• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Pay Tax: ನೀವು ನಿಮ್ಮ ಪತ್ನಿ ಇಬ್ಬರೂ ಬ್ಯುಸಿನೆಸ್​ ಮಾಲೀಕರಾ? ಹಾಗಾದ್ರೆ ನೀವಿಬ್ಬರು ಸಮಾನ ತೆರಿಗೆ ಕಟ್ಲೇಬೇಕು

Pay Tax: ನೀವು ನಿಮ್ಮ ಪತ್ನಿ ಇಬ್ಬರೂ ಬ್ಯುಸಿನೆಸ್​ ಮಾಲೀಕರಾ? ಹಾಗಾದ್ರೆ ನೀವಿಬ್ಬರು ಸಮಾನ ತೆರಿಗೆ ಕಟ್ಲೇಬೇಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜಂಟಿ ಮಾಲೀಕತ್ವದ ಆಸ್ತಿಯಿಂದ ಉತ್ಪತ್ತಿಯಾಗುವ ಆದಾಯವನ್ನು ನಿಖರವಾಗಿ ವಿಭಜಿಸುವ ಪ್ರಾಮುಖ್ಯತೆಯನ್ನು ತೀರ್ಪು ಎತ್ತಿ ತೋರಿಸುತ್ತದೆ ಇದನ್ನು ಇನ್ನು ಮುಂದೆ ಪಾಲಿಸಲೇ ಬೇಕು.

  • Trending Desk
  • 4-MIN READ
  • Last Updated :
  • Share this:

ಭಾರತೀಯ ತೆರಿಗೆ ಕಾನೂನುಗಳ ಅಡಿಯಲ್ಲಿ, ಆಸ್ತಿಯ ಎಲ್ಲಾ ಜಂಟಿ ಮಾಲೀಕರು ಆಸ್ತಿಯ ಆದಾಯದ ತಮ್ಮ ಪಾಲಿನ ತೆರಿಗೆ ಪಾವತಿಸಲು ಹೊಣೆಗಾರರಾಗಿದ್ದಾರೆ. ಹಾಗಾಗಿ ನೋಂದಾಯಿತ ಮಾರಾಟ ಪತ್ರವು (Letter) ನಿವೇಶನದ ಆಸ್ತಿಯಲ್ಲಿ ಪತಿ ಹಾಗೂ ಪತ್ನಿಯ ಸ್ವತ್ತಿನ ಪ್ರಮಾಣವನ್ನು ನಿರ್ದಿಷ್ಟಪಡಿಸಲು ವಿಫಲವಾದರೆ, ಪತಿ ಹಾಗೂ ಪತ್ನಿ ಇಬ್ಬರಿಗೂ ತೆರಿಗೆ (Tax) ಪಾವತಿಸುವಲ್ಲಿ ಸಮಾನ ಪಾಲಿದೆ ಎಂಬುದಾಗಿ ಪರಿಗಣಿತವಾಗುತ್ತದೆ ಎಂದು ದೆಹಲಿಯ ಆದಾಯ ತೆರಿಗೆ (Income Tax) ಮೇಲ್ಮನವಿ ನ್ಯಾಯಮಂಡಳಿ (ITAT) ಇತ್ತೀಚೆಗೆ ತೀರ್ಪು ನೀಡಿದೆ.


ನ್ಯಾಯಾಲಯ ಸ್ಪಷ್ಟಪಡಿಸಿದ ಮಾಹಿತಿ ಏನು?


ತೆರಿಗೆದಾರರಾದ ಶಿವಾನಿ ಮದನ್ 2014-15ನೇ ಹಣಕಾಸು ವರ್ಷದ ತಮ್ಮ ಆದಾಯದ ಮೇಲಿನ ರೂ 9.8 ಲಕ್ಷದ ತೆರಿಗೆಯನ್ನು ನಿರ್ವಹಿಸುವ ಪ್ರಕರಣದಲ್ಲಿ ITAT ಈ ಮಹತ್ವದ ತೀರ್ಪನ್ನು ನೀಡಿದೆ. ತನಿಖೆಯಲ್ಲಿದ್ದ ಆಸ್ತಿಯು ಖಾಲಿಯಾಗಿ ಪರಿಗಣಿತವಾಗಿದ್ದರಿಂದ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ  ಬಾಡಿಗೆಯ 50% ರಷ್ಟು ಮೊತ್ತವು ಪತ್ನಿಯ (ಶಿವಾನಿ ಮದನ್) ಹೆಸರಿನಲ್ಲಿ ತೆರಿಗೆಗೆ ಒಳಪಟ್ಟಿತ್ತು.


ಮದನ್ ತಮ್ಮ ಪತಿಯೊಂದಿಗೆ 2011 ರಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಜಂಟಿಯಾಗಿ ಖರೀದಿಸಿದ್ದಾರೆ ಎಂಬುದು ತನಿಖೆಯ ಸಮಯದಲ್ಲಿ ತಿಳಿದುಬಂದಿದ್ದು ಮದನ್ ಅವರು ಆಸ್ತಿಯ ಖರೀದಿ ಬೆಲೆಯ ಸುಮಾರು 5.4% ಅಂದರೆ ರೂ 20 ಲಕ್ಷವನ್ನು ಮಾತ್ರ ಹೂಡಿಕೆ ಮಾಡಿದ್ದು, ತಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ಆಸ್ತಿಯಿಂದ ಆದಾಯವನ್ನು ಏಕೆ ಬಹಿರಂಗಪಡಿಸಲಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದೆ.


ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಗೊತ್ತಾ? ಇಲ್ಲಿದೆ ಮಾಹಿತಿ


ವಾದ ಮಂಡಿಸಿದ ಪತ್ನಿ ಹಾಗೂ ನಿರಾಕರಿಸಿದ ನ್ಯಾಯಾಲಯ


ಭಾರತದಲ್ಲಿ ಸಹ-ಮಾಲೀಕ ಆಸ್ತಿ ಹೊಂದಿರುವ ವ್ಯಕ್ತಿಗಳು ತಮ್ಮ ತೆರಿಗೆ ಹೊಣೆಗಾರಿಕೆಗಳ ಬಗ್ಗೆ ತಿಳಿದಿರಬೇಕು ಮತ್ತು ಅವರು ಕಾನೂನಿನ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮದನ್ ತರುವಾಯ ತಮ್ಮ ಪಾಲಿನ ಅನುಪಾತಕ್ಕೆ ಅನುಗುಣವಾಗಿ ಮನೆ ಆಸ್ತಿಯ ಆದಾಯವನ್ನು ಬಹಿರಂಗಪಡಿಸಿದರೂ ಅವರು ಅನುಸರಿಸಿದ ವಿಧಾನವನ್ನು ವಿವಿಧ ಹಂತದಲ್ಲಿ ನ್ಯಾಯಾಲಯ ತಿರಸ್ಕರಿಸಿತು.


ಪತ್ನಿಯ ಹೆಸರನ್ನು ಮಾರಾಟ ಒಪ್ಪಂದದಲ್ಲಿ ಸೇರಿಸುವುದು ಸಂಪ್ರದಾಯವಾಗಿದ್ದು, ಆಕೆಯ ಹೆಸರಿನಲ್ಲಿ ಮನೆ ಆಸ್ತಿ ಆದಾಯದ 50% ತೆರಿಗೆ ವಿಧಿಸುವುದು ಸಮಂಜಸವಲ್ಲ ಎಂದು ಶಿವಾನಿ ಮದನ್ ವಾದಿಸಿದ್ದರು.


ಪತ್ನಿಗೆ ಆದಾಯವಿಲ್ಲದಿದ್ದರೆ ಮಾತ್ರ ತೆರಿಗೆಯನ್ನು ಪತಿಗೆ ವಿಧಿಸಬೇಕು


ಆದರೆ ಆಕೆಯ ವಾದವನ್ನು ತಿರಸ್ಕರಿಸಿದ ITAT, ಕಲ್ಕತ್ತಾ ಹೈಕೋರ್ಟ್ ತೀರ್ಪಿನಂತಹ ವಿವಿಧ ನ್ಯಾಯಾಂಗ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ ಪತ್ನಿಗೆ ಸ್ವತಂತ್ರ ಆದಾಯವಿಲ್ಲದಿದ್ದರೆ ಮತ್ತು ಪತಿಯೇ ಸಂಪೂರ್ಣ ಹೂಡಿಕೆ ಮಾಡಿದ ಸಂದರ್ಭದಲ್ಲಿ ಮಾತ್ರ ಆಸ್ತಿಯಿಂದ ಬರುವ ಆದಾಯದ ಮೇಲಿನ ತೆರಿಗೆಯನ್ನು ಪತಿಗೆ ಮಾತ್ರ ವಿಧಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ತೆರಿಗೆ ತಜ್ಞರು ನೀಡಿರುವ ಸಲಹೆ ಏನು?


ಶಿವಾನಿ ಮದನ್ ಗೃಹಿಣಿಯಲ್ಲ ಹಾಗೂ ಉದ್ಯೋಗಿ ಎಂಬುದನ್ನು ಕಂಡುಕೊಂಡ ನ್ಯಾಯಪೀಠ ಅದೇ ಕಾನೂನು ತರ್ಕವನ್ನು ಈ ವಿಷಯದಲ್ಲಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.




ತೆರಿಗೆ ವ್ಯಾಜ್ಯ ಪ್ರಕರಣಗಳಲ್ಲಿ, ಆಸ್ತಿಯ ಬಿಲ್ಡರ್/ಮಾರಾಟಗಾರರಿಗೆ ಪ್ರತಿಯೊಬ್ಬ ಸಹ-ಮಾಲೀಕರು ನೀಡಿದ ಪಾಲನ್ನು ದಾಖಲಿಸುವುದು ನಿರ್ಣಾಯಕವಾಗಿದೆ ಎಂದು ತೆರಿಗೆ ತಜ್ಞರು ಸಲಹೆ ನೀಡುತ್ತಾರೆ ಹಾಗೂ ಪಾವತಿಗಳನ್ನು ಮಾಡಿದ ಬ್ಯಾಂಕ್ ಖಾತೆಗಳ ವಿವರಗಳು, ಹಿಂದಿನ ತೆರಿಗೆ ರಿಟರ್ನ್ಸ್ ಮತ್ತು ಇತರ ಸಂಬಂಧಿತ ಮಾಹಿತಿಗಳ ವಿವರಗಳನ್ನು ಒದಗಿಸಬೇಕು ಎಂದು ತಿಳಿಸಿದ್ದಾರೆ.


ಜಂಟಿ ಮಾಲೀಕರೆ ಹೊಣೆಗಾರರು


ಜಂಟಿ ಮಾಲೀಕತ್ವದ ಆಸ್ತಿಯಿಂದ ಉತ್ಪತ್ತಿಯಾಗುವ ಆದಾಯವನ್ನು ನಿಖರವಾಗಿ ವಿಭಜಿಸುವ ಪ್ರಾಮುಖ್ಯತೆಯನ್ನು ತೀರ್ಪು ಎತ್ತಿ ತೋರಿಸುತ್ತದೆ ಹಾಗೂ ಪ್ರತಿಯೊಬ್ಬ ಸಹ-ಮಾಲೀಕರು ತಮ್ಮ ಪಾಲಿನ ಮೇಲೆ ಮಾತ್ರ ತೆರಿಗೆಯನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ ಎಂದು ಖಚಿತಪಡಿಸುತ್ತದೆ. ಹಾಗೆ ಮಾಡಲು ವಿಫಲವಾದರೆ, ಈ ಸಂದರ್ಭದಲ್ಲಿ ಕಂಡುಬರುವಂತೆ, ಸಂಪೂರ್ಣ ತೆರಿಗೆ ಮೊತ್ತಕ್ಕೆ ಜಂಟಿ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

First published: