ಸಾಮಾನ್ಯವಾಗಿ ತಂದೆ-ತಾಯಿ (Perents) ಮಕ್ಕಳಿಗಾಗಿ ಕಷ್ಟ ಪಡುತ್ತಾರೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಮಕ್ಕಳು ಖುಷಿಯಾಗಿದ್ದರೆ ಸಾಕು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಅನೇಕ ಘಟನೆಗಳಲ್ಲಿ ಮಕ್ಕಳು ಸ್ವಾರ್ಥಿಗಳಾಗಿ ತಂದೆ-ತಾಯಿಯನ್ನು ನೋಯಿಸುತ್ತಾರೆ. ಆದರೆ ಇನ್ನೂ ಅಪರೂಪದ ಸಂದರ್ಭಗಳಲ್ಲಿ ತಂದೆ-ತಾಯಿ ಸ್ವಾರ್ಥಿಗಳಾಗುತ್ತಾರೆ. ಇಲ್ಲೊಬ್ಬ ವ್ಯಕ್ತಿಯು ತನ್ನ ಶ್ರೀಮಂತಿಕೆ (Richness) ನೋಡಿದ ಮೇಲೆ ತಂದೆ –ತಾಯಿ ಎಷ್ಟೆಲ್ಲ ಸ್ವಾರ್ಥಿಗಳಾದರು ಅನ್ನೋದನ್ನು ರೆಡ್ಡಿಟ್ನಲ್ಲಿ (Reddit Post Viral) ಬರೆದುಕೊಂಡಿದ್ದು ಅವರ ಬರಹ ವೈರಲ್ ಆಗಿದೆ.
'ಟ್ರೂ ಆಫ್ ಮೈ ಚೆಸ್ಟ್' ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್‌ನಲ್ಲಿ, ಆ ವ್ಯಕ್ತಿ ತನ್ನ ಗಳಿಕೆಯನ್ನು ತನ್ನ ಕುಟುಂಬದಿಂದ ಏಕೆ ಮರೆಮಾಚುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇದೆಲ್ಲ ಆರಂಭವಾಗಿದ್ದು ಕೆಲಸ ಸಿಕ್ಕಿದಾಕ್ಷಣ ತಾಯಿಗೆ ಕರೆಮಾಡಿದ ದಿನದಿಂದ ಎಂಬುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾರೆ.
"ಟ್ರೂ ಆಫ್ ಮೈ ಚೆಸ್ಟ್"
"ನಾನು ವಿದೇಶದಲ್ಲಿ ಓದಲು ಹೋದಾಗ ನಂತರದಲ್ಲಿ ಇವೆಲ್ಲ ಪ್ರಾರಂಭವಾಯಿತು. ನಾನು ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿಕೊಂಡೆ. ಕೆಲಸ ಸಿಕ್ಕಿದೊಡನೆ ನಾನು ಮಾಡಿದ ಮೊದಲ ಕೆಲಸವೆಂದರೆ ನನ್ನ ತಾಯಿಗೆ ಕರೆ ಮಾಡಿದ್ದು. ನನ್ನ ತಾಯಿ ಕೇಳಿದ ಮೊದಲ ವಿಷಯವೆಂದರೆ ಅವರು ನಿನಗೆ ಎಷ್ಟು ಸಂಬಳ ನೀಡುತ್ತಾರೆ ಎಂಬುದು. ಆದರೆ ಆ ಬಗ್ಗೆ ಎಷ್ಟು ತಿಳಿಸಬೇಕು ಎಂಬುದು ನನಗೆ ತಿಳಿದಿರಬೇಕಿತ್ತು. ಆದರೆ ನಾನಾಗ ಚಿಕ್ಕವನಿದ್ದೆ. ನನಗೆ ಗೊತ್ತಾಗಲಿಲ್ಲ. ನಾನು ನಿಜವಾದ ಸಂಬಳವನ್ನು ಹೇಳಿದೆ” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಇದು ವರ್ಷದ 365 ದಿನವೂ ಬೇಕು, ಈ ಬ್ಯುಸಿನೆಸ್ ಆರಂಭಿಸಿದ್ರೆ ಪಕ್ಕಾ ಕೈ ತುಂಬಾ ಕಾಸು!
“ಪೋಷಕರ ನಡವಳಿಕೆ ಬದಲಾಯ್ತು”
"ವಿದೇಶದಲ್ಲಿ ಚೆನ್ನಾಗಿ ಬದುಕಲು, ಅಲ್ಪಸ್ವಲ್ಪ ಉಳಿತಾಯ ಮಾಡುತ್ತಿದ್ದೆ. ಅದಕ್ಕಾಗಿ ನಾನು ಕಷ್ಟ ಪಡುತ್ತಿದ್ದೆ. ಅದನ್ನೇ ನಾನು ನನ್ನ ತಾಯ್ನಾಡಿನ ಕರೆನ್ಸಿಗೆ ಪರಿವರ್ತಿಸಿದರೆ ಅದು ದೊಡ್ಡ ಮೊತ್ತವಾಗುತ್ತಿತ್ತು. ಇದರಿಂದ ನನ್ನ ಪೋಷಕರು ನನ್ನನ್ನು ಶ್ರೀಮಂತ ಎಂದುಕೊಂಡರು. ಹಾಗೆಯೇ ಅವರ ನಡವಳಿಕೆಯೂ ಬದಲಾಯಿತು” ಎಂಬುದಾಗಿ ಆ ಶ್ರೀಮಂತ ವ್ಯಕ್ತಿ ಹೇಳಿಕೊಂಡಿದ್ದಾರೆ.
ಪ್ರತಿ ಸಲವೂ ಹಣ, ಉಡುಗೊರೆಗಳನ್ನು ನಿರೀಕ್ಷಿಸುತ್ತಿದ್ದರು
“ನನ್ನ ಬಗ್ಗೆ ಪೋಷಕರು ಕಾಳಜಿಯನ್ನೇ ವಹಿಸುತ್ತಿರಲಿಲ್ಲ. ಅವರು ನನ್ನನ್ನು ಟೂರ್ ಗೈಡ್, ಎಟಿಎಂ ನಂತೆ ನೋಡಿದರು. ಕುಟುಂಬದ ಇತರರಿಗೂ ನಾನೇ ಅವರನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದೂ ಹೇಳತೊಡಗಿದರು”
“ನಾನು ಮನೆಗೆ ಹೋದಾಗಲೆಲ್ಲ ಅವರಿಗೆ ದೊಡ್ಡ ದೊಡ್ಡ ಉಡುಗೊರೆಗಳನ್ನು, ಹಣವನ್ನೂ ನೀಡಬೇಕೆಂದು ಅವರು ಬಯಸುತ್ತಾರೆ. ನನ್ನ ಒಡಹುಟ್ಟಿದವರ ಯೂನಿ ಟ್ಯೂಷನ್‌ಗಳಿಗೂ ನಾನೇ ಹಣ ನೀಡಬೇಕೆಂದು ಅವರು ಬಯಸುತ್ತಾರೆ”
ಆದರೆ ಇದನ್ನೆಲ್ಲ ನೋಡಿದ ಮೇಲೆ ನಾನೇನಾದರೂ ಕ್ರಮ ತೆಗೆದುಕೊಳ್ಳಬೇಕು ಅಂತ ಅನಿಸಿತು. ಆದ್ದರಿಂದ ನಾನು ಅವರನ್ನು ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸತೊಡಗಿದೆ ಎಂಬುದಾಗಿ ಆ ಬಿಲಿಯನೇರ್ ವ್ಯಕ್ತಿ ಬರೆದುಕೊಂಡಿದ್ದಾರೆ.
ಅವರಂತೆ ನಾನೂ ಬದಲಾದೆ
"ಈ ಜನರು ಮನಸ್ಸಿನಲ್ಲಿ ಎಷ್ಟು ವಿಷ ತುಂಬಿಕೊಂಡಿದ್ದಾರೆ ಎಂದು ತಿಳಿದುಕೊಂಡ ನನಗೆ ನಾನು ಎಲ್ಲದಕ್ಕೂ ಗಡಿಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿದುಕೊಂಡೆ. ಹಾಗಾಗಿ ನಾನು ನಿಧಾನವಾಗಿ ಕಾಲ್ ಮಾಡುವುದನ್ನು, ಮೆಸೇಜ್ ಮಾಡುವುದನ್ನು ಕಡಿಮೆ ಮಾಡಿದೆ. ಅಲ್ಲದೇ ನನ್ನ ಜೀವನದ ಬಗ್ಗೆ ಅವರಿಗೆ ಅಪ್‌ಡೇಟ್ ಮಾಡುವುದನ್ನು ನಿಲ್ಲಿಸಿದೆ. ಅಲ್ಲದೇ ಅವರು ನನ್ನನ್ನು ತಿಳಿದುಕೊಳ್ಳಲು ಅರ್ಹರಲ್ಲ ಎಂದು ನಾನು ನಿರ್ಧರಿಸಿದೆ" ಎಂದು ಅವರು ಬರೆದುಕೊಂಡಿದ್ದಾರೆ.
ನಂತರ ಸಾಂಕ್ರಾಮಿಕ ಕೋವಿಡ್ ಪ್ರಾರಂಭದಲ್ಲಿ, ವ್ಯಕ್ತಿಯು ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು. ಅದು ಬೆಳೆದಂತೆ ತನ್ನ ಉದ್ಯೋಗವನ್ನು ತೊರೆದರು. ಆದರೆ ಮನೆಯಲ್ಲಿ ಮಾತ್ರ ಸುಳ್ಳು ಹೇಳಿದರು. ನಾನು ಕೆಲಸ ಕಳೆದುಕೊಂಡನೆಂದು. ಇದರಿಂದ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದೇನೆಂದು ಹೇಳಿದರು. ಅಂದುಕೊಂಡಂತೆ ಕ್ರಮೇಣ ಅವರ ಕುಟುಂಬ ಅವರ ಸಂಪರ್ಕವನ್ನೇ ನಿಲ್ಲಿಸಿತು.
ನಂತರದಲ್ಲಿ ತನಗೆ ಉದ್ಯೋಗ ಸಿಕ್ಕಿದೆ. ಆದರೆ ಹೆಚ್ಚು ವೇತನ ಸಿಗುತ್ತಿಲ್ಲ. ಇಲ್ಲಿ ಜೀವನ ವೆಚ್ಚವೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಆ ಸುಳ್ಳನ್ನು ನಂಬಿಸಲು ಒಂದು ಅಪಾರ್ಟ್‌ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇನ್ನು ಈ ವ್ಯಕ್ತಿಯ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ