Gold: ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಚಿನ್ನ ಬೆಸ್ಟ್! ಇಲ್ಲಿದೆ 5 ಪ್ರಮುಖ ಕಾರಣಗಳು

ಇಂದಿನ ಅಸ್ಥಿರ ಆರ್ಥಿಕ ವಾತಾವರಣದಲ್ಲಿ, ಹೂಡಿಕೆದಾರರು ಸ್ಥಿರ ಮತ್ತು ಸುರಕ್ಷಿತ ಉಳಿತಾಯಗಳಲ್ಲಿ ಹಣ ಹೂಡಿಕೆ ಮಾಡುವುದು ಹಣಕಾಸಿನ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಹೂಡಿಕೆ ಎಂದು ಹೇಳಬಹುದು. ನಿರಂತರವಾಗಿ ಹಣ ಹೂಡಿಕೆ ಮಾಡುವುದರಿಂದ ಅದು ಮುಂದೆ ನಿಮ್ಮ ಭವಿಷ್ಯಕ್ಕೆ ಉತ್ತಮ ಜೀವನವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಅಸ್ಥಿರ ಆರ್ಥಿಕ ವಾತಾವರಣದಲ್ಲಿ, ಹೂಡಿಕೆದಾರರು (Investors)  ಸ್ಥಿರ ಮತ್ತು ಸುರಕ್ಷಿತ ಉಳಿತಾಯಗಳಲ್ಲಿ ಹಣ ಹೂಡಿಕೆ ಮಾಡುವುದು ಹಣಕಾಸಿನ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಹೂಡಿಕೆ ಎಂದು ಹೇಳಬಹುದು. ನಿರಂತರವಾಗಿ ಹಣ ಹೂಡಿಕೆ (Money Investment) ಮಾಡುವುದರಿಂದ ಅದು ಮುಂದೆ ನಿಮ್ಮ ಭವಿಷ್ಯಕ್ಕೆ ಉತ್ತಮ ಜೀವನವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ರೀತಿಯ ನಿರಂತರ ಹಣ ಹೂಡಿಕೆಯಿಂದ ನಿಮ್ಮ ಹಣದುಬ್ಬರ (Inflation) ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಯುಸ್‌ ನಲ್ಲಿ ಆರ್ಥಿಕತೆ ಕುಸಿತ ಕಂಡರೆ ಅದರ ಪರಿಣಾಮವನ್ನು ಭಾರತವು (India) ಎದುರಿಸುತ್ತದೆ. ಭಾರತದಲ್ಲಿ ವ್ಯಾಪಾರ ಮತ್ತು ವ್ಯವಹಾರಗಳು ಕುಸಿತ ಕಾಣುತ್ತವೆ. ಆಗ ಷೇರು ಮಾರುಕಟ್ಟೆಯು (Shares Market) ಕುಸಿಯುತ್ತದೆ.

ಒಬ್ಬ ಹೂಡಿಕೆದಾರರು ದೀರ್ಘಕಾಲದ ಉಳಿತಾಯ ಮಾಡಲು ಬಯಸಿದರೆ, ಆ ವ್ಯಕ್ತಿ ಚಿನ್ನ ಖರೀದಿ ಮಾಡುವುದು ಆ ವ್ಯಕ್ತಿಯ ಹಣಕ್ಕೆ ಸುಸ್ಥಿರ ಬೆಂಬಲವನ್ನು ನೀಡುತ್ತದೆ ಎಂದು ಹಣಕಾಸಿನ ತಜ್ಞರು ಹೇಳುತ್ತಾರೆ.

ಒಬ್ಬ ಹೂಡಿಕೆದಾರರ ಸುಸ್ಥಿರ ಬೆಳವಣಿಗೆಗೆ ಚಿನ್ನವು ಏಕೆ ಅತ್ಯಗತ್ಯ ಎಂಬುದರ ಬಗ್ಗೆ ಪ್ರಮುಖ 5 ಕಾರಣಗಳು ಇಲ್ಲಿವೆ:

 1) ಹಣಕಾಸಿನ ಬಗ್ಗೆ ಪರಿಣಿತಿಯ ಅಗತ್ಯವಿಲ್ಲ
ಹೌದು ಇದನ್ನು ಕಾರ್ಯ ರೂಪಕ್ಕೆ ತರಲು ಯಾವುದೇ ರೀತಿಯ ಹಣಕಾಸಿನ ಪರಿಣಿತಿಯ ಅಗತ್ಯವಿಲ್ಲ. "ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತೆ ಚಿನ್ನಕ್ಕೆ ಹೆಚ್ಚಿನ ಹಣಕಾಸಿನ ಪರಿಣತಿ ಅಗತ್ಯವಿಲ್ಲ. ಭಾರತೀಯರು ತಮ್ಮ ಉಳಿತಾಯವನ್ನು ಅಕ್ಷರಶಃ ಸಾವಿರಾರು ವರ್ಷಗಳಿಂದ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನವು ನಾಣ್ಯಗಳನ್ನು ತಯಾರಿಸಲು ಬಳಸುವ ಲೋಹವಾಗಿದೆ. ಪುರಾತನ ಸಾಮ್ರಾಜ್ಯಗಳು, ಆಭರಣಗಳ ರೂಪದಲ್ಲಿ ಸಂಪತ್ತನ್ನು ಮಾಡುತ್ತಿದ್ದರು. ಶ್ರೀಮಂತ ಅಥವಾ ಬಡವ, ಒಬ್ಬ ವ್ಯಕ್ತಿ ಅಥವಾ ರಾಷ್ಟ್ರ, ಪ್ರತಿಯೊಬ್ಬರಿಗೂ ಚಿನ್ನದ ಮೌಲ್ಯ ಏನು ಎಂಬುದು ಗೊತ್ತಿದೆ” ಎಂದು ಸಿಪ್ಲಿ ಸ್ಥಾಪಕ ಮತ್ತು ಸಿಇಒ ಸೌಸ್ತವ್ ಚಕ್ರಬರ್ತಿ ಹೇಳುತ್ತಾರೆ.

2) ಹೈ ಲಿಕ್ವಿಡ್ ಆಯ್ಕೆ: ಉಳಿತಾಯ ಖಾತೆ ತೆರೆಯುವಾಗ, ನಿಮ್ಮ ಖಾತೆಯು ಎಷ್ಟು ದ್ರವರೂಪದ ಹಣವನ್ನು ಹೊಂದಿದೆ ಎಂಬುದನ್ನು ಪರಿಗಣಿಸುವುದು ಬಹಳ ಮುಖ್ಯ. ಲಿಕ್ವಿಡಿಟಿ ಎಂದರೆ ನಿಮ್ಮ ಹಣಕಾಸಿನ ಆಸ್ತಿಯನ್ನು ಯಾವುದೇ ಹಂತದಲ್ಲಿ ನಗದು ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸೂಚಿಸುವ ಅರ್ಥವನ್ನು ಹೊಂದಿದೆ.. ಚಿನ್ನದ ಇಟಿಎಫ್ ಮತ್ತು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಒಬ್ಬರ ಖಾತೆಯಲ್ಲಿ ಹೆಚ್ಚಿನ ಮಟ್ಟದ ಲಿಕ್ವಿಡಿಟಿಯನ್ನು ಹೊಂದಲು ಹೂಡಿಕೆದಾರರಿಗೆ ಅವಕಾಶ ನೀಡುತ್ತದೆ, ಏಕೆಂದರೆ ಅದನ್ನು ನೂರೆಂಟು ಸರ್ಕಸ್ ಗಳನ್ನು ಮಾಡದೆ ಒಂದೇ ಕ್ಲಿಕ್‌ನಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

ಇದನ್ನೂ ಓದಿ: LIC Housing Finance: ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ನಿವ್ವಳ ಲಾಭ 925.48 ಕೋಟಿ ರೂಪಾಯಿಗೆ ಏರಿಕೆ

3) ವೆಚ್ಚ ಪರಿಣಾಮಕಾರಿ ಆಯ್ಕೆಗಳು: "ಒಂದು ಕಾರ್ಯತಂತ್ರದ ಹೂಡಿಕೆ ಆಸ್ತಿಯಾಗಿರುವುದರಿಂದ, ಭೌತಿಕ ಚಿನ್ನಕ್ಕೆ ಹೋಲಿಸಿದರೆ ಚಿನ್ನದ ಇಟಿಎಫ್ ವೆಚ್ಚ-ಪರಿಣಾಮಕಾರಿಯಾಗಿದೆ. ಗೋಲ್ಡ್ ಇಟಿಎಫ್‌ಗಳು ಇಕ್ವಿಟಿ ಹೋಲ್ಡಿಂಗ್‌ಗಳಿಂದ ವೈವಿಧ್ಯತೆಯನ್ನು ಒದಗಿಸುತ್ತವೆ. ಇದಕ್ಕೆ ಹೊರತಾಗಿ, ಕುಸಿಯುತ್ತಿರುವ ಆರ್ಥಿಕತೆಯ ವಿರುದ್ಧ ಗೋಲ್ಡ್ ಇಟಿಎಫ್‌ಗಳು ಸಮರ್ಥವಾಗಿವೆ. ಬಡ್ಡಿದರ ಕಡಿಮೆಯಾದಾಗ ಬೆಲೆಗಳು ಹೆಚ್ಚಾಗುವುದರಿಂದ, ಈಕ್ವಿಟಿ ಅಲ್ಲದ ಉತ್ಪನ್ನಗಳೆಂದು ವರ್ಗೀಕರಿಸಲಾಗಿದೆ. ಗೋಲ್ಡ್ ಇಟಿಎಫ್‌ಗಳು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅನ್ನು ಆಕರ್ಷಿಸುವುದಿಲ್ಲ.

4) ರೂ 1 ರಿಂದ ಆರಂಭವಾಗುವ ಉಳಿತಾಯಗಳು: "ನಿಮ್ಮ ಆರ್ಥಿಕ ಪರಿಸ್ಥಿತಿ ಏನೇ ಇರಲಿ, ಚಿನ್ನದ ಹೂಡಿಕೆದಾರರಿಗೆ ಉಳಿತಾಯವನ್ನು ನಿಲ್ಲಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯ ಮೈಕ್ರೋ ಸೇವಿಂಗ್ಸ್ ಅಪ್ಲಿಕೇಶನ್‌ಗಳೊಂದಿಗೆ, ಬಳಕೆದಾರರು ಕೇವಲ ರೂ. 1 ನಂತೆ ಚಿನ್ನದ ಉಳಿತಾಯವನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ:  Stock Market: ಇದು 10 ರೂಪಾಯಿಯ ಸ್ಟಾಕ್, 1 ಲಕ್ಷಕ್ಕೆ 9 ಕೋಟಿ ರಿಟರ್ನ್; ಇಲ್ಲಿದೆ ಕಂಪನಿ ಮಾಹಿತಿ

5) ಚಿನ್ನದ ಮೇಲಿನ ಆದಾಯವು ಹಣದುಬ್ಬರವನ್ನು ನಿಯಂತ್ರಕ್ಕೆ ತರುತ್ತದೆ: "ಇದು ಹಲವಾರು ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳನ್ನು ಮೀರಿಸಿದೆ. ಯುಸ್‌ ಖಜಾನೆ ಬಾಂಡ್‌ಗಳಿಂದ ಸರಕುಗಳು ಮತ್ತು ಅಭಿವೃದ್ಧಿ ಹೊಂದಿದ ಮಾರುಕಟ್ಟೆ ಈಕ್ವಿಟಿಗಳವರೆಗೆ ಈ ಚಿನ್ನದ ಆದಾಯ ಸೇರಿದೆ. ನಾಣ್ಯಗಳು ಸವಕಳಿಯಾದರೂ ಸಹ ಚಿನ್ನದ ಮೌಲ್ಯವು ವಿಶ್ವಾಸಾರ್ಹವಾಗಿ ಉಳಿಯುತ್ತದೆ. ಪ್ರಪಂಚದಾದ್ಯಂತದ ದೇಶಗಳು ಹಣದುಬ್ಬರ, ಹಣದುಬ್ಬರವಿಳಿತ ಮತ್ತು ಇತರ ಆರ್ಥಿಕ ವಿಪತ್ತುಗಳ ವಿರುದ್ಧ ರಕ್ಷಿಸುವ ಸಾಧನವಾಗಿ ಚಿನ್ನದ ನಿಕ್ಷೇಪಗಳನ್ನು ಹೊಂದಿವೆ” ಎಂದು ಹಣಕಾಸಿನ ತಜ್ಞರು ಹೇಳುತ್ತಾರೆ.
Published by:Ashwini Prabhu
First published: