Car Sales: ಈ ವರ್ಷ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತೇ?

ಮಾರುತಿ ಸುಜುಕಿಯ ಹೆಚ್ಚಿನ ಕಾರುಗಳು ಬೆಲೆಯು 10 ಲಕ್ಷ ರೂಪಾಯಿಗಳ ಬೆಲೆಯ ಒಳಗಿವೆ, ಆದ್ದರಿಂದ ಯಾರೇ ಹೊಸ ಕಾರನ್ನು ಕೊಂಡುಕೊಳ್ಳುವಾಗ ಅವರಿಗೆ ಪಾಕೆಟ್ ಸ್ನೇಹಿ ಆಯ್ಕೆ ಎಂದೆನಿಸುವುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿವಿಧ ಕಂಪನಿಗಳ ಕಾರುಗಳ ಬಗ್ಗೆ ಅಭಿರುಚಿ ಹೊಂದಿದವರಿಗೆ ವರ್ಷದ ಕೊನೆಯಲ್ಲಿ ಸಹಜವಾಗಿ ಈ ವರ್ಷ ಯಾವ ಯಾವ ಹೊಸ ಕಾರುಗಳನ್ನು ಪರಿಚಯಿಸಿದರು, ( Introduced) ಅವುಗಳ ಬೆಲೆ ಏನಾಗಿತ್ತು, ಅದರಲ್ಲಿರುವ ವಿಭಿನ್ನತೆಯ(Differentiation ) ಬಗ್ಗೆ ಮತ್ತು ಹೆಚ್ಚು ಕಾರು ಮಾರಾಟ ಮಾಡಿದವರು ಯಾರು ಎಂಬ ಪ್ರಶ್ನೆಗಳು ಕಾಡುವುದು ಸಹಜ.ಆದರೆ ಕಾರು ಮಾರುಕಟ್ಟೆಯಲ್ಲಿ ಯಾರನ್ನಾದರೂ ಈ ವರ್ಷ ಹೆಚ್ಚು ಕಾರುಗಳನ್ನು ಮಾರಾಟ (Car Sales )ಮಾಡಿದಂತಹ ಕಂಪನಿ ಯಾವುದು ಎಂದು ಪ್ರಶ್ನೆ ಕೇಳಿದರೆ ಅವರು ಮಾರುತಿ ಸುಜುಕಿ (Maruti Suzuki)ಎಂದು ಬಹು ಬೇಗನೆ ಉತ್ತರಿಸುತ್ತಾರೆ. ಈ ಕಂಪನಿಯು ದಶಕಗಳಿಂದ ಭಾರತದಲ್ಲಿ ಕಾರು ಮಾರಾಟದಲ್ಲಿ ಪ್ರಾಬಲ್ಯ ಹೊಂದಿದೆ ಮತ್ತು ಈ ಪ್ರಾಬಲ್ಯ ( Dominate) 2021ರಲ್ಲಿಯೂ ಸಹ ಹಾಗೆಯೇ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

ಅಗ್ರ 10 ಕಾರುಗಳ ಪಟ್ಟಿ
ವಾಸ್ತವವಾಗಿ, ನವೆಂಬರ್ 2021ರಲ್ಲಿ, ಅಗ್ರ 10 ಕಾರುಗಳ ಪಟ್ಟಿಯಲ್ಲಿ ಏಳು ಕಾರುಗಳು ಮಾರುತಿ ಸುಜುಕಿಗೆ ಸೇರಿದ್ದವು. ಇವುಗಳಲ್ಲಿ ವ್ಯಾಗನ್ ಆರ್, ಸ್ವಿಫ್ಟ್, ಇಕೊ, ಬಲೆನೊ, ಎರ್ಟಿಗಾ, ವಿಟಾರಾ ಬ್ರೆಜಾ ಮತ್ತು ಆಲ್ಟೊ ಸೇರಿವೆ. ಉಳಿದ ಮೂರು ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಟಾಟಾ ನೆಕ್ಸಾನ್ ಆಗಿವೆ ಎಂದು ಹೇಳಲಾಗುತ್ತಿದೆ. ಮಾರುತಿ ಸುಜುಕಿಯ ಹೆಚ್ಚಿನ ಕಾರುಗಳು ಬೆಲೆಯು 10 ಲಕ್ಷ ರೂಪಾಯಿಗಳ ಬೆಲೆಯ ಒಳಗಿವೆ, ಆದ್ದರಿಂದ ಯಾರೇ ಹೊಸ ಕಾರನ್ನು ಕೊಂಡುಕೊಳ್ಳುವಾಗ ಅವರಿಗೆ ಪಾಕೆಟ್ ಸ್ನೇಹಿ ಆಯ್ಕೆ ಎಂದೆನಿಸುವುದು ಮಾರುತಿ ಸುಜುಕಿ ಕಾರುಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Car: 2022ಕ್ಕೆ ಕಾರಿನ ಬೆಲೆ ಹೆಚ್ಚಾಗಲಿದೆ! ಕಡಿಮೆ ಬೆಲೆಗೆ ಖರೀದಿಸಲು ಇಲ್ಲಿದೆ ಉಪಾಯ

ಎಷ್ಟು ಮಾರಾಟ
ಆದರೆ, ಇಡೀ ವರ್ಷದ ಬಗ್ಗೆ ಏನು ಹೇಳುತ್ತೀರಿ ಅಂತೀರಾ? ಸರಿ, ಈ ಗೌರವವು ಮಾರುತಿ ಸುಜುಕಿ ವ್ಯಾಗನ್ ಆರ್ ಗೆ ಸೇರಿದ್ದು, ಏಕೆಂದರೆ ಜನವರಿಯಿಂದ ನವೆಂಬರ್ 2021ರವರೆಗೆ ಸುಮಾರು 1,64,123 ಯೂನಿಟ್ ಗಳು ಮಾರಾಟವಾಗಿವೆ. ವ್ಯಾಗನ್ ಆರ್ ಅನ್ನು 2019ರಲ್ಲಿ ನವೀಕರಿಸಿದಾಗ, ಅದು ಕೇವಲ ನೋಡಲು ಮಾತ್ರ ಬದಲಾವಣೆ ಮಾಡಿರಲಿಲ್ಲ, ಬದಲಾಗಿ ಇದು 1.0 ಲೀಟರ್ ಘಟಕದೊಂದಿಗೆ 1.2 ಲೀಟರ್, ನಾಲ್ಕು ಸಿಲಿಂಡರ್, ಕೆ-ಸೀರೀಸ್ ಎಂಜಿನ್ ಅನ್ನು ಸಹ ಹೊಂದಿತ್ತು. ಇದು ಎಎಂಟಿ ಆಯ್ಕೆ ಮತ್ತು ಸಿಎನ್‌ಜಿಯನ್ನು ಸಹ ಹೊಂದಿತ್ತು ಮತ್ತು ದೇಶದ ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಸಾಕಷ್ಟು ನೆಚ್ಚಿನದಾಗಿದೆ. ಕಾರಿನ ಒಳಭಾಗದಲ್ಲಿ ಹೆಚ್ಚು ಸ್ಥಳ ಹೊಂದಿತ್ತು.

ಹೊಸ ಸೆಲೆರಿಯೊ ಮಾತ್ರ ಬಿಡುಗಡೆ
ಆದರೂ, ಮಾರುತಿ ಸುಜುಕಿ ಎಲ್ಲದಕ್ಕಿಂತಲೂ ಒಂದು ಕೈ ಮೇಲೆ ಎಂಬಂತೆ ಇತ್ತು. ಅಷ್ಟೇ ಅಲ್ಲದೇ, ಕಾರ್ ದೆಖೋ ವರದಿಯ ಪ್ರಕಾರ ಸ್ವಿಫ್ಟ್ ಮತ್ತು ಬಲೆನೊ ಎರಡೂ ವರ್ಷದಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಾರಾಟ ಮಾಡಿದರು. ಒಟ್ಟಾರೆಯಾಗಿ, ಮಾರುತಿ ಸುಜುಕಿ ಕಳೆದ ವರ್ಷದಲ್ಲಿ ಹೊಚ್ಚ ಹೊಸ ಸೆಲೆರಿಯೊ ಹೊರತುಪಡಿಸಿ, ಯಾವುದೇ ಹೊಸ ಕಾರುಗಳನ್ನು ಬಿಡುಗಡೆ ಮಾಡಿಲ್ಲ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಹುಂಡೈ ಎಂದು ಹೇಳಬಹುದು. ಇದು ಕೂಡ 2021ರಲ್ಲಿ ಕೊರಿಯನ್ ಬ್ರ್ಯಾಂಡ್‌ನ ಅತ್ಯುತ್ತಮ ಮಾರಾಟದ ಉತ್ಪನ್ನವಾಗಿ ಕ್ರೆಟಾ ಹೊರ ಹೊಮ್ಮಿತು. ವಾಸ್ತವವಾಗಿ, ಕಳೆದ ವರ್ಷದಲ್ಲಿ 1.17 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗಿವೆ.

ಇದನ್ನೂ ಓದಿ: Budget Friendly Car: ಈ ವರ್ಷ ಭಾರತದಲ್ಲಿ ಬಿಡುಗಡೆಯಾದ ಟಾಪ್ ಕಾರುಗಳು ಇವುಗಳೇ ನೋಡಿ..!

ಈ ಪಟ್ಟಿ ಬದಲಾಗುವ ಸಾಧ್ಯತೆ
ಸೆಲ್ಟೋಸ್ ಕೂಡ ಒಳ್ಳೆಯ ಸಂಖ್ಯೆಯಲ್ಲಿ ಮಾರಾಟವಾಯಿತು ಮತ್ತು ದೇಶದಲ್ಲಿ ಅವರ ಅತ್ಯುತ್ತಮ ಮಾರಾಟದ ಉತ್ಪನ್ನವಾಗಿತ್ತು. ಟಾಟಾ ಮೋಟರ್ಸ್‌ಗೆ ನೆಕ್ಸಾನ್ ಎಸ್‌‌ಯುವಿ ಒಳ್ಳೆಯ ಮಾರಾಟವಾಗಿತ್ತು. ಕುಶಾಕ್ ಸ್ಕೋಡಾಗೆ ಹೆಚ್ಚು ಮಾರಾಟವಾದ ಉತ್ಪನ್ನವಾಗಿ ಪರಿಣಮಿಸಿತು. 2022ರಲ್ಲಿ ಈ ಪಟ್ಟಿ ಬದಲಾಗುವ ಸಾಧ್ಯತೆಯಿದೆ, ಬಹುಶಃ ಮಾರುತಿ ಸುಜುಕಿ ಮತ್ತು ಹುಂಡೈನಿಂದ ಹೊಸ ಕಾರುಗಳು ಹೊರ ಬಂದರೆ ಈ ಪಟ್ಟಿಯು ಬದಲಾಗುವ ಸಾಧ್ಯತೆಯಿದೆ. ಭಾರತದಲ್ಲಿ ಮಾರಾಟದ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಮಾರುತಿ ಸುಜುಕಿಯ ಆಳ್ವಿಕೆಯು ಬಲವಾದಂತೆ ತೋರುತ್ತದೆ.
Published by:vanithasanjevani vanithasanjevani
First published: