Bank: ಈ ಬ್ಯಾಂಕ್​ನಲ್ಲಿ ದುಡ್ಡು ಇಟ್ಟಿದ್ದೀರಾ? ಕೂಡಲೇ ಡ್ರಾ ಮಾಡಿ, ಇನ್ನೂ ಕೇವಲ 5 ದಿನವಷ್ಟೇ ಬಾಕಿ!

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಈ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ (Cancellation of Bank License) ನಿರ್ದಿಷ್ಟ ದಿನದ ನಂತರ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ 

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಈ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ (Cancellation of Bank License) ನಿರ್ದಿಷ್ಟ ದಿನದ ನಂತರ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ 

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಈ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ (Cancellation of Bank License) ನಿರ್ದಿಷ್ಟ ದಿನದ ನಂತರ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ 

  • Share this:
ನೀವು ರೂಪಾಯಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ (Rupee Cooperative Bank Limited) ನಲ್ಲಿ ಖಾತೆ ಹೊಂದಿದ್ದೀರಾ? ಈ ಬ್ಯಾಂಕಿನಲ್ಲಿ ನಿಮ್ಮ ಬಳಿ ಹಣವಿದ್ದರೆ ತಡ ಮಾಡಬೇಡಿ ಈಗ ಎಲ್ಲಾ ಹಣವನ್ನು(Withdraw Money)  ಹಿಂತೆಗೆದುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಹಣ ಮತ್ತೆ ನಿಮ್ಮ ಕೈ ಸೇರುವ ಸಾಧ್ಯತೆ ತೀರಾ ಕಡಿಮೆ ಎಂದರೆ ತಪ್ಪಾಗಲ್ಲ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಈ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ (Cancellation of Bank License) ನಿರ್ದಿಷ್ಟ ದಿನದ ನಂತರ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ನೀವು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವು ವ್ಯರ್ಥವಾಗದಂತೆ ತಕ್ಷಣ ಹಣವನ್ನು ತೆಗೆದುಕೊಳ್ಳಿ ನೀಡಲಾದ ಮಾರ್ಗಸೂಚಿಗಳ ಪ್ರಕಾರ, 22ನೇ ಸೆಪ್ಟೆಂಬರ್ 2022 ರಿಂದ ರೂಪಾಯಿ ಸಹಕಾರಿ ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. 

ಆದಷ್ಟು ಬೇಗ ಹಣ ಡ್ರಾ ಮಾಡಿಬಿಡಿ!

ಗ್ರಾಹಕರು ಈ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಹೊಂದಿದ್ದರೆ, ಸಮಸ್ಯೆ ಉಂಟಾಗಬಹುದು.  ರಿಸರ್ವ್ ಬ್ಯಾಂಕ್ 22 ಸೆಪ್ಟೆಂಬರ್ 2022 ರವರೆಗೆ ರೂಪಾಯಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಗ್ರಾಹಕರಿಗೆ ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಮಯವನ್ನು ನೀಡಿದೆ. ಅಂದಹಾಗೆ, ರುಪೇ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಗ್ರಾಹಕರು ಹಣವನ್ನು ಹಿಂಪಡೆಯಲು ಕೇವಲ 5 ದಿನಗಳು ಮಾತ್ರ ಬಾಕಿ ಇದೆ.

ಆರ್​ಬಿಐ ಹೇಳಿದ್ದೇನು?

ಆಗಸ್ಟ್ 10 ರಿಂದ 6 ವಾರಗಳ ನಂತರ ಪುಣೆ ರೂಪಾಯಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ 10 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಈ ಅವಧಿ ಸೆಪ್ಟೆಂಬರ್ 22ಕ್ಕೆ ಕೊನೆಗೊಳ್ಳಲಿದೆ ಅಂದರೆ 5 ದಿನಗಳ ನಂತರ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: SBI ಗ್ರಾಹಕರಿಗೆ ಗುಡ್ ನ್ಯೂಸ್, ಇನ್ಮುಂದೆ ಆ ಸೇವೆ ಸಂಪೂರ್ಣ ಉಚಿತ!

ನಿಯಮಗಳ ಪ್ರಕಾರ, ಬ್ಯಾಂಕ್ ದಿವಾಳಿತನ ಮತ್ತು ಮುಚ್ಚುವಿಕೆಯ ಸಂದರ್ಭದಲ್ಲಿ ರೂ 5 ಲಕ್ಷದ ಠೇವಣಿ ವಿಮಾ ರಕ್ಷಣೆ ಲಭ್ಯವಿದೆ. DICGC ನಿಮಗೆ ವಿಮಾ ರಕ್ಷಣೆಯನ್ನು ನೀಡುತ್ತದೆ. ಈ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ನಿಮ್ಮ ಹಣ ಎಲ್ಲೂ ಹೋಗುವುದಿಲ್ಲ. ನೀವು ಪೂರ್ಣ ಮೊತ್ತವನ್ನು ಪಡೆಯುತ್ತೀರಿ.

ಈ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದ್ದೇಕೆ?

ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಅನುಸರಿಸದ ಕಾರಣ ರೂಪೇ ಸಹಕಾರಿ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಇಪಿಎಫ್​ಒ ಡಿಮ್ಯಾಂಡ್​, ಕಾರಣ ಇದಂತೆ!

ಎಸ್​​ಬಿಐ ಬ್ಯಾಂಕ್​ನಿಂದ ಈ ಸೇವೆ ಉಚಿತ!

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿ ಮುಂದುವರಿದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗಲಿದೆ. ಎಸ್‌ಬಿಐ ಇತ್ತೀಚೆಗೆ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಮೊಬೈಲ್ ಫಂಡ್ ವರ್ಗಾವಣೆಗೆ ಯಾವುದೇ SMS ಶುಲ್ಕ ಇರುವುದಿಲ್ಲ ಎಂದು ಅದು ಹೇಳಿದೆ. ಗ್ರಾಹಕರು ಇನ್ನು ಮುಂದೆ ಯಾವುದೇ ಶುಲ್ಕವಿಲ್ಲದೆ USSD ಸೇವೆಗಳನ್ನು ಪಡೆಯಬಹುದು ಎಂದು ಸ್ಟೇಟ್ ಬ್ಯಾಂಕ್ ಮಾಹಿತಿ ನೀಡಿದೆ.

ನಾವು SMS ಶುಲ್ಕಗಳನ್ನು ಮನ್ನಾ ಮಾಡಿದ್ದೇವೆ. ಇದು ಮೊಬೈಲ್ ಫಂಡ್ ವರ್ಗಾವಣೆಗೆ ಅನ್ವಯಿಸುತ್ತದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಸುಲಭವಾಗಿ ವಹಿವಾಟು ನಡೆಸಬಹುದು” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.ಅಲ್ಲದೆ, ಬ್ಯಾಂಕ್ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಹಣ ಕಳುಹಿಸುವುದು, ಹಣಕ್ಕಾಗಿ ವಿನಂತಿಯನ್ನು ನೀಡುವುದು, ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್, ಯುಪಿಐ ಪಿನ್ ಬದಲಾವಣೆ ಮುಂತಾದ ಎಲ್ಲವನ್ನೂ ಸಹ ಪಡೆಯಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
Published by:ವಾಸುದೇವ್ ಎಂ
First published: