• Home
  • »
  • News
  • »
  • business
  • »
  • Budget 2023: ಈ ಬಾರಿಯ ಬಜೆಟ್ ಭಾರತೀಯ ಚಿಲ್ಲರೆ ವಲಯದ ಅವಶ್ಯಕತೆಗಳನ್ನು ಪೂರೈಸುತ್ತಾ​? ಏನಂತಾರೆ ತಜ್ಞರು?

Budget 2023: ಈ ಬಾರಿಯ ಬಜೆಟ್ ಭಾರತೀಯ ಚಿಲ್ಲರೆ ವಲಯದ ಅವಶ್ಯಕತೆಗಳನ್ನು ಪೂರೈಸುತ್ತಾ​? ಏನಂತಾರೆ ತಜ್ಞರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲವು ಅನುಭವಿ ಉದ್ಯಮಿಗಳು, ತಜ್ಞರು ಸರ್ಕಾರ ಚಿಲ್ಲರೆ ವಲಯಕ್ಕೆ ಸಹಾಯವಾಗುವಂತಹ ಯೋಜನೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ಕೇಂದ್ರ ಸರ್ಕಾರವು ತನ್ನ ವಾರ್ಷಿಕ ಬಜೆಟ್‌ನಲ್ಲಿ (Union Budget 2023) ಏನೆಲ್ಲಾ ಘೋಷಣೆ ಮಾಡಲಿದೆ ಅಂತಾ ಇಡೀ ಭಾರತ (India) ಕಾಯುತ್ತಿದೆ. ಆದಾಯ ತೆರಿಗೆಯಿಂದ ಹಿಡಿದು ಇತರ ನೀತಿಗಳವರೆಗೆ ಜನರು ಸಂಸತ್ತಿನಲ್ಲಿ ಹಣಕಾಸು ಸಚಿವರ (Finance Minister) ಭಾಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಫೆಬ್ರವರಿ 1 ರಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಅನ್ನು ಮಂಡಿಸಲಿದ್ದಾರೆ.ಬಜೆಟ್‌ ಹತ್ತಿರ ಸಮೀಪಿಸುತ್ತಿದ್ದಂತೆ 2023ರ ಬಜೆಟ್ ಭಾರತೀಯ ಚಿಲ್ಲರೆ ವಲಯ (Retail Sector) ದ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.ಇದಕ್ಕೆ ಹಲವು ಅನುಭವಿ ಉದ್ಯಮಿಗಳು, ತಜ್ಞರು ಸರ್ಕಾರ ಚಿಲ್ಲರೆ ವಲಯಕ್ಕೆ ಸಹಾಯವಾಗುವಂತಹ ಯೋಜನೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಿದ್ದಾರೆ.


ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಾ ರಿಲೀಫ್!


ಭಾರತೀಯ ಚಿಲ್ಲರೆ ಮಾರುಕಟ್ಟೆಯು ನಗರೀಕರಣ ಮತ್ತು ಆದಾಯದ ಬೆಳವಣಿಗೆಯಂತಹ ಅಂಶಗಳಿಂದಾಗಿ 2020 ರಲ್ಲಿ USD 0.80 ಟ್ರಿಲಿಯನ್‌ ತಲುಪಿತ್ತು ಮತ್ತು 2030 ರ ವೇಳೆಗೆ USD 1.4 ಟ್ರಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ.


2020-21ರಲ್ಲಿ ಕೋವಿಡ್‌ ಕಾರಣದಿಂದಾಗಿ ಚಿಲ್ಲರೆ ಉದ್ಯಮ ಸಾಕಷ್ಟು ಸವಾಲಗಳನ್ನು ಎದುರಿಸಿತ್ತು. ಪ್ರಸ್ತುತ ಕೋವಿಡ್‌ ಇಳಿಮುಖವಾಗುತ್ತಿದ್ದಂತೆ ಈ ವಲಯವು ನಿಧಾನವಾಗಿ ಪುನಶ್ಚೇತನಗೊಳ್ಳುತ್ತಿದೆ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆ ಹೊಂದಲು ವೇಗವರ್ಧಕದ ಅಗತ್ಯವಿದೆ ಎನ್ನಲಾಗಿದೆ.


"2023-24ರ ಬಜೆಟ್ ಚಿಲ್ಲರೆ ವಲಯಕ್ಕೆ ದೊಡ್ಡ ಕೊಡುಗೆ ನೀಡಬಹುದು"


ವುಡನ್‌ಸ್ಟ್ರೀಟ್‌ನ ಸಿಇಒ ಲೋಕೇಂದ್ರ ಸಿಂಗ್ ರಣಾವತ್ ಅವರು 2023-24ರ ಕೇಂದ್ರ ಬಜೆಟ್ ಚಿಲ್ಲರೆ ವಲಯಕ್ಕೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಬಹುದು ಎಂದು ಅಂದಾಜಿಸಿದ್ದಾರೆ.


ಕೇಂದ್ರ ಸರ್ಕಾರವು ಕಡಿಮೆ-ವೆಚ್ಚದ ಸಾಲವನ್ನು ಘೋಷಿಸುವ ಮೂಲಕ ದೇಶದ ಲಕ್ಷಾಂತರ ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯ ಮಾಡುವ ಸಾಧ್ಯತೆNirmalananda Swamiji, ಯಿದೆ, ಜೊತೆಗೆ ವಲಯವನ್ನು ನಿಯಂತ್ರಿಸುವ ಕೆಲವು ನಿಯಮಗಳನ್ನು ಸಡಿಲಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.


ಭಾರತೀಯ ಚಿಲ್ಲರೆ ಮಾರುಕಟ್ಟೆ


"ಆಧುನಿಕ ತಂತ್ರಜ್ಞಾನ ಮತ್ತು ವೇಗದ ಮೂಲಸೌಕರ್ಯ ಬೆಂಬಲವನ್ನು ಉತ್ತೇಜಿಸುವ ಮೂಲಕ ಆಧುನೀಕರಣ ಮತ್ತು ಡಿಜಿಟಲೀಕರಣವನ್ನು ಸುಗಮಗೊಳಿಸುವುದನ್ನು ಒಳಗೊಂಡಿರುವ ರಾಷ್ಟ್ರೀಯ ಚಿಲ್ಲರೆ ನೀತಿಯ ಅನುಷ್ಠಾನವನ್ನು ಚಿಲ್ಲರೆ ವಲಯವು ನಿರೀಕ್ಷಿಸುತ್ತದೆ" ಎಂದು ಲೋಕೇಂದ್ರ ಸಿಂಗ್ ರಣವಾತ್‌ ಹೇಳಿದ್ದಾರೆ.


ಹಣಕಾಸು ವರ್ಷ 24 ರಲ್ಲಿ ಭಾರತವು ಸಂಭವನೀಯ ಆರ್ಥಿಕ ಕುಸಿತವನ್ನು ಎದುರಿಸುತ್ತಿರುವುದರಿಂದ ಬಜೆಟ್, ಸಣ್ಣ ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸ್ಥಿರಗೊಳಿಸಲು ಸಹಾಯ ಮಾಡಬಹುದು ಮತ್ತು ಸಣ್ಣ ಭೌತಿಕ ಚಿಲ್ಲರೆ ವಲಯದಲ್ಲಿ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


"ಸಾಲದ ಲಭ್ಯತೆ ಅನಾವರಣಗೊಳಿಸಬಹುದು"


ದಿ ಫ್ರಾಗ್ರನ್ಸ್ ಪೀಪಲ್ ಸಂಸ್ಥಾಪಕ ಡಾ. ದೀಪಕ್ ಜೈನ್ ಮಾತನಾಡಿ, "ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರಗತಿಯಂತಹ ದೀರ್ಘಾವಧಿಯ ಅಭಿವೃದ್ಧಿ ಕಾರ್ಯತಂತ್ರಗಳಿಗೆ ಸರ್ಕಾರವು ಆದ್ಯತೆ ನೀಡುತ್ತದೆ" ಎಂದಿದ್ದಾರೆ.


ಹಾಗೆಯೇ ಕೇಂದ್ರ ಸರ್ಕಾರವು ಸರಳೀಕೃತ ನಿಯಮಾವಳಿಗಳನ್ನು ಮತ್ತು ಉದ್ಯಮಕ್ಕೆ ಅನುಕೂಲಕರವಾದ ಸಾಲದ ಲಭ್ಯತೆಯನ್ನು ಅನಾವರಣಗೊಳಿಸಲು ಉದ್ದೇಶಿಸಿದೆ.ಈ ಕಾರಣದಿಂದಾಗಿ ಬೃಹತ್ ಸಂಖ್ಯೆಯ ಚಿಲ್ಲರೆ ವ್ಯಾಪಾರಿಗಳು ಮುಂಬರುವ ಯೂನಿಯನ್ ಬಜೆಟ್ 2023ರಿಂದ ಪ್ರಯೋಜನ ಪಡೆಯಬಹುದು ಎಂದಿದ್ದಾರೆ.


ಇದನ್ನೂ ಓದಿ: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಈ ಐದು ಘೋಷಣೆ ಫಿಕ್ಸ್!


ಕಡಿಮೆ ದರದ ಸಾಲಗಳನ್ನು ಘೋಷಿಸುವ ಮೂಲಕ ಮತ್ತು ಕೆಲವು ಉದ್ಯಮ ಮಾರ್ಗಸೂಚಿಗಳನ್ನು ಸಡಿಲಿಸುವ ಮೂಲಕ ರಾಷ್ಟ್ರದಾದ್ಯಂತ ಲಕ್ಷಾಂತರ ಸ್ವತಂತ್ರ ಚಿಲ್ಲರೆ ವ್ಯಾಪಾರಿಗಳಿಗೆ ಪ್ರಾಧಿಕಾರವು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ರೋಸ್‌ಮೂರ್‌ನ ನಿರ್ದೇಶಕಿ ರಿಧಿಮಾ ಕನ್ಸಾಲ್ ಹೇಳಿದ್ದಾರೆ.


"ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಪ್ರೋತ್ಸಾಹವನ್ನು ನೀಡುತ್ತದೆ"


ಚಿಲ್ಲರೆ ಮತ್ತು ಸ್ಥಳೀಯ ಆನ್‌ಲೈನ್ ಮಾರುಕಟ್ಟೆಗಳಿಗೆ ಭಾರತವು ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ 'ಜಾಗತಿಕ ಫ್ಯಾಷನ್ ಮತ್ತು ಚಿಲ್ಲರೆ ದೈತ್ಯರೊಂದಿಗೆ ಸ್ಪರ್ಧಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದು ರೋಪರ್ರೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಪಿತಾ ಕಟ್ಯಾಲ್ ಹೇಳಿದರು.


2023 ರ ಬಜೆಟ್ ಭಾರತೀಯ ಚಿಲ್ಲರೆ ವಲಯದ ಅವಶ್ಯಕತೆಗಳನ್ನು ಪೂರೈಸುತ್ತದೆಯೇ? ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾರಾಟ ಮತ್ತು ಮಾರುಕಟ್ಟೆಯ ಅಧ್ಯಕ್ಷ ಹೇಮಂತ್ ಸಪ್ರಾ, ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಈ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು ಸಣ್ಣ ವ್ಯಾಪಾರಗಳಿಗೆ ನೆರವು ನೀಡಲು ಸರ್ಕಾರ ಅವರ ಬೇಡಿಕೆಗಳನ್ನು ಮತ್ತು ಧನ ಸಹಾಯದಂತಹ ಯೋಜನೆಗಳನ್ನು ಘೋಷಿಸಬಹುದು ಎಂದಿದ್ದಾರೆ.

Published by:ವಾಸುದೇವ್ ಎಂ
First published: