Cyrus Mistry: ಸೈರಸ್ ಮಿಸ್ತ್ರಿ ಭೀಕರ ಅಪಘಾತಕ್ಕೆ ಬಲಿ, ಟಾಟಾ ಗ್ರೂಪ್​ನಿಂದ ಉಚ್ಛಾಟನೆಗೊಂಡಿದ್ದ ಉದ್ಯಮಿ ಬಗ್ಗೆ ಒಂದಷ್ಟು ಮಾಹಿತಿ!

ಸೈರಸ್ ಮಿಸ್ತ್ರಿಯವರು ಅಹ್ಮದಾಬಾದ್‌ನಿಂದ ಮುಂಬೈಗೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅಕಾಲಿಕ ಮರಣ ಹೊಂದಿದ್ದಾರೆ. ಸೈರಸ್ ಮಿಸ್ತ್ರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಪಿಯುಶ್ ಗೋಯಲ್, ಹಾಗೂ ಇನ್ನೂ ಹಲವು ರಾಜಕಾರಣಿಗಳು, ಉದ್ಯಮಿಗಳು ಸೈರಸ್ ಮಿಸ್ತ್ರಿ ಸಾವಿಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸೈರಸ್ ಮಿಸ್ತ್ರಿ

ಸೈರಸ್ ಮಿಸ್ತ್ರಿ

  • Share this:
ಟಾಟಾ ಸನ್ಸ್ (Tata Sons) ಮತ್ತು ಟಾಟಾ ಗ್ರೂಪ್‌ನ (Tata Groups) ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Cyrus Mistry) ಸೆಪ್ಟೆಂಬರ್ 4, ಭಾನುವಾರ ಮಹಾರಾಷ್ಟ್ರದ ಪಾಲಗಡ್‌ನಲ್ಲಿ ರಸ್ತೆ ಅಪಘಾತದಲ್ಲಿ (Road Accident) ನಿಧನ ಹೊಂದಿದ್ದಾರೆ. ಅಹ್ಮದಾಬಾದ್‌ನಿಂದ ಮುಂಬೈಗೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅಕಾಲಿಕ ಮರಣ (Death) ಹೊಂದಿದ್ದಾರೆ. ಸೈರಸ್ ಮಿಸ್ತ್ರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಪಿಯುಶ್ ಗೋಯಲ್, ಹಾಗೂ ಇನ್ನೂ ಹಲವು ರಾಜಕಾರಣಿಗಳು, ಉದ್ಯಮಿಗಳು ಸೈರಸ್ ಮಿಸ್ತ್ರಿ ಸಾವಿಗೆ ಸಂತಾಪ (Condolence) ವ್ಯಕ್ತ ಪಡಿಸಿದ್ದಾರೆ.

ಯಾರು ಈ ಸೈರಸ್ ಮಿಸ್ತ್ರಿ ?
ಸೈರಸ್‌ ಮಿಸ್ತ್ರಿ, ಈ ವರ್ಷದ ಜೂನ್‌ನಲ್ಲಿ 93 ನೇ ವಯಸ್ಸಿನಲ್ಲಿ ನಿಧನರಾದ ದಿವಂಗತ ಪಲ್ಲೋಂಜಿ ಮಿಸ್ತ್ರಿಯವರ ಕಿರಿಯ ಪುತ್ರ. 1968ರಲ್ಲಿ ಜನಿಸಿದ ಸೈರಸ್ ಮಿಸ್ತ್ರಿ ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದರು ಮತ್ತು ನಂತರ ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಇದನ್ನೂ ಓದಿ:  Poison: ಇಷ್ಟು ಪುಟ್ಟ ಕಾರಣಕ್ಕೆ ಮಗಳ ಸಹಪಾಠಿಗೇ ವಿಷವುಣಿಸಿದ ತಾಯಿ, ನರಳಾಡಿ ಸತ್ತ ಬಾಲಕ!

ಲಂಡನ್‌ ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು 1991ರಲ್ಲಿ ಕುಟುಂಬದ ವ್ಯವಹಾರದ ಜವಾಬ್ದಾರಿ ತೆಗೆದುಕೊಂಡು, ಶಾಪೂರ್ಜಿ ಪಲ್ಲೋಂಜಿ ಮತ್ತು ಕೋ ಲಿಮಿಟೆಡ್‌ನ ನಿರ್ದೇಶಕರಾದರು. ಈ ಸಂಸ್ಥೆ 20ನೇ ಶತಮಾನದ ಆರಂಭದಲ್ಲಿ ಅವರ ತಂದೆಯಿಂದ ಪ್ರಾರಂಭವಾದ ಕಂಪನಿ. ಸೈರಸ್ ಮಿಸ್ತ್ರಿ ಅವರು ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಮುನ್ನೆಡೆಸಿದರು. $20 ಮಿಲಿಯನ್ ನಿಂದ ಆರಂಭವಾಗಿದ್ದ ಸಂಸ್ಥೆ ನಂತರ $1.5 ಶತಕೋಟಿ ವಹಿವಾಟು ನಡೆಸುವ ಮೂಲಕ ಮುಂಚೂಣಿಯಲ್ಲಿತ್ತು. .

ಟಾಟಾದಲ್ಲಿ ಸೈರಸ್‌ ಮಿಸ್ತ್ರಿ ಪ್ರಯಾಣ
ಮುಂಬೈನ ಶ್ರೀಮಂತ ಶಪೂರ್ಜಿ ಪಲ್ಲೋಂಜಿ ಕುಟುಂಬದ ವಂಶಸ್ಥರಾದ ಸೈರಸ್ ಮಿಸ್ತ್ರಿ ಅವರು 2012ರಲ್ಲಿ ತಮ್ಮ 44ನೇ ವಯಸ್ಸಿನಲ್ಲಿ ಟಾಟಾ ಸಮೂಹದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಸೈರಸ್ ಮಿಸ್ತ್ರಿ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಆಗುವುದರ ಜೊತೆಜೊತೆಯೇ ಟಾಟಾ ಸಮೂಹದ ಬಹುತೇಕ ಎಲ್ಲಾ ಕಂಪನಿಗಳಿಗೂ ಅವರು ಛೇರ್ಮನ್ ಆಗಿ ಜವಾಬ್ದಾರಿ ಪಡೆದರು. ಟಾಟಾ ಮನೆತನಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಗ್ರೂಪ್ ಮುಖ್ಯಸ್ಥರಾದ ಎರಡನೇ ವ್ಯಕ್ತಿ ಮಿಸ್ತ್ರಿ ಆಗಿದ್ದರು. 2012 ರಲ್ಲಿ ರತನ್ ಟಾಟಾ ಅವರ ನಿವೃತ್ತಿಯ ನಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಲ್ಲದೇ ಮಿಸ್ತ್ರಿ ಅವರು ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ ಮೊದಲ ಭಾರತೀಯರಲ್ಲದ ಪ್ರಜೆಯಾಗಿದ್ದಾರೆ.

ಟಾಟಾ ಸನ್ಸ್ ಮಂಡಳಿಯಿಂದ ಮಿಸ್ತ್ರಿಯನ್ನು ಉಚ್ಛಾಟನೆ
ಆದರೆ ಹಲವಾರು ವ್ಯವಹಾರಿಕ ಕಾರಣಗಳಿಂದಾಗಿ ಈ ಹುದ್ದೆಯಲ್ಲಿ ಮಿಸ್ತ್ರಿ ಹೆಚ್ಚು ಕಾಲ ಮುಂದುವರೆಯಲು ಸಾಧ್ಯವಾಗಲಿಲ್ಲ. ಟಾಟಾ ಕುಟುಂಬ ಮತ್ತು ಮಿಸ್ತ್ರಿ ಕುಟುಂಬದ ನಡುವೆ ಮೂಡಿದ ಭಿನ್ನಾಭಿಪ್ರಾಯ ಕಾರಣ 2016 ಅಕ್ಟೋಬರ್ 24ರಂದು ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿಯನ್ನು ಉಚ್ಛಾಟಿಸಲಾಯಿತು.

ಇದನ್ನೂ ಓದಿ:  Canada Murder: ಕೆನಡಾದಲ್ಲಿ ಚಾಕುವಿನಿಂದ ಇರಿದು 10 ಜನರ ಹತ್ಯೆ, 15 ಮಂದಿಗೆ ಗಾಯ: ಕೊಲೆಗಾರ ಪರಾರಿ

ಆದಾಗ್ಯೂ, ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ, ಟಾಟಾ ಸನ್ಸ್ ಅಧ್ಯಕ್ಷರಿಗಿಂತ ಚಿಕ್ಕವರಾಗಿದ್ದ ಮಿಸ್ತ್ರಿ ಅವರು ಸುಧಾರಣಾ ಬದಲಾವಣೆಗಳನ್ನು ತಂದರು, ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದನ್ನು ಪ್ರಶ್ನಿಸಿದ್ದರು, ಮಂಡಳಿಯು ದುರುಪಯೋಗ ಮತ್ತು ಅಲ್ಪಸಂಖ್ಯಾತ ಷೇರುದಾರರನ್ನು ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಮಿಸ್ತ್ರಿ ಪರ ತೀರ್ಪು
2016 ಅಕ್ಟೋಬರ್ 24ರಂದು ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿಯನ್ನು ಉಚ್ಛಾಟಿಸಲಾಯಿತು. ಇದರ ವಿರುದ್ಧ ಸೈರಸ್ ಮಿಸ್ತ್ರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮೊರೆ ಹೋದರು. ಎರಡು ತಿಂಗಳ ಬಳಿಕ ನ್ಯಾಯಮಂಡಳಿಯು ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿತು. ಈ ತೀರ್ಪು ಪ್ರಶ್ನಿಸಿ ಸೈರಸ್ ಮಿಸ್ತ್ರಿ ನ್ಯಾಷನಲ್ ಕಂಪನಿ ಲಾ ಅಪೆಲೇಟ್ ಟ್ರಿಬುನಲ್ (ಎನ್‌ಸಿಎಲ್‌ಎಟಿ) ಮೊರೆಹೋದರು. ಇಲ್ಲಿ ಸೈರಸ್ ಮಿಸ್ತ್ರಿ ಪರವಾಗಿ ತೀರ್ಪು ಸಿಕ್ಕಿತು. ಟಾಟಾ ಸನ್ಸ್ ಕಂಪನಿಗೆ ಸೈರಸ್ ಮಿಸ್ತ್ರಿ ಮತ್ತೆ ಛೇರ್ಮನ್ ಮಾಡುವಂತೆ ನ್ಯಾಯಮಂಡಳಿ ಆದೇಶಿಸಿತು.

ಟಾಟಾ ಸಂಸ್ಥೆ ಬಿಟ್ಟು ಕುಟುಂಬದ ವ್ಯವಹಾರದ ಕಡೆ ಗಮನ
ಇದೇ ಅವಧಿಯಲ್ಲಿ, ಟಾಟಾ ಸನ್ಸ್ ಕಂಪನಿಯು ಎನ್‌ಸಿಎಲ್‌ಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗಲೇ ಸೈರಸ್ ಮಿಸ್ತ್ರಿ ತಾನು ಟಾಟಾ ಗ್ರೂಪ್ ಛೇರ್ಮನ್‌ ಸ್ಥಾನಕ್ಕೆ ಮತ್ತೆ ಬರುವುದಿಲ್ಲ ಎಂದು ನಿರ್ಧರಿಸಿದರು. ಇದಾದ ಬಳಿಕ ಸೈರಸ್ ಮಿಸ್ತ್ರಿ ಅವರು ತಮ್ಮ ಕುಟುಂಬದ ವ್ಯವಹಾರಗಳತ್ತ ಗಮನ ನೀಡಿದರು.

ಇದನ್ನೂ ಓದಿ: Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

ಮುಂಬೈನಿಂದ 135 ಕಿಮೀ ದೂರದ ಪಾಲ್‌ಗಡ್‌ನ ಚರೋತಿ ಪ್ರದೇಶದ ಮೇಲ್ಸೇತುವೆ ಮೇಲೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದ್ದು, ಕಂಪನಿ ವ್ಯವಹಾರದಲ್ಲಿ ನಿಪುಣರಾಗಿದ್ದ ಮಿಸ್ತ್ರಿ ಅವರ ಸಾವು ನಿಜಕ್ಕೂ ದೊಡ್ಡ ದುರಂತ.
Published by:Ashwini Prabhu
First published: