Work From Home ಸೌಲಭ್ಯ ನೀಡುವ ಕಂಪನಿಗಳತ್ತ ಮಹಿಳೆಯರ ಚಿತ್ತ; ಇದಕ್ಕೆ ಕಾರಣ ಏನು?

ಕೋವಿಡ್ ನಂತರ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಗಳತ್ತ ಮಹಿಳೆಯರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ವರ್ಕ್ ಫ್ರಮ್ ಹೋಮ್ ಅಥವಾ ಹೈಬ್ರಿಡ್ ಮಾಡೆಲ್ ಕೆಲಸ ನೀಡುವ ಕಂಪನಿಗಳಿಗೆ ಬಹುಪಾಲು ಮಹಿಳೆಯರೇ ಅರ್ಜಿ ಸಲ್ಲಿಸುತ್ತಿದ್ದು, ಈ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಸಂಸ್ಥೆಗಳು ತಿಳಿಸಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್ ನಂತರ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಗಳತ್ತ (Work From Home) ಮಹಿಳೆಯರು (Women's) ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ವರ್ಕ್ ಫ್ರಮ್ ಹೋಮ್ ಅಥವಾ ಹೈಬ್ರಿಡ್ ಮಾಡೆಲ್ ಕೆಲಸ ನೀಡುವ ಕಂಪನಿಗಳಿಗೆ (Company) ಬಹುಪಾಲು ಮಹಿಳೆಯರೇ ಅರ್ಜಿ (Application) ಸಲ್ಲಿಸುತ್ತಿದ್ದು, ಈ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಸಂಸ್ಥೆಗಳು ತಿಳಿಸಿವೆ. ಪ್ರತಿಷ್ಠಿತ ಆರ್ಪಿಜಿ ಗ್ರೂಪ್‌ ಕಂಪನಿಯಲ್ಲಿ, ಉದ್ಯೋಗಗಳಿಗೆ (Jobs) ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆಯಲ್ಲಿ 15 ರಿಂದ 20% ಏರಿಕೆ ಕಂಡುಬಂದಿದೆ. ಈ ಬೆಳವಣಿಗೆ ವೈವಿಧ್ಯತೆಯ ಗುರಿಗಳನ್ನು ವೇಗವಾಗಿ ತಲುಪಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. 

ವರ್ಕ್ ಫ್ರಮ್ ಹೋಮ್ ಸೌಲಭ್ಯವಿರುವ ಸಂಸ್ಥೆಗಳತ್ತ ಮಹಿಳೆಯರ ಒಲವು
ಇನ್ನೂ ಎಜ್ಯುಟೆಕ್ ಯುನಿಕಾರ್ನ್ ಎರುಡಿಟಸ್ ಕಂಪನಿಯಲ್ಲೂ ಸಹ ಅರ್ಜಿ ಸಲ್ಲಿಸುವ ಮಹಿಳೆಯರ ಪ್ರಮಾಣವು ಕೋರೋನಾ ನಂತರ 41 % ನಿಂದ 51% ವರೆಗೆ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿರುವ ಅಂಕಿಅಂಶಗಳ ಮೇಲೆ ತಿಳಿದುಬಂದಿದೆ. HR ಟೆಕ್ನಾಲಜಿ ಸ್ಟಾರ್ಟಪ್ ಸ್ಪ್ರಿಂಗ್‌ವರ್ಕ್ಸ್ ಪೂರ್ತಿ ಪ್ರಮಾಣದ ವರ್ಕ್ ಫ್ರಮ್ ಹೋಮ್ ಸೌಲಭ್ಯ ನೀಡಿರುವುದರಿಂದ ಇಲ್ಲೂ ಸಹ ಮಹಿಳಾ ಉದ್ಯೋಗಿಗಳ ಪ್ರಮಾಣವು 30% ರಿಂದ 35% ಕ್ಕೆ ಜಿಗಿತ ಕಂಡಿದೆ.

"ನಮ್ಮ ಸಂಸ್ಥೆಯ ವರ್ಕ್ ಫ್ರಮ್ ಹೋಮ್ ನೀತಿಯು ಬಹಳಷ್ಟು ಮಹಿಳೆಯರನ್ನು ಕೆಲಸಕ್ಕೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ" ಎಂದು ಆರ್‌ಪಿಜಿ ಗ್ರೂಪ್‌ನ ಮುಖ್ಯ ಅಧಿಕಾರಿ ಸುಪ್ರತಿಕ್ ಭಟ್ಟಾಚಾರ್ಯ ಹೇಳಿದರು. ನಾವು ಕೆಲಸದ ಸ್ಥಳವನ್ನು ಹೆಚ್ಚು ಸ್ನೇಹಪರವಾಗಿ ಮತ್ತು ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ.

‘ಈ ಪದ್ಧತಿ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ’
"ನಾವು 100% ಮನೆಯಿಂದ ಕೆಲಸ ಮಾಡುವ ನಿರ್ಧಾರವನ್ನು ತೆಗೆದುಕೊಂಡಾಗ ಮೊದಲು ಅರ್ಜಿ ಸಲ್ಲಿಸದ ಬಹಳಷ್ಟು ಮಹಿಳೆಯರು ಕೆಲಸಕ್ಕೆ ಆಯ್ಕೆಯಾದರು" ಎಂದು ಮತ್ತೊಂದು ಪ್ರತಿಷ್ಠಿತ ಲಂಪನಿಯಾದ ಎರುಡಿಟಸ್‌ನ ಸಿಇಒ ಅಶ್ವಿನ್ ದಮೇರಾ ಹೇಳಿದರು. "ನಾವು ಇದನ್ನು ದೇಶಾದ್ಯಂತ ನೋಡಿದ್ದೇವೆ, ಈ ಕ್ರಮವು ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Ola- Uber Merge: ಓಲಾ ಉಬರ್ ವಿಲೀನ? ಪ್ರಯಾಣಿಕರ ಪಾಡೇನು?

ಜುಲೈನಲ್ಲಿ ವೈವಿಧ್ಯತೆ ಸಲಹಾ ಸಂಸ್ಥೆ ಅವತಾರ್ ನಡೆಸಿದ ಮಹಿಳಾ-ಮಾತ್ರ ಉದ್ಯೋಗ ಮೇಳದಲ್ಲಿ, ಸುಮಾರು 35% ಉದ್ಯೋಗಗಳು ವರ್ಕ್ ಫ್ರಮ್ ಹೋಮ್ ಮತ್ತು 41% ಹೈಬ್ರಿಡ್ ಆಯ್ಕೆಗಳನ್ನು ನೀಡಿತ್ತು. ಈ ಉದ್ಯೋಗ ಮೇಳದಲ್ಲಿ ಅಥರ್ ಎನರ್ಜಿ, ಅಮೆಜಾನ್, ಮಾಸ್ಟರ್ ಕಾರ್ಡ್, ಐಸಿಐಸಿಐ ಲೊಂಬಾರ್ಡ್, ಜಿಐಸಿ ಕಂಪನಿಗಳು ಭಾಗವಹಿಸಿದ್ದವು. ಮನೆಯಿಂದ ಕೆಲಸ ಮತ್ತು ನಮ್ಯತೆಯ ಪರಿಣಾಮಕಾರಿತ್ವವು ಉದ್ಯೋಗದಾತರಿಗೆ ಮಹಿಳೆಯರನ್ನು ನೇಮಿಸಿಕೊಳ್ಳುವಾಗ ಭೌಗೋಳಿಕ ಚಿತ್ರಣ ನೋಡದಿರಲು ಅನುವು ಮಾಡಿಕೊಡುತ್ತದೆ" ಎಂದು ಅವತಾರ್ ಗ್ರೂಪ್‌ನ ಸಂಸ್ಥಾಪಕ-ಅಧ್ಯಕ್ಷರಾದ ಸೌಂದರ್ಯ ರಾಜೇಶ್ ಹೇಳಿದರು.

ಪ್ರಸ್ತುತ ಹೆಚ್ಚಿನ ಕಂಪನಿಗಳು ಹೈಬ್ರಿಡ್ ಸೆಟ್-ಅಪ್ ಕಡೆಗೆ ವಾಲುತ್ತಿದ್ದು, ಇದು ವೈವಿಧ್ಯತೆಯ ಪ್ರತಿಭೆ ಮತ್ತು ಉದ್ಯೋಗದಾತರಿಗೆ ಲಾಭದ ಕ್ರಮವಾಗಿದೆ ಎನ್ನಬಹುದು.

ವರ್ಕ್ ಫ್ರಮ್ ಹೋಮ್ ಕೆಲಸದ ಅಭಿಪ್ರಾಯ ಹಂಚಿಕೊಂಡ ಮಹಿಳೆ
ವರ್ಕ್ ಫ್ರಮ್ ಹೋಮ್ ಕೆಲಸದ ಸೌಲಭ್ಯ ನೀಡುತ್ತಿರುವ ಎಮೆರಿಟಸ್ ಇಂಡಿಯಾ ಕಂಪನಿಗೆ ಇತ್ತೀಚೆಗೆ ಎಪಿಎಸಿಯ ವಿನ್ಯಾಸದ ನಿರ್ದೇಶಕರಾಗಿ ಸೇರಿಕೊಂಡ ಮನೀಶಾ ಮೋಹನ್ ಅವರು ರಿಮೋಟ್ ಕೆಲಸದ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. “ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೇನೆ ಮತ್ತು ಕೆಲಸಕ್ಕೆ ಹೋಗುವ ಮತ್ತು ಹೊರಡುವ ಸಮಯ ನನಗೆ ಉಳಿತಾಯವಾಗುತ್ತದೆ. ಇಲ್ಲಿ ನಾನು ಉಳಿಸುವ ಸಮಯವನ್ನು ನನ್ನ ಸಂಶೋಧನೆಯನ್ನು ಮುಂದುವರಿಸಲು ಮತ್ತು ನನ್ನ ಕುಟುಂಬಕ್ಕೆ ಹೆಚ್ಚಿನ ಅವಧಿ ನೀಡಲು ವ್ಯಯಿಸಬಹುದಾಗಿದೆ. ನನ್ನ ಹಿಂದಿನ ಸಂಸ್ಥೆಯಲ್ಲಿ ಇದು ಸಾಧ್ಯವಾಗಲಿಲ್ಲ, ನಾನು ಕಚೇರಿಗೆ ಹೋಗಬೇಕಾಗಿತ್ತು, ”ಎಂದು ಮನೀಶಾ ಹೇಳಿದರು.

ಇದನ್ನೂ ಓದಿ:  Business Idea: ಮನೆಯಲ್ಲೇ ಈ ಬ್ಯುಸಿನೆಸ್​ ಸ್ಟಾರ್ಟ್ ಮಾಡಿ! ವರ್ಷಕ್ಕೆ ಏನಿಲ್ಲ ಅಂದ್ರು 5 ಲಕ್ಷ ಆದಾಯ

ಹಲವು ಮಹಿಳೆಯರಿಗೆ ಕೆಲಸ ಮಾಡುವ ಬಯಕೆ ಇರುತ್ತದೆ. ಆದರೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುವುದು ಕಷ್ಟವಾಗಬಹುದು ಅಥವಾ ಮಕ್ಕಳಿರುವ ಮಹಿಳೆಯರಿಗೆ ಕಚೇರಿಗೆ ಹೋಗುವುದು ಸಾಧ್ಯವಾಗದೇ ಇರಬಹುದು. ಹೀಗಾಗಿ ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯರು ಈ ವರ್ಕ್ ಫ್ರಮ್ ಹೋಮ್ ಕೆಲಸದ ಲಾಭ ಪಡೆಯಲು ಹಂಬಲಿಸಿದ್ದಾರೆ. ಹೀಗಾಗಿ ಹೆಚ್ಚಿನ ಮಹಿಳೆಯರು ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿರುವ ಕಂಪನಿಗಳ ಕಡೆ ಆಕರ್ಷಿತರಾಗುತ್ತಿದ್ದಾರೆ ಎನ್ನಬಹುದು.
Published by:Ashwini Prabhu
First published: