• Home
  • »
  • News
  • »
  • business
  • »
  • Explained: ಯುಎಸ್​​ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತ ಔಟ್​! ಏನಿದರ ಅಸಲಿ ಕಹಾನಿ? ಇಲ್ಲಿದೆ ನೋಡಿ

Explained: ಯುಎಸ್​​ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತ ಔಟ್​! ಏನಿದರ ಅಸಲಿ ಕಹಾನಿ? ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತವನ್ನು ಒಳಗೊಂಡಿರುವ ತನ್ನ ಪ್ರಮುಖ ವ್ಯಾಪಾರ ಪಾಲುದಾರರ ನಗದು ರೀತಿ ನೀತಿಗಳು ಮತ್ತು ಆರ್ಥಿಕ ಯೋಜನೆಗಳನ್ನು ಪತ್ತೆಹಚ್ಚಲು ಯುಎಸ್ ತನ್ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯನ್ನು ಸ್ಥಾಪಿಸಿದೆ.

  • Share this:

ಯುನೈಟೆಡ್ ಸ್ಟೇಟ್ಸ್ (ಯುಎಸ್) ಖಜಾನೆ ಇಲಾಖೆಯು ಭಾರತ ಸೇರಿದಂತೆ ಇತರ ಕೆಲವು ದೇಶಗಳನ್ನು ತನ್ನ 'ಕರೆನ್ಸಿ ಮಾನಿಟರಿಂಗ್ ಪಟ್ಟಿ'ಯಿಂದ ತೆಗೆದುಹಾಕಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಎಸ್ ಹಣಕಾಸು ಸಚಿವೆ ಜಾನೆಟ್ ಯೆಲೆನ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಸಮಯದಲ್ಲಿ ಎರಡೂ ದೇಶಗಳು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಪ್ರತಿಜ್ಞೆ ಕೈಗೊಂಡಿದ್ದು ಅದೇ ದಿನ ಈ ಬೆಳವಣಿಗೆ ವರದಿಯಾಗಿದೆ.


ಭಾರತ ವಿಶ್ವಾಸಾರ್ಹ ಪಾಲುದಾರರಲ್ಲಿ ಒಂದು; ಯುಎಸ್ ಮೆಚ್ಚುಗೆ


ಪೂರೈಕೆ ಸರಪಳಿಯ ದೋಷಗಳು ಹೆಚ್ಚಿನ ವೆಚ್ಚಕ್ಕೆ ಕಾರಣವಾಗಿರುವ ಈ ಜಗತ್ತಿನಲ್ಲಿ ಭಾರತದೊಂದಿಗೆ ಯುಎಸ್‌ನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವುದು ಮುಖ್ಯವಾಗಿದೆ ಎಂದು ನಂಬಿರುವುದಾಗಿ ಯೆಲೆನ್ ತಿಳಿಸಿದ್ದು ಭಾರತವು ನಮ್ಮ ವಿಶ್ವಾಸಾರ್ಹ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಭಾರತ ಹೊರತುಪಡಿಸಿ ಪಟ್ಟಿಯಿಂದ ತೆಗೆದುಹಾಕಲಾದ ಇತರ ದೇಶಗಳೆಂದರೆ ಇಟಲಿ, ಮೆಕ್ಸಿಕೊ, ವಿಯೆಟ್ನಾಂ ಮತ್ತು ಥೈಲ್ಯಾಂಡ್ ಆಗಿವೆ.


ಯುಎಸ್ ಕರೆನ್ಸಿ ಮಾನಿಟರಿಂಗ್ ಲಿಸ್ಟ್ ಎಂದರೇನು?


ಭಾರತವನ್ನು ಒಳಗೊಂಡಿರುವ ತನ್ನ ಪ್ರಮುಖ ವ್ಯಾಪಾರ ಪಾಲುದಾರರ ನಗದು ರೀತಿ ನೀತಿಗಳು ಮತ್ತು ಆರ್ಥಿಕ ಯೋಜನೆಗಳನ್ನು ಪತ್ತೆಹಚ್ಚಲು ಯುಎಸ್ ತನ್ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯನ್ನು ಸ್ಥಾಪಿಸಿದೆ. ಯಾವುದಾದರೂ ದೇಶವನ್ನು ಪಟ್ಟಿಗೆ ಸೇರಿಸಿದೆ ಎಂದರೆ ಸಮರ್ಥನೀಯ ನಗದು ಕುಶಲ ನಿರ್ವಹಣೆಗಾಗಿ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರ್ಥವಾಗಿದೆ.


ಜಿಂದಾಲ್ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಹ್ಯುಮಾನಿಟೀಸ್‌ನ ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ದೀಪಾಂಶು ಮೋಹನ್ ಹೇಳುವಂತೆ ಯುಎಸ್ ಡಾಲರ್ ಅನ್ನು ಅತಿಯಾಗಿ ಯಾವ ದೇಶ ಖರೀದಿಸುತ್ತಿದೆಯೋ ಆ ದೇಶಗಳ ಅಥವಾ ಯುಎಸ್‌ನೊಂದಿಗೆ ವ್ಯಾಪಾರದ ಹೆಚ್ಚುವರಿ ಪಾಲನ್ನು ಹೊಂದಿದ ದೇಶದ ನಿರ್ದಿಷ್ಟ ಕರೆನ್ಸಿಯನ್ನು ಯುಎಸ್ ಮೇಲ್ವಿಚಾರಣೆ ಮಾಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.


ಮೂರು ಮಾನದಂಡಗಳಾವುವು?


ಯುಎಸ್‌ನೊಂದಿಗೆ ಗಮನಾರ್ಹ ದ್ವಿಪಕ್ಷೀಯ ವ್ಯಾಪಾರ ಹೆಚ್ಚುವರಿ: ಇದರರ್ಥ ಸರಕು ಮತ್ತು ಸೇವೆಗಳಲ್ಲಿ ಕನಿಷ್ಠ $15 ಶತಕೋಟಿ ಹೆಚ್ಚುವರಿ ವ್ಯಾಪಾರ.ವಸ್ತು ಚಾಲ್ತಿ ಖಾತೆಯ ಹೆಚ್ಚುವರಿ: ಅಂತಹ ಹೆಚ್ಚುವರಿಯು GDP ಯ ಕನಿಷ್ಠ 3% ದಷ್ಟು ಇರಬೇಕು ಅಥವಾ ಗ್ಲೋಬಲ್ ಎಕ್ಸ್‌ಚೇಂಜ್ ರೇಟ್ ಅಸೆಸ್‌ಮೆಂಟ್ ಫ್ರೇಮ್‌ವರ್ಕ್ (GERAF) ಪ್ರಕಾರ ವಸ್ತು ಚಾಲ್ತಿ ಖಾತೆಯ ನಡುವೆ ಅಂತರವಿದೆ ಎಂದು ಖಜಾನೆಯು ಅಂದಾಜು ಮಾಡುತ್ತದೆ.


ಇದನ್ನೂ ಓದಿ: ಪಾರ್ಟಿ ಮಾಡೋಕೆ ಬಾಹ್ಯಾಕಾಶಕ್ಕೆ ಹೋಗ್ತಿದ್ದಾರಂತೆ ಜೆಫ್ ಗೆಳತಿ ಲಾರೆನ್! ದುಡ್ಡಿಗೆ ಬೆಲೆನೇ ಇಲ್ವಾ ಎಂದ ನೆಟ್ಟಿಗರು!


ನಿರಂತರವಾದ, ಏಕಪಕ್ಷೀಯ ಹಸ್ತಕ್ಷೇಪ: ವಿದೇಶಿ ಕರೆನ್ಸಿಯ ನಿವ್ವಳ ಖರೀದಿಗಳನ್ನು 12 ತಿಂಗಳುಗಳಲ್ಲಿ ಕನಿಷ್ಠ ಎಂಟು ಅವಧಿಯಲ್ಲಿ ಪುನರಾವರ್ತಿತವಾಗಿ ನಡೆಸಿದಾಗ ಏಕಪಕ್ಷೀಯ ಹಸ್ತಕ್ಷೇಪ ಸಂಭವಿಸುತ್ತದೆ ಮತ್ತು ಈ ನಿವ್ವಳ ಖರೀದಿಗಳು 12-ತಿಂಗಳ ಅವಧಿಯಲ್ಲಿ ಆರ್ಥಿಕತೆಯ GDP ಯ ಕನಿಷ್ಠ 2% ಕ್ಕೆ ಸಮನಾಗಿರುತ್ತದೆ ಎಂದು ವಿವರಿಸಲಾಗಿದೆ.ಇದಲ್ಲದೆ ಕರೆನ್ಸಿ ಬೆಳವಣಿಗೆ, ವಿನಿಮಯ ದರ ನೀತಿಗಳು, ವಿದೇಶಿ ವಿನಿಮಯ ಮೀಸಲು ವ್ಯಾಪ್ತಿ, ಬಂಡವಾಳ ನಿಯಂತ್ರಣ ಹಾಗೂ ಆರ್ಥಿಕ ನೀತಿಯನ್ನು ಪರಿಗಣಿಸುತ್ತದೆ.


ಕರೆನ್ಸಿ ಮೇಲ್ವಿಚಾರಣೆಯ ಉದ್ದೇಶವೇನು?


ಮೇಲ್ವಿಚಾರಣೆಯ ಕುರಿತು ಹಿರಿಯ ಹಣಕಾಸು ಪತ್ರಕರ್ತ ಎನ್ ಮಾಧವನ್ ತಿಳಿಸಿರುವಂತೆ ಯುಎಸ್ ಆರ್ಥಿಕ ಕೊರತೆಯನ್ನೆದುರಿಸುತ್ತಿದ್ದಾಗ ಅಮೆರಿಕಾದ ಸರಕುಗಳನ್ನು ಕೃತಕವಾಗಿ ದುಬಾರಿ ಮಾಡುವ ಯಾವುದೇ ಕರೆನ್ಸಿ ಕೃತ್ರಿಮಗೊಳಿಸುವಿಕೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರು ಎಚ್ಚರವಹಿಸುತ್ತಾರೆ ಎಂದು ತಿಳಿಸಿದ್ದಾರೆ.


ಒಮ್ಮೆ ಪಟ್ಟಿಯಲ್ಲಿ ಸೇರಿಸಿದ ನಂತರ, ಒಂದು ದೇಶವು ಕನಿಷ್ಠ ಎರಡು ಸತತ ವರದಿಗಳಿಗಾಗಿ ಪಟ್ಟಿಯಲ್ಲಿ ಉಳಿಯುತ್ತದೆ ಕಾರ್ಯನಿರ್ವಹಣೆಯಲ್ಲಿನ ಯಾವುದೇ ಸುಧಾರಣೆ ಮಾನದಂಡಗಳ ವಿರುದ್ಧ ಬಾಳಿಕೆ ಬರುವಂತೆ ಮತ್ತು ತಾತ್ಕಾಲಿಕ ಅಂಶಗಳಿಂದಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮಾಧವನ್ ತಿಳಿಸಿದ್ದಾರೆ.


ಪ್ರಸ್ತುತ ಪಟ್ಟಿಯಲ್ಲಿ ಯಾವ ದೇಶಗಳಿವೆ?


ವರದಿಯ ಪ್ರಕಾರ, ಪ್ರಸ್ತುತ ಪಟ್ಟಿಯಲ್ಲಿರುವ ದೇಶಗಳು (ಅಥವಾ ಪ್ರದೇಶಗಳು) ಚೀನಾ, ಉತ್ತರ ಕೊರಿಯಾ, ಜರ್ಮನಿ, ಸಿಂಗಾಪುರ್, ಮಲೇಷ್ಯಾ ಮತ್ತು ತೈವಾನ್ ಸೇರಿವೆ.


ಭಾರತವನ್ನು ಪಟ್ಟಿಯಿಂದ ಏಕೆ ತೆಗೆದುಹಾಕಲಾಗಿದೆ?


ಸತತ ಎರಡು ವರದಿಗಳಿಗಾಗಿ ಮೂರು ಮಾನದಂಡಗಳಲ್ಲಿ ಒಂದನ್ನು ಮಾತ್ರ ಪೂರೈಸಿದ ಕಾರಣ ಸುಮಾರು ಎರಡು ವರ್ಷಗಳಿಂದ ಪಟ್ಟಿಯಲ್ಲಿರುವ ಭಾರತವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ವರದಿಯಲ್ಲಿ, ಮಾನಿಟರಿಂಗ್ ಪಟ್ಟಿಯು ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ್ ಮತ್ತು ತೈವಾನ್ ಅನ್ನು ಒಳಗೊಂಡಿದೆ. ಯುಎಸ್ ಖಜಾನೆ ವರದಿಯು ಭಾರತವು ಯಾವ ಮಾನದಂಡಗಳನ್ನು ಪೂರೈಸಿದೆ ಎಂದು ನಿರ್ದಿಷ್ಟವಾಗಿ ತಿಳಿಸದೇ ಇದ್ದರೂ ಸಂಬಂಧಿತ ಕ್ಷೇತ್ರಗಳಲ್ಲಿ ನವದೆಹಲಿಯ ಸಾಧನೆಯನ್ನು ಉಲ್ಲೇಖಿಸಿದೆ ಎಂಬುದು ತಿಳಿದುಬಂದಿದೆ.


ಜೂನ್ ಅಂತ್ಯದ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು 526.5 ಶತಕೋಟಿ ಡಾಲರ್‌ಗಳಷ್ಟಿದೆ, ಇದು ಒಟ್ಟು ದೇಶೀಯ ಉತ್ಪನ್ನದ 16% ದಷ್ಟಿದೆ ಎಂದು ವರದಿ ಹೇಳಿದೆ.


ವರದಿಯಲ್ಲಿರುವ ಇತರ ದೇಶಗಳಂತೆ ಭಾರತ ಕೂಡ ಹೆಚ್ಚು ಪ್ರಮಾಣಿತ ಸಮರ್ಪಕ ಮಾನದಂಡಗಳ ಆಧಾರದ ಮೇಲೆ ವಿದೇಶಿ ಕರೆನ್ಸಿ ಮೀಸಲು ಕಾಯ್ದುಕೊಳ್ಳುವಿಕೆಯನ್ನು ಮುಂದುವರಿಸಿದೆ ಎಂದು ತಿಳಿಸಿದ್ದು ಯುಎಸ್‌ನೊಂದಿಗೆ $48 ಶತಕೋಟಿ ಹೆಚ್ಚುವರಿ ವ್ಯಾಪಾರ ಹೊಂದಿದೆ. ಭಾರತ ಆರ್ಥಿಕ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿದೆ ಎಂದು ವರದಿ ಹೇಳಿದೆ..


ನಿಕಟ ಮೇಲ್ವಿಚಾರಣೆಯ ಅಗತ್ಯವಿಲ್ಲ


ಭಾರತೀಯ ರಿಸರ್ವ್ ಬ್ಯಾಂಕ್ ಗಮನಿಸಿರುವಂತೆ ಭಾರತೀಯ ಕರೆನ್ಸಿಯ ನಿರ್ವಹಣೆಯು ನಿಕಟ ಮೇಲ್ವಿಚಾರಣೆಯ ಅಗತ್ಯವಿರುವ ಯಾವುದೇ ಮಧ್ಯಸ್ಥಿಕೆಗಳಿಗೆ ಅರ್ಹವಾಗಿಲ್ಲ ಎಂದು ಯುಎಸ್ ಗಮನಿಸಿರಬಹುದು ಎಂದು ಮೋಹನ್ ತಿಳಿಸಿದ್ದಾರೆ.


ಚೀನಾವನ್ನು ದೂಷಿಸಿದ ಯುಎಸ್ ಖಜಾನೆ


ಯುಎಸ್ ಖಜಾನೆಯು ಚೀನಾವನ್ನು ದೂಷಿಸಿತು ಮತ್ತು ಬೀಜಿಂಗ್‌ನ ವಿದೇಶಿ ವಿನಿಮಯ ಮಧ್ಯಸ್ಥಿಕೆಯನ್ನು ಪ್ರಕಟಿಸಲು ಮತ್ತು ಅದರ ವಿನಿಮಯ ದರಕ್ಕೆ ಸಂಬಂಧಿಸಿದಂತೆ ದೇಶದ ಪಾರದರ್ಶಕತೆಯ ಕೊರತೆಯನ್ನು ಹೈಲೈಟ್ ಮಾಡಿದೆ - ಹೀಗಾಗಿ ಇದು ಪ್ರಮುಖ ಆರ್ಥಿಕತೆಗಳಲ್ಲಿ ಹೊರಗಿದೆ ಮತ್ತು ನಿಕಟ ಮೇಲ್ವಿಚಾರಣೆಗೆ ಒಳಪಟ್ಟಿದೆ. ಈ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯಗಳನ್ನು ಒತ್ತಿ ಹೇಳಿದ ಮಾಧವನ್,


ಭಾರತವು ಚೀನಾದಂತಹ ವಿದೇಶಿ ವಿನಿಮಯ ದರಗಳನ್ನು ನಿಯಂತ್ರಿಸುವುದಿಲ್ಲ ಅಥವಾ ಕುಶಲತೆಯಿಂದ ನಿರ್ವಹಿಸುವುದಿಲ್ಲ. ರೂಪಾಯಿ ತನ್ನ ಮಟ್ಟವನ್ನು ಕಂಡುಕೊಳ್ಳಲು ಸಹಾಯ ಮಾಡುವ ಕ್ರಮಬದ್ಧವಾದ ಪರಿವರ್ತನೆಯಲ್ಲಿ ದೇಶವು ನಂಬಿಕೆ ಇಟ್ಟಿದೆ. ಈ ಪ್ರಕ್ರಿಯೆಯನ್ನು ನಡೆಸಿದಾಗ, ವಿಶೇಷವಾಗಿ ರೂಪಾಯಿಯನ್ನು ಚುರುಕಾಗಿಸಲು ಡಾಲರ್‌ಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಆರ್‌ಬಿಐ ಮಧ್ಯಪ್ರವೇಶಿಸುತ್ತದೆ ಎಂದು ಮಾಧವನ್ ತಿಳಿಸಿದ್ದಾರೆ.


ಪಟ್ಟಿಯಲ್ಲಿ ಭಾರತವನ್ನು ಏಕೆ ಮೊದಲ ಸ್ಥಾನದಲ್ಲಿರಿಸಲಾಗಿದೆ?


ಪಟ್ಟಿಯಲ್ಲಿ ಭಾರತವನ್ನು ಏಕೆ ಮೊದಲ ಸ್ಥಾನದಲ್ಲಿ ಇರಿಸಲಾಯಿತು ಎಂಬುದನ್ನು ವಿವರಿಸಿದ ಮಾಧವನ್, ಕರೆನ್ಸಿಯನ್ನು ಬಲವಾಗಿಡಲು ಚೀನಾದಂತೆ ಭಾರತ ಸರಕಾರದಿಂದ ಯಾವುದೇ ಕೃತಕ ಪ್ರಯತ್ನ ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯುಎಸ್ ಕೂಡ ಭಾರತವನ್ನು ಮಾನಿಟರಿಂಗ್ ಪಟ್ಟಿಯಲ್ಲಿ ಸೇರಿಸಿರಬಹುದು ಎಂಬುದಾಗಿ ಮಾಧವನ್ ಪ್ರತಿಕ್ರಿಯಿಸಿದ್ದಾರೆ. ಅದಾಗ್ಯೂ ಭಾರತವು ಯಾವುದೇ ನಗದು ಕುಶಲತೆಯ ಪ್ರಯತ್ನಗಳನ್ನು ನಡೆಸಿರುವುದು ವರದಿಯಾಗದೇ ಇರುವುದರಿಂದ ಯುಎಸ್ ದೇಶವನ್ನು ಪಟ್ಟಿಯಿಂದ ಹೊರಗಿಟ್ಟಿದೆ ಎಂದು ನುಡಿದಿದ್ದಾರೆ.


ಜೂನ್ 2022 ರವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ US ನ ಸರಕು ಮತ್ತು ಸೇವೆಗಳಲ್ಲಿನ ಸರಿಸುಮಾರು 80% ರಷ್ಟು ಅಂತರರಾಷ್ಟ್ರೀಯ ವಾಣಿಜ್ಯವನ್ನು ಈ ವರದಿಗಾಗಿ ಖಜಾನೆಯು ಪರಿಶೀಲಿಸಿದೆ ಮತ್ತು ಮೌಲ್ಯಮಾಪನ ಮಾಡಿದೆ.


ಇದನ್ನೂ ಓದಿ: ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ಸವಾಲನ್ನು ಹೇಗೆ ಎದುರಿಸುತ್ತೆ WHO? ಸಿದ್ಧತೆ ಆರಂಭ!


ವಿಭಿನ್ನ ನೀತಿಗಳ ಅನುಸರಣೆ


ಜಾಗತಿಕ ಆರ್ಥಿಕತೆಯು ಈಗಾಗಲೇ COVID-19 ನಿಂದ ಉಂಟಾದ ಪೂರೈಕೆ ಮತ್ತು ಬೇಡಿಕೆಯ ಅಸಮತೋಲನವನ್ನು ನಿರ್ವಹಿಸುತ್ತಿದ್ದು, ಉಕ್ರೇನ್ ವಿರುದ್ಧದ ರಷ್ಯಾದ ಅಕ್ರಮ ಯುದ್ಧಕ್ಕೆ ಮುಂಚಿತವಾಗಿ ಕಾರ್ಯರೂಪಕ್ಕೆ ತಂದಿದೆ. ಈ ಪರಿಣಾಮವಾಗಿ ಆಹಾರ, ರಸಗೊಬ್ಬರ ಮತ್ತು ಇಂಧನ ಬೆಲೆಗಳು ಏರಿಕೆಯಾಗಿವೆ ಎಂದು ಖಜಾನೆ ಕಾರ್ಯದರ್ಶಿ ಯೆಲೆನ್ ತಿಳಿಸಿದ್ದಾರೆ.


ವಿಭಿನ್ನ ಒತ್ತಡಗಳನ್ನು ಎದುರಿಸುತ್ತಿರುವ ಪ್ರಮುಖ ಆರ್ಥಿಕತೆಗಳು ಅದಕ್ಕೆ ಅನುಗುಣವಾಗಿ ವಿಭಿನ್ನ ನೀತಿಗಳನ್ನು ಅನುಸರಿಸಬಹುದು, ಇದು ಕರೆನ್ಸಿ ಚಲನೆಗಳಲ್ಲಿ ಪ್ರತಿಫಲಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಉದಯೋನ್ಮುಖ ಆರ್ಥಿಕತೆಗಳ ಮೂಲಕ ಹಲವಾರು ವಿಧಾನಗಳು ಕೆಲವು ಸಂದರ್ಭಗಳಲ್ಲಿ ಕಾರ್ಯರೂಪಕ್ಕೆ ಬರುತ್ತವೆ ಎಂದು ಅವರು ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: