• Home
  • »
  • News
  • »
  • business
  • »
  • Indian Economy: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?

Indian Economy: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2023 ರಲ್ಲಿ ಚೀನಾ ಆರ್ಥಿಕ ಪ್ರಗತಿಯನ್ನು ಸಾಧಿಸಿದರೆ ಅದರ ಮುಂದೆ ಭಾರತದ ಆರ್ಥಿಕತೆ ಅತ್ಯಂತ ಚಿಕ್ಕದಾಗಿ ಕಾಣಿಸಬಹುದು ಎಂಬುದಾಗಿ ರಾಜನ್ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಶೃಂಗಸಭೆಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಚೀನಾ (China) ವನ್ನು ಹಿಂದಿಕ್ಕಿ ಭಾರತ (India) ಆರ್ಥಿಕ ಪ್ರಗತಿ (Economic Progress) ಯನ್ನು ಸಾಧಿಸುತ್ತಿದೆ ಎಂದು ಹೇಳುವುದು ಕಷ್ಟ ಇದೊಂದು ಆತುರದ ನಿರ್ಧಾರವಾಗಬಹುದು ಎಂದು ಆರ್‌ಬಿಐ (RBI) ನ ಮಾಜಿ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ. ಚೀನಾ 2023 ರಲ್ಲಿ ಆರ್ಥಿಕ ಪ್ರಗತಿ ಸಾಧಿಸಿದರೆ ಇದು ಜಾಗತಿಕ ಆರ್ಥಿಕತೆಗೆ ದೊಡ್ಡ ಪ್ರಮಾಣದಲ್ಲೇ ಕೊಡುಗೆ ನೀಡಬಹುದು ಎಂದು ತಿಳಿಸಿದ್ದಾರೆ.2023 ರಲ್ಲಿ ಚೀನಾ ಆರ್ಥಿಕ ಪ್ರಗತಿಯನ್ನು ಸಾಧಿಸಿದರೆ ಅದರ ಮುಂದೆ ಭಾರತದ ಆರ್ಥಿಕತೆ ಅತ್ಯಂತ ಚಿಕ್ಕದಾಗಿ ಕಾಣಿಸಬಹುದು ಎಂಬುದಾಗಿ ರಾಜನ್ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಶೃಂಗಸಭೆಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


3% ಮಾತ್ರವೇ ಭಾರತ ಸಾಧಿಸಿದೆ


ವಿಶ್ವದಲ್ಲೇ ಭಾರತ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಪ್ರಗತಿ ಸಾಧಿಸಿದ್ದರೂ, ಚೀನಾದ ಆರ್ಥಿಕತೆಗೆ ಹೋಲಿಸಿದಾಗ ಭಾರತ 2022 ರಲ್ಲಿ ಕೇವಲ 3% ಮಾತ್ರವೇ ಸಾಧಿಸಿದೆ ಎಂಬುದು ಅಧಿಕೃತ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ. ಈ ಅಂಕಿಅಂಶಗಳ ನಂತರವೇ ರಾಜನ್ ತಮ್ಮ ಹೇಳಿಕೆಗಳನ್ನು ಬಹಿರಂಗಗೊಳಿಸಿದ್ದಾರೆ.


ಭವಿಷ್ಯದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಬಹುದು


ಭಾರತದ ಆರ್ಥಿಕತೆಯು ಕಳೆದ 40 ವರ್ಷಗಳಿಂದ ದುರ್ಬಲವಾಗಿಯೇ ಇದ್ದು, ಕೋವಿಡ್-19 ಬಿಕ್ಕಟ್ಟು ಹಾಗೂ ರಿಯಲ್ ಎಸ್ಟೇಟ್ ಸಮಸ್ಯೆಗಳು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ ಎಂಬುದು ರಾಜನ್ ಅಭಿಪ್ರಾಯವಾಗಿದೆ. ಅದಾಗ್ಯೂ ಭಾರತ ವಿಶ್ವದಲ್ಲೇ ಆರ್ಥಿಕತೆಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ ನಿಧಾನವಾಗಿ ಒಂದೊಂದೇ ಸಾಧನೆಗಳನ್ನು ಸಾಧಿಸುತ್ತಿದೆ ಎಂಬುದು ರಾಜನ್ ಮಾತಾಗಿದೆ. ಹೀಗಾಗಿ ಭಾರತ ಚೀನಾವನ್ನು ಮೀರಿಸಲಿದೆ ಎಂಬುದು ಆತುರದ ನಿರ್ಧಾರವಾಗಲಿದೆ ಎಂದು ರಾಜನ್ ಹೇಳಿಕೆ ನೀಡಿದ್ದಾರೆ.


ಕುಸಿದ ಚೀನಾದ ಜನಸಂಖ್ಯೆ


ಇನ್ನೊಂದು ವರದಿಯ ಪ್ರಕಾರ 1960 ರ ನಂತರ 2022 ರಲ್ಲಿ ಚೀನಾದ ಜನಸಂಖ್ಯೆಯು ಕುಸಿದಿದ್ದು ಏಷ್ಯಾದ ಆರ್ಥಿಕತೆಗೆ ತೊಂದರೆಯನ್ನುಂಟು ಮಾಡಲಿದೆ ಎಂಬುದು ಅಧಿಕೃತ ಅಂಶಗಳಿಂದ ಬಹಿರಂಗಗಗೊಂಡಿದೆ. ಈ ಕಾರಣದಿಂದ ಭಾರತವು ಶೀಘ್ರದಲ್ಲಿಯೇ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಬಿಂಬಿತಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.


ಚೀನಾದ ಪ್ರಗತಿ ವಿಶ್ವದ ಬೆಳವಣಿಗೆಗೆ ಪೂರಕ


ಚೀನಾದ ಆರ್ಥಿಕತೆಯಲ್ಲಿನ ಪ್ರಗತಿಯು ವಿಶ್ವದ ಬೆಳವಣಿಗೆಗೆ ಪೂರಕವಾಗಿದ್ದು ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ ಎಂಬುದು ಮಾಜಿ ಆರ್‌ಬಿಐ ಗವರ್ನರ್ ಅಭಿಪ್ರಾಯವಾಗಿದೆ. ಯುಎಸ್ ಬಗ್ಗೆ ಮಾತನಾಡಿದ ರಾಜನ್, ದೇಶದಲ್ಲಿ ವಸತಿ ಮಾರಾಟವು ಏರಿಕೆಯಾಗಿಲ್ಲ, ಆದರೆ ರಿಯಲ್ ಎಸ್ಟೇಟ್ ಬೆಲೆಗಳು ಸಹ ಕಡಿಮೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಪುತಿನ್ ಯುದ್ಧವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಂಡರೆ ಕೆಲವೊಂದಿಷ್ಟು ಅಂಶಗಳು ತಲೆಕೆಳಗಾಗುವುದು ನಿಶ್ಚಿತ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹಳೆ ಪಿಂಚಣಿ ಯೋಜನೆ ವಿರುದ್ಧ RBIನಿಂದ ರಾಜ್ಯಗಳಿಗೆ ಎಚ್ಚರಿಕೆ!


ಸಾಂಕ್ರಾಮಿಕದಿಂದ ಹೊರಬರುವ ಎಲ್ಲಾ ಪ್ರಯತ್ನಗಳಲ್ಲೂ ಚೀನಾ ತತ್ಪರವಾಗಿದೆ ಹಾಗಾಗಿ ಈ ವರ್ಷದಲ್ಲಿ ಚೀನಾ ಚೇತರಿಕೆಯನ್ನು ಕಾಣಬಹುದು ಅದರಲ್ಲೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲೇ ಸ್ಥಿತಿ ಸುಧಾರಣೆಯಾಗಬಹುದು ಎಂಬುದು ಮಾಜಿ ಗವರ್ನರ್ ಹೇಳಿಕೆಯಾಗಿದೆ.


ಆರ್ಥಿಕ ಹಿಂಜರಿಕೆಯ ಅಪಾಯ ಸೂಚಿಸಿದ ವಿಶ್ವಬ್ಯಾಂಕ್


ಕಳೆದ ವಾರ, ವಿಶ್ವಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಜಾಗತಿಕ ಆರ್ಥಿಕತೆಯು ಈ ವರ್ಷ ಆರ್ಥಿಕ ಹಿಂಜರಿತಕ್ಕೆ ಅಪಾಯಕಾರಿಯಾಗಲಿದೆ ಎಂದು ಹೇಳಿಕೆ ನೀಡಿತ್ತು. ಯುಎಸ್,ಚೀನಾ ಹಾಗೂ ಯುರೋಪ್ ಸೇರಿದಂತೆ ವಿಶ್ವದ ಆರ್ಥಿಕತೆಗಳಲ್ಲಿನ ಕುಸಿತವನ್ನು ದಾಖಲಿಸಿ ವಿಶ್ವಬ್ಯಾಂಕ್ ಈ ಹೇಳಿಕೆ ನೀಡಿದೆ.


2023 ರಲ್ಲಿ ಜಾಗತಿಕ ಬೆಳವಣಿಗೆಯು ಹಿಂದಿನ 3% ದಿಂದ 1.7% ಕ್ಕೆ ಇಳಿಯುವ ಸೂಚನೆಯನ್ನು ನೀಡಿದೆ. ಇದು ಊಹೆಯಾಗಿದ್ದರೂ ಎಲ್ಲಿಯಾದರೂ ಇದು ನಿಖರವಾದರೆ 30 ವರ್ಷಗಳಲ್ಲಿ ಇದು ಮೂರನೇ ದುರ್ಬಲ ವಾರ್ಷಿಕ ವಿಸ್ತರಣೆ ಎಂದೆನಿಸಲಿದೆ ಎಂಬುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.


ನಿಧಾನವಾಗಿ ಸುಧಾರಿಸುತ್ತಿರುವ ಆರ್ಥಿಕತೆ!


ಭಾರತವು ಚೀನಾವನ್ನು ಆರ್ಥಿಕತೆಯಲ್ಲಿ ಹಿಂದೆ ಹಾಕಲಿದೆ ಎಂಬ ವಾದವು ಆತುರದ್ದಾಗಿರಬಹುದು ಎಂದು ತಿಳಿಸಿದ್ದಾರೆ. ಆದರೆ ಭಾರತವು ನಿಧಾನವಾಗಿ ತನ್ನ ಆರ್ಥಿಕತೆಯನ್ನು ಸುಧಾರಿಸುತ್ತಿರುವುದರಿಂದ ಕಾಲಕ್ರಮೇಣ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಕೂಡ ಇಲ್ಲದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

Published by:ವಾಸುದೇವ್ ಎಂ
First published: