Cloned Cow: ಭಾರತದ ಮೊದಲ ಹೈನುಗಾರಿಕಾ ಗೇಮ್ ಚೇಂಜರ್ ಈ ಗಿರ್ ಕರು! ಇಲ್ಲಿದೆ ಫುಲ್​ ಡೀಟೇಲ್ಸ್​

ಗಿರ್​ ತಳಿಯ ಕರು

ಗಿರ್​ ತಳಿಯ ಕರು

ಗಂಗಾ ಕರು ಹುಟ್ಟುವಾಗ ಆರೋಗ್ಯಕರ 32 ಕೆಜಿ ತೂಕವನ್ನು ಹೊಂದಿತ್ತು ಮತ್ತು ನಡವಳಿಕೆ, ಶಾರೀರಿಕ, ಆನುವಂಶಿಕ ಮತ್ತು ಇತರ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದೆ ಎಂದು ಹಿಮಾಂಶ್ ಪಾಠಕ್ ತಿಳಿಸಿದ್ದಾರೆ.

  • Share this:

ಮಾರ್ಚ್ 19 (March 19) ರಂದು ಜನ್ಮತಾಳಿರುವ ಗಿರ್ ಕರು ಗಂಗಾ ಭಾರತದ ಮೊದಲ ತದ್ರೂಪಿ (Clone) ಕರುವಾಗಿದೆ. ಹರ್ಯಾಣದ ಕರ್ನಾಲ್‌ನ ನ್ಯಾಶನಲ್ ಡೈರಿ ರೀಸರ್ಚ್ ಇನ್‌ಸ್ಟ್ಯೂಟ್‌ನಲ್ಲಿ ವಿಜ್ಞಾನಿಗಳು ಗಂಗಾಳ ಜನನಕ್ಕೆ ಕಾರಣವಾಗಿದ್ದು ತದ್ರೂಪಿ ಸಂತಾನೋತ್ಪತ್ತಿಯು ಸ್ಥಳೀಯ ಹಸುಗಳ ಸಂತಾನವೃದ್ಧಿಗೆ ಉತ್ತೇಜನ ನೀಡುತ್ತದೆ ಎಂಬುದು ವಿಜ್ಞಾನಿಗಳ ಭರವಸೆಯಾಗಿದೆ. ಗಿರ್ ಹಸುವಿನಂತಹ ಸ್ಥಳೀಯ ಪ್ರಾಣಿಗಳು ರೋಗ-ನಿರೋಧಕವಾಗಿದ್ದು ಹಾಗೂ ದೇಶದ ಬಿಸಿ ಮತ್ತು ಆರ್ದ್ರ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಕ್ಲೋನಿಂಗ್ ತಂತ್ರಜ್ಞಾನವು ಭಾರತೀಯ ಡೈರಿ (Dairy) ರೈತರಿಗೆ ಹೆಚ್ಚಿನ ಹಾಲು ಉತ್ಪಾದಿಸುವ ಸ್ಥಳೀಯ ಜಾನುವಾರುಗಳ ಅಗತ್ಯವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎನ್‌ಡಿಆರ್‌ಐ ಕಾರ್ಯನಿರ್ವಹಣೆಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾನಿರ್ದೇಶಕ ಡಾ ಹಿಮಾಂಶು ಪಾಠಕ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.


ಕ್ಲೋನ್ ಕರುವಿಗಾಗಿ ದೀರ್ಘ ಕಾಯುವಿಕೆ


ಗಂಗಾ ಕರು ಹುಟ್ಟುವಾಗ ಆರೋಗ್ಯಕರ 32 ಕೆಜಿ ತೂಕವನ್ನು ಹೊಂದಿತ್ತು ಮತ್ತು ನಡವಳಿಕೆ, ಶಾರೀರಿಕ, ಆನುವಂಶಿಕ ಮತ್ತು ಇತರ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದೆ ಎಂದು ಹಿಮಾಂಶ್ ಪಾಠಕ್ ತಿಳಿಸಿದ್ದಾರೆ. ಆದರೆ ಕ್ಲೋನ್ ತಂತ್ರಜ್ಞಾನದಲ್ಲಿ ಇಷ್ಟೊಂದು ಮುಂದುವರಿದ ಸಾಧನೆಯನ್ನು ಮಾಡಲು ವಿಜ್ಞಾನಿಗಳು ದೀರ್ಘ ಸಮಯ ತೆಗೆದುಕೊಂಡಿದ್ದಾರೆ.


ಫೆಬ್ರವರಿ 2009 ರಲ್ಲಿ ಐಸಿಎಆರ್ – ಎನ್‌ಡಿಆರ್‌ಐ ವಿಶ್ವದ ಮೊದಲ ತದ್ರೂಪಿ ಎಮ್ಮೆಯ ಕರುವಾದ ಸಮ್ರೂಪದೊಂದಿಗೆ ಇತಿಹಾಸ ರಚಿಸಿದೆ. ಆದರೆ ಜನನದ ಐದು ದಿನಗಳ ನಂತರ ಸಮ್ರೂಪ ಶ್ವಾಸಕೋಶದ ಸೋಂಕಿಗೆ ಬಲಿಯಾಗಿದ್ದರೂ, ಅಂದಿನಿಂದ ಭಾರತವು ಇತರ 26 ಪ್ರಾಣಿಗಳನ್ನು ಕ್ಲೋನ್ ಮಾಡಿದೆ.


ಕ್ಲೋನಿಂಗ್ ಹಾಗೂ ಧಾರ್ಮಿಕ ಸೂಕ್ಷ್ಮತೆ


ಹಸುವನ್ನು ಕ್ಲೋನಿಂಗ್ ಮಾಡುವುದು, ಆದಾಗ್ಯೂ, ಮುಖ್ಯವಾಗಿ ಧಾರ್ಮಿಕ ಸೂಕ್ಷ್ಮತೆಯಿಂದಾಗಿ ಹೆಚ್ಚು ಸಮಯ ತೆಗೆದುಕೊಂಡಿತು. ಎಮ್ಮೆಗಳಿಗೆ, ನಾವು ಕಸಾಯಿಖಾನೆಗಳನ್ನು ಸಂಪರ್ಕಿಸಬಹುದು ಮತ್ತು ಓಸೈಟ್ (ಅಪಕ್ವವಾದ ಅಂಡಾಣು ಅಥವಾ ಮೊಟ್ಟೆಯ ಕೋಶ) ಪಡೆಯಬಹುದು.


ಆದರೆ ಹಸುಗಳಿಗೆ ಇದೇ ರೀತಿಯ ಪ್ರಕ್ರಿಯೆಯನ್ನು ಅನುಸರಿಸಲಾಗುವುದಿಲ್ಲ ಎಂದು ಎನ್‌ಡಿಆರ್‌ಐ ನಿರ್ದೇಶಕರಾದ ಎಮ್‌ಎಸ್ ಚೌಹಾನ್ ತಿಳಿಸಿದ್ದಾರೆ.


ಇದನ್ನೂ ಓದಿ: 500 ವರ್ಷಗಳ ಹಿಂದಿನ ಹಡಗಿನ ಅವಶೇಷಗಳು ಪತ್ತೆ! ಕಡಲ ರಹಸ್ಯ ಬಹಿರಂಗ


2018 ರಲ್ಲಿ ವಿಜ್ಞಾನಿಗಳು ಓಮ್ ಪಿಕ್-ಅಪ್ (OPU) ಎಂಬ ಹೊಸ ಆಕ್ರಮಣಶೀಲವಲ್ಲದ ತಂತ್ರಜ್ಞಾನದ ಅನ್ವೇಷಣೆ ನಡೆಸಿದ್ದು ಹಸುಗಳಿಂದ ಅಂಡಾಣುಗಳನ್ನು ಹಾನಿಯಾಗದಂತೆ ಬೇರ್ಪಡಿಸಲು ಈ ತಂತ್ರಜ್ಞಾನ ನಂತರದ ದಿನಗಳಲ್ಲಿ ನೆರವಾಗಿದೆ.


ದನಗಳ ರಿಜಿಸ್ಟ್ರೇಶನ್ ಸಮಯದಲ್ಲಿ ಅವುಗಳ ಕಿವಿಗಳಿಗೆ ಹೇಗೆ ಪಂಚ್ ಮಾಡಲಾಗುತ್ತದೆಯೋ ಅದೇ ರೀತಿ ಅಂಡಾಣುಗಳನ್ನು ಹಸುಗಳಿಗೆ ಹಾನಿಯಾಗದಂತೆ ಬೇರ್ಪಡಿಸಲು ಈ ತಂತ್ರಜ್ಞಾನ ನೆರವಾಗಿದೆ ಎಂದು ಎನ್‌ಡಿಆರ್‌ಐ ನ ಹಿರಿಯ ವಿಜ್ಞಾನಿ ನರೇಶ್ ಸೆಲೋಕರ್ ತಿಳಿಸಿದ್ದಾರೆ.


ಗಿರ್ ತಳಿಯನ್ನೇ ಆರಿಸಿಕೊಂಡಿದ್ದೇಕೆ?


ಗಿರ್, ಸಹಿವಾಲ್ ಹಾಗೂ ರೆಡ್ ಸಿಂಧಿಯಂತಹ ಸಾಂಪ್ರದಾಯಿಕ ಭಾರತೀಯ ಹಸುವಿನ ತಳಿಗಳು ತುಲನಾತ್ಮಕವಾಗಿ ಹೆಚ್ಚಿನ ಹಾಲಿನ ಇಳುವರಿಯನ್ನು ಹೊಂದಿವೆ.


ಹಸಿರು ಕ್ರಾಂತಿಯ ನಂತರ ಕೃಷಿಯಲ್ಲಿನ ತಾಂತ್ರಿಕ ಪ್ರಗತಿಯು ಈ ತಳಿಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ್ದು ಹಾಗಾಗಿ ಹೆಚ್ಚಿನ ಹಾಲಿಗಾಗಿ ರೈತರು ಕ್ರಾಸ್-ಬ್ರೀಡಿಂಗ್ ಪ್ರಕ್ರಿಯೆಯನ್ನು ಅನುಸರಿಸಿದ್ದಾರೆ. ಆದರೆ ಈ ರೀತಿಯ ಪ್ರಕ್ರಿಯೆಗೊಳಪಟ್ಟ ಹೈಬ್ರೀಡ್ ಹಸುಗಳು ಗಂಟು ಚರ್ಮ ರೋಗದಂತಹ ಹಾನಿಕಾರಕ ರೋಗಗಳಿಗೆ ಬೇಗನೇ ತುತ್ತಾಗುತ್ತವೆ.


ಇದನ್ನೂ ಓದಿ: 24 ಗಂಟೆ ಎಸಿ ಬಳಸಿದರೂ ಕರೆಂಟ್ ಬಿಲ್ ಸೊನ್ನೆ, ಮಾರುಕಟ್ಟೆಗೆ ಕಾಲಿಡುತ್ತಿದೆ ಹೊಸ ಮಾದರಿ!


ಹೀಗಾಗಿಯೇ ಎನ್‌ಡಿಆರ್‌ಐ 2021 ರಲ್ಲಿ ಉತ್ತರಾಖಾಂಡ್‌ನ ಲೈವ್‌ಸ್ಟಾಕ್ ಡೆವಲಪ್‌ಮೆಂಟ್ ಬೋರ್ಡ್‌ನೊಂದಿಗೆ ಕೈಜೋಡಿಸಿದ್ದು ಸಂಸ್ಥೆಯ ಸಹಯೋಗದೊಂದಿಗೆ ಕ್ಲೋನಿಂಗ್ ಸಂತಾನೋತ್ಪತ್ತಿಯ ಮೂಲಕ ಸ್ಥಳೀಯ ಹಸುಗಳ ತಳಿಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.


ರೈತರಿಗೆ ಸಹಾಯ ಮಾಡುವುದೇ ನಮ್ಮ ಗುರಿ


ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ರೈತರಿಗೆ ನೆರವನ್ನು ನೀಡುವುದೇ ನಮ್ಮ ಗುರಿಯಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ. ಹಾಗಾಗಿ ತದ್ರೂಪಿ ತಳಿಗಳ ಸಂತಾನೋತ್ಪತ್ತಿಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ನಡೆಸಲಾಗುತ್ತಿದೆ ಎಂದು ಚೌಹಾಣ್ ತಿಳಿಸಿದ್ದಾರೆ.
ಕ್ರಾಸ್ ಬ್ರೀಡಿಂಗ್ ಸಮಯದಲ್ಲಿ ಹಸುಗಳ ತಳಿಗಳು ಅನೇಕ ಸೂಕ್ಷ್ಮ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತವೆ ಆದರೆ ಕ್ಲೋನಿಂಗ್ ಮೂಲಕ ಇಂತಹ ಕಾಯಿಲೆಗಳನ್ನು ತಡೆಯಬಹುದು ಎಂಬುದು ಚೌಹಾಣ್ ಅವರ ಮಾತಾಗಿದೆ.

First published: