American Green Card ಪಡೆಯಲು ಭಾರತೀಯರು ಇನ್ನೂ ಕಾಯುತ್ತಿರುವುದೇಕೆ? ಕಾರಣ ಬಿಚ್ಚಿಟ್ಟ US‌ ಅಧಿಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಶಕದ ಹಿಂದೆ ಖಾಯಂ ನಿವಾಸಿ ಪತ್ರ ಪಡೆಯಲು ಅರ್ಜಿ ಹಾಕಿದವರು ಈಗಲೂ ಸಹ ಕಾಯುತ್ತಿರುವ ಉದಾಹರಣೆಗಳಿವೆ. ಅದರಲ್ಲೂ ಭಾರತ ಈ ಪ್ರಕ್ರಿಯೆಯಲ್ಲಿ ಸುದೀರ್ಘವಾಗಿ ಕಾಯುವಂತಹ ಒಂದು ದೇಶವಾಗಿದೆ.

  • Share this:

ಗ್ರೀನ್ ಕಾರ್ಡ್ (Green Card) ಅಥವಾ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ (Permanent Resident Card) ಎಂದು ಕರೆಯಲಾಗುವ ಶಾಶ್ವತವಾಗಿ ಅಮೆರಿಕಾದಲ್ಲಿ ವಾಸಿಸಲು ಅನುಮತಿಸುವ ಒಂದು ಕಾರ್ಡ್ ದೊರೆಯುವುದು ಸದ್ಯಕ್ಕೆ ಭಾರತ ಸೇರಿ ಹಲವು ದೇಶಗಳಿಗೆ ಜಠಿಲವಾದ ಒಂದು ಸಮಸ್ಯೆಯಾಗಿದೆ. ಕೆಲವು ನಿಯಮಗಳಿಂದಾಗಿ ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನ ಜನರು ಗ್ರೀನ್ ಕಾರ್ಡ್‌ಗಾಗಿ ಹಲವು ವರ್ಷಗಳಿಂದ ಕಾಯುವಂತಾಗಿದೆ.


ಗ್ರೀನ್‌ ಕಾರ್ಡ್‌ಗೆ ಕಾದು ಕುಳಿತಿರುವ ನಾಗರೀಕರು


ದಶಕದ ಹಿಂದೆ ಖಾಯಂ ನಿವಾಸಿ ಪತ್ರ ಪಡೆಯಲು ಅರ್ಜಿ ಹಾಕಿದವರು ಈಗಲೂ ಸಹ ಕಾಯುತ್ತಿರುವ ಉದಾಹರಣೆಗಳಿವೆ. ಅದರಲ್ಲೂ ಭಾರತ ಈ ಪ್ರಕ್ರಿಯೆಯಲ್ಲಿ ಸುದೀರ್ಘವಾಗಿ ಕಾಯುವಂತಹ ಒಂದು ದೇಶವಾಗಿದೆ.


ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರಿಗೆ ಏಕಿಷ್ಟು ವಿಳಂಬ ಎಂಬ ಬಗ್ಗೆ ಹಲವರು ಚರ್ಚಿಸುತ್ತಿದ್ದಾರೆ. ಇದರ ಹಿಂದಿನ ಕಗ್ಗಂಟನ್ನು ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವೆ (USCIS) ನಿರ್ದೇಶಕರಿಗೆ ಹಿರಿಯ ಸಲಹೆಗಾರರಾದ ಡೌಗ್ಲಸ್ ರಾಂಡ್ ಬಹಿರಂಗಪಡಿಸಿದ್ದಾರೆ.


ಗ್ರೀನ್‌ ಕಾರ್ಡ್‌ ಸೌಲಭ್ಯ; ಮಿತಿಯೇ ವಿಳಂಬಕ್ಕೆ ಕಾರಣ


ಈ ದೇಶಗಳು ಗ್ರೀನ್ ಕಾರ್ಡ್‌ಗೆ ಕಾಯಲು ಪ್ರಮುಖ ಕಾರಣವೇನೆಂದರೆ ಪ್ರತಿ ದೇಶಕ್ಕೆ ಅದರ ಹಂಚಿಕೆಯಲ್ಲಿ ನಿಗದಿಪಡಿಸಿದ ಕೋಟಾ ವ್ಯವಸ್ಥೆ. ಗ್ರೀನ್ ಕಾರ್ಡ್ ಪಡೆಯಲು ಪ್ರತಿಯೊಂದು ದೇಶಕ್ಕೂ ಇರುವ ಮಿತಿಯೇ ಈ ವಿಳಂಬಕ್ಕೆ ಕಾರಣವಾಗಿದೆ. ಈ ಮಿತಿಯನ್ನು ಅಮೆರಿಕದ ಸಂಸತ್ತಿನಲ್ಲಿ ಕಾನೂನು ತಿದ್ದುಪಡಿ ಮಾಡುವ ಮೂಲಕ ಮಾತ್ರ ಬದಲಾಯಿಸಲು ಸಾಧ್ಯ ಎಂಬುದನ್ನು ಅಧಿಕಾರಿ ತಿಳಿಸಿದ್ದಾರೆ.




ಗ್ರೀನ್‌ ಕಾರ್ಡ್‌ ಹಂಚಿಕೆ ಪ್ರಕ್ರಿಯೆ ಹೇಗಿದೆ?


ವಲಸೆ ಕಾನೂನಿನ ಅಡಿಯಲ್ಲಿ ಪ್ರತಿ ವರ್ಷ ಸುಮಾರು 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುತ್ತದೆಯಾದರೂ, ಪ್ರತಿ ವರ್ಷ ಕೆಲ ದೇಶಗಳು ಕೇವಲ ಏಳು ಪ್ರತಿಶತದಷ್ಟು ಗ್ರೀನ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು.


ಅಂದರೆ ಒಂದು ವರ್ಷದಲ್ಲಿ 3,36,000 ಮಂದಿಗೆ ಮಾತ್ರ ಗ್ರೀನ್ ಕಾರ್ಡ್ ನೀಡಬಹುದು. ಅದರಲ್ಲಿ ಕುಟುಂಬ ಕಾರಣಕ್ಕೆ ನೀಡಲಾಗುವ ಗ್ರೀನ್ ಕಾರ್ಡ್ ಮಿತಿ 2,26,000 ಆದರೆ, ಉದ್ಯೋಗ ಕಾರಣಕ್ಕೆ ಗ್ರೀನ್ ಕಾರ್ಡ್ ಮಿತಿ 1,40,000 ಇದೆ.


ಇದು ಒಟ್ಟಾರೆ ವಿಶ್ವದ ಎಲ್ಲಾ ದೇಶಗಳಿಗೂ ಸೇರಿಸಿ ಇಡಲಾಗಿರುವ ಮಿತಿ. ಇನ್ನು, ಈ ಒಟ್ಟಾರೆ ಗ್ರೀನ್ ಕಾರ್ಡ್ ಅವಕಾಶದಲ್ಲಿ ಪ್ರತಿಯೊಂದು ದೇಶಕ್ಕೂ ಶೇ. 7ರಷ್ಟು ಪಾಲು ಕೊಡಲಾಗಿದೆ. ಅಂದರೆ 3,36,000 ಗ್ರೀನ್ ಕಾರ್ಡ್​ನಲ್ಲಿ ಶೇ. 7 ಎಂದರೆ 25,620 ಗ್ರೀನ್ ಕಾರ್ಡ್​ಗಳನ್ನಷ್ಟೇ ಭಾರತೀಯರು ಒಂದು ವರ್ಷದಲ್ಲಿ ಪಡೆಯಲು ಸಾಧ್ಯವಿದೆ.


ಈ ಎಲ್ಲಾ ಅಂಕಿಅಂಶಗಳ ಅಧಾರದ ಮೇಲೆ, ಪ್ರತಿ ದೇಶದ ಮಿತಿಯನ್ನು ಒಟ್ಟು ವಾರ್ಷಿಕ ಕುಟುಂಬ-ಪ್ರಾಯೋಜಿತ ಮತ್ತು ಉದ್ಯೋಗ ಆಧಾರಿತ ಆದ್ಯತೆಯ ಮಿತಿಗಳಲ್ಲಿ ಏಳು ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ ಎಂದು ವೀಸಾ ಮತ್ತು ಕಾನ್ಸುಲರ್ ಸಮಸ್ಯೆಗಳ ಕುರಿತು ಸ್ಟೇಟ್ ಡಿಪಾರ್ಟ್ಮೆಂಟ್ ಆಯೋಜಿಸಿದ ವರ್ಚುವಲ್ ಟೌನ್ ಹಾಲ್‌ನಲ್ಲಿ ಭಾರತೀಯ ಅಮೆರಿಕನ್ನರಿಗೆ ತಿಳಿಸಿದರು.


ಹೀಗಾಗಿಯೇ ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನ ವ್ಯಕ್ತಿಗಳು ಸಾಮಾನ್ಯವಾಗಿ ಇತರ ದೇಶಗಳ ಜನರಿಗಿಂತ ಹೆಚ್ಚು ಕಾಯುವ ಸಮಯವನ್ನು ಎದುರಿಸುತ್ತಾರೆ ಎಂದು ರಾಂಡ್ ಪ್ರತಿಕ್ರಿಯಿಸಿದರು.


"ಪ್ರತಿ ವರ್ಷ ಕುಟುಂಬ ಮತ್ತು ಉದ್ಯೋಗ-ಆಧಾರಿತ ಎರಡಕ್ಕೂ 25,620 ಕ್ಕೂ ಹೆಚ್ಚು ಗ್ರೀನ್ ಕಾರ್ಡ್‌ಗಳಿಗೆ ಬೇಡಿಕೆಯಿದೆ. ದುರದೃಷ್ಟವಶಾತ್, ಯುಎಸ್‌ ಸಂಸತ್ತು ಮಾತ್ರ ಈ ವಾರ್ಷಿಕ ಮಿತಿಗಳನ್ನು ಬದಲಾಯಿಸಬಹುದು.


ಇದನ್ನೂ ಓದಿ: Note Exchange: 2000 ರೂಪಾಯಿ ನೋಟ್‌ ಎಕ್ಸ್‌ಚೇಂಜ್‌ಗೆ ದಾಖಲಾತಿ ಬೇಕಾ? ಮಹತ್ವದ ಮಾಹಿತಿ ಕೊಟ್ಟ ಎಸ್‌ಬಿಐ


ಆದ್ದರಿಂದ ನಮ್ಮ ಕೆಲಸವು ಈ ನಿರ್ಬಂಧಗಳ ಒಳಗೆ ಮಾಡುವುದಾಗಿದೆ. ಕಾರ್ಡ್ ಸಂಖ್ಯೆಗಳು ಲಭ್ಯವಿವೆ, ಅವುಗಳನ್ನು ಪ್ರತಿ ವರ್ಷವೂ ಬಳಸಲಾಗುತ್ತಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂದು ರಾಂಡ್ ಹೇಳಿದರು.


ನೂರಾರು ಸಾವಿರ ಭಾರತೀಯರು ಗ್ರೀನ್‌ ಕಾರ್ಡ್‌ಗೆ ಕಾಯುವಂತಾಗಿದೆ, ಕೆಲವರು ಅದೆಷ್ಟೋ ದಶಕಗಳವರೆಗೆ ಕಾದು ಕುಳಿತಿದ್ದಾರೆ ಎಂದು ಪರಿಸ್ಥಿತಿ ವಿವರಿಸಿದರು.


"ಇದು ಪೂರೈಕೆ ಮತ್ತು ಬೇಡಿಕೆಯ ವಿಚಾರವಾಗಿದೆ. ಯುಎಸ್‌ ಸಂಸತ್ತು ಪೂರೈಕೆಯನ್ನು ನಿರ್ಬಂಧಿಸಿದೆ ಆದರೆ ಅದರ ಜೊತೆಜೊತೆಯಲ್ಲಿಯೇ ಬೇಡಿಕೆ ಹೆಚ್ಚುತ್ತಲೇ ಇದೆ" ಎಂದು ರಾಂಡ್ ಹೇಳಿದರು.


ಏನಿದು ಗ್ರೀನ್‌ ಕಾರ್ಡ್?


ಅಮೆರಿಕದ ಶಾಶ್ವತ ನಿವಾಸಿ ಎಂಬುದಕ್ಕೆ ಪುರಾವೆ. ಅಮೆರಿಕದ ಪೌರತ್ವ ಪಡೆವ ಮೊದಲೇ ಇರುವ ಒಂದು ವಲಸೆ ಪ್ರಕ್ರಿಯೆ. ಗ್ರೀನ್‌ಕಾರ್ಡ್‌ ಅಮೆರಿಕದಲ್ಲಿ ಕಾನೂನು ಬದ್ಧ ಶಾಶ್ವತ ನಿವಾಸಿಯಾಗಿದ್ದಾನೆ (ಎಲ್‌ಪಿಆರ್‌) ಎಂಬುದನ್ನು ತೋರಿಸುತ್ತದೆ. ಗ್ರೀನ್‌ಕಾರ್ಡ್‌ ಹೊಂದುವುದರಿಂದ ವಲಸೆ ಕುರಿತ ಹಲವು ಲಾಭಗಳನ್ನು ಪಡೆಯಬಹುದು.

top videos
    First published: