ಭಾರತದ (India) ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಇತಿಹಾಸದಲ್ಲಿ 1 ಲಕ್ಷ ಕೋಟಿ ಆದಾಯವನ್ನು ದಾಟಿದ ಮೊದಲ ವಾಹನ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಶ್ರೇಯಾಂಕದಲ್ಲೂ 28 ನೇ ಸ್ಥಾನದಲ್ಲಿರುವ ಸಂಸ್ಥೆ, ಫೋಕ್ಸ್‌ವ್ಯಾಗನ್‌ನ (Volkswagen) ಆದಾಯವು 293 ಶತಕೋಟಿ ಮೌಲ್ಯದ್ದಾಗಿದೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ.
ಸಂಸ್ಥೆಗಾಗಿ ಐಎಎಸ್ ಹುದ್ದೆ ತೊರೆದ ಆರ್‌ಸಿ ಭಾರ್ಗವ
ಇಂತಹ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಾಜಿ ಐಎಎಸ್ ಅಧಿಕಾರಿ ಆರ್‌ಸಿ ಭಾರ್ಗವ ಮಾರುತಿ ಸುಜುಕಿಗಾಗಿ ಸರಕಾರಿ ಉದ್ಯೋಗವನ್ನೇ ತೊರೆದು ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿದ ಹರಿಕಾರ ಎಂದೆನಿಸಿದ್ದಾರೆ. ಆರ್ ಸಿ ಭಾರ್ಗವ ಯಾರು? ಮಾರುತಿ ಸುಜುಕಿ ಸಂಸ್ಥೆಯ ಅಧ್ಯಕ್ಷರ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.
ಜಪಾನ್‌ನ ಸುಜುಕಿ ಕಂಪನಿಯ ಮಾಲೀಕ ಒಸಾಮು ಸುಜುಕಿ, 2015 ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಭಾರ್ಗವ ಅವರನ್ನು ಸ್ಮರಿಸಿದ್ದು ಅವರು ಇಲ್ಲದೇ ಇರುತ್ತಿದ್ದರೆ ಬಹುಶಃ ಕಂಪನಿ ಇಷ್ಟು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ನ್ಯಾಯಯುತ, ಶುದ್ಧ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಯನ್ನು ಭೇಟಿ ಮಾಡುವುದು ಭಾರತದಲ್ಲಿ ಕಂಪನಿಯ ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ರಾಶಿಯವರಿಗೆ ಬರೋ ಸಂಬಳವೆಲ್ಲಾ ನೀರುಪಾಲು, ನೋಡ್ಕೊಂಡು ಖರ್ಚು ಮಾಡಿ!
ಜಂಟಿ ಉದ್ಯಮಕ್ಕೆ ಪಾಲುದಾರರನ್ನು ಬಯಸಿದ್ದ ಸರಕಾರ
1982 ರಲ್ಲಿ ಭಾರತ ಸರಕಾರವು ಕೈಗೆಟಕುವ ದರದಲ್ಲಿ ಕಾರು ಸಿದ್ಧಪಡಿಸುವ ಜಂಟಿ ಉದ್ಯಮಕ್ಕೆ ಪಾಲುದಾರರನ್ನು ಬಯಸಿತ್ತು. ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಕಾರನ್ನು ತಯಾರಿಸಲು ಬಯಸಿದ ಪ್ರಧಾನಿ ಇಂದಿರಾ ಗಾಂಧಿಯವರ ದಿವಂಗತ ಪುತ್ರ ಸಂಜಯ್ ಗಾಂಧಿಯವರಿಗೆ ಗೌರವದ ಸಂಕೇತವಾಗಿ ಕೂಡ ಸರಕಾರ ಯೋಜನೆಯನ್ನು ಆರಂಭಿಸಿತ್ತು. ಈ ಸಮಯದಲ್ಲಿ ಯಾವುದೇ ವಿದೇಶಿ ಕಂಪನಿಯು ಸರ್ಕಾರದೊಂದಿಗೆ ಪಾಲುದಾರಿಕೆ ಮುಂದಾಗಲಿಲ್ಲ.
ಕಡಿಮೆ ವೆಚ್ಚ ಇದುವೇ ಮಾರುತಿಯ ಹೆಗ್ಗಳಿಕೆ
ವೆಚ್ಚವನ್ನು ಕಡಿಮೆ ಮಾಡುವ ಹೆಗ್ಗಳಿಕೆಯೇ ಮಾರುತಿಯ ಯಶಸ್ಸಿಗೆ ಕಾರಣ ಎಂಬುದು ತಜ್ಞರ ಹೇಳಿಕೆಯಾಗಿದೆ. ಇದರ ಶ್ರೇಯಸ್ಸು ಭಾರ್ಗವ ಅವರಿಗೆ ಸಲ್ಲುತ್ತದೆ. ಭಾರತದ ನವೀನ ವಾಹನ ಘಟಕ ಉದ್ಯಮದೊಂದಿಗೆ ಅವಿರತವಾಗಿ ದುಡಿದರು ಅಂತೆಯೇ ಗುಣಮಟ್ಟವನ್ನು ಸುಧಾರಿಸುವಲ್ಲಿ ಹೆಚ್ಚಿನ ಕಾಳಜಿ ಅಸ್ಥೆ ವಹಿಸಿದರು ಎಂದು ಫೋರ್ಬ್ಸ್ ವರದಿ ಮಾಡಿದೆ.
ಭಾರ್ಗವ ಯಾರು? ಅವರ ಹಿನ್ನೆಲೆ ಏನು?
ನಾಲ್ವರು ಸಹೋದರರಲ್ಲಿ ಕಿರಿಯವರಾಗಿದ್ದ ಭಾರ್ಗವ ಅವರ ತಂದೆ ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಕಾಗದ ತಂತ್ರಜ್ಞರಾಗಿದ್ದರು. ಆರ್.ಸಿ.ಭಾರ್ಗವ ಅವರು ಪ್ರಸಿದ್ಧ ಡೂನ್ ಶಾಲೆಯಲ್ಲಿ ಕಲಿತರು. 1950 ರಲ್ಲಿ ಅವರು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡಿದರು ಹಾಗೂ ಟಾಪರ್ ಎಂದೆನ್ನಿಸಿದರು. ಪದವಿಯ ನಂತರ, ಅವರು ಭಾರತದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಅನ್ನು ಉತ್ತೀರ್ಣಗೊಳಿಸಿದರು. ಅವರು ಐಎಎಸ್ ಅಧಿಕಾರಿಯಾದರು ಮತ್ತು 1956 ರಲ್ಲಿ ಬ್ಯಾಚ್‌ನಲ್ಲಿ ಅಗ್ರಸ್ಥಾನ ಪಡೆದರು. 1974 ಮತ್ತು 1977 ರ ನಡುವೆ ನೀರು ಮತ್ತು ವಿದ್ಯುತ್ ಸಚಿವಾಲಯದಲ್ಲಿ ಕಾರ್ಯದರ್ಶಿಯಾದರು. ಅವರು NTPC ಯ ಸಂಸ್ಥಾಪಕ-ನಿರ್ದೇಶಕರೂ ಆಗಿದ್ದರು.
ಭಾರ್ಗವ ಅವರ ಕೆಲಸದಿಂದ ಪ್ರಭಾವಿತರಾದ ಕೃಷ್ಣಮೂರ್ತಿಯವರು ಮಾರುತಿ ಸಂಸ್ಥೆಗೆ ಸೇರಲು ಭಾರ್ಗವ ಅವರಿಗೆ ಆಫರ್ ನೀಡಿದರು. ಕ್ಯಾಬಿನೆಟ್ ಸೆಕ್ರೆಟರಿಯೇಟ್‌ಗೆ ನಿಯೋಜನೆಗೊಂಡ ಭಾರ್ಗವ ಅವರಿಗೆ ಅಲ್ಲಿನ ಕೆಲಸ ನೀರಸವೆನ್ನಿಸತೊಡಗಿತು. ಹೀಗೆ 1981 ರಲ್ಲಿ ಮಾರುತಿ ಸಂಸ್ಥೆಗೆ ಸೇರಿದರು. ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಮಾರುತಿ ಸುಜುಕಿ ಕಂಪನಿಯಲ್ಲಿ ಸೇರಿಕೊಂಡರು.
ಐಎಎಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರ್ಗವ ಅವರಿಗೆ ದೊರೆಯುತ್ತಿದ್ದ ಸಂಬಳ ಬರೇ ರೂ 2250. ಹಾಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಅವರು 1982 ರಲ್ಲಿ ಐಎಎಸ್ ಪದವಿಗೆ ರಾಜೀನಾಮೆ ನೀಡಿದರು ಹಾಗೂ ಜಂಟಿ ಉದ್ಯಮದ ಪೂರ್ಣ ಸಮಯದ ನಿರ್ದೇಶಕರಾದರು. ಕೃಷ್ಣಮೂರ್ತಿಯವರ ನಂತರ ಭಾರ್ಗವ ಅವರು 1985ರ ವರೆಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.1997ರಲ್ಲಿ ನಿವೃತ್ತರಾದರು.
ಸಂಸ್ಥೆಯ ಉನ್ನತಿಗೆ ಶ್ರಮಿಸಿದ್ದಾರೆ
88 ರ ಹರೆಯದ ಭಾರ್ಗವ ಅವರು ಉತ್ಪನ್ನ ಅಭಿವೃದ್ಧಿ, ವೆಚ್ಚದ ಪರಿಣಾಮಕಾರಿತ್ವ ಇತ್ಯಾದಿ ಪ್ರಕ್ರಿಯೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದು ಸಂಸ್ಥೆಯ ಉನ್ನತಿಗೆ ಹಗಲಿರುಳು ಶ್ರಮಿಸಿದ್ದಾರೆ. ಮಾರುತಿ ಸುಜುಕಿ ವಿಫಲಗೊಳ್ಳಲಿದೆ ಎಂದೇ ಅನೇಕರು ನಂಬಿದ್ದರು ಎಂಬುದಾಗಿ 2022 ರ ಸಂದರ್ಶನದಲ್ಲಿ ತಿಳಿಸಿದ್ದ ಭಾರ್ಗವ, ಭಾರತದ ಜನರ ಆಗ್ರಹಗಳನ್ನು ಅರಿತುಕೊಂಡು ಮುಂದುವರಿದಿರುವುದರಿಂದ ಯಶಸ್ಸನ್ನು ಪಡೆದುಕೊಂಡಿತು ಎಂದು ತಿಳಿಸಿದ್ದಾರೆ.
ಮಾರುತಿಯ ಆರಂಭ ಯೋಜಿತ ಯೋಜನೆಯಲ್ಲ
ಮಾರುತಿ ಯೋಜನೆಯು ಕ್ರಮಬದ್ಧವಾಗಿ ನಡೆದ ಯೋಜನೆಯಲ್ಲ ಅಕಸ್ಮಾತ್ ಆಗಿ ಪ್ರಾರಂಭವಾದ ಯೋಜನೆಯಾಗಿತ್ತು ಎಂದು ತಿಳಿಸಿರುವ ಭಾರ್ಗವ, ದಿವಂಗತ ಪುತ್ರ ಸಂಜಯ್ ಗಾಂಧಿಯವರಿಗೆ ಹೆಚ್ಚು ಪ್ರಿಯವಾಗಿದ್ದ ಏನನ್ನಾದರೂ ಮಾಡಬೇಕೆಂಬ ಹಂಬಲವನ್ನು ಇಂದಿರಾ ಗಾಂಧಿ ಹೊಂದಿದ್ದರು ಎಂದು ಭಾರ್ಗವ ತಿಳಿಸಿದ್ದಾರೆ. ಅವರ ವರದಿ ವಾರ್ಷಿಕ ವೇತನ 1.5 ಕೋಟಿ ರೂ. ಅಂತೆಯೇ 2017 ರಲ್ಲಿ ರೂ 99 ಲಕ್ಷವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ