Business Startup: ಸರಳವಾಗಿ ಶುರು ಮಾಡಿದ ವ್ಯವಹಾರ ಇಂದು ಕೋಟಿ ಆದಾಯ ನೀಡುತ್ತಿದೆಯಂತೆ! ತಾಯಿಯೇ ಈಕೆಗೆ ಸ್ಪೂರ್ತಿ

ಸರಳವಾಗಿ ಮನೆಯಲ್ಲಿಯೇ ಪುಟ್ಟದಾದ ವ್ಯವಹಾರವನ್ನು ಶುರು ಮಾಡಿ ನಂತರ ಕೆಲವು ವರ್ಷಗಳಲ್ಲಿ ಅದು ಕೋಟಿ ಕೋಟಿ ರೂಪಾಯಿ ಆದಾಯ ನೀಡುವ ದೊಡ್ಡ ವ್ಯವಹಾರವಾಗಿ ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಹೀಗೆ ಸರಳವಾಗಿ ಶುರು ಮಾಡಿದ ಒಂದು ವ್ಯವಹಾರ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ ನೋಡಿ.

ಸ್ವಂತ ಉದ್ಯಮ ಶುರು ಮಾಡಿದ ಮಹಿಳೆ

ಸ್ವಂತ ಉದ್ಯಮ ಶುರು ಮಾಡಿದ ಮಹಿಳೆ

  • Share this:
ಕೆಲವೊಮ್ಮೆ ಕೆಲವರು ಏನೋ ಒಂದು ದೊಡ್ಡ ವ್ಯವಹಾರವನ್ನು (Business) ಶುರು ಮಾಡಬೇಕೆಂದು ತುಂಬಾನೇ ತಲೆ ಕೆಡೆಸಿಕೊಳ್ಳುತ್ತಾರೆ ಮತ್ತು ಅದಕ್ಕೆ ಹಣವನ್ನು ಹೂಡಿಕೆ (Investment) ಮಾಡಲು ಎಲ್ಲಿಂದ ತರುವುದು ಎಂದು ತುಂಬಾನೇ ತಲೆ ಬಿಸಿ ಮಾಡಿಕೊಂಡಿರುತ್ತಾರೆ. ಆ ವ್ಯವಹಾರ ಕೊನೆಗೆ ಒಂದು ದಿನ ಶುರುವಾದರೂ ಸರಿಯಾಗಿ ಗಳಿಕೆಯನ್ನು ನೀಡುವುದಿಲ್ಲ. ಆದರೆ ಇನ್ನೂ ಕೆಲವರು ತಮ್ಮ ಇತಿಮಿತಿಗಳನ್ನು ನೋಡಿಕೊಂಡೇ ಸರಳವಾಗಿ ಮನೆಯಲ್ಲಿಯೇ (Home) ಪುಟ್ಟದಾದ ವ್ಯವಹಾರವನ್ನು ಶುರು (Business Startup) ಮಾಡಿ ನಂತರ ಕೆಲವು ವರ್ಷಗಳಲ್ಲಿ ಅದು ಕೋಟಿ ಕೋಟಿ ರೂಪಾಯಿ ಆದಾಯ ನೀಡುವ ದೊಡ್ಡ ವ್ಯವಹಾರವಾಗಿ ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಹೀಗೆ ಸರಳವಾಗಿ ಶುರು ಮಾಡಿದ ಒಂದು ವ್ಯವಹಾರ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ ನೋಡಿ. ಈ ಕಥೆ ಮಹಾರಾಷ್ಟ್ರದ (Maharashtra) ಗೀತಾ ಪಾಟೀಲ್ (Geetha Patil) ಅವರದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮನೆಯಿಂದಲೇ ವ್ಯಾಪಾರ
ಗೀತಾ ಅವರಿಗೆ ಹೀಗೆ ರುಚಿಕರವಾದ ಊಟವನ್ನು ಬೇಯಿಸುವ ಮತ್ತು ಮನೆಯಿಂದಲೇ ವ್ಯಾಪಾರ ನಡೆಸುವ ಈ ಕಲೆಯನ್ನು ತನ್ನ ತಾಯಿ ಕಮಲಾಬಾಯಿ ಅವರಿಂದ ಬಂದಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. “ಅವರು ಆಗಿನ ಸಮಯದಲ್ಲಿಯೇ ಮನೆಯಲ್ಲಿ ಚಿಕ್ಕ ಉದ್ಯಮವನ್ನು ನಡೆಸುತ್ತಿದ್ದರು ಮತ್ತು ಪ್ರತಿದಿನ 20 ಜನರಿಗೆ ಟಿಫಿನ್ ಗಳನ್ನು ಪ್ಯಾಕ್ ಮಾಡುತ್ತಿದ್ದರು. ನಾವು ಆಗಾಗ್ಗೆ ನನ್ನ ತಾಯಿಗೆ ಸಹಾಯ ಮಾಡುತ್ತಿದ್ದೆವು ಎಂದು ಗೀತಾ ತಿಳಿಸಿದರು.

ತಾಯಿಯ ಪುಟ್ಟ ಸಹಾಯಕಿ
ಒಲೆಯ ಬಳಿ ದೊಡ್ಡ ಸ್ಟೂಲಿನ ಮೇಲೆ ಕುಳಿತು, ದೊಡ್ಡ ಮಡಕೆಯಲ್ಲಿನ ಪದಾರ್ಥಗಳನ್ನು ಕಲಕುತ್ತಿದ್ದುದನ್ನು ಅವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. "ನಾನು ನನ್ನ ಆಯಿ (ತಾಯಿ) ಯ ಪುಟ್ಟ ಸಹಾಯಕಿಯಾಗಿದ್ದೆ ಮತ್ತು ನಾನು ಅದನ್ನು ತುಂಬಾನೇ ಇಷ್ಟ ಪಡುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸುಗಳು
2016 ರಲ್ಲಿ, ಗೀತಾ ಅವರು ಸಾಂಪ್ರದಾಯಿಕ ಮಹಾರಾಷ್ಟ್ರದ ಸಿಹಿ ಮತ್ತು ಖಾರದ ತಿಂಡಿಗಳನ್ನು ಮಾರಾಟ ಮಾಡಲು ಮನೆಯಿಂದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಿದರು. ಇವುಗಳಲ್ಲಿ ಅವರು ಮೊದಲು ಮೋದಕ, ಪೂರಣ್ ಪೋಳಿ, ಚಕ್ಲಿ, ಅವಲಕ್ಕಿ ಮತ್ತು ಚಿವ್ಡಾ ಸೇರಿವೆ. ಕನಿಷ್ಠ ಹೂಡಿಕೆ ಮತ್ತು ತಿಂಗಳಿಗೆ ಕೆಲವು ಗ್ರಾಹಕರಿಗೆ ಸೇವೆ ಸಲ್ಲಿಸುವುದರೊಂದಿಗೆ ಶುರು ಮಾಡಿದ ವ್ಯವಹಾರವು ಇಂದು 3,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ವಾರ್ಷಿಕವಾಗಿ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸುತ್ತಿದೆ.

ಮನೆಯನ್ನು ನಡೆಸಲು ಸಹಾಯ ಮಾಡಿದೆ ಈ ಆಹಾರದ ವ್ಯವಹಾರ
ಮುಂಬೈನಲ್ಲಿ ಹುಟ್ಟಿ ಬೆಳೆದ ಗೀತಾ, ಇಲ್ಲಿಯೇ ವಾಸಿಸುತ್ತಿದ್ದ ಕುಟುಂಬದಲ್ಲಿ ಮದುವೆಯಾಗಿ, ಮುಂಬೈ ನಗರವೇ ಇವರಿಗೆ ಮನೆಯಾಯಿತು ಎಂದು ಹೇಳಬಹುದು. "ನಾನು ಮದುವೆಯಾದ ನಂತರ ಮಾಡಿದ ಒಂದೇ ಒಂದು ಬದಲಾವಣೆ ಎಂದರೆ ನಾನು ವಿಲೆ ಪಾರ್ಲೆಯಿಂದ ಸಾಂತಾಕ್ರೂಜ್ ಏರಿಯಾಗೆ ಬಂದಿದ್ದು, ನನ್ನ ತಂದೆ ಮುಂಬೈ ಮಹಾನಗರ ಪಾಲಿಕೆಯಲ್ಲಿ ಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನನ್ನ ತಾಯಿ ಮನೆಯಲ್ಲಿಯೇ ಚಿಕ್ಕ ಪುಟ್ಟ ಅಡುಗೆ, ತಿಂಡಿಗಳ ವ್ಯವಹಾರ ಮಾಡಿಕೊಂಡು ಇದ್ದರು” ಎಂದು ಗೀತಾ ಹೇಳಿದರು.

"ಜನರಿಗೆ ಆಹಾರ ನೀಡುವ ಸ್ಫೂರ್ತಿ ಮಾತ್ರ ನನಗೆ ನನ್ನ ತಾಯಿಯಿಂದ ಬಂದಿದೆ. ಅವಳು ಅನಾಯಾಸವಾಗಿ ಅಡುಗೆಮನೆಯಲ್ಲಿ ಓಡಾಡುತ್ತಿದ್ದಳು ಮತ್ತು ಬೆಳಿಗ್ಗೆ ಹೊತ್ತು ಸ್ವಲ್ಪ ಸಮಯದಲ್ಲಿಯೇ ಅನೇಕ ಥಾಲಿಗಳನ್ನು ತಯಾರು ಮಾಡುತ್ತಿದ್ದರು. ನಾನು ಅವಳು ಅಡುಗೆ ಮಾಡುವ ರೀತಿಯನ್ನು ನೋಡಿ ತುಂಬಾನೇ ಇಷ್ಟಪಡುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ಹಬ್ಬದ ಸಮಯದಲ್ಲಿ ವಿಶೇಷ ಆಹಾರ ತಯಾರಿ
ತಮ್ಮ ವ್ಯವಹಾರದ ಬಗ್ಗೆ ಮಾತನಾಡುತ್ತಾ ಗೀತಾ ಅವರು “ಹಬ್ಬದ ಸಮಯದಲ್ಲಿ ವಿಶೇಷ ಆಹಾರ ಪದಾರ್ಥಗಳನ್ನು ಸಹ ನಾವು ಸಿಹಿ ತಿಂಡಿಗಳ ಜೊತೆಗೆ ತಯಾರು ಮಾಡುತ್ತೇವೆ. ನಾವು ವಿವಿಧ ಧರ್ಮಗಳ ಜನರಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಆಗಾಗ್ಗೆ, ನಮ್ಮ ಮುಸ್ಲಿಂ ಮತ್ತು ಕ್ಯಾಥೊಲಿಕ್ ಸ್ನೇಹಿತರು ಚಕ್ಲಿ ಅಥವಾ ಪೂರಣ್ ಪೋಳಿಗಾಗಿ ಆರ್ಡರ್ ಮಾಡುತ್ತಿದ್ದರು. ನಾನು ಯಾವುದಕ್ಕೂ ಶುಲ್ಕ ವಿಧಿಸದೆ ಅವರಿಗಾಗಿ ಅದನ್ನು ತಯಾರಿಸುತ್ತೇನೆ" ಎಂದು ಅವರು ಹೇಳುತ್ತಾರೆ.

2016ರಲ್ಲಿ ಗೀತಾ ಅವರ ಪತಿ ಗೋವಿಂದ್ ಡೆಂಟಲ್ ಲ್ಯಾಬೊರೇಟರಿಯಲ್ಲಿ ಗುಮಾಸ್ತರಾಗಿ ಕೆಲಸ ಕಳೆದುಕೊಳ್ಳುವ ತನಕ ಈ ವಿಷಯಗಳು ಇದೇ ರೀತಿ ಮುಂದುವರಿದವು. "ನನಗೆ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದು, ಅವರ ಶಿಕ್ಷಣದ ಖರ್ಚು ಮತ್ತು ಮನೆಯನ್ನು ಹೇಗೆ ನಡೆಸುವುದು ಎಂದು ಯೋಚಿಸುತ್ತಿರುವಾಗ, ನನಗೆ ಮೊದಲ ಬಾರಿಗೆ ನನ್ನ ಮನೆಯನ್ನು ನಡೆಸಲು ಮತ್ತು ಕುಟುಂಬವನ್ನು ಬೆಂಬಲಿಸಲು ತನ್ನ ಪ್ರತಿಭೆಯನ್ನು ಬಳಸುವ ಬಗ್ಗೆ ಯೋಜನೆಯೊಂದು ಮೂಡಿತು” ಎಂದು ಗೀತಾ ಹೇಳಿದರು.

ಇದನ್ನೂ ಓದಿ:  Business Startup: ಅಮೆರಿಕದಲ್ಲಿ ವಾರಾಣಸಿ ಸಹೋದರರ ಜೋಡಿಯ ಸ್ಟಾರ್ಟಪ್! ಈ ಸಂಸ್ಥೆಯ ಫೋಕಸ್ ಏನು ಗೊತ್ತೆ?

"ನಾವು ಈಗಾಗಲೇ ಸ್ಥಾಪಿತ ಗ್ರಾಹಕರ ನೆಲೆಯನ್ನು ಹೊಂದಿದ್ದರಿಂದ, ಅದನ್ನು ಬಂಡವಾಳ ಮಾಡಿಕೊಳ್ಳಬಹುದು ಎಂದು ಭಾವಿಸಿದೆ. ನನ್ನ ಮಕ್ಕಳಾದ ದರ್ಶನ್ ಮತ್ತು ವಿನಿತ್ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅವರ ಖರ್ಚುಗಳು ಹೆಚ್ಚುತ್ತಿದ್ದವು. ನನ್ನ ಅಡುಗೆ ಕೌಶಲ್ಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿತ್ತು, ಮತ್ತು ನನ್ನ ಗಂಡನ ಬೆಂಬಲದೊಂದಿಗೆ, ನಮ್ಮ ಮನೆಯ ಅಡುಗೆಮನೆಯಿಂದ ಸಣ್ಣದಾಗಿ ವ್ಯವಹಾರವನ್ನು ಪ್ರಾರಂಭಿಸಿದೆ" ಎಂದು ಗೀತಾ ಹೇಳುತ್ತಾರೆ.

ಆಹಾರ ತಯಾರಿಕೆಯ ಅನುಭವವನ್ನು ಹಂಚಿಕೊಂಡ ಮಹಿಳೆ
ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಈ ಆಹಾರ ಪದಾರ್ಥಗಳನ್ನು ತಯಾರಿಸುವ ಅಭ್ಯಾಸವನ್ನು ಅವರು ಹೊಂದಿದ್ದರೂ, ಮೊದಲ ಬಾರಿಗೆ ಆರ್ಡರ್ ಬಂದಾಗ, ಸ್ವಲ್ಪ ಮಟ್ಟಿಗೆ ಆತಂಕವಿತ್ತು ಎಂದು ಅವರು ಹೇಳುತ್ತಾರೆ. "2016 ರವರೆಗೆ, ನಾನು ಅದನ್ನು ಉತ್ಸಾಹದಿಂದ ಹೆಚ್ಚು ಮಾಡುತ್ತಿದ್ದೆ. ಈಗ ಅದು ಸರಿಯಾದ ವ್ಯವಹಾರ ಮತ್ತು ನಮ್ಮ ಕುಟುಂಬವನ್ನು ನಡೆಸಲು ಒಂದು ಸಾಧನವಾಗಿತ್ತು. ಇನ್ನು ಮುಂದೆ ಅದನ್ನು ಸುಲಭವಾಗಿ ತೆಗೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಮೊದಲ ಆರ್ಡರ್ ನನಗೆ ಖಾರ್ ನ ಒಂದು ಕುಟುಂಬದಿಂದ ಬಂದಿತು. ಉತ್ತಮ ಭಾಗವೆಂದರೆ ಇಂದಿಗೂ ಸಹ, ನಾವು ಅವರಿಂದ ನಿಯಮಿತವಾಗಿ ಆರ್ಡರ್ ಗಳನ್ನು ಪಡೆಯುತ್ತೇವೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Vedantu Lay Off: 424 ಉದ್ಯೋಗಿಗಳು ವಜಾ! 2ನೇ ಸಲ ಶಾಕ್ ನೀಡಿದ ಯಶಸ್ವಿ ಸ್ಟಾರ್ಟ್ಅಪ್

2016 ರಿಂದ 2020 ರವರೆಗೆ, ಯಾವುದೇ ಔಪಚಾರಿಕ ಬ್ರ್ಯಾಂಡಿಂಗ್ ಇಲ್ಲದೆ, ಮನೆ ಅಡುಗೆ ಮನೆಯಿಂದ ವ್ಯವಹಾರವನ್ನು ನಡೆಸಲಾಯಿತು. ಇದು ನಿಧಾನವಾಗಿ ಪ್ರಾರಂಭವಾಯಿತು, ಆದರೆ ಅದು ಚೆನ್ನಾಗಿ ನಡೆಯುತ್ತದೆ ಎಂದು ಗೀತಾಗೆ ವಿಶ್ವಾಸವಿತ್ತು. ಅವರ ವ್ಯವಹಾರದ ಆರಂಭಿಕ ವರ್ಷಗಳಲ್ಲಿ, ಅವರು ಪ್ರಭಾತ್ ಕಾಲೋನಿಯಲ್ಲಿರುವ ಬಿಎಂಸಿಯ ಉದ್ಯೋಗಿಗಳಿಗೆ ಉಪಾಹಾರ ಮತ್ತು ಚಹಾ ಸಮಯದ ತಿಂಡಿಗಳನ್ನು ಪೂರೈಸುತ್ತಿದ್ದರು. "ಆಯಿ ತನ್ನ ಕೆಲಸಕ್ಕೆ ಕೊಡುತ್ತಿದ್ದ ಶಕ್ತಿಯನ್ನು ನೆನೆಸಿಕೊಳ್ಳುತ್ತ ಪ್ರತಿದಿನ ಬೆಳಿಗ್ಗೆ ಕೆಲಸ ಪ್ರಾರಂಭಿಸುವ ಮೊದಲು, ನಾನು ಅವಳನ್ನು ನೆನಪಿಸಿಕೊಳ್ಳುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ಈ ನಾಲ್ಕು ವರ್ಷಗಳಲ್ಲಿ ಇವರ ವ್ಯವಹಾರವು ಎಷ್ಟು ಹಣವನ್ನು ಗಳಿಸಿದೆ ಎಂಬುದರ ಬಗ್ಗೆ ಗೀತಾಗೆ ಖಚಿತವಿಲ್ಲವಾದರೂ, ಅವರು ಇಡೀ ಕುಟುಂಬವನ್ನು ನಡೆಸಲು ಸಾಕಷ್ಟು ಹಣ ಗಳಿಸಿದ್ದಾರೆ ಎನ್ನುವುದಂತೂ ನಿಜ ಎಂದು ಅವರು ಹೇಳುತ್ತಾರೆ. "ಬಹುಶಃ ನಾವು ತಿಂಗಳಿಗೆ ಒಂದು ಲಕ್ಷ ರೂಪಾಯಿ ಗಳಿಸುತ್ತಿದ್ದೆವು, ಆದರೆ ನಾನು ಅದನ್ನು ಖಚಿತವಾಗಿ ಹೇಳಲಾರೆ" ಎಂದು ಅವರು ಹೇಳುತ್ತಾರೆ.

‘ಪಾಟೀಲ್ ಕಾಕಿ’ ಬ್ರ್ಯಾಂಡ್ ಸೃಷ್ಟಿ
2021 ರಲ್ಲಿ ಈ ಹಂತದಲ್ಲಿಯೇ ಗೀತಾ ಅವರ ಮಗ ವಿನಿತ್ ಈ ವ್ಯವಹಾರವನ್ನು ಪ್ರವೇಶಿಸಿದರು. "ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡು, ನಾನು ಈ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ತಾಯಿಗೆ ಸಹಾಯ ಮಾಡಲು ಬಯಸಿದೆ. ಅವಳು ಇದರಲ್ಲಿ ಹಾಕಿದ ಕಠಿಣ ಪರಿಶ್ರಮವನ್ನು ನಾನು ನೋಡಿದ್ದೇನೆ. ಮೊದಲನೆಯದಾಗಿ, ನಾವು ‘ಪಾಟೀಲ್ ಕಾಕಿ’ ಎಂಬ ಹೆಸರಿನೊಂದಿಗೆ ಬ್ರ್ಯಾಂಡ್ ಶುರು ಮಾಡಿದ್ದೇವೆ ಮತ್ತು ವ್ಯವಹಾರಕ್ಕೆ ಸ್ವಲ್ಪ ಗೋಚರತೆಯನ್ನು ಪಡೆಯಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದೇವೆ" ಎಂದು ವಿನಿತ್ ತಿಳಿಸಿದ್ದಾರೆ.

ವಾರ್ಷಿಕವಾಗಿ 12 ಲಕ್ಷ ರೂಪಾಯಿಗಳಿಂದ ಸುಮಾರು 1.4 ಕೋಟಿ ರೂಪಾಯಿಗಳ ಆದಾಯವನ್ನು ಹೆಚ್ಚಿಸಲು ವಿನಿತ್ ಕೆಲಸ ಮಾಡಿದರು ಎಂದು ಅವರು ಹೇಳುತ್ತಾರೆ. "ಸಾಂತಾಕ್ರೂಜ್ ನಲ್ಲಿ ನಾವು ಕಾರ್ಯನಿರ್ವಹಿಸುವ 1,200 ಚದರ ಅಡಿ ಜಾಗವನ್ನು ಕೈಗೆತ್ತಿ ಕೊಂಡಿದ್ದೇವೆ. ಕಾರ್ಯಾಗಾರದಲ್ಲಿ ನಮ್ಮೊಂದಿಗೆ ಇತರ 25 ಮಹಿಳೆಯರು ಸಹ ಕೆಲಸ ಮಾಡುತ್ತಿದ್ದಾರೆ” ಎಂದು ವಿನಿತ್ ಹೇಳುತ್ತಾರೆ.

ಕೋವಿಡ್ ಸಾಂಕ್ರಾಮಿಕ ರೋಗವು ಮೊದಲು ಪ್ರಾರಂಭವಾದಾಗ ತಮ್ಮ ಗಂಡಂದಿರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡ ಅನೇಕ ಮಹಿಳೆಯರಿಗೆ ಇದು ಸಹಾಯ ಮಾಡಿದೆ ಎಂದು ಗೀತಾ ಹೇಳಿದ್ದಾರೆ.

ಉತ್ತಮ ಗುಣಮಟ್ಟ ಹಾಗೂ ರುಚಿ
ಕೆಲವು ಸಮಯದಿಂದ ‘ಪಾಟೀಲ್ ಕಾಕಿ’ ಯಿಂದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುತ್ತಿರುವ ಅನುರಾಧಾ ಜೋಹರಿ ಎಂಬ ಗ್ರಾಹಕಿ ಅವರು ಮಾತನಾಡುತ್ತಾ "ರುಚಿ ಮತ್ತು ಗುಣಮಟ್ಟವು ನಿಜವಾಗಿಯೂ ಉತ್ತಮವಾಗಿದೆ,ಪಾಟೀಲ್ ಕಾಕಿ ಅವರಿಂದ ಆರ್ಡರ್ ಮಾಡುವ ಬಗ್ಗೆ ಒಂದು ಉತ್ತಮ ಸಂಗತಿ ಎಂದರೆ ಅವರ ಸೇವೆ. ಅವರ ತಂಡವು ಅದ್ಭುತವಾಗಿದೆ. ನೀವು ತ್ವರಿತ ಉತ್ತರಗಳನ್ನು ಪಡೆಯುತ್ತೀರಿ ಮತ್ತು ಸಮಸ್ಯೆಗಳು ನಿಮಿಷಗಳಲ್ಲಿ ಪರಿಹಾರವಾಗುತ್ತವೆ. ಸಮಯಕ್ಕೆ ಸರಿಯಾಗಿ ತಲುಪಿಸುವುದು ಕೂಡ ಅವರನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ" ಎಂದು ಹೇಳಿದರು.

ಮೋದಕಗಳು, ಪೂರಣ್ ಪೋಳಿ ಮತ್ತು ಚಕ್ಲಿಗಳು ಬೆಸ್ಟ್ ಸೆಲ್ಲರ್ ಗಳಾಗಿವೆ, ಆದರೆ ಬೇಸನ್ ಲಾಡು ಮತ್ತು ಚಿವ್ಡಾಗೆ ನಿರಂತರ ಬೇಡಿಕೆ ಇದೆ. ಮುಂಬೈ ಮತ್ತು ಪುಣೆಯಲ್ಲಿ ತಿಂಗಳಿಗೆ ಸರಾಸರಿ 10,000 ಪೂರಣ್ ಪೋಳಿ ಮತ್ತು 500 ಕೆಜಿಗಿಂತಲೂ ಹೆಚ್ಚು ಚಕ್ಲಿ ತಯಾರಿಸಿ ಕಳುಹಿಸಲಾಗುತ್ತದೆ.

ಇದನ್ನೂ ಓದಿ:Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಸ್ಟಾರ್ಟ್​ಅಪ್​ಗಳ ಆದಾಯದಲ್ಲಿ ಹೆಚ್ಚಳ! ಈ ಅದ್ಭುತ ಸಾಧ್ಯವಾಗಿದ್ದು ಹೇಗೆ? 

ಗೀತಾ ತನ್ನ ಈ ಚಿಕ್ಕ ವ್ಯವಹಾರ ಒಂದು ದಿನ ಹೀಗೆ ದೊಡ್ಡದಾಗಿ ಬೆಳೆಯುತ್ತದೆ ಎಂದು ಊಹಿಸಿರಲಿಲ್ಲ ಎಂದು ಹೇಳುತ್ತಾರೆ. "ಇದು ಕೆಲವೊಮ್ಮೆ ನನಗೆ ತುಂಬಾ ಭಾವಪರವಶವಾಗುವಂತೆ ಮಾಡುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನನ್ನ ಈ ಬ್ರ್ಯಾಂಡ್ ಅನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಇದಕ್ಕೆಲ್ಲ ವಿನಿತ್ ಗೆ ಧನ್ಯವಾದಗಳು" ಎಂದು ಅವರು ಹೇಳುತ್ತಾರೆ. ಪ್ರತಿ ತಿಂಗಳು 3,000ಕ್ಕೂ ಹೆಚ್ಚು ಆರ್ಡರ್ ಗಳನ್ನು ರವಾನಿಸುತ್ತಿರುವುದರಿಂದ, ಬ್ರ್ಯಾಂಡ್ ಶೀಘ್ರದಲ್ಲಿಯೇ ಇತರ ನಗರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಲು ನೋಡುತ್ತಿದೆ.
Published by:Ashwini Prabhu
First published: