Toyota Invest in Karnataka: ಟೊಯೋಟಾ ಕರ್ನಾಟಕದಲ್ಲೇ 4,800 ಕೋಟಿ ಹೂಡಿಕೆ ಮಾಡಿದ್ದೇಕೆ?

ಕರ್ನಾಟಕದ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು, ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೆರವು ನೀಡುವ ಅಂಶಗಳನ್ನು ಈ ಹೂಡಿಕೆ ಒಳಗೊಂಡಿದೆ.

ಟೊಯೋಟಾ (ಪ್ರಾತಿನಿಧಿಕ ಚಿತ್ರ)

ಟೊಯೋಟಾ (ಪ್ರಾತಿನಿಧಿಕ ಚಿತ್ರ)

  • Share this:
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM), ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ (TKAP) ಮತ್ತು ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (TIEI) ಒಳಗೊಂಡಿರುವ ಟೊಯೊಟಾ ಗ್ರೂಪ್ ಆಫ್ ಕಂಪನಿ (Toyota) ಒಳಗೊಂಡಿದೆ. ಟೊಯೊಟಾ ಗ್ರೂಪ್ ಆಫ್ ಕಂಪನಿ ನಮ್ಮ ರಾಜ್ಯ ಕರ್ನಾಟಕದಲ್ಲೇ ಬರೋಬ್ಬರಿ ₹ 4,800 ಕೋಟಿ ಹೂಡಿಕೆ ಮಾಡಲು ಕರ್ನಾಟಕ ಸರ್ಕಾರದೊಂದಿಗೆ (Karnataka Government) ತಿಳುವಳಿಕೆ ಪತ್ರವನ್ನು (MOU) ಮಾಡಿಕೊಂಡಿದೆ.  ಈ ಹೂಡಿಕೆಯ ಮೂಲಕ ಭಾರತದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ 25 ವರ್ಷಗಳ ಭವಿಷ್ಯಕ್ಕೆ ಈ ಹೂಡಿಕೆ ನೆರವಾಗಲಿದೆ.  ಜೊತೆಗೆ ಟೊಯೋಟಾ ಕಂಪನಿಯು ಹೂಡಿಕೆ ಮಾಡಿರುವುದು ರಾಜ್ಯದತ್ತ ಇನ್ನಷ್ಟು ಬೃಹತ್ ಕಂಪನಿಗಳು  ಮುಖ ಮಾಡಲು ಕಾಣವಾಗುವ ಸಾಧ್ಯತೆಗಳಿಗೆ ಅವಕಾಶ ನೀಡಿದೆ.

ಕರ್ನಾಟಕದ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು, ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೆರವು ನೀಡುವ ಅಂಶಗಳನ್ನು ಈ ಹೂಡಿಕೆ ಒಳಗೊಂಡಿದೆ. ಹೆಚ್ಚಿನ ಹೂಡಿಕೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಈ ಹೂಡಿಕೆ ಎಂಬ ನಿರೀಕ್ಷೆ ಹುಟ್ಟಿಸಿದೆ.

ತಿಳುವಳಿಕಾ ಒಪ್ಪಂದವನ್ನು ವಿನಿಮಯ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಡುವೆ ತಿಳಿವಳಿಕಾ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಸರ್ಕಾರದ ಮೇಕ್ ಇನ್ ಇಂಡಿಯಾ ಮಿಷನ್‌ಗೆ ಕೊಡುಗೆ
ಎಂಒಯು ಭಾಗವಾಗಿ, ಟೊಯೋಟಾ ಗ್ರೂಪ್ ಆಫ್ ಕಂಪನಿಗಳು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತವೆ, ಹೀಗಾಗಿ ಸರ್ಕಾರದ ಮೇಕ್ ಇನ್ ಇಂಡಿಯಾ ಮಿಷನ್‌ಗೆ ಕೊಡುಗೆ ನೀಡಿದಂತಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.

ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸಹಾಯ
ಅಲ್ಲದೇ ಟೊಯೋಟಾ ಕಂಪನಿಯು ಕರ್ನಾಟಕದಲ್ಲಿ ಹಸಿರು ತಂತ್ರಜ್ಞಾನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಕರ್ನಾಟಕದಲ್ಲಿ ಟೊಯೋಟಾ ಮಾಡಿರುವ ಹೂಡಿಕೆ ಯೋಜನೆಯು ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳನ್ನು ಪ್ರಮುಖವಾಗಿ ತಯಾರಿಸಲಿದೆ. ಅಲ್ಲದೇ ವಿದ್ಯುತ್ ಚಾಲಿತ ರೈಲುಗಳ ಉತ್ಪಾದನೆಯಲ್ಲೂ ಟೊಯೋಟಾ ಕಂಪನಿಯು ಈ ಯೋಜನೆಯ ಮೂಲಕ ನೆರವಾಗಲಿದೆ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಲವು ವಿವಾದದಗಳ ಕೂಗು ಹೆಚ್ಚಿದ್ದು ಟೊಯೋಟಾ ಕಂಪನಿಯ ಹೂಡಿಕೆ ಆ ವಿವಾದಗಳಿಂದ ಬೇರೆಡೆ ಗಮನ ಸೆಳೆದು ಇನ್ನಷ್ಟು ಹೂಡಿಕೆ ತಂದುಕೊಡುವ ಸಾಧ್ಯತೆಗಳೂ ಇವೆ.

ಇದನ್ನೂ ಓದಿ: Best Startup Ideas: ನಿಮಗೆ ನೀವೇ ಬಾಸ್ ಆಗಿ! ಮನೆಯಲ್ಲಿದ್ದೇ ಈ ಸ್ಟಾರ್ಟ್​ಅಪ್​ ಸ್ಥಾಪಿಸಿ

ಈ ಹೂಡಿಕೆಯು ಎಲೆಕ್ಟ್ರಿಕ್ ಪವರ್‌ಟ್ರೇನ್ ಭಾಗಗಳು ಮತ್ತು ಘಟಕಗಳನ್ನು ನಿರ್ಮಿಸಲು ಸ್ಥಳೀಯ ಉತ್ಪಾದನಾ ಸೌಲಭ್ಯಗಳನ್ನು ಕಲ್ಪಿಸಲಿವೆ. ಇದರಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಇನ್ನಷ್ಟು ವೇಗ ದೊರೆಯಲಿದೆ.

ಏನಿದು ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ 2050?
ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ 2050 ರ ಭಾಗವಾಗಿ, ಟೊಯೋಟಾ ಕಂಪನಿಯು 2050 ರ ವೇಳೆಗೆ ತನ್ನ ಇಂಗಾಲದ ತಟಸ್ಥತೆಯ (ಕಾರ್ಬನ್ ನ್ಯೂಟ್ರಾಲಿಟಿ) ಗುರಿಗಳನ್ನು ಸಾಧಿಸಲು, ಉತ್ಪಾದನೆ ಮತ್ತು CO2 ಹೊರಸೂಸುವಿಕೆಯನ್ನು ಪರಿಹರಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಇದನ್ನೂ ಓದಿ: Explained: ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಏಕೆ ಬೆಂಕಿ ಬೀಳ್ತಿದೆ?

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಮಾತನಾಡಿ, “ಭಾರತವು ನಿಜವಾಗಿಯೂ ಸ್ವಾವಲಂಬಿಯಾಗಿದೆ. ಕರ್ನಾಟಕದಲ್ಲಿ ನಾವು ಮಾಡಲಿರುವ ಹೂಡಿಕೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಕುರಿತು ಗಮನಾರ್ಹ ಕೆಲಸಗಳನ್ನು ಕೈಗೊಳ್ಳಲಿದೆ. ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಟೊಯೋಟಾ ನಮ್ಮ ರಾಷ್ಟ್ರ ಮತ್ತು ನಾವು ಕಾರ್ಯನಿರ್ವಹಿಸುವ ಸಮುದಾಯಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿದೆ." ಎಂದು ವ್ಯಾಖ್ಯಾನಿಸಿದರು.

ಎಲೆಕ್ಟ್ರಿಕ್ ವಾಹನಗಳ ಕೇಂದ್ರ ಕರ್ನಾಟಕ
ನಮ್ಮ ‘ಬಿಲ್ಡ್ ಫಾರ್ ದಿ ವರ್ಲ್ಡ್’ ಮಿಷನ್ ಅಡಿಯಲ್ಲಿ ಕರ್ನಾಟಕವನ್ನು ಜಾಗತಿಕ ಪೂರೈಕೆ ಸರಪಳಿ ಮತ್ತು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನಾವು ಬಯಸುತ್ತೇವೆ. ಈ ತಿಳಿವಳಿಕೆ ಒಪ್ಪಂದವು ಈ ನಿಟ್ಟಿನಲ್ಲಿ ಒಂದು ದೊಡ್ಡ ದಾಪುಗಾಲಾಗಿದೆ. ಕರ್ನಾಟಕ ಸರ್ಕಾರವು ಸುಸ್ಥಿರ ಬೆಳವಣಿಗೆ ಮತ್ತು ರಾಜ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸ್ಥಳೀಯ ಉತ್ಪಾದನಾ ಗುಣಮಟ್ಟದ ಕಡೆಗೆ ಟೊಯೋಟಾದ ಬದ್ಧತೆಯ ಬಗ್ಗೆ ವಿಶ್ವಾಸ ಹೊಂದಿದೆ. ಇಂತಹ ಹಲವು ಯೋಜನೆಗಳಿಂದ  ಕರ್ನಾಟಕವು ಎಲೆಕ್ಟ್ರಿಕ್ ವಾಹನಗಳ ಕೇಂದ್ರವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Published by:guruganesh bhat
First published: