Oil Price: ಬ್ಯಾರೆಲ್‌ಗೆ 70 ಡಾಲರ್​ಗಿಂತ ಕಡಿಮೆ ಮಾಡ್ಕೊಳ್ಳಿ! ರಷ್ಯಾಕ್ಕೆ ಭಾರತದ ಡಿಮ್ಯಾಂಡ್

ನೀರು ಆವಿಯಾದಂತೆ ಕುಗ್ಗುತ್ತಿರುವ ಯುರೋಪಿಯನ್ ಬೇಡಿಕೆಯು ರಷ್ಯಾದ ತೈಲ ಉದ್ಯಮದ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಈ ವರ್ಷ ಉತ್ಪಾದನೆಯು 17% ರಷ್ಟು ಕಡಿಮೆಯಾಗಬಹುದು ಎಂದು ಸರ್ಕಾರವು ಮುನ್ಸೂಚನೆ ನೀಡಿದೆ.

ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ

ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ

  • Share this:
ಪ್ರಸ್ತುತ ಜಾಗತಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳ ಮಾರುಕಟ್ಟೆಗಳಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಆಗುತ್ತಿರುವುದನ್ನು ಕಾಣಬಹುದಾಗಿದೆ. ಅದರಂತೆ, ತೈಲೋದ್ಯಮದ ಮೇಲೆಯೂ ಸಹ ರಷ್ಯಾ-ಉಕ್ರೇನ್ ಯುದ್ಧದ (Russia Ukraine War Effect) ಬಿಕ್ಕಟ್ಟು ಸಾಕಷ್ಟು ಪ್ರಭಾವ ಬೀರಿರುವುದನ್ನು ಗಮನಿಸಬಹುದು. ಇದರಿಂದಾಗಿ ಬಹುತೇಕ ಜಗತ್ತಿನಾದ್ಯಂತ ಇಂಧನ ಬೆಲೆಗಳಲ್ಲಿ (Oil Price) ಅಗಾಧ ಪ್ರಮಾಣದ ಏರಿಕೆಯಾಗಿದು ಭಾರತವೂ (Indian Oil Price) ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಕಚ್ಚಾ ತೈಲ (Crude Oil) ಉತ್ಪಾದಕ ರಾಷ್ಟ್ರಗಳ ಸಮೂಹವಾದ ಒಪೆಕ್ ಪ್ಲಸ್ ಸಮೂಹದೊಂದಿಗೆ (OPEC+ Producer) ಹೊಸ ವಿದ್ಯಮಾನಗಳು ಜರುಗುತ್ತಿವೆ. ಭಾರತವು ರಷ್ಯಾದ ತೈಲದ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. 

ಸದ್ಯ ಈಗ ಬಲ್ಲ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇತರೆ ಖರೀದಿದಾರರು ದೂರ ಸರಿಯುತ್ತಿರುವುದರಿಂದ ಒಪೆಕ್ ಪ್ಲಸ್ ಉತ್ಪಾದಕರೊಂದಿಗೆ ವ್ಯವಹರಿಸುವಾಗ ತಲೆದೋರಬಹುದಾದ ಸಂಭಾವ್ಯ ತೈಲ ಕೊರತೆಯ ಅಪಾಯವನ್ನು ಸರಿದೂಗಿಸಲು ಭಾರತವು ರಷ್ಯಾದ ತೈಲದ ಮೇಲೆ ಆಳವಾದ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.

ಪ್ರತಿ ಬ್ಯಾರೆಲ್‌ಗೆ 70 ಕ್ಕಿಂತ ಕಡಿಮೆ ಡಾಲರ್
ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ಮಾತುಕತೆಗಳಲ್ಲಿ ಖರೀದಿಗಳಿಗೆ ಹಣಕಾಸು ಒದಗಿಸುವಂತಹ ಹೆಚ್ಚುವರಿ ಅಡಚಣೆಗಳನ್ನು ಸರಿದೂಗಿಸಲು ಭಾರತವು ಪ್ರತಿ ಬ್ಯಾರೆಲ್‌ಗೆ 70 ಕ್ಕಿಂತ ಕಡಿಮೆ ಡಾಲರ್ ದರದಲ್ಲಿ ರಷ್ಯಾದ ಸರಕುಗಳನ್ನು ವಿತರಣಾ ಆಧಾರದ ಮೇಲೆ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗೌಪ್ಯ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿರುವುದಾಗಿ ಅಜ್ಞಾತ ಮೂಲಗಳಿಂದ ವರದಿಯಾಗಿದೆ.

ರಷ್ಯಾದ ಕಚ್ಚಾ ತೈಲ ಖರೀದಿ ಹೆಚ್ಚಳ
ಜಾಗತಿಕ ಮಾನದಂಡದಂತೆ ಪ್ರಸ್ತುತ ಬ್ರೆಂಟ್ ತೈಲ ಬ್ಯಾರೆಲ್‌ಗೆ $105 ರ ಸಮೀಪದಲ್ಲಿ ವ್ಯಾಪಾರ ನಡೆಯುತ್ತಿದೆ. ಫೆಬ್ರುವರಿ ಅಂತ್ಯದಲ್ಲಿ ಉಕ್ರೇನ್ ಆಕ್ರಮಣದ ನಂತರ ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರರಲ್ಲಿ ಒಂದಾಗಿರುವ ದೇಶದ ಸರ್ಕಾರಿ ಮತ್ತು ಖಾಸಗಿ ಸಂಸ್ಕರಣಾಗಾರಗಳು ರಷ್ಯಾದ ಕಚ್ಚಾ ತೈಲವನ್ನು 40 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿವೆ ಎಂದು ತಿಳಿದುಬಂದಿದೆ.

20% ಹೆಚ್ಚಳ
ವ್ಯಾಪಾರ ಸಚಿವಾಲಯದ ಅಂಕಿಅಂಶಗಳ ಆಧಾರದ ಮೇಲೆ ಬ್ಲೂಮ್‌ಬರ್ಗ್ ಲೆಕ್ಕಾಚಾರಗಳ ಪ್ರಕಾರ, ಇದು 2021 ರ ಇಡೀ ರಷ್ಯಾದಿಂದ ಭಾರತಕ್ಕೆ ಹರಿಯುತಿದ್ದ ಪ್ರಮಾಣದ 20% ರಷ್ಟು ಹೆಚಾಗಿರುವುದಾಗಿ ತಿಳಿದುಬಂದಿದೆ.

ಕುಗ್ಗುತ್ತಿದೆ ಯುರೋಪಿಯನ್ ಬೇಡಿಕೆ
ಭಾರತ ತನ್ನ ತೈಲದ 85% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದು ಈ ಮೂಲಕ ಸದ್ಯ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವವರಲ್ಲಿ ಭಾರತವು ಒಂದಾಗಿದೆ. ಇದು ವ್ಲಾಡಿಮಿರ್ ಪುಟಿನ್ ಆಡಳಿತಕ್ಕೆ ಆದಾಯದ ಒಂದು ಪ್ರಮುಖ ಮೂಲವಾಗಿದೆ. ನೀರು ಆವಿಯಾದಂತೆ ಕುಗ್ಗುತ್ತಿರುವ ಯುರೋಪಿಯನ್ ಬೇಡಿಕೆಯು ರಷ್ಯಾದ ತೈಲ ಉದ್ಯಮದ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಈ ವರ್ಷ ಉತ್ಪಾದನೆಯು 17% ರಷ್ಟು ಕಡಿಮೆಯಾಗಬಹುದು ಎಂದು ಸರ್ಕಾರವು ಮುನ್ಸೂಚನೆ ನೀಡಿದೆ.

ಅಮೆರಿಕಾ ಪ್ರಯತ್ನ ಕಡಿಮೆಯೇ?
ಹಾಗೆ ನೋಡಿದರೆ ಭಾರತಕ್ಕೆ ರಷ್ಯಾದ ತೈಲದ ಹರಿವನ್ನು ನಿರ್ಬಂಧಿಸಲಾಗಿಲ್ಲವಾದರೂ ಸಾಗರ ವಿಮೆ ಮತ್ತು ಯುಎಸ್‌ನಿಂದ ನವದೆಹಲಿಯ ಮೇಲಿನ ಒತ್ತಡದಂತಹ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿರುವುದು ಈ ವ್ಯಾಪಾರವನ್ನು ನಡೆಸಲು ಕಷ್ಟಕರವಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಉತ್ತಮ ಅವಕಾಶ ಬಿಡೋ ಛಾನ್ಸೇ ಇಲ್ಲ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಸ್ಕೋದೊಂದಿಗಿನ ತಮ್ಮ ಸಂಬಂಧವನ್ನು ತಗ್ಗಿಸುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ತೋರಿದ್ದ ಪ್ರೋತ್ಸಾಹ ಹಾಗೂ ಒತ್ತಡಗಳನ್ನು ವಿರೋಧಿಸಿದ್ದಾರೆ ಏಕೆಂದರೆ ಇದೊಂದು ರೀತಿಯಲ್ಲಿ ಭಾರತವು ಭಾರೀ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲವನ್ನು ಪಡೆಯಬಹುದಾದ ಉತ್ತಮ ಅವಕಾಶ ಒದಗಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: 5G in Karnataka: ಕರ್ನಾಟಕದಲ್ಲಿ 5ಜಿ ಇಂಟರ್​ನೆಟ್! ಸಿಗೋದು ಯಾವಾಗ?

ಭಾರತವು ರಷ್ಯಾದ ಶಸ್ತ್ರಾಸ್ತ್ರಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮತ್ತೊಂದು ಮಾಹಿತಿಯಂತೆ ರಷ್ಯಾ ಭಾರತದ ಬೆಲೆ ಬೇಡಿಕೆಗಳನ್ನು ಒಪ್ಪಿಕೊಂಡರೆ ಭಾರತದ ಸರ್ಕಾರಿ ಸಂಸ್ಕರಣಾಗಾರಗಳು ತಿಂಗಳಿಗೆ ಸುಮಾರು 15 ಮಿಲಿಯನ್ ಬ್ಯಾರೆಲ್‌ಗಳನ್ನು ತೆಗೆದುಕೊಳ್ಳಬಹುದು. ಅಂದರೆ ಒಟ್ಟಾರೆ ಆಮದಿನ ಹತ್ತನೇ ಒಂದು ಭಾಗ ಇದಾಗಿರುತ್ತದೆ ಎನ್ನಲಾಗಿದೆ. ಯಾವುದೇ ಸಂಭಾವ್ಯ ಒಪ್ಪಂದದಿಂದ ಸರ್ಕಾರಿ-ಸಂಯೋಜಿತ ಪ್ರೊಸೆಸರ್‌ಗಳು ಪ್ರಯೋಜನ ಪಡೆಯುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಬಹುದು.

ಖಾಸಗಿ ರಿಫೈನರ್‌ಗಳ ಸಂಗ್ರಹ
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿಯಂತಹ ಖಾಸಗಿ ರಿಫೈನರ್‌ಗಳು ವಿಶಿಷ್ಟವಾಗಿ ತಮ್ಮ ಫೀಡ್‌ಸ್ಟಾಕ್ ಅನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತವೆ. ಪಶ್ಚಿಮದಿಂದ ಬಾಲ್ಟಿಕ್ ಸಮುದ್ರದ ಮೂಲಕ ಮತ್ತು ರಷ್ಯಾದ ದೂರದ ಪೂರ್ವದಿಂದ ಬೇಸಿಗೆಯಲ್ಲಿ ಹೆಚ್ಚು ಪ್ರವೇಶಿಸಬಹುದಾದ ಮಾರ್ಗಗಳಲ್ಲಿ ಭಾರತಕ್ಕೆ ತೈಲ ಸರಬರಾಜುಗಳನ್ನು ನಿರಂತರವಾಗಿ ಹರಿಯುವಂತೆ ಮಾಸ್ಕೋ ಹಲವು ಆಯ್ಕೆಗಳನ್ನು ಪರಾಮರ್ಶಿಸುತ್ತಿದೆ.

ಇದನ್ನೂ ಓದಿ: Driving License New Rules 2022: ಹೊಸ ರೂಲ್ಸ್ ಪ್ರಕಾರ ಜುಲೈ 1ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಹೇಗೆ?

ಎರಡೂ ದೇಶಗಳು ದೂರದ ಪೂರ್ವದಲ್ಲಿ ವ್ಲಾಡಿವೋಸ್ಟಾಕ್ ಮೂಲಕ ಸ್ವಲ್ಪ ಕಚ್ಚಾ ತೈಲವನ್ನು ಮರು-ಮಾರ್ಗವನ್ನು ಮಾಡಬಹುದೇ ಎಂಬುದನ್ನು ಅನ್ವೇಷಿಸುತ್ತಿವೆ ಎನ್ನಲಾಗಿದೆ. ಅಲ್ಲಿಂದ ಭಾರತಕ್ಕೆ ಸಮುದ್ರಯಾನವು ತ್ವರಿತವಾಗಿದ್ದರೂ, ಇದರೊಂದಿಗೆ ಹೆಚ್ಚಿನ ವೆಚ್ಚಗಳು ಮತ್ತು ವ್ಯವಸ್ಥಾಪನಾ ಅಡಚಣೆಗಳು ಉಂಟಾಗಬಹುದು ಎಂದೂ ಸಹ ಹೇಳಲಾಗಿದೆ.
Published by:guruganesh bhat
First published: