• Home
 • »
 • News
 • »
 • business
 • »
 • ಉತ್ಕರ್ಷದಲ್ಲಿರುವ ಭಾರತದ ಫಿನ್‌ಟೆಕ್ ಕ್ಷೇತ್ರ ಆತ್ಮನಿರ್ಭರತೆಯ ಕೀಲಿಯಾಗುತ್ತಾ?

ಉತ್ಕರ್ಷದಲ್ಲಿರುವ ಭಾರತದ ಫಿನ್‌ಟೆಕ್ ಕ್ಷೇತ್ರ ಆತ್ಮನಿರ್ಭರತೆಯ ಕೀಲಿಯಾಗುತ್ತಾ?

ನಾವೀನ್ಯತೆ ಮತ್ತು ಜನಪ್ರಿಯಗೊಳಿಸುವ ಮೂಲಕ ಡಿಜಿಟಲ್ ಪಾವತಿಗಳು ಮತ್ತು ಇ-ಕಾಮರ್ಸ್ ಜಗತ್ತಿಗೆ ಭಾರತ ರೂಪ ನೀಡಿದ ಬಗೆ ಇಲ್ಲಿದೆ.

ನಾವೀನ್ಯತೆ ಮತ್ತು ಜನಪ್ರಿಯಗೊಳಿಸುವ ಮೂಲಕ ಡಿಜಿಟಲ್ ಪಾವತಿಗಳು ಮತ್ತು ಇ-ಕಾಮರ್ಸ್ ಜಗತ್ತಿಗೆ ಭಾರತ ರೂಪ ನೀಡಿದ ಬಗೆ ಇಲ್ಲಿದೆ.

ನಾವೀನ್ಯತೆ ಮತ್ತು ಜನಪ್ರಿಯಗೊಳಿಸುವ ಮೂಲಕ ಡಿಜಿಟಲ್ ಪಾವತಿಗಳು ಮತ್ತು ಇ-ಕಾಮರ್ಸ್ ಜಗತ್ತಿಗೆ ಭಾರತ ರೂಪ ನೀಡಿದ ಬಗೆ ಇಲ್ಲಿದೆ.

 • Share this:

  ವಿಶ್ವಾದ್ಯಂತದ ಡಿಜಿಟಲ್ ಪಾವತಿಗಳಲ್ಲಿ ಭಾರತವು ನಿಸ್ಸಂಶಯವಾಗಿ ಮುಂಚೂಣಿಯಲ್ಲಿದೆ. ಇತ್ತೀಚಿನ ACI ವಿಶ್ವಾದ್ಯಂತದ ವರದಿಯ ಪ್ರಕಾರ, ಭಾರತವು 2021ರಲ್ಲಿ ಅತಿಹೆಚ್ಚು ಸಂಖ್ಯೆಯ ನೈಜ ಸಮಯದ ವಹಿವಾಟುಗಳನ್ನು ದಾಖಲಿಸಿತ್ತು (48.6 ಬಿಲಿಯನ್) – ಇದು ಚೀನಾದ ವಹಿವಾಟುಗಳಿಗಿಂತ (18 ಬಿಲಿಯನ್) ಮೂರು ಪಟ್ಟುಗಳಾಗಿತ್ತು ಮತ್ತು ಯು.ಎಸ್.ಕೆನಡಾ, ಯು.ಕೆ., ಫ್ರಾನ್ಸ್ ಮತ್ತು ಜರ್ಮನಿಯ ಒಟ್ಟಾರೆ ವಹಿವಾಟುಗಳಿಗಿಂತ (7.5 ಬಿಲಿಯನ್) ಸುಮಾರು ಏಳು ಪಟ್ಟುಗಳಾಗಿತ್ತು.


  ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI), ಇದು ಜಗತ್ತಿನ ಅತಿದೊಡ್ಡ ನೈಜ ಸಮಯದ ಪಾವತಿ ವ್ಯವಸ್ಥೆಯಾಗಿದ್ದು, 2023 ರ ವೇಳೆಗೆ ಗಾತ್ರದಲ್ಲಿ ಸುಮಾರು 59 ಬಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ. ನ್ಯಾಶನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ  (NPCI) ವು UPI ಅನ್ನು ರಚಿಸುವ ವೇಳೆಯಲ್ಲಿ, ಅವರ ದೃಷ್ಟಿ ಸರಳವಾಗಿತ್ತು: ಅಂತರ್- ಬ್ಯಾಂಕ್ ಪಿಯರ್-ಟು-ಪಿಯರ್ ಮತ್ತು ವ್ಯಕ್ತಿಯಿಂದ ವ್ಯಾಪಾರಿ ವಹಿವಾಟುಗಳಿಗೆ ಸೌಲಭ್ಯ ಕಲ್ಪಿಸುವ ಒಂದು ಇಂಟರ್‌ಫೇಸ್ ಅನ್ನು ರಚಿಸಬೇಕೆಂದು ಅರು ಬಯಸಿದ್ದರು.

  UPI ಯಶೋಗಾಥೆ
  UPI ಯಾಕಿಷ್ಟು ಯಶಸ್ವಿಯಾಗಿದೆ? ಗ್ರಾಹಕರು ನಗದು ಪಾವತಿಗಳಿಗಿಂತ UPI ವಹಿವಾಟುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ಇದಕ್ಕೆ ಮುಖ್ಯ ಕಾರಣಗಳೆಂದರೆ, ಸುಲಭ ಪಾವತಿ, ವಹಿವಾಟಿನ ಸುರಕ್ಷತೆ ಮತ್ತು ಅನುಕೂಲತೆ. ಪಾವತಿ ಸ್ವೀಕರಿಸುವವರಿಗೆ, ಇದು ಚೆಕ್ ಡಿಫಾಲ್ಟ್‌ಗಳು, ಕೌಂಟರ್‌ಫಾಯೆಟ್ ನೋಟ್‌ಗಳು, ನಿಖರ ಚಿಲ್ಲರೆ ಕೊಡುವುದು, ದೊಡ್ಡ ನಗದು ಮೊತ್ತವನ್ನು ಇಟ್ಟುಕೊಳ್ಳುವ ಮತ್ತು ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಲ್ಲಿ ಒಳಗೊಂಡಿರುವ ಸಮಸ್ಯೆಗಳನ್ನು ತೊಡೆದುಹಾಕಿ ಅನುಕೂಲ ಕಲ್ಪಿಸುತ್ತದೆ. UPI ಯು ಭೌತಿಕ ವಹಿವಾಟು ಪ್ರಕ್ರಿಯೆಯನ್ನು ಕೂಡಾ ಸಂಪೂರ್ಣವಾಗಿ ತೊಡೆದುಹಾಕುತ್ತದೆ, ಬ್ಯಾಂಕ್ ಶಾಖೆಗಳು ಮತ್ತು ಎಟಿಎಂಗಳಿಗೆ ಹೋಗಬೇಕಾದ ಅಗತ್ಯವನ್ನೂ ತುಂಬಾ ಕಡಿಮೆಗೊಳಿಸುತ್ತದೆ, ಇದರಿಂದಾಗಿ ಬ್ಯಾಂಕ್ ಶಾಖೆಗಳಲ್ಲಿ ಜನಸಂದಣಿಯನ್ನು ತಗ್ಗಿಸುತ್ತದೆ, ಇದರಿಂದಾಗಿ ಸೇವೆಗಳು ವೇಗಗೊಳ್ಳುತ್ತವೆ.


  The UPI ವ್ಯವಸ್ಥೆಯು ಪೇಟಿಎಂ, ಗೂಗಲ್ ಪೇ, ಫೋನ್‌ಪೇ ಮತ್ತು BHIM ನಂತಹ ಡಿಜಿಟಲ್ ವಹಿವಾಟುಗಳಿಗಾಗಿ ಬಳಸಲಾಗುವ ಅನೇಕ ಆ್ಯಪ್‌ಗಳಿಂದ ತುಂಬಿವೆ. ವ್ಯಾಪಾರಿಗಳು ಮತ್ತು ಬ್ಯಾಂಕ್‌ಗಳು ತಮ್ಮ ಸ್ವಂತ ಪಾವತಿ ಅಪ್ಲಿಕೇಶನ್‌ಗಳನ್ನು ರಚಿಸಲು ಹೂಡಿಕೆ ನಡೆಸಬೇಕಿಲ್ಲ, UPI ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳಲು ಚಾಲ್ತಿಯಲ್ಲಿರುವ ಆ್ಯಪ್‌ಗಳನ್ನು ಅಳವಡಿಸಿಕೊಂಡರೆ ಸಾಕು- ಇದು UPI ಅಳವಡಿಕೆಯಲ್ಲಿ ಅತಿದೊಡ್ಡ ಚಾಲಕ ಶಕ್ತಿಯೆನಿಸಿತು.


  ಅಂತಾರಾಷ್ಟ್ರೀಯ ಅಳವಡಿಕೆಯ ಚಾಲಕಶಕ್ತಿ ಇದೇ ಆಗಿದೆ. ರುಪೇ ಆಧಾರಿತ ಕ್ರೆಡಿಟ್ ಕಾರ್ಡ್‌ಗಳು ಮತ್ತು UPI ನ ಅಳವಡಿಕೆಗಾಗಿ NPCI ಹಾಗೂ NPCI ನ ಅಂತಾರಾಷ್ಟ್ರೀಯ ಘಟಕವಾಗಿರುವ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಲಿಮಿಟೆಡ್ (NIPL) 30 ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸಿಂಗಾಪುರದಲ್ಲಿ RBI ಮತ್ತು ಮಾನೆಟರಿ ಅಥಾರಿಟಿ ಆಫ್ ಸಿಂಗಾಪುರ್ UPI ಅನ್ನು ಆ ನಗರ ರಾಜ್ಯದ ತತ್‌ಕ್ಷಣದ ಪಾವತಿ ವ್ಯವಸ್ಥೆ ಪೇನೌ ಜೊತೆಗೆ ಲಿಂಕ್ ಮಾಡುವ ಪ್ರೊಜೆಕ್ಟ್ ಅನ್ನು ಕೈಗೆತ್ತಿಕೊಂಡಿವೆ.


  UPI ಯು ಗೋಲ್ಡ್ ಸ್ಟಾಂಡರ್ಡ್ ಅನ್ನು ತನ್ನ ವಿಶ್ವಾಸಾರ್ಹತೆ ಮತ್ತು ವಿಶ್ವಾಸವನ್ನಾಗಿಸಿದ್ದು ಹೇಗೆ. ವಿಶ್ವಾಸಾರ್ಹತೆ ಮತ್ತು ವಿಶ್ವಾಸ ಎಂಬುದು SIP ಗಳಿಂದ ತೊಡಗಿ ಪಾವತಿ ಗೇಟ್‌ವೇಗಳ ತನಕ ಯಾವುದೇ ಹಣಕಾಸು ಉತ್ಪನ್ನವು ಅಳವಡಿಸಿಕೊಳ್ಳಬೇಕಾದ ಎರಡು ಮುಖ್ಯ ಸಂಗತಿಗಳಾಗಿವೆ. ಭಾರತದ ದೃಷ್ಟಿಯಾದ ಆತ್ಮನಿರ್ಭರ ಭಾರತವನ್ನು ಸಾಧಿಸಲು ಆರ್ಥಿಕತೆಯ ಎಲ್ಲಾ ಅಂಶಗಳಿಂದ ವಿಶ್ವಾಸಾರ್ಹತೆ ಮತ್ತು ವಿಶ್ವಾಸದ ಅದೇ ಮಟ್ಟವು ಭಾರತಕ್ಕೆ ಬೇಕಾಗಿದೆ.


  QCI ಅನುಕೂಲ
  ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾವು ಈ ಹಂತದ ಗುಣಮಟ್ಟ ಸಾಧಿಸುವಲ್ಲಿ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ವಿಶ್ವಾಸ ಹಾಗೂ ವಿಶ್ವಾಸಾರ್ಹತೆಯು ಭಾರತೀಯ ಉದ್ಯಮಗಳಲ್ಲಿ ಸಾಧ್ಯವಾಗಿದೆ. QCI ನ ವಿಧಾನವು ಎರಡು ಅಲಗುಗಳನ್ನು ಹೊಂದಿದೆ: ಒಂದು, ಅವುಗಳು ಉದ್ಯಮಗಳಿಗೆ ಲಭ್ಯವಿರುವ ಸ್ಟಾಂಡರ್ಡ್‌ಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಅಕ್ರೆಡೇಶನ್‌ಗಳನ್ನು ಮಾಡುವ ಮೂಲಕ ಸಾಮರ್ಥ್ಯಗಳನ್ನು ನಿರ್ಮಿಸಲು ನೆರವಾಗುತ್ತವೆ. ಎರಡು, ಉದ್ಯಮಗಳನ್ನು ನಿರ್ಣಾಯವಾಗಿ ವಿಮರ್ಶಿಸುವ ಆಂತರಿಕ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗೆ ನೆರವಾಗುವ ಮೌಲ್ಯಮಾಪಕರ ಪರಿಸರವ್ಯವಸ್ಥೆಯನ್ನು ರಚಿಸುತ್ತವೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡುತ್ತವೆ.


  QCI ಯು ಹಣಕಾಸಿನಲ್ಲಿ ಗುಣಮಟ್ಟ ಪ್ರಜ್ಞೆ ಹಾಗೂ ಗ್ರಾಹಕ ರಕ್ಷಣೆಯೆರಡನ್ನೂ ತರುವ ನಿಟ್ಟಿನಲ್ಲಿ ಹಲವಾರು ಉದ್ಯಮ ಸ್ಟಾಂಡರ್ಡ್‌ಗಳನ್ನು ಪ್ರಾರಂಭಿಸಿದೆ. ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಸರ್ಟಿಫಿಕೇಶನ್ ಬಾಡೀಸ್ (NABCB) ಅನೇಕ ಅಕ್ರೆಡಿಟೇಶನ್ ಯೋಜನೆಗಳನ್ನು ಹೊಂದಿದ್ದು, ಅದು ಇನ್ಫಾರ್ಮೇಶನ್ ಟೆಕ್ನಾಲಜಿ ಸರ್ವೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ (ITSMS),ಇನ್ಫಾರ್ಮೇಶನ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ (ISMS), ಕ್ವಾಲಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ (QMS), ಟ್ರಸ್ಟ್‌ವರ್ದಿ ಡಿಜಿಟಲ್ ರೆಪೊಸಿಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ (TDRMS) ಸೇರಿವೆ.

  ಈ ಚೌಕಟ್ಟಿನಲ್ಲಿ ಅನೇಕ ಸ್ಪಷ್ಟ ಪ್ರಯೋಜನಗಳಿವೆ. ಭಾರತೀಯ ಉದ್ಯಮಗಳು ಅಗತ್ಯವಿರುವ ಜಾಗತಿಕ ಸ್ಟಾಂಡರ್ಡ್‌ಗಳಿಗೆ ಬದ್ಧವಾಗಿವೆ ಎಂಬುದನ್ನು ರಾಷ್ಟ್ರೀಯ ಅಕ್ರೆಡಿಟೇಶನ್ ಮಂಡಳಿಗಳ ನಡುವಿನ ಬಹುಪಕ್ಷೀಯ ವ್ಯವಸ್ಥೆಗಳು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಿವೆ. ಈ ಘಟಕಗಳು ಜಾಗತಿಕ ವ್ಯಾಪಾರದಲ್ಲಿ ಭಾಗವಹಿಸಿವೆ, ಜತೆಗೆ ಸರ್ಕಾರದಿಂದ ಸರ್ಕಾರಕ್ಕೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಸಾಧ್ಯತೆಯನ್ನು ಹೆಚ್ಚಿಸಿದೆ. ಇದು ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಸ್ಪರ್ಧಾತ್ಮಕ ಮೇಲುಗೈಯನ್ನೂ ಒದಗಿಸಿದೆ..


  NABCB ಮಾನ್ಯತೆಯು ನಿಯಂತ್ರಣ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ತಾಂತ್ರಿಕ ಸಮರ್ಥತೆಯನ್ನು ಖಾತ್ರಿಗೊಳಸುತ್ತದೆ. ಇದರಿಂದಾಗಿ, ಅವುಗಳು ನಿಯಂತ್ರಿಸುವ ಮತ್ತು ಅನುಮೋದಿಸುವ ಉತ್ಪನ್ನಗಳು ಮತ್ತು ಸೇವೆಗಳ ಆತ್ಮವಿಶ್ವಾಸ ಸುಧಾರಿಸುತ್ತದೆ. ಇದು ರಾಷ್ಟ್ರೀಯ ನಿಯಂತ್ರಣ ಸಂಸ್ಥೆ ಮತ್ತು ಶಾಸನಬದ್ಧ ವ್ಯವಸ್ಥೆಗಳ ನಡುವೆ ಸಾಮರಸ್ಯವನ್ನು ಸಾಧಿಸುವಲ್ಲಿ ಕೂಡಾ ನೆರವಾಗುತ್ತದೆ.


  ಮಾನ್ಯತೆಯು ಆವರ್ತಕ ಮೌಲ್ಯಮಾಪನಗಳ ಮೂಲಕ ನಿರಂತರ ಸುಧಾರಣೆಯನ್ನು ಕಲ್ಪಿಸುತ್ತದೆ ಮತ್ತು ಜಾಗತಿಕ ಸ್ಟಾಂಡರ್ಡ್‌ಗಳಿಗೆ ಸರಿಸಮವಾಗಿರಲು ಮಾನ್ಯತೆಯ ಮಾರ್ಗಸೂಚಿಗಳನ್ನು ತಾವು ನಿಯಮಿತವಾಗಿ ಅಪ್ಡೇಟ್ ಮಾಡಿಕೊಳ್ಳುತ್ತವೆ. ಅಂತಾರಾಷ್ಟ್ರೀಯ ಸ್ಟಾಂಡರ್ಡ್‌ಗಳ ಅನುಸರಣೆಯ ಮೂಲಕ ಇದು ಅಪಾಯ ನಿರ್ವಹಣೆ ಚೌಕಟ್ಟನ್ನು ಕೂಡಾ ನಿರ್ಮಿಸುತ್ತದೆ. ಅಪಾಯ ಮೌಲ್ಯಮಾಪನವು ಅವುಗಳ ಸ್ಟಾಂಡರ್ಡ್‌ಗಳಿಗೆ ಆಧಾರವಾಗಿದೆ.


  ಸರ್ಕಾರ, ಉದ್ಯಮ ಮತ್ತು ಬಳಕೆದಾರರು NABCB ಯಿಂದ ಮಾನ್ಯತೆ ಪಡೆದ ಉತ್ಪನ್ನಗಳು ಮತ್ತು ಸೇವೆಗಳ ವಿಶ್ವಾಸಾರ್ಹತೆಯನ್ನು ಗುರುತಿಸುತ್ತಾರೆ. ಒಂದರ್ಥದಲ್ಲಿ, ಈ ಉತ್ಪನ್ನಗಳು ಮಾನ್ಯತೆಯ ಪ್ರಕ್ರಿಯೆಯಿಂದಲೇ ವಿಶ್ವಾಸ, ವಿಶ್ವಾಸಾರ್ಹತೆ ಮತ್ತು ಗ್ರಾಹಕ ಆತ್ಮವಿಶ್ವಾಸದ ಮಟ್ಟವನ್ನು ಹೊಂದುತ್ತವೆ.


  ಈ ಚೌಕಟ್ಟನ್ನು ನಿರ್ಮಿಸುವ ಮೂಲಕ, QCI ಯು ಫಿನ್‌ಟೆಕ್ ಸ್ಟಾರ್ಟಪ್‌ಗಳ ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಬೇಕಾದ ಕಾಪುಕಂಬಿ (ಗಾರ್ಡ್‌ರೈಲ್)ಗಳನ್ನು ರಚಿಸುತ್ತದೆ. ಈ ಸೊಲ್ಯೂಶನ್‌ಗಳನ್ನು 2,3,4ನೇ ಹಂತದ ನಗರಗಳಲ್ಲೂ ಗ್ರಾಹಕರನ್ನು ಹೊಂದಿದರೆ ಆಶ್ಚರ್ಯವಿಲ್ಲ. ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಫಿನ್‌ಟೆಕ್ ಅಳವಡಿಕೆ ದರವನ್ನು ಹೊಂದಿದೆ.


  ಭಾರತೀಯ ಫಿನ್‌ಟೆಕ್ ಸೊಲ್ಯೂಶನ್‌ಗಳು ಜಗತ್ತಿನ ಇತರೆಡೆಗೆ ಹೇಗೆ ತತ್ಸಮಾನವಾಗಿದೆ ಎಂಬುದಾಗಿ ನಾವು ನೋಡಿದಾಗ ಈ ಪರಿಸರವ್ಯವಸ್ಥೆಯ ಯಶಸ್ಸು ಕಾಣುತ್ತದೆ. ಭಾರತದ ಫಿನ್‌ಟೆಕ್ ಯುನಿಕಾರ್ನ್‌ಗಳ ಪಟ್ಟಿ ಪ್ರಭಾವಶಾಲಿಯಾಗಿದೆ: ಪೇಟಿಎಂ, ಅಕ್ನೋ ಇನ್ಶೂರೆನ್ಸ್, ಭಾರತ್‌ಪೇ, ಬಿಲ್‌ಡೆಸ್ಕ್, ಡಿಜಿಟ್ ಇನ್ಶೂರೆನ್ಸ್, ಫೋನ್‌ಪೇ, ಪೈನ್ ಲ್ಯಾಬ್ಸ್, ರೇಝರ್‌ಪೇ, ಪಾಲಿಸಿಬಝಾರ್, ಮೊಬಿಕ್ವಿಕ್, ಝೀಟಾ, ಝೀರೋಧಾ, CRED, ಸ್ಲೈಸ್, ಕ್ರೆಡ್‌ಅವೆನ್ಯೂ, ಗ್ರೋ, ಒನ್‌ಕಾರ್ಡ್, ಓಪನ್, ಆಕ್ಸಿಝೋ, ಕಾಯಿನ್‌ಸ್ವಿಚ್‌ಕುಬೇರ್, ಕಾಯಿನ್‌ ಡಿಸಿಎಕ್ಸ್, ಮತ್ತು ಚಾರ್ಜ್‌ಬೀ. ಎಲ್ಲಾ ಉದ್ಯಮ ಲೆಕ್ಕಾಚಾರದ ಪ್ರಕಾರ, ಈ ಪ್ರವೃತ್ತಿ ಬೆಳೆಯುತ್ತಾ ಹೋಗಲಿದೆ.


  UPI ನ ಯಶಸ್ಸಿನ ಬಳಿಕ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ QCI ಈಗ ವಿಸ್ತರಿಸುತ್ತಿದೆ.  UPI ಯು ಡಿಜಿಟಲ್ ಪಾವತಿಗಳಿಗೆ ಇರುವಂತೆ, ONDC ಯು ಭಾರತದಲ್ಲಿ ಇ-ಕಾಮರ್ಸ್‌ಗೆ ಇದೆ. ಡಿಪಾರ್ಟ್‌ಮೆಂಟ್ ಫಾರ್ ಪ್ರಮೋಶನ್ ಆಫ್ ಇಂಡಸ್ಟ್ರಿ ಆಂಡ್ ಇಂಟರ್ನಲ್ ಟ್ರೇಡ್ (DPIIT) ಖರೀದಿರಾರು ಮತ್ತು ಮಾರಾಟಗಾರರ ಗೋಚರತೆಯನ್ನು ನೀಡುವ, ತಾವು ಯಾವುದೇ ಪ್ಲಾಟ್‌ಫಾರ್ಮ್ ಅಥವಾ ಅಪ್ಲಿಕೇಶನ್ ಬಳಸುತ್ತಿದ್ದರೂ ಬೇರೆ ಯಾವುದರೊಂದಿಗಾದರೂ ವಹಿವಾಟು ನಡೆಸುವಂತೆ ಮಾಡುವ ಗುರಿಯೊಂದಿಗೆ ONDC ಪ್ರೊಜೆಕ್ಟ್ ಅನ್ನು ಆರಂಭಿಸಿದೆ.


  ONDC ಯ ಪ್ರಾರಂಭದಿಂದ ಇ-ಕಾಮರ್ಸ್‌ನ ಗೋಡೆಗಳು ಛಿದ್ರಗೊಳ್ಳುವ ನಿರೀಕ್ಷೆಯಿದೆ. ವ್ಯಾಪಾರಿಗಳು ಒಂದು ಆ್ಯಪ್ ಮೂಲಕ ಆನ್‌ಬೋರ್ಡ್ ಆಗಿ ಬಹು ಇ-ಕಾಮರ್ಸ್ ಮಾರ್ಕೆಟ್‌ಪ್ಲೇಸ್‌ಗಳಲ್ಲಿ ಅಂತರ್ ಕಾರ್ಯಾಚರಣೆ ನಡೆಸಲು ONDC ಪ್ಲಾಟ್‌ಫಾರ್ಮ್ ಸಾಧ್ಯವಾಗಿಸುತ್ತದೆ. ಈ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಭಾರತದಾದ್ಯಂತದ ಗ್ರಾಹಕರನ್ನು ತಲುಪಲಿದ್ದಾರೆ. ವ್ಯಾಪಾರಿಗಳು  ಪಾವತಿಗಳು, ಡೆಲಿವರಿ, ಆನ್‌ಲೈನ್ ಉಪಸ್ಥಿತಿ, ಬಿಲ್ಲಿಂಗ್ ಮತ್ತು ಮಾರ್ಕೆಟಿಂಗ್‌ನಂತಹ ಇತರೆ ಅನೇಕ ಸೇವೆಗಳನ್ನು ಒಂದೇ ಪ್ಲಾಟ್‌ಫಾರ್ಮ್ ಮೂಲಕ ಪ್ಲಗ್ ಆಂಡ್ ಪ್ಲೇ ಮಾಡಲು ಇದು ಸಾಧ್ಯವಾಗಿಸುತ್ತದೆ, ಇದರಿಂದಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರಿಬ್ಬರಿಗೂ ಗಮನಾರ್ಹ ಹೊಂದಿಕೆಯನ್ನು ಒದಗಿಸುತ್ತದೆ. ಇದು ಸ್ಪರ್ಧಾತ್ಮಕತೆಯನ್ನಷ್ಟೇ ಉತ್ತೇಜಿಸುವುದಿಲ್ಲ, ಜತೆಗೆ, ದೊಡ್ಡ ಸಂಸ್ಥೆಗಳಂತೆ ಜಾಹೀರಾತು ಹಾಗೂ ಮಾರ್ಕೆಟಿಂಗ್ ಬಜೆಟ್‌ಗಳನ್ನು ಹೊಂದಿರದ ಸಣ್ಣ ಸಂಸ್ಥೆಗಳಿಗೆ ಮುಕ್ತ ಹಾಗೂ ಸಮಾನ ಅವಕಾಶವನ್ನು ಒದಗಿಸುತ್ತದೆ.


  ಭಾರತದ ಫಿನ್‌ಟೆಕ್ ಹಾಗೂ ರಿಟೈಲ್ ಎರಡರಲ್ಲೂ ಇದು ಗಮನಾರ್ಹ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ, ಜಾಹೀರಾತುಗಳು ಮತ್ತು ಆದ್ಯತೆಯ ಹುಡುಕಾಟದ ಹಸ್ತಕ್ಷೇಪವಿಲ್ಲದೆ ಅಥವಾ ಹೆಚ್ಚು ಪಾವತಿಸುವ ದೊಡ್ಡ ಸಂಸ್ಥೆಗಳಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ನೀಡುವ ಯಾವುದೇ ಇತರೆ ಲಾಭಗಳಿಲ್ಲದೆ ಅತ್ಯುತ್ತಮ ಉತ್ಪನ್ನಗಳು ಸಂತುಷ್ಟ ಗ್ರಾಹಕರೊಂದಿಗೆ ಸ್ವಯಂಚಾಲಿತವಾಗಿ ಪ್ರಕಾಶಿಸುವ ಅರ್ಹತೆಯನ್ನು ONDC ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ವಿದೇಶಿ ಅಥವಾ ಖಾಸಗಿ ಮಾಲೀಕತ್ವದ ಮಾರುಕಟ್ಟೆಸ್ಥಳದ ಮೇಲಿನ ನಮ್ಮ ಅವಲಂಬನೆಯನ್ನು ದೇಶೀಯವಾಗಿ ಬೆಳೆಸಿದ ಮಾರ್ಕೆಟ್‌ಪ್ಲೇಸ್ ಮುರಿದು ಇವುಗಳಿಗೆ ಅನುಕೂಲ ಕಲ್ಪಿಸಿದಾಗ ಆರ್ಥಿಕತೆಗೆ ಉತ್ತಮವಾಗಲಿದೆ.


  ಕೇವಲ ಮುಂದಿನ 5 ವರ್ಷಗಳಲ್ಲಿ, ONDC ಯು 900 ಮಿಲಿಯನ್ ಖರೀದಿದಾರರು, 1.2 ಮಿಲಿಯನ್ ಮಾರಾಟಗಾರರನ್ನು ಸೇರಿಸಿಕೊಂಡು ಒಟ್ಟಾರೆ $48 ಬಿಲಿಯನ್ ಮೌಲ್ಯದ ವಹಿವಾಟು ಸಾಧಿಸುವ ನಿರೀಕ್ಷೆಯಿದೆ. MSME ಸಂಸ್ಥೆಗಳಿಗೆ, ವಿಶೇಷವಾಗಿ ZED ಪ್ರಮಾಣೀಕರಣ ಪ್ರಕ್ರಿಯೆಯಲ್ಲಿರುವ ಸಂಸ್ಥೆಗಳಿಗೆ, ಭಾರತೀಯ ಮಾರುಕಟ್ಟೆಯಲ್ಲಿ, ಹಾಗೇನೇ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲು ONDC ಪ್ಲಾಟ್‌ಫಾರ್ಮ್ ಲಾಂಚ್‌ಪ್ಯಾಡ್ ಆಗುವ ಸಾಮರ್ಥ್ಯವನ್ನು ಹೊಂದಿದೆ.


  ಭಾರತವು ಭಾರೀದೊಡ್ಡ ಮಾರುಕಟ್ಟೆಯಾಗಿದೆ. ನಮ್ಮ ಜನಸಂಖ್ಯೆಯೇ ನಮ್ಮನ್ನು ಆಕರ್ಷಕಗೊಳಿಸಿದೆ, ಆದರೆ ಇದನ್ನು ನಮ್ಮ ಬೆಳೆಯುತ್ತಿರುವ ಆದಾಯಗಳೊಂದಿಗೆ ಜೋಡಿಸಿದಾಗ, ಜಾಗತಿಕವಾಗಿ ಪ್ರತಿ ಗಾತ್ರದ ಬ್ರಾಂಡ್‌ಗಳು ಮತ್ತು ಉದ್ಯಮಗಳಿಗೆ ಭಾರತೀಯ ಮಾರುಕಟ್ಟೆಯು ಸ್ಥಾನ ಒದಗಿಸುತ್ತದೆ.


  ಗುಣಮಟ್ಟ ಖಾತರಿ ಹಾಗೂ ಉನ್ನತ ಗುಣಮಟ್ಟದ ಉತ್ಪನ್ನಗಳಿಗೆ ಮಾರುಕಟ್ಟೆಸ್ಥಳ ಸೃಷ್ಟಿಸುವಿಕೆಯನ್ನು ಒಳಗೊಂಡಿರುವ ಒಂದು ಬಲಿಷ್ಠ ಚೌಕಟ್ಟನ್ನು ಒದಗಿಸುವ ಮೂಲಕ, QCI ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುವ ಆವರ್ತ ಚಕ್ರವನ್ನು ಸೃಷ್ಟಿಸುತ್ತಿದೆ. ದೇಶೀಯವಾಗಿ ಬೆಳೆದ ಉದ್ಯಮಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅಂತಾರಾಷ್ಟ್ರೀಯ ಸ್ಟಾಂಡರ್ಡ್‌ಗಳಿಗೆ ಸಮನಾಗಿ ತರಲು ಬೆಂಬಲವನ್ನು ಪಡೆಯುತ್ತವೆ, ಜತೆಗೆ ಅವುಗಳನ್ನು ಉತ್ತೇಜಿಸುವ ಏಕೈಕ ಅಜೆಂಡಾದ ಮಾರುಕಟ್ಟೆ ಸ್ಥಳ ಪ್ರವೇಶಾವಕಾಶವನ್ನೂ ಹೊಂದುತ್ತವೆ. ಇನ್ನೊಂದೆಡೆ ಭಾರತೀಯ ಬಳಕೆದಾರರು, ಉನ್ನತ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯುತ್ತಾ, ವಿದೇಶಿ ಸೇವಾದಾತರ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುತ್ತಾರೆ.


  ಆರ್ಥಿಕತೆಯ ಗಾತ್ರವನ್ನು ಅದರ ಮೂಲಕ ಎಷ್ಟು ಹಣ ಹರಿಯುತ್ತದೆ ಎಂಬುದರ ಮೂಲಕ ನಿರ್ಧರಿಸಲಾಗುತ್ತದೆ. ಭಾರತದ ಅತ್ಯುತ್ತಮ ಉದ್ಯಮಗಳನ್ನು ಭಾರತದ 1 ಬಿಲಿಯನ್‌ಗಳೂ ಹೆಚ್ಚಿನ ಬಳಕೆದಾರರ ನೆಲೆಯೊಂದಿಗೆ ಜೋಡಿಸುವ ಮೂಲಕ, QCI ಯ ಗುಣವತ್ತ ಸೇ ಆತ್ಮನಿರ್ಭರತಾ ಧ್ಯೇಯವು $5 ಟ್ರಿಲಿಯನ್ ಆರ್ಥಿಕತೆಯ ಭಾರತದ ಗುರಿಯತ್ತ ನೈಜ ಜಗತ್ತಿನ ಪ್ರಗತಿಯನ್ನು ಸೃಷ್ಟಿಸುತ್ತಿದೆ.


  QCI ಮತ್ತು ಭಾರತದ ಗುಣವತ್ತ ಸೇ ಆತ್ಮನಿರ್ಭರತಾ ಉಪಕ್ರಮದ ಕುರಿತು ಇನ್ನಷ್ಟು ಹಾಗೂ ನಮ್ಮ ಜೀವನದ ಮೇಲೆ ಅದು ಅನೇಕ ರೀತಿಯಲ್ಲಿ ಬೀರುವ ಪ್ರಭಾವದ ಕುರಿತು ತಿಳಿದುಕೊಳ್ಳಲು, ಭೇಟಿ ನೀಡಿ: https://www.news18.com/qci/

  Published by:Rahul TS
  First published: