾದ ರಾಶಿ


ನಾವು ನಮ್ಮ ಅಭ್ಯಾಸಗಳಲ್ಲಿ ಮಿತವ್ಯಯದ ಜೊತೆಗೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಹೀಗಾಗಿಯೇ ನಾವು ಹೆಚ್ಚು ಉಳಿಸಲು, ಗಳಿಸಲು ಸಹಾಯವಾಗಿದೆ ಎನ್ನುತ್ತಾರೆ ಗೋಯೆಂಕಾ. ಅಮೆರಿಕಾದಲ್ಲಿ ಐಟಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಬಳ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ಅಮೆರಿಕಾದಲ್ಲಿ ಭಾರತೀಯರ ಪ್ರಾಬಲ್ಯ ಇದೆ. ಇದು ಕೂಡ ಅವರ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.


ಸರಾಸರಿ ಮನೆಯ ಆದಾಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?


ಮನೆಯ ಆದಾಯವು ಸಾಮಾನ್ಯವಾಗಿ ಇನ್ವೆಸ್ಟೋಪೀಡಿಯಾದ ಪ್ರಕಾರ, ನಿರ್ದಿಷ್ಟ ವಯಸ್ಸಿನ ಮೇಲಿನ ಮನೆಯ ಎಲ್ಲಾ ಸದಸ್ಯರ ಒಟ್ಟು ಆದಾಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ರೂ 10,000, ರೂ 15,000 ಮತ್ತು ರೂ 20,000 ಮೂರು ಆದಾಯಗಳಿದ್ದರೆ, ಈ ಸಂದರ್ಭದಲ್ಲಿ ಸರಾಸರಿ ಆದಾಯ ರೂ 15,000 ಆಗಿರುತ್ತದೆ. ಈ ಪ್ರಕಾರ ಮನೆಯ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ.


ಯುಎಸ್‌ನಲ್ಲಿ ಭಾರತೀಯ-ಅಮೆರಿಕನ್ನರ ಪ್ರಾಬಲ್ಯ


US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ತನ್ನ ಮೊದಲ ಭಾಷಣದಲ್ಲಿ, ರಿಚ್ ಮೆಕ್‌ಕಾರ್ಮಿಕ್ ಸುವ್ಯವಸ್ಥಿತ ವಲಸೆ ಪ್ರಕ್ರಿಯೆಗೆ ಒತ್ತಾಯಿಸಿದರು. “ನನ್ನ ಮತದಾರರನ್ನು, ವಿಶೇಷವಾಗಿ ಭಾರತದಿಂದ ವಲಸೆ ಬಂದವರನ್ನು ಶ್ಲಾಘಿಸುತ್ತೇನೆ. ಭಾರತದಿಂದ ನೇರವಾಗಿ ವಲಸೆ ಬಂದ ಸುಮಾರು 100,000 ಜನರನ್ನು ಒಳಗೊಂಡಿರುವ ದೊಡ್ಡ ಭಾಗವನ್ನು ನಾವು ಹೊಂದಿದ್ದೇವೆ. ನನ್ನ ಸಮುದಾಯದ ಪ್ರತಿ ಐದು ವೈದ್ಯರಲ್ಲಿ ಒಬ್ಬರು ಭಾರತದವರು ಇದ್ದಾರೆ.



ಅವರು ಅಮೆರಿಕದಲ್ಲಿ ನಾವು ಹೊಂದಿರುವ ಕೆಲವು ಉತ್ತಮ ನಾಗರಿಕರನ್ನು ಪ್ರತಿನಿಧಿಸುತ್ತಾರೆ, ಕಾನೂನನ್ನು ಪಾಲಿಸಲು ಮತ್ತು ತೆರಿಗೆಯನ್ನು ಪಾವತಿಸಲು ಇಲ್ಲಿಗೆ ಬರುವವರಿಗೆ ನಾವು ವಲಸೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತೇವೆ" ಎಂದು ಹೇಳುವ ಮೂಲಕ ಭಾರತೀಯರನ್ನು ಹೊಗಳಿದ್ದಾರೆ.

Published by:ವಾಸುದೇವ್ ಎಂ
First published: