• Home
  • »
  • News
  • »
  • business
  • »
  • Fig Farming: ಅಂಜೂರ ಬೆಳೆಸಿದ ಮೊದಲ ಮಹಿಳೆ, ಇದ್ರಿಂದಲೇ ಲಕ್ಷ ಲಕ್ಷ ಆದಾಯ!

Fig Farming: ಅಂಜೂರ ಬೆಳೆಸಿದ ಮೊದಲ ಮಹಿಳೆ, ಇದ್ರಿಂದಲೇ ಲಕ್ಷ ಲಕ್ಷ ಆದಾಯ!

ರೈತ ಮಹಿಳೆ ವಿಲಾಸ್ಬೆನ್​

ರೈತ ಮಹಿಳೆ ವಿಲಾಸ್ಬೆನ್​

ವಿಲಾಸ್ಬೆನ್ ಸಂಪೂರ್ಣ ಸಾವಯವ ಕೃಷಿ ಮಾಡುತ್ತಾರೆ. ಅವರ ಅಂಜೂರದ ಹಣ್ಣುಗಳನ್ನು ಅಫ್ಘಾನಿಸ್ತಾನದ ಅಂಜೂರದ ಹಣ್ಣುಗಳಿಗೆ ಹೋಲಿಸಲಾಗುತ್ತದೆ.

  • Local18
  • Last Updated :
  • Gujarat, India
  • Share this:

ಕೊರೋನಾ ವೈರಸ್ (Corona Virus) ಕೋಟ್ಯಂತರ ಜನರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಉದ್ಯೋಗ (Job) ವನ್ನು ಕಳೆದುಕೊಳ್ಳಬೇಕಾಯಿತು. ಈ ಸಾಂಕ್ರಾಮಿಕ ರೋಗದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಅನೇಕ ಜನರಿದ್ದರು. ಇಂತಹ ನೋವಿನ ಕಥೆಗಳ ನಡುವೆ ಒಂದಷ್ಟು ಬದಲಾವಣೆಯ ಗಾಳಿಯೂ ಕಾಣಿಸಿತು. ಗುಜರಾತಿ (Gujrat) ನ ಅಮ್ರೇಲಿ (Amreli) ಯ ವಿಲಾಸ್ಬೆನ್ ಸವಸ ಯ್ಯ (Vilasben Savasaiah) ನ ಕಥೆಯೂ ಇದೇ ಆಗಿದೆ. ತನ್ನ ಜಿಲ್ಲೆಯಲ್ಲಿ ಅಂಜೂರವನ್ನು (Fig Farming) ಬೆಳೆಸಿದ ಮೊದಲ ಮಹಿಳೆ. ಕಳೆದ ಎರಡೂವರೆ ವರ್ಷದಲ್ಲಿ ಮೂರು ಬೆಳೆ ತೆಗೆದು ಬಂಪರ್ ಹಣ ಗಳಿಸಿದ್ದಾರೆ.


ಸಾವಯುವ ಕೃಷಿ ಮಾಡುವ ಮಹಿಳೆ!


ವಿಲಾಸ್ಬೆನ್ ಸಂಪೂರ್ಣ ಸಾವಯವ ಕೃಷಿ ಮಾಡುತ್ತಾರೆ. ಅವರ ಅಂಜೂರದ ಹಣ್ಣುಗಳನ್ನು ಅಫ್ಘಾನಿಸ್ತಾನದ ಅಂಜೂರದ ಹಣ್ಣುಗಳಿಗೆ ಹೋಲಿಸಲಾಗುತ್ತದೆ. ವಿಲಾಸ್ಬೆನ್ ಅವರ ಅಂಜೂರದ ಹಣ್ಣುಗಳು ಅಫ್ಘಾನಿಸ್ತಾನಕ್ಕಿಂತ ಉತ್ತಮ ಮತ್ತು ಸಿಹಿಯಾಗಿರುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.


ಅಂಜೂರ ಗಿಡ ನೆಟ್ಟು ಯಶಸ್ವಿಯಾದ ಮಹಿಳೆ!


ಕೊರೋನಾದಲ್ಲಿ ಲಕ್ಷಾಂತರ ಜನರು ತಮ್ಮ ಗ್ರಾಮಗಳಿಗೆ ಮರಳಿದ್ದರು. ಅವರಲ್ಲಿ ವಿಲಾಸ್ಬೆನ್ ಕೂಡ ಒಬ್ಬರು. ವಿಲಾಸ್ಬೆನ್  ಹಾಗೂ ಅವರ ಕುಟುಂಬ ಸೂರತ್‌ನಿಂದ ಅಮ್ರೇಲಿ ಜಿಲ್ಲೆಯ ಅಂಕಡಿಯಾ ಗ್ರಾಮಕ್ಕೆ ಮರಳಿದ್ದರು. ಇಲ್ಲಿ ಅವರು ತಮ್ಮ ಭೂಮಿಯಲ್ಲಿ ಮೊದಲ ಬಾರಿಗೆ ಅಂಜೂರದ ಗಿಡವನ್ನು ನೆಟ್ಟರು. ಜಿಲ್ಲೆಯಲ್ಲಿ ಅಂಜೂರ ಕೃಷಿ ಮಾಡಿದ ಮೊದಲ ಮಹಿಳಾ ರೈತ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾತದರು.


ರೈತ ಮಹಿಳೆ ವಿಲಾಸ್ಬೆನ್


ಗುಜರಾತ್​ನಲ್ಲಿ ಸಿಕ್ಕಾಪಟ್ಟೆ ಫೇಮಸ್​ ಈ ರೈತ ಮಹಿಳೆ!


ತನ್ನ ಜೀವನೋಪಾಯಕ್ಕಾಗಿ ಬೆಳೆ ಪದ್ಧತಿಯನ್ನು ಬದಲಾಯಿಸುವ ಅವರ ಪ್ರಯೋಗ ಈಗ ಇಡೀ ಗುಜರಾತ್‌ನಲ್ಲಿ ಚರ್ಚೆಯ ವಿಷಯವಾಗಿದೆ. ವಿಲಾಸ್ಬೆನ್ 2020 ರಿಂದ ತನ್ನ ಹೊಲಗಳಲ್ಲಿನ ಅಂಜೂರದ ಮರಗಳ ಸಂಖ್ಯೆಯನ್ನು 3400 ಕ್ಕೆ ಹೆಚ್ಚಿಸಿದ್ದಾರೆ. ಇದರಿಂದ ಮೂರು ಬಾರಿ ಬೆಳೆ ತೆಗೆದಿದ್ದು, ಇದರಿಂದ 8ರಿಂದ 10 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಇವರು ಸಂಪೂರ್ಣ ಸಾವಯವ ಕೃಷಿ ಮಾಡುತ್ತಾರೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅವರ ಉತ್ಪನ್ನಗಳು ಹೆಚ್ಚು ಇಷ್ಟವಾಗುತ್ತಿವೆ.


ಇದನ್ನೂ ಓದಿ: ನಕಲಿ ಬೀಜ, ಅಕಾಲಿಕ ಮಳೆ ಹೊಡೆತಕ್ಕೆ ನಲುಗಿದ ಆಂಧ್ರದ ಹತ್ತಿ ಬೆಳೆಗಾರರು!


ಚೀನಾದ ಫಾರ್ಮ್​ನಲ್ಲಿ ಕೆಲಸ ಮಾಡ್ತಿದ್ದ ಗಂಡ!


ಗಂಡ ಚೀನಾದಲ್ಲಿ ಕಲಿತು ಮಲೇಷ್ಯಾದಿಂದ ಗಿಡಗಳನ್ನು ತಂದಿದ್ದ
ವಿಲಾಸ್ಬೆನ್​ ಅವರ ಪತಿ ದಿನೇಶ್ ಭಾಯ್ ಚೀನಾದ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಅಂಜೂರದ ಕೃಷಿಯ ಬಗ್ಗೆ ಸಾಕಷ್ಟು ಕಲಿತರು. ಅದನ್ನು ಬೆಳೆಸಲು ಪತ್ನಿಗೆ ಪ್ರೇರಣೆ ನೀಡಿದ್ದಲ್ಲದೆ, ಅವರ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಪತ್ನಿಯೂ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.


ರೈತ ಮಹಿಳೆ ವಿಲಾಸ್ಬೆನ್


ಮಲೇಷಿಯಾದಿಂದ ಬಂದಿತ್ತು ಅಂಜೂರ ಗಿಡಗಳು!


ಆದಾಗ್ಯೂ, ವಿಲಾಸ್ಬೆನ್ ಮತ್ತು ಅವರ ಕುಟುಂಬಕ್ಕೆ ಅಂಜೂರದ ಕೃಷಿಯನ್ನು ಪ್ರಾರಂಭಿಸುವುದು ಸುಲಭವಾಗಿರಲಿಲ್ಲ. ಲಾಕ್‌ಡೌನ್‌ನಿಂದಾಗಿ ಅಂಜೂರದ ಗಿಡಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಹೇಗೋ ಗಿಡಗಳನ್ನು ಮಲೇಷ್ಯಾದಿಂದ ಆಂಧ್ರಪ್ರದೇಶಕ್ಕೆ ತಂದು ಅಲ್ಲಿಂದ ಅಂಕಡಿಯಾ ಗ್ರಾಮಕ್ಕೆ ತರಲಾಯಿತು. ಈ ಮೂಲಕ ಕೃಷಿಯಲ್ಲಿ ಹೊಸ ಬದಲಾವಣೆಗಳ ಬರವಣಿಗೆ ಆರಂಭಗೊಂಡಿದ್ದು, ಇದೀಗ ರಾಜ್ಯ ಸರಕಾರದಿಂದ ಪ್ರೋತ್ಸಾಹ ಕೂಡ ಸಿಗುತ್ತಿದೆ.


ಅಂಜೂರ


ಇದನ್ನೂ ಓದಿ: ಸ್ವಿಗ್ಗಿಯಲ್ಲಿ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ, ಏನೆಲ್ಲಾ ಖರೀದಿ ಮಾಡಿದ್ದಾರೆ ನೋಡಿ!


ವಿಲಾಸ್ಬೆನ್ ಮತ್ತು ಅವರ ಪತಿಗೆ ಪ್ರಗತಿಪರ ರೈತರ ಸ್ಥಾನಮಾನ ನೀಡಲಾಗಿದೆ. ಇದೀಗ ಈ ದಂಪತಿ ಚೀನಾದಿಂದ ಸಂಸ್ಕರಣಾ ಯಂತ್ರ ತಂದಿದ್ದಾರೆ. ಅಂಜೂರವನ್ನು ಸಂಸ್ಕರಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಂಸ್ಕರಿಸಿದ ಅಂಜೂರದ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕೆಜಿಗೆ 1,200 ರಿಂದ 1,600 ರೂ.ಗೆ ತಲುಪಿದೆ. ಅವರು ಪ್ರಸ್ತುತ ಅಮ್ರೇಲಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಾಗೂ ಸೂರತ್‌ನಲ್ಲಿ ಈ ಅಂಜೂರದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

Published by:ವಾಸುದೇವ್ ಎಂ
First published: