Hardik Pandya: ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೂ ಇವರೇ ಬೇಕಂತೆ! ಆಟಕಷ್ಟೇ ಅಲ್ಲ, ಅಲ್ಲೂ ಕೂಡ ಈ ಆಟಗಾರನಿಗೆ ಡಿಮ್ಯಾಂಡ್​

ಇವರ ತೂಕ್ಕಕ್ಕೂ, ಇವರು ಹೊಡೆಯುವ ಏಟಿಗೆ ಸಂಬಂಧಾನೂ ಇಲ್ಲ. ಇದೀಗ ಅವರ ಬ್ರ್ಯಾಂಡ್​ನ ಜನಪ್ರಿಯತೆ (Popularity of the Brand) ಕೂಡ ಹೆಚ್ಚುತ್ತಿದೆ. ಪ್ರಸ್ತುತ ಅವರು 15 ಬ್ರಾಂಡ್‌ಗಳ ಪ್ರವರ್ತಕರಾಗಿದ್ದಾರೆ.

ಹಾರ್ದಿಕ್​ ಪಾಂಡ್ಯ

ಹಾರ್ದಿಕ್​ ಪಾಂಡ್ಯ

  • Share this:
ಟೀಂ ಇಂಡಿಯಾ (Team India) ದ ಸೂಪರ್​ ಸ್ಟಾರ್​  (Super Star)ಈ ಆಟಗಾರ. ಅದೆಷ್ಟೋ ಪಂದ್ಯಗಳನ್ನು ತಾನೊಬ್ಬನೇ ನಿಂತು ಹೊಡೆದಾಡಿ ಗೆಲುವಿನತ್ತ ಕೊಂಡೊಯ್ದ ಆಟಗಾರ ಇವರು. ಅವರೇ ಹಾರ್ದಿಕ್​ ಪಾಂಡ್ಯ (Hardik Pandya) . ಸದ್ಯ ವಿಶ್ವದಾದ್ಯಂತ ಟ್ರೆಂಡಿಂಗ್​ನಲ್ಲಿರರುವ ಆಟಗಾರ. ಟೀಂ ಇಂಡಿಯಾ ಇತಿಹಾಸದಲ್ಲೇ ಹಾರ್ದಿಕ್​ ಪಾಂಡ್ಯ ಸ್ಟೈಲಿಶ್​ ಪ್ಲೇಯರ್ (Stylish Player)​ ಅಂದರೆ ತಪ್ಪಾಗಲ್ಲ. ನೋಡೋಕೆ ತುಂಬಾ ತೆಳ್ಳಗಿದ್ದರು, ಇವರು ಬಾರಿಸೋ ಪ್ರತಿಯೊಂದು ಶಾಟ್​ ಕೂಡ ಸಿಕ್ಸರ್ (Sixer) ​. ಇವರ ತೂಕ್ಕಕ್ಕೂ, ಇವರು ಹೊಡೆಯುವ ಏಟಿಗೆ ಸಂಬಂಧಾನೂ ಇಲ್ಲ. ಇದೀಗ ಅವರ ಬ್ರ್ಯಾಂಡ್​ನ ಜನಪ್ರಿಯತೆ (Popularity of the Brand) ಕೂಡ ಹೆಚ್ಚುತ್ತಿದೆ. ಪ್ರಸ್ತುತ ಅವರು 15 ಬ್ರಾಂಡ್‌ಗಳ ಪ್ರವರ್ತಕರಾಗಿದ್ದಾರೆ. ಸಿನ್ ಡೆನಿಮ್ (Sin Denim) , ಬೋಟ್ (BOAT) , ಗಲ್ಫ್ ಆಯಿಲ್ ಇಂಡಿಯಾ (Gulf Oil India) , ಮಾನ್ಸ್ಟರ್ ಎನರ್ಜಿ (Monster Energy) , ಟ್ಯಾಕೋ ಬೆಲ್ (Taco Bell) , ಎಮ್ಎಕ್ಸ್ ಟಕಾಟಕ್ (MX Takatak) , ಒಪ್ಪೋ ಮೊಬೈಲ್‌ಗಳು (Oppo Mobiles) , ಬ್ರಿಟಾನಿಯಾ (Britannia) ವಿವಿಧ ಬ್ರಾಂಡ್‌ಗಳ ರಾಯಭಾರಿಯಾಗಿದೆ.

ಹೆಚ್ಚಿದ ಹಾರ್ದಿಕ್​ ಪಾಂಡ್ಯ ಬ್ರ್ಯಾಂಡ್​ ಮೌಲ್ಯ!

ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ವಿಲನ್ ಬ್ರಾಂಡ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದರು. ಇದು ಜೀವನಶೈಲಿ ಬ್ರಾಂಡ್ ಆಗಿದೆ. ಅವರು ಇತರ ಐದು ಬ್ರಾಂಡ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದೂ ಏಷ್ಯಾ ಕಪ್​ ಮುಗಿದ ಮೇಲಂತೂ ಇವರ ಖ್ಯಾತಿ ಮತ್ತಷ್ಟು ಏರಿಕೆಯಾಗುತ್ತಿದೆ. ಯಾಕೆ ಎಲ್ಲ ಬ್ರ್ಯಾಂಡ್​ಗಳು ಹಾರ್ದಿಕ್​ ಪಾಂಡ್ಯ ಅವರೇ ಬೇಕು ಅಂತಿದ್ದಾರೆ ಗೊತ್ತಾ? ನಾವು ಹೇಳುತ್ತೇವೆ ನೋಡಿ.

ಸೋಷಿಯಲ್​ ಮೀಡಿಯಾ ಕಿಂಗ್​ ಹಾರ್ದಿಕ್ ಪಾಂಡ್ಯ!

ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಇದೇ ಬ್ರ್ಯಾಂಡ್​ಗಳಿಗೆ ಬೇಕಿರುವುದು. ಹಾರ್ದಿಕ್​ ಪಾಂಡ್ಯ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಟ್ಟು 41 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್ ಒಂದರಲ್ಲೇ 22 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವುದು ಗಮನಾರ್ಹ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ಭಾರತೀಯ ಕ್ರಿಕೆಟಿಗ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ: ವರುಣನ ಮುನಿಸು : ಭಾರತ ಎ , ನ್ಯೂಜಿಲೆಂಡ್ ಎ ಮ್ಯಾಚ್ ಡ್ರಾ ನಲ್ಲಿ ಅಂತ್ಯ

ಹಾರ್ದಿಕ್ ಪಾಂಡ್ಯ ಇಮೇಜ್​ ಗ್ರಾಫ್​ ಕೂಡ ಹೆಚ್ಚಿದೆ!

ಇದಲ್ಲದೆ, ಹಾರ್ದಿಕ್​ ಪಾಂಡ್ಯ ಇಮೇಜ್ ಗ್ರಾಫ್ ಕೂಡ ಸಾಕಷ್ಟು ಹೆಚ್ಚಾಗಿದೆ. ಅಬ್ಬರದ ಯುವ ಕ್ರಿಕೆಟಿಗನಿಂದ ಈಗ ಕುಟುಂಬದ ವ್ಯಕ್ತಿಗೆ ಅವರ ಪರಿವರ್ತನೆಯು ಬ್ರ್ಯಾಂಡ್‌ಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಮೇಲಾಗಿ ಗುಜರಾತ್ ಅವರು ಟೈಟಾನ್ಸ್ ತಂಡವನ್ನು ಮುನ್ನಡೆಸಿದ ರೀತಿ ಅವರನ್ನು ವಿಶ್ವಾಸಾರ್ಹ ನಾಯಕನನ್ನಾಗಿ ಮಾಡಿತು. ಹಾರ್ದಿಕ್ ಪಾಂಡ್ಯ ಕೂಡ ಬಲಿಷ್ಠ ಪುನರಾಗಮನ ನೀಡುವಲ್ಲಿ ತಮ್ಮ ಛಾಪು ತೋರಿಸಿದರು. ಅವರು ಜನಪ್ರಿಯತೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಹಸರಂಗ ದಾಳಿಗೆ ತತ್ತರಿಸಿದ ಪಾಕ್​, 6ನೇ ಬಾರಿ ಏಷ್ಯಾ ಕಪ್‌ ಗೆದ್ದ ಶ್ರೀಲಂಕಾ!

ಪ್ರಸ್ತುತ, ಒಂದು ಜಾಹೀರಾತಿಗೆ ಹಾರ್ದಿಕ್ ಪಾಂಡ್ಯ ಸುಮಾರು  1.5 ಕೋಟಿಯಿಂದ 2 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರಂತೆ ತೆಗೆದುಕೊಳ್ಳುತ್ತಿದ್ದಾರಂತೆ. ಆದರೆ ಬ್ರ್ಯಾಂಡ್ ಮೌಲ್ಯದಲ್ಲಿ ವಿರಾಟ್ ಕೊಹ್ಲಿಗಿಂತ ಮಿಗಿಲಾದವರು ಯಾರೂ ಇಲ್ಲ. ವಿರಾಟ್ ಕೊಹ್ಲಿಯಿಂದ ರನ್​ ಬರದೇ ಇದ್ದರೂ ಅವರ ಬ್ರ್ಯಾಂಡ್ ಮೌಲ್ಯ ಮಾತ್ರ ಯಾವತ್ತೂ ಕಡಿಮೆ ಆಗಿಲ್ಲ. ಕಿಂಗ್​ ಈಸ್ ಆಲ್​ವೇಸ್​ ಕಿಂಗ್​ ಅನ್ನುವ ಹಾಗೇ ಈ ಬ್ರ್ಯಾಂಡ್​​  ಮೌಲ್ಯದಲ್ಲಿ ಅವರೇ ಕಿಂಗ್​​.
Published by:ವಾಸುದೇವ್ ಎಂ
First published: