• Home
  • »
  • News
  • »
  • business
  • »
  • Investment For Women: ಮಹಿಳೆಯರು ಇಲ್ಲಿ ಇನ್ವೆಸ್ಟ್​ ಮಾಡಿದ್ರೆ ಡಬಲ್​ ಪ್ರಾಫಿಟ್! ನಿಮ್ಗೆ ಅಂತಾನೇ ಹೇಳಿ ಮಾಡಿಸಿದ ಯೋಜನೆಗಳಿವು

Investment For Women: ಮಹಿಳೆಯರು ಇಲ್ಲಿ ಇನ್ವೆಸ್ಟ್​ ಮಾಡಿದ್ರೆ ಡಬಲ್​ ಪ್ರಾಫಿಟ್! ನಿಮ್ಗೆ ಅಂತಾನೇ ಹೇಳಿ ಮಾಡಿಸಿದ ಯೋಜನೆಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯರಾದರೆ ಚಿನ್ನ(Gold), ಸ್ಥಿರ ಠೇವಣಿ (FD), ಸಣ್ಣ ಉಳಿತಾಯ ಯೋಜನೆಗಳು ಇತ್ಯಾದಿಗಳು ಹೆಚ್ಚು ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಆದರೆ ಆಧುನಿಕ ಕಾಲದಲ್ಲಿ ಮಹಿಳೆಯರ ಬಂಡವಾಳ ಆದ್ಯತೆಗಳೂ ಬದಲಾಗಿವೆ.

  • Share this:

ಮೊದಲೆಲ್ಲಾ ಯಾರಾದರೂ ತುಂಬಾ ದಿನಗಳ ನಂತರ ಎದುರು ಬಂದಾಗ ಹೇಗಿದ್ದೀರಾ? ಏನು ಸಮಾಚಾರ ಅಂತ ಕೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಈಗೆಲ್ಲಾ ಯಾರಾದರೂ ಸಿಕ್ಕಾಗ ಎಲ್ಲಿ ಕೆಲಸ (Job) ಮಾಡುತ್ತಿರುವೆ? ಎಷ್ಟು ಸಂಬಳ (Salary) ? ಅಂತ ಕೇಳುತ್ತಾರೆ. ಹೌದು, ಈ ಫಾಸ್ಟ್​ ಫುಡ್ (Fast-food)​ ಯುಗದಲ್ಲಿ ಹಣಕ್ಕಿರುವ ವ್ಯಾಲ್ಯೂ ಅಂಥದ್ದು. ದುಡ್ಡು ಮಾಡಿದವರಿಗೆ ಮಾತ್ರ ಇಲ್ಲಿ ಬೆಲೆ. ಹೌದು, ಎಲ್ಲರೂ ದುಡ್ಡು ಮಾಡುತ್ತಾರೆ. ಆದರೆ, ಅದನ್ನು ಹೇಗೆ ಉಳಿತಾಯ (Save) ಮಾಡಬೇಕೆಂಬ ಗೊಂದಲ ಎಲ್ಲರಲ್ಲೂ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳಿ (Womans) ಗೆ ಎಲ್ಲಿ ಹೂಡಿಕೆ ಮಾಡಬೇಕೆಂಬ ಐಡಿಯಾ ಕಮ್ಮಿ ಅಂದರೆ ತಪ್ಪಾಗಲ್ಲ.  ಭವಿಷ್ಯ (Future) ಕ್ಕಾಗಿ ಈಗಿನಿಂದಲೇ ಹೂಡಿಕೆ (Invest)  ಮಾಡುವುದು ಉತ್ತಮ.ಸ್ಟಾಕ್ ಮಾರ್ಕೆಟ್ (Stock Market) , ರಿಯಲ್ ಎಸ್ಟೇಟ್ (Real Estate) , ಮ್ಯೂಚುವಲ್ ಫಂಡ್ (Mutual Fund) ಇತ್ಯಾದಿಗಳಲ್ಲಿ ಪುರುಷ (Men) ರು ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಿರಬಹುದು.


ಮಹಿಳೆಯರು ಇಲ್ಲಿ ಹೂಡಿಕೆ ಮಾಡಿದ್ರೆ ಬೆಟರ್!


ಮಹಿಳೆಯರಾದರೆ ಚಿನ್ನ(Gold), ಸ್ಥಿರ ಠೇವಣಿ (FD), ಸಣ್ಣ ಉಳಿತಾಯ ಯೋಜನೆಗಳು ಇತ್ಯಾದಿಗಳು ಹೆಚ್ಚು ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಆದರೆ ಆಧುನಿಕ ಕಾಲದಲ್ಲಿ ಮಹಿಳೆಯರ ಬಂಡವಾಳ ಆದ್ಯತೆಗಳೂ ಬದಲಾಗಿವೆ. ಅನೇಕ ಜನರು ಮೊದಲು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಹಣವನ್ನು ಉಳಿಸುತ್ತಿದ್ದರು. ಆದರೆ ನೀವು ಉತ್ತಮ ಆದಾಯವನ್ನು ಪಡೆಯಲು ಬಯಸಿದರೆ, ನೀವು ಇತರ ಆಯ್ಕೆಗಳಲ್ಲಿಯೂ ಹೂಡಿಕೆ ಮಾಡಬೇಕು.


ಮ್ಯೂಚುಯಲ್​ ಫಂಡ್​ನಲ್ಲಿ ಹೂಡಿಕೆ ಮಾಡಿ!


ನೀವು ಮ್ಯೂಚುಯಲ್​ ಫಂಡ್‌ಗಳಲ್ಲಿಯೂ ಹೂಡಿಕೆ ಮಾಡಬಹುದು. ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದವರು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಕಾರು ಖರೀದಿಯಂತಹ ಗುರಿ ಹೊಂದಿರುವವರು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಹೈಬ್ರಿಡ್​ ಮ್ಯೂಚುಯಲ್ ಫಂಡ್ ಸಹ ಆಯ್ಕೆ ಮಾಡಬಹುದು. ಇದು ಬಹು ಆಸ್ತಿ ವರ್ಗಗಳನ್ನು ಒಳಗೊಂಡಿದೆ. ಆದ್ದರಿಂದ ಇದರಲ್ಲಿಯೂ ಹಣ ಅಡಗಿಸಬಹುದು.


ಇದನ್ನೂ ಓದಿ: EPF ಖಾತೆದಾರರಿಗೆ ಬಿಗ್​ ನ್ಯೂಸ್​, ಇದೊಂದು ಕೆಲ್ಸ ಮಾಡಿಲ್ಲ ಅಂದ್ರೆ ನಿಲ್ಲುತ್ತೆ ಬಡ್ಡಿ ಹಣ!


ಈಕ್ವಿಟಿ ಮ್ಯೂಚುಯಲ್​ ಫಂಡ್​ನಲ್ಲೂ ಲಾಭ!


ಇದಲ್ಲದೇ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳೂ ಇವೆ. ಇದು ಅಪಾಯವನ್ನೂ ಒಳಗೊಂಡಿರುತ್ತದೆ. ಆದರೆ ಆದಾಯವೂ ಹೆಚ್ಚು. ಮಕ್ಕಳ ಮದುವೆಯಂತಹ ದೀರ್ಘಾವಧಿಯ ಹೂಡಿಕೆ ಗುರಿಗಳನ್ನು ಹೊಂದಿರುವ ಜನರು ಈ ನಿಧಿಯನ್ನು ಆಯ್ಕೆ ಮಾಡಬಹುದು. ನೀವು ಚಿನ್ನದಲ್ಲಿ ಹಣವನ್ನು ಕೂಡ ಹಾಕಬಹುದು. ಅನೇಕ ಮಹಿಳೆಯರಿಗೆ ಚಿನ್ನ ಮೊದಲ ಹೂಡಿಕೆಯ ಆಯ್ಕೆಯಾಗಿದೆ ಎಂದು ಹೇಳಬಹುದು.


ಚಿನ್ನದಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ!


ಈಗ ಚಿನ್ನ ಖರೀದಿಸುವುದು ತುಂಬಾ ಸುಲಭ. ನೀವು ಚಿನ್ನವನ್ನು ಖರೀದಿಸಲು ಬಯಸಿದರೆ.. ಹಲವು ಆಯ್ಕೆಗಳಿವೆ. ಇವುಗಳಲ್ಲಿ ಡಿಜಿಟಲ್ ಗೋಲ್ಡ್ ಕೂಡ ಒಂದು. ನಿಮ್ಮ ಫೋನ್ ಮೂಲಕ ನೀವು ಮನೆಯಿಂದಲೇ ಡಿಜಿಟಲ್ ಚಿನ್ನದಲ್ಲಿ ಹಣವನ್ನು ಠೇವಣಿ ಮಾಡಬಹುದು. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆಗಳು ಇದು ಭಾರೀ ಪ್ರಮಾಣದಲ್ಲಿ ಹೆಚ್ಚಾಗಬಹುದೆಂಬ ನಿರೀಕ್ಷೆಗಳಿವೆ.


ಇದನ್ನೂ ಓದಿ: ಆಧಾರ್ ಕಾರ್ಡ್‌ನಲ್ಲಿ ಹಳೇ ಫೋಟೋ ಇದ್ಯಾ? ಹೀಗೆ ನಿಮ್ಮ ಹೊಸ ಫೋಟೋ ಅಪ್​ಡೇಟ್​ ಮಾಡಿ!


ಆದ್ದರಿಂದ, ನೀವು ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ನೀವು ಉತ್ತಮ ಆದಾಯವನ್ನು ಪಡೆಯಬಹುದು. ಪಸಿಡಿ ಸುರಕ್ಷಿತ ಹೂಡಿಕೆ ಸಾಧನವೆಂದು ಪರಿಗಣಿಸಲಾಗಿದೆ. ಹಾಗಾಗಿ ಆರ್ಥಿಕ ಹಿಂಜರಿತದಂತಹ ಆತಂಕದ ಹಿನ್ನೆಲೆಯಲ್ಲಿ ಪಸಿಡಿಗೆ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು. ಅಲ್ಪಾವಧಿ ಗುರಿಗಳಿಗಾಗಿ ಇದನ್ನು ಹೂಡಿಕೆ ಮಾಡಬಹುದು.

Published by:ವಾಸುದೇವ್ ಎಂ
First published: