Work from Home Ends: ಉದ್ಯೋಗಿಗಳನ್ನು ಕಚೇರಿಗೆ ಕರೆದ ಕಂಪನಿಗಳು! ವರ್ಕ್‌ ಫ್ರಂ ಹೋಂ ಸ್ಟಾಪ್ ?

ಪ್ರಸ್ತುತ ಮಾರ್ಗಸೂಚಿಗಳನ್ನು ಫೆಬ್ರವರಿ 15 ರವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯಾವುದೇ ಉದ್ಯೋಗಿಗೆ ಇನ್ನು ಮುಂದೆ ವರ್ಕ್‌ ಫ್ರಂ ಹೋಂ ಆಯ್ಕೆ ಇರುವುದಿಲ್ಲ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈಗಾಗಲೇ ಜನರು ವರ್ಕ್‌ ಫ್ರಂ ಹೋಂ(Work From Home) ಪದ್ಧತಿಗೆ ಒಗ್ಗಿ ಹೋಗಿದ್ದಾರೆ. ಕಚೇರಿಯ ಮುಖ ನೋಡದೆ ವರ್ಷವೇ ಕಳೆದಿರಬಹುದು. ಆಫೀಸ್ ಚೇರ್, ಟೇಬಲ್‌ಗಳು ಧೂಳು ಹಿಡಿದಿರಬಹುದು. ಬಹಳಷ್ಟು ಜನರ ಮನೆಯ ಲಿವಿಂಗ್ ರೂಂಗಳು ಆಫೀಸ್(Office) ರೂಂ ಆಗಿ ಬದಲಾಗಿ ಬಹಳಷ್ಟು ಸಮಯವಾಯ್ತು. ಕೊರೋನಾ(Corona) ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿ ಕಂಪನಿಗಳು ನಿಧಾನವಾಗಿ ಕೆಲಸಗಾರರನ್ನು ಕಚೇರಿಗೆ ಕರೆಯಲಾರಂಭಿಸಿತು. ಉದ್ಯೋಗಿಗಳು ಅರೆ ಮನಸಿನಲ್ಲಿ ಲಗೇಜ್ ಪ್ಯಾಕ್ ಮಾಡಿ ನಗರಗಳತ್ತ ಮುಖ ಮಾಡಿದ್ದರೂ ಮತ್ತೆ ಒಮಿಕ್ರೋನ್(Omicron) ವಕ್ಕರಿಸಿಕೊಂಡು ವರ್ಕ್‌ ಫ್ರಂ ಹೋಂ(Work From Home) ಅನಿವಾರ್ಯವಾಗಿ ಬದಲಾಯಿತು. ಆದರೆ ಈಗ ಮತ್ತೆ ಕಂಪನಿಗಳು ಕಚೇರಿಯಿಂದಲೇ ಕೆಲಸ(Work From Office) ಆರಂಭಿಸಲಿವೆ ಎನ್ನುವ ಸೂಚನೆ ಸಿಕ್ಕಿದೆ.

    ಬಹಳ ದೀರ್ಘ ಅಂತರದ ನಂತರ ಸರ್ಕಾರ ತನ್ನೆಲ್ಲ ಕೆಲಸಗಾರರಿಗೆ ಕಚೇರಿಗೆ ಬರುವಂತೆ ಹೇಳಿದೆ. ಹಾಗೆಯೇ ವರ್ಕ್‌ ಫ್ರಂ ಹೋಂ ಕೊನೆಗೊಳಿಸಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪ್ರಕಟಣೆಗಳ ಸಚಿವಾಲಯ ಹೇಳಿಕೆಯಲ್ಲಿ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿದೆ. ಭಾರತದಲ್ಲಿ ಕೊರೋನಾ ಇಳಿಮುಖವಾಗಿದ್ದು ದೈನಂದಿನ ಸೋಂಕುಗಳು ದಿನಕ್ಕೆ ಒಂದು ಲಕ್ಷಕ್ಕಿಂತ ಕಡಿಮೆ ಪತ್ತೆಯಾಗುತ್ತಿದೆ.

    ಇದನ್ನೂ ಓದಿ:ಮನೆಗಳಲ್ಲಿ ಕನಿಷ್ಠ 1 ಗಂಟೆ ಕಾಲ Lights Off ಮಾಡಿದ್ರೆ ಎಷ್ಟು ಹಣ ಉಳಿಸಬಹುದು ಗೊತ್ತೇ?

    ಕೇಂದ್ರ ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಂ ಕೊನೆ:

    ಕೇಂದ್ರ ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು ಮತ್ತು ಚುನಾವಣಾ ಸಚಿವಾಲಯವು ಫೆಬ್ರವರಿ 6 ರಂದು ಹೇಳಿಕೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಸಭೆಯ ನಂತರ ಈ ಬಗ್ಗೆ ನಿರ್ಧಾರ ಪ್ರಕಟಿಸಿದೆ. ಫೆಬ್ರವರಿ 7, ಸೋಮವಾರದಿಂದ 100 ಶೇಕಡಾ ಕೆಲಸ ಕಚೇರಿಯಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಕೊರೋನಾ ಪರಿಸ್ಥಿತಿಯ ಅವಲೋಕನವನ್ನು ಮಾಡಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಘೋಷಿಸಿದ್ದಾರೆ. ಕೊರೋನಾ ಪ್ರಕರಣಗಳ ಇಳಿಕೆ ನಂತರ ಆಫೀಸ್‌ನಿಂದ ಕೆಲಸ ಮುಂದುವರಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 7, 2022 ರಿಂದ ಕಚೇರಿಯಿಂದಲೇ ಸಿಬ್ಬಂದಿ ಕೆಲಸ ಮಾಡಲಿದ್ದಾರೆ.

    ಪ್ರಸ್ತುತ ಮಾರ್ಗಸೂಚಿಗಳನ್ನು ಫೆಬ್ರವರಿ 15 ರವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯಾವುದೇ ಉದ್ಯೋಗಿಗೆ ಇನ್ನು ಮುಂದೆ ವರ್ಕ್‌ ಫ್ರಂ ಹೋಂ ಆಯ್ಕೆ ಇರುವುದಿಲ್ಲ ಎನ್ನಲಾಗಿದೆ.

    TCS, Infosys, Wiproದಲ್ಲೂ ಮನೆಯಿಂದ ಕೆಲಸ ಮಾಡೋ ಆಯ್ಕೆ ಕೊನೆಯಾಗುತ್ತಾ ?

    ಟಿಸಿಎಸ್(TCS) ಸೇರಿದಂತೆ ಹೆಚ್ಚಿನ ಐಟಿ ಕಂಪನಿಗಳು ಜನವರಿಯಿಂದ ತಮ್ಮ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದವು. ಆದರೆ ಮೂರನೇ ಅಲೆ, ಒಮಿಕ್ರೋನ್ ಕೇಸ್ ಹೆಚ್ಚಾದ ನಂತರ ಈ ನಿರ್ಧಾರ ಬದಲಾಯಿಸಲಾಗಿತ್ತು. ಕೊರೋನಾ ಭಯದಿಂದ ಕಂಪನಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದವು.

    ದೇಶದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಡಿಸೆಂಬರ್‌ನಲ್ಲಿ ಕಂಪನಿಯ 90 ಶೇಕಡಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ. ಆದರೆ ಕೊರೋನಾ ಸಂಖ್ಯೆಗಳಿಗೆ ಅನುಗುಣವಾಗಿ ರೂಲ್ಸ್ ಬದಲಾಯಿಸುವ ನಿರ್ಧಾರ ಮಾಡಿದೆ. HCL ಟೆಕ್ನಾಲಜೀಸ್ ಕೂಡಾ ಕೊರೋನಾ ಸಂಖ್ಯೆಗಳನ್ನು ಗಮನಿಸಿಯೇ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ.

    ಇದನ್ನೂ ಓದಿ:Gold Price Today: ಮತ್ತಷ್ಟು ದುಬಾರಿಯಾದ ಚಿನ್ನ, ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ..

    ಉದ್ಯೋಗಿಗಳು ಮತ್ತು ಗುತ್ತಿಗೆದಾರರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದ ಕಾಗ್ನಿಜೆಂಟ್, ಮನೆಯಿಂದಲೇ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದೆ. ನಮ್ಮ ಉದ್ಯೋಗಿಗಳು ಮತ್ತು ಗುತ್ತಿಗೆದಾರರು, ಕುಟುಂಬಗಳು, ನಮ್ಮ ಗ್ರಾಹಕರು ಮತ್ತು ನಮ್ಮ ಸಮುದಾಯಗಳ ಆರೋಗ್ಯ ಮತ್ತು ಸುರಕ್ಷತೆಯು ನಮ್ಮ ಆದ್ಯತೆ ಎಂದು ಕಂಪನಿ ವರ್ಕ್‌ ಫ್ರಂ ಹೋಂಗೆ ಒತ್ತು ನೀಡಿದೆ.

    ದೇಶದಲ್ಲಿ ಬದಲಾಗುತ್ತಿರುವ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇನ್ಫೋಸಿಸ್ ಕಚೇರಿಗಳನ್ನು ಪುನಃ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಆದರೆ ಸ್ವಲ್ಪ ಸಮಯದ ತನಕ ವರ್ಕ್‌ ಫ್ರಂ ಹೋಂ ಮುಂದುವರಿಸಲಿದ್ದಾರೆ.
    Published by:Latha CG
    First published: