ಸ್ವಂತ ಬ್ಯುಸಿನೆಸ್ (Own Business) ಮಾಡುವುದು ಹೆಚ್ಚಾಗಿ ಪ್ರತಿಯೊಬ್ಬರ ಕನಸಾಗಿಸುತ್ತದೆ. ಆದರೆ ಸ್ವಂತದ್ದಾಗಿ ಏನಾದರೂ ಮಾಡುವ ಮುನ್ನ ಅದಕ್ಕೂ ಸಾಕಷ್ಟು ಪರಿಣಿತಿ ಹಾಗೂ ನೈಪುಣ್ಯತೆಗಳು ಅನಿವಾರ್ಯವಾಗಿವೆ. ನಿಮ್ಮದೇ ಸ್ಟಾರ್ಟಪ್ (Startup) ಆರಂಭಿಸಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ ಅದಕ್ಕೂ ಮುನ್ನ ಅದೇ ಕ್ಷೇತ್ರದ ಕಂಪನಿಗಳಲ್ಲಿ ಕೆಲಸ (Job) ಮಾಡಿದ ಅನುಭವ ಪಡೆದುಕೊಳ್ಳುವುದು ಮುಖ್ಯವಾಗಿದೆ. ಬ್ಯುಸಿನೆಸ್ ಆರಂಭಿಸಲು ಬೇಕಾದ ಸೂಕ್ತ ಸಲಹೆಗಳು (Tips) , ಅನುಭವ (Experience) , ವೃತ್ತಿ ನೈಪುಣ್ಯತೆಗಳು ದೊರೆಯುವುದರೊಂದಿಗೆ ನಿಮ್ಮದೇ ಬ್ಯುಸಿನೆಸ್‌ಗೆ ಹೂಡಿಕೆ (Business Investment) ಮಾಡುವ ಸಾಕಷ್ಟು ಹೂಡಿಕೆದಾರರನ್ನು ಪಡೆದುಕೊಳ್ಳಲು ಉದ್ಯೋಗ ಅನುಭವ ಸಹಕಾರಿಯಾಗಿದೆ.
ಸ್ವಂತ ಬ್ಯುಸಿನೆಸ್ ಆರಂಭಿಸುವ ಮುನ್ನ ಈ ಸಲಹೆ ಪಾಲಿಸಿ
ನಿಮ್ಮದೇ ಸ್ವಂತ ಸ್ಟಾರ್ಟಪ್ ಆರಂಭಿಸುವುದಕ್ಕಿಂತ ಮುಂಚೆ ಕಂಪನಿಗಳಲ್ಲಿ ಕೆಲಸ ಮಾಡುವುದು ಕೆಲವೊಂದು ಲಾಭಗಳನ್ನುಂಟು ಮಾಡುತ್ತದೆ. ವ್ಯವಹಾರದ ಜ್ಞಾನವನ್ನು ಅರಿತುಕೊಳ್ಳಬಹುದು, ಉದ್ಯೋಗ ವಲಯವನ್ನು ಸೃಷ್ಟಿಸಿಕೊಳ್ಳುವ ಸಲಹೆಯನ್ನು ಪಡೆದುಕೊಳ್ಳಬಹುದು ಅಂತೆಯೇ ಲಾಭ ನಷ್ಟಗಳ ನಿರ್ವಹಣೆಯನ್ನು ಕಲಿತುಕೊಳ್ಳಬಹುದಾಗಿದೆ.
ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಪಡೆಯುವ ಲಾಭಗಳೇನು?
ವ್ಯಾಪಾರ ಸಾಲ ನೀಡುವ ಸಂಸ್ಥೆ ಓನ್‌ಡೆಕ್ ಪ್ರಕಾರ ಖ್ಯಾತ ಕಂಪನಿಗಳಲ್ಲಿ ಕೆಲಸ ಮಾಡುವುದು ಮುಂದೆ ತಮ್ಮದೇ ಆದ ಸ್ಟಾರ್ಟಪ್‌ಗಳನ್ನು ತೆರೆಯುವವರಿಗೆ ಸಹಾಯಕವಾಗಿದೆ ಎಂದಾಗಿದೆ. ಹೆಚ್ಚಿನ ಸ್ಟಾರ್ಟಪ್ ನಡೆಸುವವರು ಇಂತಹ ಕಂಪನಿಗಳಲ್ಲೇ ಹೆಚ್ಚು ಕೆಲಸ ಮಾಡಿ ಉದ್ಯೋಗ ನೈಪುಣ್ಯತೆಯನ್ನು ಪಡೆದಿದ್ದಾರೆ ಎಂಬುದು ಈ ಸಂಸ್ಥೆಯ ಅಭಿಮತವಾಗಿದೆ.
ಇಂತಹ ದೊಡ್ಡ ಸ್ಥಾಪನೆಗಳಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ಬೈನ್ ಏಂಡ್ ಕಂಪನಿ, ಫಿನಾನ್ಶಿಯಲ್ ಸರ್ವೀಸ್ ಸಂಸ್ಥೆಯಾದ ಗೋಲ್ಡ್‌ಮನ್ ಸ್ಯಾಕ್ಸ್ ಹಾಗೂ ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಟ್ವಿಟರ್ ಕೂಡ ಸೇರಿದೆ. ಬೋಸ್ಟನ್ ಮೂಲದ ಬೈನ್ ಕಂಪನಿಯ 8.13% ದಷ್ಟು ಮಾಜಿ ಉದ್ಯೋಗಿಗಳು ತಮ್ಮದೇ ಸ್ವಂತ ಕಂಪನಿಯನ್ನು ನಿರ್ಮಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: 1 ರೂಪಾಯಿನೂ ಖರ್ಚು ಮಾಡದೆ ನೈಸರ್ಗಿಕ ಕೃಷಿ ಮಾಡಿ, ಲಕ್ಷ ಲಕ್ಷ ಹಣ ಗಳಿಸಿ!
ಈ ಕಂಪನಿಯಲ್ಲಿ ಕೆಲಸ ಮಾಡಿದ ಹೆಚ್ಚಿನ ಉದ್ಯೋಗಿಗಳು ತಮ್ಮದೇ ಸ್ವಂತ ಬ್ಯುಸಿನೆಸ್ ಸಂಸ್ಥೆಗಳ ಮಾಲೀಕರಾಗಿದ್ದಾರೆ. ಓನ್‌ಡೆಕ್ ವಿಶ್ಲೇಷಿಸಿರುವ ಇತರ ಕಂಪನಿಗಳಲ್ಲಿ ಬೈನ್ ಟಾಪ್ ಸ್ಥಾನದಲ್ಲಿದೆ. ಜಿಂಗಾ ಸಂಸ್ಥಾಪಕ ಮಾರ್ಕ್ ಪಿಂಕಸ್ ಮತ್ತು ಇಂಟ್ಯೂಟ್ ಸಹ-ಸಂಸ್ಥಾಪಕ ಸ್ಕಾಟ್ ಕುಕ್ ಈ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಂಡ ಉದ್ಯೋಗಿಗಳು ಎಂದೆನಿಸಿದ್ದಾರೆ.
ಟಾಪ್ ಐದು ಸಂಸ್ಥೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ
ಬೈನ್ ಏಂಡ್ ಕಂಪನಿ: ಇಲ್ಲಿ ಉದ್ಯೋಗ ಮಾಡಿರುವ ಸುಮಾರು 8.13% ದಷ್ಟು ಮಾಜಿ ಉದ್ಯೋಗಿಗಳು ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಅನ್ನು ಆರಂಭಿಸಿದ್ದಾರೆ.
1) ಒಲಿವರ್ ವಯ್‌ಮನ್: 7.93%
2) ಮಿಕನ್ಸೆ ಏಂಡ್ ಕಂಪನಿ: 7.75%
3) ಸ್ಟ್ರಾಟಜಿ&: 7.44%
4) ಯುನಿವರ್ಸಲ್ ಮ್ಯೂಸಿಕ್ ಗ್ರೂಪ್: 7.39%
ಹೂಡಿಕೆಗೆ ಸಹಕಾರಿ
ಈ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಮಾಜಿ ಉದ್ಯೋಗಿಗಳೆಲ್ಲಾ ತಮ್ಮದೇ ಆದ ವ್ಯವಹಾರಗಳನ್ನು ಆರಂಭಿಸಿದ್ದಾರೆ ಹಾಗೂ ಓನ್‌ಡೆಕ್ ಈ ಅಂಕಿಅಂಶಗಳನ್ನು ಪ್ರತಿಯೊಂದು ರಾಜ್ಯದಲ್ಲಿರುವ ಉದ್ಯೋಗಿಗಳು ಹಾಗೂ ಉದ್ಯೋಗ ವೆಬ್‌ಸೈಟ್ ಆದ ಜಿಪ್ಪಾವನ್ನು ಬಳಸಿಕೊಂಡು ಕಲೆಹಾಕಿದೆ. ಈ ಮೂಲಕ ತಮ್ಮದೇ ಆದ ಬ್ಯುಸಿನೆಸ್ ಆರಂಭಿಸಲು ಯಾವ ಕಂಪನಿಗಳು ಸೂಕ್ತ ಎಂಬುದನ್ನು ನಿರ್ಧರಿಸಿದೆ.
ಇಲ್ಲಿ ಪಟ್ಟಿಮಾಡಿರುವ ಐದು ಕಂಪನಿಗಳು ಉದ್ಯೋಗಿಗಳಿಗೆ ಹೆಚ್ಚಿನ ಬೆಂಬಲವನ್ನೊದಗಿಸಿರುವ ಕಂಪನಿಗಳಾಗಿದ್ದು ಭವಿಷ್ಯದಲ್ಲಿ ಅವರ ಸ್ವಂತ ವ್ಯವಹಾರವನ್ನು ನಿರ್ಮಿಸಲು ಆರ್ಥಿಕ ನೆರವಿಗೂ ಸಹಕಾರಿಯಾಗಿ ಬೆಂಬಲವನ್ನೊದಗಿಸಿದೆ.
ರೆಸ್ಯೂಮೆಯಲ್ಲಿ ಸಂಸ್ಥೆಗಳ ಹೆಸರು ಉಲ್ಲೇಖಿಸಿ
ಟ್ವಿಟರ್‌ನಲ್ಲಿದ್ದ ಸುಮಾರು 6.17% ದಷ್ಟು ಮಾಜಿ ಉದ್ಯೋಗಿಗಳು ತಮ್ಮದೇ ಆದ ಬ್ಯುಸಿನೆಸ್ ಆರಂಭಿಸುವವರಿದ್ದು ಇದು ಹೆಚ್ಚು ಶ್ರೇಯಾಂಕ ಪಡೆದ ಟೆಕ್ ಸಂಸ್ಥೆಯಾಗಿದೆ. ನಿಮ್ಮ ರೆಸ್ಯೂಮೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ಹೆಸರು ಉಲ್ಲೇಖಗೊಂಡಿರುವುದು ಹೂಡಿಕೆದಾರರ ಗಮನ ಸೆಳೆಯಲು ಅನುಕೂಲಕಾರಿಯಾಗಿದೆ ಜೊತೆಗೆ ಇನ್ನೊಬ್ಬ ಟೆಕ್ ಪರಿಣಿತರ ಸಹಾಯವನ್ನು ನೆರವನ್ನೂ ನಿಮ್ಮ ಬ್ಯುಸಿನೆಸ್‌ನಲ್ಲಿ ನೀವು ಪಡೆದಂತಾಗುತ್ತದೆ.
ಟ್ವಿಟರ್‌ನಂತಹ ಕಂಪನಿಗಳಿಂದ ವಜಾಗೊಂಡವರು ಹಾಗೂ ತಮ್ಮ ಇಚ್ಛೆಯಿಂದ ಕಂಪನಿಯನ್ನು ತೊರೆದವರು ಪ್ರತಿಸ್ಪರ್ಧಿ ಸಂಸ್ಥೆಗಳಾದ ಸ್ಲಿಲ್, ಸ್ಕ್ವೇರ್ ಅನ್ನು ಆರಂಭಿಸಿದ್ದಾರೆ. ವಾಲ್ ಸ್ಟ್ರೀಟ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದವರಿಗೆ ಸ್ವಂತ ಬ್ಯುಸಿನೆಸ್ ಆರಂಭಿಸಲು ಉತ್ತೇಜನ ನೀಡುವ ಅದೆಷ್ಟೋ ಹೂಡಿಕೆದಾರರು ನೆರವು ನೀಡುತ್ತಾರೆ ಎಂಬುದು ವಿಶ್ಲೇಷಣೆಗಳಿಂದ ತಿಳಿದುಬಂದಿದೆ.
ಹಾಗಾಗಿ ದೊಡ್ಡ ದೊಡ್ಡ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವುದು ನಿಮ್ಮ ಸ್ವಂತ ಕನಸಿನ ವ್ಯಾಪಾರವನ್ನು ಆರಂಭಿಸಲು ಭದ್ರ ಅಡಿಪಾಯವನ್ನು ನಿರ್ಮಿಸುವುದು ಮಾತ್ರವಲ್ಲದೆ ಆರ್ಥಿಕ ನೆರವಿಗೂ ಸಹಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ