Carrot Farming: ಈ ಮಹಿಳೆ ಮಾಡಿರೋದು ಅಂತಿಂತಾ ಸಾಧನೆಯಲ್ಲ, ಓದಿರೋದು ಕೇವಲ 8ನೇ ತರಗತಿ!

ಸಂತೋಷ ಅವರಿಗೆ ಜೀವನ ನಿರ್ವಹಣೆಗೆ ಅಗತ್ಯವಾಗುವಷ್ಟು ಆದಾಯ ಗಳಿಸುವುದು ಕಷ್ಟವಾಗಿತ್ತು. ಆದರೆ, ಅದೇ ಸಂತೋಷ , ಇಂದು ಕ್ಯಾರೆಟ್ ಬೆಳೆಯುವ ತಮ್ಮ ನವೀನ ತಂತ್ರಗಳ ಕಾರಣದಿಂದ, 3 ಲಕ್ಷ ಮೊತ್ತ ಬಹುಮಾನವನ್ನು ಒಳಗೊಂಡಿರುವ ರಾಷ್ಟ್ರಪತಿ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಕ್ಯಾರೆಟ್ ಕೃಷಿಯಲ್ಲಿ ಯಶಸ್ಸು ಕಂಡ  ಮಹಿಳೆ

ಕ್ಯಾರೆಟ್ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

  • Share this:
ಪ್ರತಿಯೊಬ್ಬ ರೈತರೂ (Farmer) ಮಾರುಕಟ್ಟೆಯಲ್ಲಿ (Market) ತಮ್ಮ ಉತ್ಪನ್ನ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ರಾಜಸ್ಥಾನದ (Rajasthan) ಸಿಕರ್ ಜಿಲ್ಲೆಯ ಜಿಗರ್ ಬಾಡಿ ಗ್ರಾಮದ ಸಂತೋಷ ಪಚಾರ್ ಕೂಡ ಅದಕ್ಕೆ ಹೊರತಲ್ಲ. 8ನೇ ತರಗತಿ ಓದಿರುವ ಆಕೆ ವೃತ್ತಿಯಲ್ಲಿ ಸಾಂಪ್ರದಾಯಿಕ ಕೃಷಿಕರಾಗಿದ್ದಾರೆ. ತಮ್ಮ ಸುಮಾರು 10 ಎಕರೇ ಜಮೀನಿನಲ್ಲಿ, 2002ರಿಂದಲೂ ಸಾವಯವ ವಿಧಾನ ಅನುಸರಿಸಿ, ಕ್ಯಾರೆಟ್ (Carrot) ಮತ್ತು ಇತರ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಗುತ್ತಲೇ ಇರಲಿಲ್ಲ. ಅವರು ಬೆಳೆದ ಕ್ಯಾರೆಟ್‍ಗಳು ಸೊಣಕಲು ಮತ್ತು ವಕ್ರವಾಗಿರುತ್ತಿದ್ದವು ಹಾಗೂ ಅವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು (Customer) ಆಕರ್ಷಿಸುತ್ತಿರಲಿಲ್ಲ.

ಹಾಗಾಗಿ, ಸಂತೋಷ ಅವರಿಗೆ ಜೀವನ ನಿರ್ವಹಣೆಗೆ ಅಗತ್ಯವಾಗುವಷ್ಟು ಆದಾಯ ಗಳಿಸುವುದು ಕಷ್ಟವಾಗಿತ್ತು. ಆದರೆ, ಅದೇ ಸಂತೋಷ, ಇಂದು ಕ್ಯಾರೆಟ್ ಬೆಳೆಯುವ ತಮ್ಮ ನವೀನ ತಂತ್ರಗಳ ಕಾರಣದಿಂದ, 3 ಲಕ್ಷ ಮೊತ್ತ ಬಹುಮಾನವನ್ನು ಒಳಗೊಂಡಿರುವ ರಾಷ್ಟ್ರಪತಿ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಹಾಗಾದ್ರೆ, ಸಂತೋಷ ಪಚಾರ್ ಅವರ ಈ ಸಾಧನೆಗೆ ಕಾರಣವೇನು? ಬನ್ನಿ ತಿಳಿಯೋಣ.
“ನನ್ನ ಪತಿ ಮತ್ತು ನನಗೆ ಕಳಪೆ ಗುಣಮಟ್ಟದ ಉತ್ಪನಕ್ಕೆ ಯಾವುದೇ ಪರಿಹಾರ ತಿಳಿದಿರಲಿಲ್ಲ. ಕೃಷಿಯ ಬಗ್ಗೆ ಉತ್ತಮ ಜ್ಞಾನ ಪಡೆಯಲು ಮತ್ತು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಲ್ಲಿ, ನಾನು ರಾಜ್ಯ ಸರಕಾರ ಆಯೋಜಿಸುತ್ತಿದ್ದ ಕೃಷಿ ಮೇಳಗಳಿಗೆ ಹೋಗಲು ಆರಂಭಿಸಿದೆ. ಅದು ನನಗೆ ಕೃಷಿಯ ಅಧಿಕ ಅಂಶಗಳನ್ನು ಕಲಿತುಕೊಳ್ಳಲು ಸಹಾಯ ಮಾಡಿತು” ಎನ್ನುತ್ತಾರೆ ಸಂತೋಷ.

ಇದನ್ನೂ ಓದಿ: Husband Wife: ಗಂಡನಿಗಿಂತ ಹೆಂಡತಿಗೇ ಹೆಚ್ಚು ಆದಾಯ! ಕರ್ನಾಟಕದ ಮಹಿಳೆಯರು ಯಾವ ಸ್ಥಾನದಲ್ಲಿದ್ದಾರೆ ನೋಡಿ

ಕೃಷಿ ಮೇಳಗಳಿಂದ ಪಡೆದ ಜ್ಞಾನ ಮತ್ತು ತಜ್ಞರ ಜೊತೆಗಿನ ಸಂವಾದದಿಂದ, ತಮಗೆ ಉತ್ತಮ ಫಸಲು ಬರದೇ ಇರುವುದಕ್ಕೆ ಕಾರಣ ತಾವು ಕ್ಯಾರೆಟ್ ಬೆಳೆಯಲು ಬಳಸುತ್ತಿದ್ದ ಕಳಪೆ ಬೀಜಗಳು ಎಂಬುವುದು ತಿಳಿದು ಬಂತು.

75 ದಿನಗಳಲ್ಲಿಯೇ ಇಳುವರಿ ನೀಡುತ್ತದೆ ಈ ಪ್ರಯೋಗ
ಅದಕ್ಕೆ ತಾನೆ ಸ್ವತಃ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿದರು ಆಕೆ. 15 ಮಿಲಿ ಲಿಟರ್ ಜೇನು ತುಪ್ಪವನ್ನು 5 ಮಿಲಿ ಲೀಟರ್ ತುಪ್ಪದೊಂದಿಗೆ ಬೆರೆಸಿ, ಅದಕ್ಕೆ ನೇರವಾಗಿ ಸೂರ್ಯನ ಬಿಸಿಲು ಬೀಳದ ರೀತಿಯಲ್ಲಿ ಒಣಗಿಸುವ ಮೂಲಕ, ಹೊಸ ಪರಾಗ ಸ್ಪರ್ಶ ತಂತ್ರವನ್ನು ಅಳವಡಿಸಲು ಆರಂಭಿಸಿದರು. ಸಂತೋಷ ಅವರ ಈ ಪ್ರಯೋಗ ವ್ಯರ್ಥವಾಗಲಿಲ್ಲ, ಕೆಲವು ಕೊಯ್ಲುಗಳ ನಂತರ, ಆಕೆ ಫಸಲಿನಲ್ಲಿ ವ್ಯತ್ಯಾಸ ಕಾಣ ಸಿಕ್ಕಿತು. “ ಕ್ಯಾರೆಟ್‍ಗಳು ಸಿಹಿಯಾಗಿದ್ದವು ಮತ್ತು ಹೊಳೆಯುತ್ತಿದ್ದವು. ಅವುಗಳ ಆಕಾರ ಮತ್ತು ಗಾತ್ರ ಕೂಡ ಸುಧಾರಿಸುತ್ತಿದೆ” ಎನ್ನುತ್ತಾರೆ ಸಂತೋಷ .

ಸಂತೋಷ್ ಅವರ ಈ ಪ್ರಯೋಗದಲ್ಲಿ, ಬೀಜವು ಹೊಸ ಗುಣಮಟ್ಟದ ಉತ್ಪನ್ನವಾಗಿ ವಿಕಸನಗೊಳ್ಳಲು ಕೆಲವು ವರ್ಷಗಳು ಬೇಕಾಯಿತು. ಹಿಂದಿನ ಬೀಜಗಳಿಗೆ ಹೋಲಿಸಿದರೆ ಈ ಹೊಸ ಬೀಜ 15 ದಿನ ಮೊದಲೇ, ಅಂದರೆ 75 ದಿನಗಳಲ್ಲಿಯೇ ಇಳುವರಿ ನೀಡುತ್ತವೆ. ಏಕೆಂದರೆ ಅವು ಬೇಗ ಮೊಳಕೆ ಒಡೆಯುತ್ತವೆ ಮತ್ತು ಗಾತ್ರ 1.5 ರಿಂದ 2.5 ಅಡಿಗಳ ನಡುವೆ ಇರುತ್ತವೆ.

ನೆರೆಹೊರೆಯ ರೈತರೊಂದಿಗೆ ಹಂಚಿಕೊಂಡ ಬೀಜದ ಸ್ಯಾಂಪಲ್‍ಗಳು
ಪ್ರಯೋಗ ಯಶಸ್ವಿಯಾದ ಬಳಿಕ, ದಂಪತಿ ನೆರೆಹೊರೆಯ ರೈತರೊಂದಿಗೆ ಆ ಬೀಜದ ಸ್ಯಾಂಪಲ್‍ಗಳನ್ನು ಹಂಚಿಕೊಂಡರು. ಆ ರೈತರಿಗೂ ಬೀಜಗಳ ಗುಣಮಟ್ಟ ಇಷ್ಟವಾಯಿತು. “ ನಾನು ಕೆಲವು ಬೀಜಗಳನ್ನು ರಾಜ್ಯದ ಕೃಷಿ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದು, ಅವರು ಪ್ರಯತ್ನಿಸಿ, ಪರೀಕ್ಷಿಸಿ ಮತ್ತು ಅಂತಿಮವಾಗಿ ಬೀಜವನ್ನು ಸಂಪೂರ್ಣವಾಗಿ ಹೊಸ ತಳಿ ಎಂದು ಘೋಷಿಸಿದರು. ನಾವು ಅದನ್ನು ಎಸ್‍ಪಿಎಲ್ 101 ಎಂದು ಹೆಸರಿಸಿದ್ದೇವೆ” ಎಂದು ತಮ್ಮ ಪ್ರಯೋಗದ ಬಗ್ಗೆ ವಿವರಿಸುತ್ತಾರೆ ಸಂತೋಷ.

ನರ್ಸರಿಯನ್ನು ಆರಂಭಿಸಿದ ದಂಪತಿಗಳು
ಸಂತೋಷ ಪಚಾರ್ ದಂಪತಿ ಕ್ಯಾರೆಟ್‍ಗಳನ್ನು ಮಾರಾಟ ಮಾಡಲು ಆರಂಭಿಸಿದರು ಮತ್ತು ಬೀಜಗಳಿಂದ ಸಸಿಗಳನ್ನು ಸಿದ್ಧಪಡಿಸಲು ನರ್ಸರಿಯೊಂದನ್ನು ಅಭಿವೃದ್ಧಿಸಿದರು. ಹೊಸ ಬೀಜದಿಂದ ಅವರು ಮೊದಲಿಗಿಂತಲೂ ಹೆಚ್ಚು ಲಾಭ ಗಳಿಸಲು ಆರಂಭಿಸಿದ್ದಾರಂತೆ. ಮೊದಲಿನ ಕಳಪೆ ಬೀಜದಿಂದ ವರ್ಷಕ್ಕೆ 1.5 ಲಕ್ಷ ಲಾಭ ಬರುತ್ತಿತ್ತು, ಆದರೆ ಹೊಸ ಬೀಜದಿಂದ ವರ್ಷಕ್ಕೆ 20 ಲಕ್ಷ ಲಾಭ ಬರುತ್ತಿದೆಯಂತೆ.

ಇದನ್ನೂ ಓದಿ: FM Nirmala Sitharaman Announcement: ಸಿಮೆಂಟ್ ಬೆಲೆ ಇಳಿಕೆಗೆ ಕ್ರಮ, ರೈತರಿಗೆ 1.10 ಲಕ್ಷ ಕೋಟಿ ಹೆಚ್ಚುವರಿ ಅನುದಾನ ಘೋಷಣೆ

ಸಂತೋಷ ಅವರ ವಿನೂತನ ಪ್ರಯೋಗಗಳಿಗಾಗಿ, 2013 ಮತ್ತು 2017ರಲ್ಲಿ ರಾಷ್ಟ್ರಪತಿ ಪ್ರಶಸ್ತಿ ದೊರಕಿದೆ. ಆಗಿನಿಂದ, ಸಂತೋಷ ಅವರು ರಾಜ್ಯದ 7,000ಕ್ಕೂ ಹೆಚ್ಚು ರೈತರಿಗೆ ಸಾವಯವ ವಿಧಾನದಲ್ಲಿ ಕ್ಯಾರೆಟ್ ಬೆಳೆಯುವುದರ ಬಗ್ಗೆ ತರಬೇತಿ ನೀಡಿದ್ದಾರೆ.
Published by:Ashwini Prabhu
First published: