Money Control: ಕೈಯಲ್ಲಿ ಯಾಕೋ ದುಡ್ಡು ನಿಲ್ತಿಲ್ವಾ? ಹೀಗ್​ ಮಾಡಿ ಆಮೇಲೆ ಮ್ಯಾಜಿಕ್​ ನೋಡಿ..

ನಿಮ್ಮ ಖರ್ಚು ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಅನೇಕ ಉಚಿತ ಮೊಬೈಲ್ ಅಪ್ಲಿಕೇಶನ್‌(Mobile Application)ಗಳು ಬಂದಿದ್ದು, ಅವುಗಳು ಸ್ವಯಂಚಾಲಿತವಾಗಿ ಆ ಕೆಲಸವನ್ನು ಮಾಡಿ ಮುಗಿಸುತ್ತವೆ ಎಂದು ಹೇಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನರು ತಮ್ಮ ಖರ್ಚು ವೆಚ್ಚ(Expense)ಗಳನ್ನು ಟ್ರ್ಯಾಕ್(Track) ಮಾಡುವ ಅಭ್ಯಾಸವನ್ನು ತುಂಬಾ ವರ್ಷಗಳಿಂದಲೂ ನಾವು ನೋಡಿಕೊಂಡು ಬಂದಿದ್ದೇವೆ. ಆದರೆ ಅದರ ರೀತಿ ಬದಲಾಗಿದೆ ಅಷ್ಟೇ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮೊದಲು, ಜನರು ತಮ್ಮ ತಿಂಗಳ ಕೊನೆ(Month End)ಯಲ್ಲಿ ಒಂದು ಕಾಗದ(Paper)ದ ಮೇಲೆ ತಾವು ಇಡೀ ತಿಂಗಳು ಮಾಡಿದ ಖರ್ಚು ವೆಚ್ಚಗಳನ್ನು ಬರೆದುಕೊಳ್ಳುತ್ತಿದ್ದರು. ಆದರೆ ಈಗ ನಿಮ್ಮ ಖರ್ಚು ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಅನೇಕ ಉಚಿತ ಮೊಬೈಲ್ ಅಪ್ಲಿಕೇಶನ್‌(Mobile Application)ಗಳು ಬಂದಿದ್ದು, ಅವುಗಳು ಸ್ವಯಂಚಾಲಿತವಾಗಿ ಆ ಕೆಲಸವನ್ನು ಮಾಡಿ ಮುಗಿಸುತ್ತವೆ ಎಂದು ಹೇಳಬಹುದು. ನೀವು ಪ್ರತಿ ತಿಂಗಳ ಕೊನೆಯಲ್ಲಿ ನಿರಂತರವಾಗಿ ಹಣ(Money)ದ ಕೊರತೆಯನ್ನು ಎದುರಿಸುತ್ತಿದ್ದರೆ, ಆಗ ನೀವು ನಿಜವಾಗಿಯೂ ಕೆಲವು ಸಮಯದವರೆಗೆ ನೀವು ಮಾಡುತ್ತಿರುವ ಖರ್ಚು ವೆಚ್ಚಗಳನ್ನು ಟ್ರ್ಯಾಕ್ ಮಾಡಲೇ ಬೇಕಾಗುತ್ತದೆ.

ಖರ್ಚು ವೆಚ್ಚಗಳನ್ನು ಹೀಗೆ ಟ್ರ್ಯಾಕ್​ ಮಾಡಿ!

ಕೆಲವು ತಿಂಗಳುಗಳ ಕಾಲದವರೆಗೆ ಹೀಗೆ ಮಾಡುವುದರಿಂದ ನಿಮ್ಮ ಹಣ ಎಲ್ಲಿ ಹೆಚ್ಚಾಗಿ ಖರ್ಚಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ಒಂದು ಸ್ಪಷ್ಟವಾದ ಕಲ್ಪನೆ ಬರುತ್ತದೆ. ಅದರಲ್ಲಿ ಕೆಲವು ಮಾತುಕತೆಗೆ ಅವಶ್ಯಕವಲ್ಲದ ವಸ್ತುಗಳಿಗೆ ವೆಚ್ಚ ಮಾಡುವುದಾಗಲಿ, ಕೆಲವು ಅವಶ್ಯಕ ವಸ್ತುಗಳಿಗೆ ವೆಚ್ಚ ಮಾಡುವುದಾಗಲಿ ಮತ್ತು ಕೆಲವು ಸಾರಾಸಗಟಾಗಿ ಅನಗತ್ಯ ವೆಚ್ಚಗಳು ಸಹ ಅದರಲ್ಲಿರಬಹುದು. ಹೀಗೆ ತಿಳಿದುಕೊಂಡಾಗ ಮಾತ್ರವೇ ನೀವು ಅನಗತ್ಯವಾಗಿ ಮಾಡುತ್ತಿರುವ ವೆಚ್ಚಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದು.

ಟ್ರ್ಯಾಕ್​ ಮಾಡಿದ್ರೆ ಮಾತ್ರ ಹಣ ಉಳಿಸಲು ಸಹಾಯ!

ಇದರಿಂದ ತಿಂಗಳ ಕೊನೆಯಲ್ಲಿ ನಿಮಗೆ ಸ್ವಲ್ಪ ಹಣವು ಉಳಿತಾಯವಾಗಬಹುದು. ಆದರೆ ನಿಮ್ಮ ವೆಚ್ಚಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುವುದು ಸಾಕಾಗುತ್ತದೆಯೇ..? ಇದು ನಿಮ್ಮ ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆಯೇ..? ಇಲ್ಲಿ ಉತ್ತರವು ಈ ಎರಡೂ ಪ್ರಶ್ನೆಗಳಿಂದಲೂ ಸಿಗುವುದಿಲ್ಲ.ಉತ್ತರ ನೀವು ಹಣವನ್ನು ಉಳಿಸಿ ಮತ್ತು ಅದನ್ನು ಇನ್ನೊಂದರಲ್ಲಿ ಹೂಡಿಕೆ ಮಾಡಬೇಕು. ಮೊದಲಿಗೆ ನಿಮ್ಮ ಗುರಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಿರಿ. ಅದಕ್ಕೆ ತಕ್ಕಂತೆ ನಿಮ್ಮ ಹೂಡಿಕೆಗಳನ್ನು ಯೋಜಿಸಿ ನಂತರ ಅವುಗಳನ್ನು ಟ್ರ್ಯಾಕ್ ಮಾಡಿರಿ. ನಿಮ್ಮ ಗುರಿಗಳು ಏನು ಮತ್ತು ನಿಮ್ಮ ಗುರಿಗಳಿಗಾಗಿ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂಬುದನ್ನು ನೀವು ಮೊದಲು ಕಂಡುಕೊಳ್ಳಿರಿ.

ಇದನ್ನೂ ಓದಿ: ಯಾವುದೇ ಹೊಸ ತೆರಿಗೆ ಇಲ್ಲ! ಸಿಎಂ ಘೋಷಣೆ ಕೇಳಿ ನಿರಾಳವಾಗಿ ಉಸಿರಾಡಿದ ಜನಸಾಮಾನ್ಯ

ಹೀಗೆ ಮಾಡಿದಾಗ ನಿಮ್ಮ ಹೂಡಿಕೆಗಿಂತಲೂ ವೆಚ್ಚಗಳು ಸಾಕಷ್ಟು ಹೆಚ್ಚಾಗಿವೆ ಎಂದು ನಿಮಗೆ ಅರ್ಥವಾಗುತ್ತದೆ. ಆಗ ನೀವು ಎಲ್ಲಿ ಅನಾವಶ್ಯಕವಾಗಿ ಖರ್ಚು ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡು ಕೆಲವು ತಿಂಗಳುಗಳವರೆಗೆ ಈ ವೆಚ್ಚಗಳನ್ನು ಟ್ರ್ಯಾಕ್ ಮಾಡಬೇಕು. ಇದನ್ನು ಹೇಗೆ ಮಾಡುವುದು ಎಂದು ನಿಮಗೆ ಗೊಂದಲವಿದ್ದರೆ, ಈ ಗುರಿ ಆಧಾರಿತ ಹೂಡಿಕೆ ಹೇಗೆ ಮಾಡುವುದು ಎಂದು ಇಲ್ಲಿ ನೋಡಿಕೊಳ್ಳಿರಿ. ಉದಾಹರಣೆಗೆ ನಿಮ್ಮ ಮಾಸಿಕ ಆದಾಯ 90,000 ರೂಪಾಯಿ ಎಂದು ಇರಿಸಿಕೊಳ್ಳೋಣ.

ಗುರಿ ಆಧಾರಿತ ಹೂಡಿಕೆ

ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಮತ್ತು ನಿಮ್ಮ ನಿವೃತ್ತಿ ಯೋಜನೆಯ ಎರಡು ಗುರಿಗಳನ್ನು ಹೊಂದಿದ್ದೀರಿ ಎಂದುಕೊಳ್ಳೋಣ. ಪ್ರತಿ ತಿಂಗಳು ಶಿಕ್ಷಣದ ಯೋಜನೆಗೆ ಹೂಡಿಕೆಯಾಗಿ 15,000 ರೂ. ಮತ್ತು ನಿವೃತ್ತಿ ಯೋಜನೆಗೆ ಹೂಡಿಕೆಯಾಗಿ 20,000 ರೂಪಾಯಿ ಅಗತ್ಯವಿದೆ. ಒಟ್ಟಾರೆಯಾಗಿ, ನೀವು ಎರಡು ಗುರಿಗಳಿಗಾಗಿ ತಿಂಗಳಿಗೆ 35,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು.

ಹಣ ಉಳಿಸುವುದು ಹೇಗೆ ಗೊತ್ತಾ?

ಈಗ ನಿಮ್ಮ ಅನುಭವದಿಂದ, ತಿಂಗಳ ಕೊನೆಯಲ್ಲಿ ನಿಮ್ಮ ಬಳಿ ಕೇವಲ 10,000 ರೂಪಾಯಿ ಮಾತ್ರ ಉಳಿಯುತ್ತಿದ್ದು, ನಿಮ್ಮ ಮಾಸಿಕ ಖರ್ಚು ಸುಮಾರು 80,000 ರೂಪಾಯಿ ಎಂದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಈಗ ಮತ್ತೆ ನೀವು ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿ.ಕೆಲವು ತಿಂಗಳ ನಂತರ ನಿಮಗೆ, ನಿಮ್ಮ ಮಾಸಿಕ ಖರ್ಚು ಕೇವಲ 60,000 ರೂಪಾಯಿ ಎಂದು ಅರಿತುಕೊಳ್ಳುತ್ತೀರಿ. ಉಳಿದ 20,000 ರೂಪಾಯಿ ಕೇವಲ ವ್ಯರ್ಥ ವೆಚ್ಚಗಳಾಗಿದ್ದವು ಅಂತ ನಿಮಗೆ ಅರ್ಥವಾಗುತ್ತದೆ.

ಇದನ್ನೂ ಓದಿ: ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ ಸಲ್ಲಿಸಿ.. ಇಲ್ದಿದ್ರೆ ಡಬಲ್ TDS ಪಾವತಿಸಬೇಕಾಗುತ್ತೆ ಹುಷಾರ್..!

ಹಾಗೆಯೇ ತಿಂಗಳ ಕೊನೆಯಲ್ಲಿ ನಿಮ್ಮ ಬಳಿ ಉಳಿಯುತ್ತಿದ್ದ 10,000 ರೂಪಾಯಿಯ ಜೊತೆಗೆ ಇನ್ನೂ ಏನಾದರೂ ವ್ಯರ್ಥ ವೆಚ್ಚಗಳು ಆಗುತ್ತಿವೆಯೇ ಎಂದು ತಿಳಿದುಕೊಳ್ಳಿರಿ ಮತ್ತು ಆ ವೆಚ್ಚಗಳನ್ನು ಕಡಿತಗೊಳಿಸಿರಿ.ಹಾಗಾಗಿ ನೀವು ನಿಮ್ಮ ವೆಚ್ಚಗಳನ್ನು ಟ್ರ್ಯಾಕ್ ಮಾಡುವ ಅಗತ್ಯವಿಲ್ಲ. ಏಕೆಂದರೆ ಇದು ಯಾವುದೇ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುವುದಿಲ್ಲ. ನೀವು ಮತ್ತೊಮ್ಮೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡಲು ಪ್ರಾರಂಭಿಸಿದ್ದೀರಾ ಅಥವಾ ಇಲ್ಲವೇ ಎಂದು ನೋಡಲು ನೀವು ಇನ್ನೂ ಪ್ರತಿ 2 ವರ್ಷಗಳಿಗೊಮ್ಮೆ ಹೀಗೆ ಮಾಡಬಹುದು.
Published by:Vasudeva M
First published: