Wipro: ವಿಪ್ರೋ ಸಂಸ್ಥೆಯಿಂದ 300 ಉದ್ಯೋಗಿಗಳ ವಜಾ, ಕಂಪನಿ ನಿಯಮ ಉಲ್ಲಂಘನೆಗೆ ಶಿಕ್ಷೆ!

ಮೂನ್‌ಲೈಟಿಂಗ್ ಸಮಗ್ರತೆಯ ಸಂಪೂರ್ಣ ಉಲ್ಲಂಘನೆಯ ಕ್ರಿಯೆಯಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದ ಅಧ್ಯಕ್ಷರು ಈ ನಿಟ್ಟಿನಲ್ಲೇ ಸಂಸ್ಥೆಯ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸುಮಾರು 300 ಜನರು ಹೀಗೆ ಮಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಪ್ರೇಮ್ಜಿ, ಎಐಎಂಎಗೆ ಹೇಳಿದ್ದಾರೆ.

ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ

ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ

  • Share this:
ವಿಪ್ರೋದಲ್ಲಿ (Wipro) ಕೆಲಸ ಮಾಡುವುದರ ಜೊತೆಗೆ ಅದರ ಪ್ರತಿಸ್ಪರ್ಧಿ ಕಂಪೆನಿಯೊಂದಿಗೆ ಒಂದೇ ಸಮಯದಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ಸಂಸ್ಥೆ ವಜಾಗೊಳಿಸಿದೆ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ ತಿಳಿಸಿದ್ದಾರೆ. ಮೂನ್‌ಲೈಟಿಂಗ್ (Moonlighting) (ಮೂಲ ಸಂಸ್ಥೆಯಲ್ಲಿದ್ದುಕೊಂಡೇ ಬೇರೆ ಸಂಸ್ಥೆಗಳಿಗೆ ಕೆಲಸ ಮಾಡುವುದು) ಸಮಗ್ರತೆಯ ಸಂಪೂರ್ಣ ಉಲ್ಲಂಘನೆಯ ಕ್ರಿಯೆಯಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದ ಅಧ್ಯಕ್ಷರು ಈ ನಿಟ್ಟಿನಲ್ಲೇ ಸಂಸ್ಥೆಯ ಉದ್ಯೋಗಿಗಳ (Employees) ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸುಮಾರು 300 ಜನರು ಹೀಗೆ ಮಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಪ್ರೇಮ್ಜಿ, ಎಐಎಂಎ (ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್) ಗೆ (AIMA) ಹೇಳಿದ್ದಾರೆ.

ಸಮಗ್ರತೆಯ ಉಲ್ಲಂಘನೆ
ಸಮಗ್ರತೆಯ ಉಲ್ಲಂಘನೆ ಕಾಯ್ದೆಯಡಿಯಲ್ಲಿ ಉದ್ಯೋಗಿಗಳ ಸೇವೆಯನ್ನು ಕೊನೆಗೊಳಿಸಲಾಗಿದ್ದು, ಕಂಪೆನಿ ಹಾಗೂ ಪ್ರತಿಸ್ಪರ್ಧಿ ಕಂಪೆನಿಯೊಂದಿಗೆ ಕೂಡ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಏಕೀಕೃತ ಆಯ್ಕೆ ಮುಖ್ಯ
ಮೂನ್‌ಲೈಟಿಂಗ್ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡುವುದನ್ನು ಸೂಚಿಸುತ್ತದೆ. ಪಾರದರ್ಶಕತೆಯ ಭಾಗವಾಗಿ, ಉದ್ಯೋಗಿಯು ಮಕ್ತವಾಗಿ ಈ ಕುರಿತು ಸಂಭಾಷಣೆಗಳನ್ನು ಮಾಡಬಹುದು. ಇದೊಂದು ಮುಕ್ತ ಸಂವಾದವಾಗಿದ್ದು, ಸಂಸ್ಥೆ ಹಾಗೂ ಉದ್ಯೋಗಿಯು ಈ ವಿಷಯದ ಕುರಿತು ಏಕೀಕೃತ ಆಯ್ಕೆಯನ್ನು ಮಾಡಬಹುದು ಎಂದು ಪ್ರೇಮ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ:  Explained: Moonlighting ಅಂದ್ರೇನು? ಒಂದು ಕಂಪೆನಿಯಲ್ಲಿದ್ದುಕೊಂಡು ಇನ್ನೊಂದು ಕಡೆ ಕೆಲಸ ಮಾಡುವುದೆಷ್ಟು ಸರಿ?

ಇನ್ನು ವಿಪ್ರೋ ಹಾಗೂ ಪ್ರತಿಸ್ಪರ್ಧಿ ಸಂಸ್ಥೆಯೊಂದಿಗೆ ಒಂದೇ ಸಮಯದಲ್ಲಿ ಕೆಲಸ ಮಾಡುವವರಿಗೆ ಇಲ್ಲಿ ಸ್ಥಳವಿಲ್ಲ. ಏಕೆಂದರೆ ಪ್ರತಿಸ್ಪರ್ಧಿ ಸಂಸ್ಥೆ ಕೂಡ ಈ ಪರಿಸ್ಥಿತಿಯಲ್ಲಿ ಇಂತಹುದ್ದೇ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಹಾಗಾಗಿಯೇ ನಾನು ಏನು ಹೇಳಿಕೆ ನೀಡಿದ್ದೇನೆ ಅದಕ್ಕೆ ಬದ್ಧನಾಗಿಯೇ ನಡೆದುಕೊಂಡಿದ್ದೇನೆ ಎಂದವರು ಪುನರುಚ್ಛರಿಸಿದ್ದಾರೆ.

ಇದರ ಹೊರತಾಗಿ ಟೆಕ್ ಮಹೀಂದ್ರಾ ಸಿಇಒ ಆನಂದ್ ಮಹೀಂದ್ರಾ, ಸಿಪಿ ಗುರ್ನಾನಿ ಕೂಡ ತಮ್ಮ ಟ್ವೀಟ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗುವುದು ಅಗತ್ಯವಾಗಿದೆ ಹಾಗೂ ನಾವು ಕೆಲಸ ಮಾಡುವ ವಿಧಾನಗಳಲ್ಲಿನ ಅಸ್ತವ್ಯಸ್ತತೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದರು.

ಮೂನ್‌ಲೈಟಿಂಗ್‌ಗೆ ನೋ ಎಂದ ಇನ್ಫೋಸಿಸ್
ಕಳೆದ ವಾರ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಹೊರಡಿಸಿದ ಸೂಚನೆಯಲ್ಲಿ ಮೂನ್‌ಲೈಟಿಂಗ್ ಮಾಡುವುದು ಕಂಪೆನಿಯ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದು, ಉದ್ಯೋಗಿಯು ಸಂಸ್ಥೆಯಲ್ಲಿದ್ದುಕೊಂಡೇ ಬೇರೆ ಕಂಪೆನಿಗೆ ಕೆಲಸ ಮಾಡುವುದು ಸಂಸ್ಥೆಯ ಗಮನಕ್ಕೆ ಬಂದಲ್ಲಿ ಅಂತಹ ಉದ್ಯೋಗಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿತ್ತು.

ಉದ್ಯೋಗಿ ಸೂಚನೆಗಳು ಹಾಗೂ ನೀತಿ ಸಂಹಿತೆಗೆ ಅನುಗುಣವಾಗಿ ದ್ವಿ ಉದ್ಯೋಗವನ್ನು ಅನುಮತಿಸುವುದಿಲ್ಲ ಎಂಬುದನ್ನು ಇನ್ಫೋಸಿಸ್ ಸ್ಪಷ್ಟಪಡಿಸಿತ್ತು. ಇದಕ್ಕೆ ವಿರುದ್ಧವಾಗಿ ಸ್ವಿಗ್ಗಿ ಮೂನ್‌ಲೈಟಿಂಗ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದು ತನ್ನ ಉದ್ಯೋಗಿಗಳು ಇತೆರೆಡೆಗಳಲ್ಲಿ ಕೆಲಸಮಾಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ದೃಢೀಕರಿಸಿತ್ತು.

ಬಿಡುವಿನ ವೇಳೆಯಲ್ಲಿ ಮೆಚ್ಚಿನ ಉದ್ಯೋಗ
ಇತ್ತೀಚಿನ ದಿನಗಳಲ್ಲಿ ಮೂನ್‌ಲೈಟಿಂಗ್ ವಿವಾದವು ಉದ್ಯೋಗಿಗಳಿಗೆ ತೀವ್ರ ಕಳವಳಕಾರಿಯಾಗಿ ರೂಪುಗೊಳ್ಳುತ್ತಿದೆ. ಕೋವಿಡ್ ಸಮಯದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ಭರವಸೆಯಾಗಿದ್ದ ಮೂನ್‌ಲೈಟಿಂಗ್ ಕುರಿತು ಒಂದೊಂದು ಕಂಪೆನಿಗಳು ವಿಭಿನ್ನವಾದ ಹೇಳಿಕೆಗಳನ್ನು ನೀಡುತ್ತಿವೆ. ಈ ಸಲುವಾಗಿಯೇ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ಸಾಧ್ಯವೇ ಇಲ್ಲ ಎಂಬ ನಕಾರಾತ್ಮಕ ಅಭಿಪ್ರಾಯದ ಇಮೇಲ್ ಅನ್ನು ಕಳುಹಿಸಿತ್ತು.

ಇದನ್ನೂ ಓದಿ: Ritesh Agarwal: ಭಾರೀ ಏರಿಕೆ ಕಂಡ ಓಯೋ ಆದಾಯ, ಸಂಭಾವನೆ ಹೆಚ್ಚಿಸಿಕೊಂಡ ಸಿಇಒ ರಿತೇಶ್‌!

ಕೆಲವೊಂದು ಉದ್ಯೋಗಿಗಳ ಪ್ರಕಾರ ಮೂನ್‌ಲೈಟಿಂಗ್ ಎಂಬುದು ಹೆಚ್ಚುವರಿ ಆದಾಯವನ್ನು ಒದಗಿಸುವ ವಿಧಾನವಾಗಿದ್ದರೂ ಅದಕ್ಕಿಂತ ಹೆಚ್ಚಾಗಿ ತಮ್ಮ ಮನಸ್ಸಿಗೆ ಹಿಡಿಸುವ ಅಂತೆಯೇ ಇಚ್ಛೆಯ ಉದ್ಯೋಗವನ್ನು ಮಾಡುವ ತೃಪ್ತಿಯನ್ನು ನೀಡುತ್ತದೆ ಎಂದಾಗಿದೆ. ಅದಲ್ಲದೆ ಸಂಸ್ಥೆಯಲ್ಲಿ ಉದ್ಯೋಗದ ಸಮಯದ ನಂತರ ಉದ್ಯೋಗಿಯು ಯಾವುದೇ ಕೆಲಸ ಮಾಡುವ ಹಕ್ಕನ್ನು ಹೊಂದಿದ್ದು ಇದಕ್ಕೆ ಆ ಸಂಸ್ಥೆ ಮೂಗುತೂರಿಸುವಂತಿಲ್ಲ ಎಂಬುದಾಗಿ ತಿಳಿಸಿದ್ದರು.

ಅನ್ನದಾತ ಸಂಸ್ಥೆಗೆ ಯಾವುದೇ ರೀತಿಯ ಮೋಸ ಹಾಗೂ ಕೆಲಸದಲ್ಲಿ ರಾಜಿಮಾಡಿಕೊಳ್ಳದೆ ಬಿಡುವಿನ ಸಮಯದಲ್ಲಿ ತಮ್ಮ ಆಯ್ಕೆಯ ವೃತ್ತಿಯನ್ನು ಮಾಡುವುದು ನ್ಯಾಯೋಚಿತ ಎಂಬುದೇ ಅವರ ವಾದವಾಗಿದೆ.
Published by:Ashwini Prabhu
First published: