Mutual Funds And FD: ಮ್ಯೂಚುವಲ್ ಫಂಡ್‌ಗಳು FDಯಂತೆ ನಿಶ್ಚಿತ ದರವನ್ನು ಏಕೆ ನೀಡುವುದಿಲ್ಲ..? ಇಲ್ಲಿದೆ ನೋಡಿ ಉತ್ತರ

Mutual Funds And FD: ಈ ಮಧ್ಯೆ, ಮ್ಯೂಚುವಲ್ ಫಂಡ್ ರಿಟರ್ನ್ ಮೊತ್ತದ ಮೇಲೆ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ, ಒಬ್ಬ ಹೂಡಿಕೆದಾರರು ಮಾರುಕಟ್ಟೆಯ ಚಲನವಲನಗಳನ್ನು ನೋಡಿ ಹಣ ವಾಪಸ್‌ ಪಡೆದುಕೊಳ್ಳಲು ನಿರ್ಧರಿಸಿದಾಗ ಮಾತ್ರ ನಷ್ಟವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮ್ಯೂಚುವಲ್‌ ಫಂಡ್‌ನಲ್ಲಿ(Mutual Fund) ಹೂಡಿಕೆ ಮಾಡಲು ಹಲವರಿಗೆ ಆಸಕ್ತಿ ಇದ್ದರೂ, ಅದರ ಬಗ್ಗೆ ಹೆಚ್ಚಾಗಿ ಅರಿವಿರುವುದಿಲ್ಲ. ಇನ್ನು, ಮ್ಯೂಚುವಲ್‌ ಫಂಡ್‌ ಸುರಕ್ಷಿತವೋ ಅಲ್ಲವೋ, ನಾವು ಹೂಡಿಕೆ ಮಾಡಿದ ಹಣಕ್ಕಿಂತ ಎಷ್ಟು ಹಣ ಹೆಚ್ಚು ಬರುತ್ತದೆ ಎಂಬ ಬಗ್ಗೆ ಅನೇಕರಿಗೆ ಗೊಂದಲವಿರುತ್ತದೆ. ಬ್ಯಾಂಕ್‌ (Bank)ಅಥವಾ ಪೋಸ್ಟ್‌ ಆಫೀಸ್‌ (Post Office)ಉಳಿತಾಯ ಖಾತೆಯಲ್ಲಿ ಹಾಗೂ ಬ್ಯಾಂಕ್‌ನ ಫಿಕ್ಸೆಡ್‌ ಡೆಪಾಸಿಟ್‌ (FD) ನಲ್ಲಿ ಇಷ್ಟು ಬಡ್ಡಿ ಸಿಗುತ್ತದೆ, ಇದರಿಂದ ನಮಗೆ ಇಷ್ಟು ಹಣ ದೊರೆಯಬಹುದು ಎಂಬ ಲೆಕ್ಕ ಸಿಗುತ್ತದೆ. ಆದರೆ, ಮ್ಯೂಚುವಲ್‌ ಫಂಡ್‌ನಲ್ಲಿ ಎಷ್ಟು ರಿಟರ್ನ್ಸ್‌ ಬರುತ್ತದೆ. ಶೇಕಡಾವಾರು(Percentage) ಬಡ್ಡಿ ಎಷ್ಟು ಎಂದು ಯಾಕೆ ಹೇಳುವುದಿಲ್ಲ ಎಂಬ ಪ್ರಶ್ನೆಯೂ ಹಲವರಿಗೆ ಇರುತ್ತದೆ. ಈ ಹಿನ್ನೆಲೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ನಮ್ಮ ಸರಣಿ ಲೇಖನದ ಮುಂದುವರಿದ ಭಾಗವಾದ ಈ ಲೇಖನದಲ್ಲಿ ಈ ಪ್ರಶ್ನೆ ಬಗ್ಗೆ ಉತ್ತರ ಕಂಡುಕೊಳ್ಳಬಹುದು.

ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋದಲ್ಲಿನ ರಿಟರ್ನ್ಸ್‌ ಅಥವಾ ಆದಾಯವು ಅನೇಕ ವಿಷಯಗಳ ಕಾರ್ಯವಾಗಿದೆ, ಅಂದರೆ ಒಬ್ಬರು ಹೂಡಿಕೆ ಮಾಡಿದ ಮಾರ್ಗಗಳು, ವಿವಿಧ ಮಾರುಕಟ್ಟೆಗಳು ಚಲಿಸುವ ರೀತಿ, ನಿಧಿ ನಿರ್ವಹಣಾ ತಂಡದ ಸಾಮರ್ಥ್ಯ ಮತ್ತು ಹೂಡಿಕೆಯ ಅವಧಿ - ಹೀಗೆ ಅನೇಕ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳ ಪೈಕಿ ಹಲವು ಅನಿಶ್ಚಿತವಾಗಿರುವುದರಿಂದ, ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ. ಆದರೆ, ಸ್ಥಿರ ಠೇವಣಿಗಳಲ್ಲಿ ಈ ಅಂಶಗಳು ಸ್ವಲ್ಪ ಮಟ್ಟಿಗಾದರೂ ಇರುವುದಿಲ್ಲ.

ಇನ್ನು, ನಿಶ್ಚಿತ ಠೇವಣಿಯಲ್ಲಿ ರಿಟರ್ನ್ಸ್ ಅನ್ನು ಸ್ಥಿರ ಅವಧಿಗೆ ಮಾತ್ರ ಫಿಕ್ಸ್ ಮಾಡಲಾಗುತ್ತದೆ. ಈ ರಿಟರ್ನ್ಸ್ ಮತ್ತು ಅವಧಿ, ಎರಡನ್ನೂ ವಿತರಕ ಕಂಪನಿ ನಿರ್ಧರಿಸುತ್ತದೆ ಮತ್ತು ಠೇವಣಿದಾರರಿಂದ ಅಲ್ಲ. ಆದ್ದರಿಂದ, ಒಬ್ಬರು ಆರು ವರ್ಷಗಳವರೆಗೆ ಹಣ ಹೂಡಲು ಬಯಸಿದರೆ ಮತ್ತು ಐದು ವರ್ಷಗಳವರೆಗೆ ಠೇವಣಿ ಲಭ್ಯವಿದ್ದರೆ, ಆದಾಯವು ಮೊದಲ ಐದು ವರ್ಷಗಳಲ್ಲಿ ಮಾತ್ರ ತಿಳಿದಿರುತ್ತದೆ, ಆದರೆ ಸಂಪೂರ್ಣ ಆರು ವರ್ಷಗಳ ಅವಧಿಗೆ ಅಲ್ಲ. ಹೀಗಾಗಿ, ಹೂಡಿಕೆಯ ಲಾಭವು ಖಾತರಿಪಡಿಸಿದ ರಿಟರ್ನ್ ಉತ್ಪನ್ನಗಳ ಸಂದರ್ಭದಲ್ಲಿ ಮಾತ್ರ ತಿಳಿದಿರುತ್ತದೆ, ಅಲ್ಲಿ ಉತ್ಪನ್ನದ ಪರಿಪಕ್ವತೆ ಮತ್ತು ಹೂಡಿಕೆದಾರರ ಸಮಯದ ಪರಿಧಿಯು ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ.

ಆದರೆ, ಇತರ ಸಂದರ್ಭಗಳಲ್ಲಿ, ಹೂಡಿಕೆದಾರರ ಹೂಡಿಕೆಯ ಭವಿಷ್ಯದ ಬಗ್ಗೆ ಹಾಗೂ ಹೂಡಿಕೆಯ ಆದಾಯದ ಬಗ್ಗೆ ತಿಳುವಳಿಕೆ ಇರುವುದಿಲ್ಲ.

ಇನ್ನು, ನಿಮಗೆ ಹಣದ ಅವಶ್ಯಕತೆ ಇದ್ದಾಗ ಮ್ಯೂಚುವಲ್‌ ಫಂಡ್‌ಗಳ ಮೂಲಕ ಯಾವಾಗ ಬೇಕಾದರೂ, ಎಷ್ಟು ಬೇಕಾದರೂ, ಹಾಗೂ ಯಾವುದೇ ಸ್ಕೀಂಗಳಲ್ಲಿ ಹಣ ಹೂಡಿಕೆ ಮಾಡಿದ್ದರೂ ಆ ಹಣವನ್ನು ಹಿಂತೆಗೆದುಕೊಳ್ಳಬಹುದು.

ಆದರೆ, ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ನಿಮಗೆ ಸ್ವಲ್ಪ ಹಣದ ಅವಶ್ಯಕತೆ ಇದ್ದರೂ, ನೀವು ಅದನ್ನು ಮುಕ್ತಾಯಗೊಳಿಸಿ ಸಂಪೂರ್ಣ ಹಣವನ್ನೇ ಪಡೆದುಕೊಳ್ಳಬೇಕಾಗುತ್ತದೆ. ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು FDಯಲ್ಲಿ ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ರೆ ಏನೆಲ್ಲಾ ಲಾಭಗಳಿದೆ ನೋಡಿ

ಇನ್ನೊಂದೆಡೆ, ಸೇವಿಂಗ್ಸ್ ಅಕೌಂಟ್‌ ಅಥವಾ ಉಳಿತಾಯ ಖಾತೆಯಲ್ಲಿ ನೀವು ಹಣವನ್ನು ನಿರ್ವಹಣೆ ಮಾಡಬಹುದು, ಶಾಪಿಂಗ್‌ ಮಾಡಲು ಹಣ ಖರ್ಚು ಮಾಡಬಹುದು ಅಥವಾ ಇತರೆ ವ್ಯವಹಾರ ಟ್ರಾನ್ಸಾಕ್ಷನ್‌ ಮಾಡಬಹುದು. ಆದರೆ, ಉಳಿತಾಯ ಖಾತೆ ಹೆಚ್ಚು ರಿಟರ್ನ್ಸ್‌ ಅಥವಾ ಬಡ್ಡಿ ನೀಡುವುದಿಲ್ಲ.

ತಲೆಮಾರುಗಳಿಂದ, ಬ್ಯಾಂಕ್ FD ಗಳಂತಹ ಸ್ಥಿರ ಆದಾಯದ ಸಾಧನಗಳು ಭಾರತೀಯರಿಗೆ ಹೂಡಿಕೆಯ ನೆಚ್ಚಿನ ವಿಧಾನವಾಗಿದೆ. ‘ಬ್ಯಾಂಕ್‌ನಲ್ಲಿ ನನ್ನ ಹಣ ಸುರಕ್ಷಿತವಾಗಿದೆ’ ಎಂಬ ಪರಿಕಲ್ಪನೆ ಉತ್ತಮ ಆದಾಯಕ್ಕಿಂತ ಹೆಚ್ಚು ತೃಪ್ತಿಕರವಾಗಿದೆ. ಆದರೆ ತೆರಿಗೆ ನಂತರದ ಎಫ್‌ಡಿ ರಿಟರ್ನ್ಸ್ ಪರಿಗಣನೆಗೆ ತೆಗೆದುಕೊಂಡರೆ, ಹೂಡಿಕೆದಾರರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಇರಿಸಲು ಈ ಮನವರಿಕೆ ಸಾಕಾಗಿದೆಯೇ..?

ಈ ಹಿನ್ನೆಲೆ ರಿಟರ್ನ್ಸ್, ಲಿಕ್ವಿಡಿಟಿ, ತೆರಿಗೆ ಹೊಣೆಗಾರಿಕೆ ಮತ್ತು ಅಪಾಯಕಾರಿ ಅಂಶಗಳು ಎಂಬ ನಾಲ್ಕು ಅಂಶಗಳ ಹೋಲಿಕೆ ಮಾಡಿ ಎಫ್‌ಡಿ ಉತ್ತಮವೋ ಅಥವಾ ಮ್ಯೂಚುವಲ್‌ ಫಂಡ್‌ ಉತ್ತಮವೋ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳೋಣ.

ಹೂಡಿಕೆ ಮಾಡಿದ ಹಣದ ಮೇಲೆ ಆದಾಯ
ಬ್ಯಾಂಕ್ ಎಫ್‌ಡಿಗಳಲ್ಲಿ ಖಾತರಿಪಡಿಸಿದ ಆದಾಯದ ಭರವಸೆ ಇರುತ್ತದೆ. ಜೊತೆಗೆ, ನೀವು ಹಣ ಹೂಡಿಕೆ ಮಾಡುವ ಸಮಯದಲ್ಲಿ ನೀವು ಎಷ್ಟು ಮೊತ್ತವನ್ನು ರಿಟರ್ನ್ ಮೊತ್ತವಾಗಿ ಪಡೆಯುತ್ತೀರಿ ಎಂದು ನಿಮಗೆ ತಿಳಿಯುತ್ತದೆ.

ಆದರೆ, ಮ್ಯೂಚುವಲ್ ಫಂಡ್‌ಗಳ ಸಂದರ್ಭದಲ್ಲಿ, ಖಾತರಿಪಡಿಸಿದ ಆದಾಯದ ಭರವಸೆ ಇಲ್ಲ ಮತ್ತು ರಿಟರ್ನ್ ಮೊತ್ತವು ಮಾರುಕಟ್ಟೆ ಚಲನೆಗಳ ಪ್ರಕಾರ ಮೇಲಕ್ಕೆ ಮತ್ತು ನಂತರ ಕೆಳಕ್ಕೆ ಚಲಿಸಬಹುದು. ಆದರೆ ಆದಾಯವು ಋಣಾತ್ಮಕವಾಗಿರುತ್ತದೆ ಎಂದು ಅರ್ಥವಲ್ಲ. ವಾಸ್ತವವಾಗಿ, ದೀರ್ಘಾವಧಿಯಲ್ಲಿ, ಎಫ್‌ಡಿ ರಿಟರ್ನ್‌ಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್‌ಗಳಿಂದ ಹೆಚ್ಚಿನ ಆದಾಯ ಪಡೆಯುವ ಸಾಧ್ಯತೆಗಳು ಹೆಚ್ಚು.

ನೀವು ಅಲ್ಪಾವಧಿಯ ಹೂಡಿಕೆ ಮಾಡಲು ಬಯಸಿದರೆ, ಅಂದರೆ 1 - 3 ವರ್ಷಗಳವರೆಗೆ, ಡೆಬ್ಟ್‌ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಅಂತಹ ಅವಧಿಗೆ ಡೆಬ್ಟ್‌ ಮ್ಯೂಚುವಲ್ ಫಂಡ್‌ನ ಆದಾಯ 6-9 ಪ್ರತಿಶತದಷ್ಟಿರುತ್ತದೆ ಮತ್ತು ಅದೇ ಅವಧಿಗೆ ಬ್ಯಾಂಕ್ ಎಫ್‌ಡಿ ಬಡ್ಡಿ ದರ 6-8 ಪ್ರತಿಶತದಷ್ಟು ಇರುತ್ತದೆ. ಎರಡೂ ಉತ್ಪನ್ನಗಳಿಗೆ ಒಂದು ವರ್ಷದ ಆದಾಯ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದರೆ, ಲಿಕ್ವಿಡ್ ಮ್ಯೂಚುವಲ್ ಫಂಡ್‌ನಲ್ಲಿ, ಲಾಕ್-ಇನ್ ಅವಧಿ ಇಲ್ಲ. ಅಂದರೆ, ನೀವು 7ನೇ ದಿನದಂದು ಹಣವನ್ನು ರಿಡೀಮ್ ಮಾಡಲು ಬಯಸಿದರೂ, ಅದಕ್ಕೆ ದಂಡ ಪಾವತಿಸಬೇಕಾಗಿಲ್ಲ

ದ್ರವ್ಯತೆ
ಮ್ಯೂಚುವಲ್ ಫಂಡ್‌ಗಳು ಹೆಚ್ಚು ಲಿಕ್ವಿಡ್‌ ಆಗಿದೆ. ಇದರ ಯೂನಿಟ್‌ಗಳನ್ನು ಯಾವುದೇ ಸಮಯದಲ್ಲಿ ಕೆಲವು ಕ್ಲಿಕ್‌ನಲ್ಲಿ ರಿಡೀಮ್ ಮಾಡಬಹುದು ಮತ್ತು ಹಣವನ್ನು ಎರಡು-ಮೂರು ವ್ಯವಹಾರ ದಿನಗಳಲ್ಲಿ ನಿಗದಿತ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಮತ್ತೊಂದೆಡೆ, ನೀವು ಬ್ಯಾಂಕ್ FD ಯನ್ನು ಅದರ ಮೆಚ್ಯೂರಿಟಿ ಅವಧಿಗೆ ಮುಂಚಿತವಾಗಿ ರಿಡೀಮ್ ಮಾಡಲು ಬಯಸಿದರೆ, ನೀವು ಅದರ ಮೇಲೆ ದಂಡ ಪಾವತಿಸಬೇಕಾಗುತ್ತದೆ. ರಿಟರ್ನ್ಸ್‌ ಕೂಡ ಕಡಿಮೆಯಾಗುತ್ತದೆ.

ತೆರಿಗೆ ಜವಾಬ್ದಾರಿ
ಹಣಕಾಸು ಉತ್ಪನ್ನದ ಬಲವು ಅದರ ಲಾಭದ ದರವನ್ನು ಅವಲಂಬಿಸಿರುತ್ತದೆ: ಆದರೆ, ಹೂಡಿಕೆಯ ನಿಜವಾದ ಆದಾಯವು ತೆರಿಗೆ ನಂತರದ ರಿಟರ್ನ್ಸ್ ಆಗಿದೆ.

ಬ್ಯಾಂಕ್ ಎಫ್‌ಡಿಯ ಸಂದರ್ಭದಲ್ಲಿ, ಈ ತೆರಿಗೆಯ ಶೇಕಡಾವಾರು ನಿಮ್ಮ ಆದಾಯದ ಸ್ಲ್ಯಾಬ್‌ಗೆ ಅನುಗುಣವಾಗಿರುತ್ತದೆ.

ಮತ್ತೊಂದೆಡೆ, ಹೂಡಿಕೆಯು ಮೂರು ವರ್ಷ ದಾಟಿದ ನಂತರ ಸಾಲ-ನಿಧಿ ಹೂಡಿಕೆಯ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಗಳನ್ನು ವಿಧಿಸಲಾಗುತ್ತದೆ. ಅದರಂತೆ, ನೀವು 20 ಪ್ರತಿಶತ ತೆರಿಗೆ ಪಾವತಿಸಬೇಕಾಗುತ್ತದೆ, ಆದರೆ ಮತ್ತೊಮ್ಮೆ, ನೀವು ಡೆಬ್ಟ್‌ ಫಂಡ್‌ಗಳ ಹೂಡಿಕೆಗಳಿಗೆ Indexation ಪ್ರಯೋಜನಗಳನ್ನು ಪಡೆಯುತ್ತೀರಿ. Indexation ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸರ್ಕಾರವು ಒದಗಿಸುವ ತೆರಿಗೆ ಪರಿಹಾರವಾಗಿದೆ.

ಅಪಾಯದ ಅಂಶ
ಯಾವುದೇ ಹಣಕಾಸು ಹೂಡಿಕೆಗೆ ಮೊದಲ ಮಾನದಂಡವೆಂದರೆ ಹಣ ಎಷ್ಟು ಸುರಕ್ಷಿತವಾಗಿದೆ.

ಆ ರೀತಿಯಲ್ಲಿ, ಖಾತರಿಪಡಿಸಿದ ಸುರಕ್ಷತಾ ಅಂಶವು ಎಫ್‌ಡಿಗಳ ದೊಡ್ಡ ಪ್ರಯೋಜನಗಳಲ್ಲಿ ಒಂದಾಗಿದೆ. ಆದರೂ, ಕೆಲ ಬ್ಯಾಂಕ್‌ ಹಗರಣಗಳು ಬೆಳಕಿಗೆ ಬರುತ್ತಿದ್ದಂತೆ ಅದು ಕೂಡ ಹೆಚ್ಚು ಸುರಕ್ಷಿತವಲ್ಲ ಎನಿಸುತ್ತದೆ. ನಿಮ್ಮ ಬ್ಯಾಂಕ್‌ ಡೀಫಾಲ್ಟ್‌ ಆದರೆ, ಆಗ ನೀವು ವಿಮೆ ಮಾಡಲಾದ ಹಣ ಮಾತ್ರ ಪಡೆಯುತ್ತೀರಿ.

ಈ ಮಧ್ಯೆ, ಮ್ಯೂಚುವಲ್ ಫಂಡ್ ರಿಟರ್ನ್ ಮೊತ್ತದ ಮೇಲೆ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ, ಒಬ್ಬ ಹೂಡಿಕೆದಾರರು ಮಾರುಕಟ್ಟೆಯ ಚಲನವಲನಗಳನ್ನು ನೋಡಿ ಹಣ ವಾಪಸ್‌ ಪಡೆದುಕೊಳ್ಳಲು ನಿರ್ಧರಿಸಿದಾಗ ಮಾತ್ರ ನಷ್ಟವಾಗಬಹುದು.

ಇದನ್ನೂ ಓದಿ: ಆರ್‌ಡಿ ಬಡ್ಡಿದರಗಳ ಮೇಲೆ ಯಾವೆಲ್ಲ ಅಂಶಗಳು ಪರಿಣಾಮ ಬೀರುತ್ತದೆ ಗೊತ್ತಾ?

ಈಗ ಹೇಳಿ, ಮ್ಯೂಚುವಲ್‌ ಫಂಡ್‌, ನಿಶ್ಚಿತ ಠೇವಣಿ ಹಾಗೂ ಉಳಿತಾಯ ಖಾತೆಯ ಪೈಕಿ ನಿಮ್ಮ ಆಯ್ಕೆ ಯಾವುದು..?
Published by:Sandhya M
First published: