ಕೋವಿಡ್ (Covid) ಪರ್ವ ನಿಧಾನವಾಗಿ ಕೊನೆಯಾಗುತ್ತಿರುವಂತೆ ಮಕಾಡೆ ಮಲಗಿದ್ದ ಕೆಲವೊಂದು ವ್ಯವಹಾರಗಳು (Business) ಹಿಂದಿನ ಪ್ರಗತಿಯತ್ತ ದಾಪುಗಾಲು ಹಾಕುತ್ತಿವೆ. ಕೋವಿಡ್ ಮುಗಿದಿದ್ದರೂ ಅದು ಉಂಟುಮಾಡಿದ್ದ ನಷ್ಟ (Loss) ಮಾತ್ರ ಹಾಗೆಯೇ ಇದೆ ಎಂಬುದು ಸತ್ಯ. ಇನ್ನೂ ಕೂಡ ವಿಶ್ವ ಆರ್ಥಿಕ ಹಿಂಜರಿತ (Economic Recession) , ಹಣದುಬ್ಬರ (Inflation_ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಇದರೊಂದಿಗೆ ಪ್ರಗತಿ ಹೊಂದಬೇಕೆಂಬ ಆಶಾಭಾವನೆಯನ್ನು ಹೊಂದಿದೆ.
ಲಾಭದಾಯಕ ಕ್ಷೇತ್ರ ರಿಯಲ್ ಎಸ್ಟೇಟ್
ಹೂಡಿಕೆ ಎಂಬ ವಿಷಯ ಬಂದಾಗ ಜನರು ಬೇರೆ ಬೇರೆ ಲಾಭದಾಯಕ ಕ್ಷೇತ್ರಗಳತ್ತ ಚಿತ್ತ ನೆಡುತ್ತಾರೆ. ಅದರಲ್ಲೊಂದು ರಿಯಲ್ ಎಸ್ಟೇಟ್ ಕ್ಷೇತ್ರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿಪರೀತ ಏರಿಳಿತವನ್ನು ಕಂಡಿರುವ ಈ ಕ್ಷೇತ್ರ, ಅನೇಕ ಬೆಂಬಲಗಳ ಸಹಾಯದಿಂದ ಪ್ರಗತಿ ಕಂಡಿವೆ. ಕಡಿಮೆ ಬಡ್ಡಿ ದರ ಅಂತೆಯೇ ಬ್ಯಾಂಕ್‌ಗಳು ಪ್ರಸ್ತುತಪಡಿಸಿದ ಫ್ಲೆಕ್ಸಿ-ಫೈನಾನ್ಸಿಂಗ್ ಅವಕಾಶಗಳಿಂದ ಮುಂದಡಿ ಇಟ್ಟಿದೆ.
2018 ರಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ ಅಂತೆಯೇ ಅನಿವಾಸಿ ಭಾರತೀಯರ ಸಾಗರೋತ್ತರ ಬೇಡಿಕೆ ಕೂಡ ತಳಕಂಡಿದೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹೊಯ್ದಾಟಗಳು ನಡುವೆ ಜನರು ಹೂಡಿಕೆ ಮಾಡಲು ಸುರಕ್ಷಿತ ಕ್ಷೇತ್ರ ಯಾವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಈ ಸಮಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವೇ ಸುರಕ್ಷಿತ ಎಂಬ ಭಾವನೆ ಉಂಟಾಗುವುದು ಸಹಜವಾಗಿದೆ.
ದಾಖಲೆ ನಿರ್ಮಿಸುತ್ತಿರುವ ರಿಯಲ್ ಎಸ್ಟೇಟ್
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತದ ರಿಯಲ್ ಎಸ್ಟೇಟ್ ವಲಯವು 2021 ರ ವೇಳೆಗೆ $ 200 ಶತಕೋಟಿ ಮಾರುಕಟ್ಟೆ ದಾಖಲೆ ನಿರ್ಮಿಸಿದ್ದು 2030 ರ ವೇಳೆಗೆ $ 1 ಟ್ರಿಲಿಯನ್ ಮಾರ್ಕ್ ಅನ್ನು ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಭಾರತದ ಜಿಡಿಪಿಯ 13% ಕೊಡುಗೆ ಈ ಕ್ಷೇತ್ರದಿಂದಲೇ ಆಗಮಿಸಿದೆ ಅಂತೆಯೇ ಈ ವಲಯವು 2017-2021 ರ ನಡುವೆ ಒಟ್ಟು $10.3 ಬಿಲಿಯನ್ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿದೆ ಎಂದು ವರದಿ ತಿಳಿಸಿದೆ.
ಗುರುತರ ಜವಾಬ್ದಾರಿ!
ಈ ಕ್ಷೇತ್ರ ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗದಾತವೆಂಬ ಬಿರುದು ಪಡೆದುಕೊಂಡಿದೆ ಹಾಗೆಯೇ ಕೃಷಿಯ ನಂತರ ಜಿಡಿಪಿ ಬೆಳವಣಿಗೆಗೆ 7-8% ದಷ್ಟು ಕೊಡುಗೆ ನೀಡುವ ಗುರುತರ ಜವಬ್ದಾರಿಯನ್ನು ರಿಯಲ್ ಎಸ್ಟೇಟ್ ಕ್ಷೇತ್ರ ಹೊಂದಿದೆ. ಕೈಗೆಟುಕುವ ವಿಭಾಗಕ್ಕೆ ಅಸಂಖ್ಯಾತ ಸಬ್ಸಿಡಿಗಳನ್ನು ನಿರ್ದಿಷ್ಟವಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (CLSS) ಒದಗಿಸಲು ಸರಕಾರ ಪ್ರಯತ್ನಿಸುತ್ತಿದೆ. SWAMIH ನಿಧಿಯ ಅಡಿಯಲ್ಲಿ ಸುಮಾರು 15,000 ಕೋಟಿ ರೂಪಾಯಿಗಳ ಮರುಹಂಚಿಕೆ ಸ್ಥಗಿತಗೊಂಡ ಯೋಜನೆಗಳನ್ನು ಪುನರ್ ಆರಂಭಿಸುವ ನಿಟ್ಟಿನಲ್ಲಿದೆ.
ಇದನ್ನೂ ಓದಿ: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್ ಮಾಡಿ ನೋಡೋಣ!
ಹೂಡಿಕೆದಾರನಿಗೆ ಸ್ಥಿರ ಆದಾಯ!
ಖರೀದಿದಾರರಿಗೆ ತೆರಿಗೆ ವಿನಾಯಿತಿ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದ ಉತ್ತೇಜನಕ್ಕೆ ರೇರಾ ಮತ್ತು ಜಿಎಸ್‌ಟಿಯ ಅನುಷ್ಠಾನ ಇದೆಲ್ಲವೂ ಈ ಕ್ಷೇತ್ರವನ್ನು ಉನ್ನತ ಸ್ತರಕ್ಕೆ ಕೊಂಡೊಯ್ದಿದೆ. ಅಂತೆಯೇ ಈ ಎಲ್ಲಾ ಬೆಳವಣಿಗೆಗಳು ಮನೆಖರೀದಿದಾರರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಸರಾಸರಿ ಭಾರತೀಯನಿಗೆ ಹೂಡಿಕೆಗೆ ಸ್ಥಿರವಾದ ಮಾರ್ಗವಾಗಿದೆ ಏಕೆಂದರೆ ಹೂಡಿಕೆದಾರನಿಗೆ ಸ್ಥಿರ ಆದಾಯವನ್ನು ಒದಗಿಸುತ್ತದೆ. ಬಂಡವಾಳವನ್ನು ವೈವಿಧ್ಯಗೊಳಿಸುವ ಮೂಲಕ ಹೂಡಿಕೆದಾರ ಎದುರಿಸುವ ಅಪಾಯವನ್ನು ತಗ್ಗಿಸಲು ಅವಕಾಶವನ್ನೊದಗಿಸುತ್ತದೆ.
ರಿಯಲ್ ಎಸ್ಟೇಟ್ ಖರೀದಿಸಲು ಸರಿಯಾದ ಸಮಯ
ಇತ್ತೀಚಿನ ವರ್ಷಗಳಲ್ಲಿ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ಸೂರತ್, ಪುಣೆ ಮತ್ತು ಅಹಮದಾಬಾದ್ - ಭಾರತದ ಅಗ್ರ ಒಂಬತ್ತು ಮೆಟ್ರೋಪಾಲಿಟನ್ ನಗರಗಳಾದ್ಯಂತ ಆಸ್ತಿ ಮೌಲ್ಯಮಾಪನವು ಉತ್ತಮ ಪ್ರಗತಿ ಕಂಡಿದೆ. ಮನೆ ಖರೀದಿದಾರರು ಮನೆ ಖರೀದಿಸುವ ಅಸಲಿ ಸತ್ಯವನ್ನು ಮನಗಂಡಿದ್ದಾರೆ.
ಸರಕಾರದ ಪ್ರೋತ್ಸಾಹ!
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಪ್ರತಿಯೊಂದು ರೂಪಾಯಿಯು ರಾಷ್ಟ್ರೀಯ ಜಿಡಿಪಿಗೆ ನೇರವಾಗಿ ಕೊಡುಗೆ ನೀಡುತ್ತದೆ. ಇದಕ್ಕಾಗಿ ಸರ್ಕಾರವು ಕೈಗೆಟುಕುವ ಮನೆಗಳನ್ನು ಉತ್ತೇಜಿಸಲು ಮತ್ತು ಜನರಿಗೆ ಮನೆಗಳನ್ನು ಖರೀದಿಸಲು ಸುಲಭವಾಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಉದಾಹರಣೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಮೊದಲಾದವು.
ಹೆಚ್ಚುತ್ತಿರುವ ಬಡ್ಡಿದರಗಳು!
ರಿಯಲ್ ಎಸ್ಟೇಟ್ ನಿಜವಾಗಿಯೂ ಭಾರತದಲ್ಲಿ ಉತ್ತಮ ಹೂಡಿಕೆಯಾಗಿದೆ. ಹೆಚ್ಚಿದ ಆಸ್ತಿ ನಿರ್ಮಾಣ ವೆಚ್ಚದ ಜೊತೆಗೆ ಹೆಚ್ಚುತ್ತಿರುವ ಬಡ್ಡಿದರವು ಉತ್ಪನ್ನದ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ