ದೇಶದ ಆಟೋಮೋಟಿವ್ ಉದ್ಯಮದ (Automotive industry) ದಿಗ್ಗಜರಲ್ಲಿ ಒಬ್ಬರಾದ, ಟೊಯೊಟಾ ಕಿರ್ಲೋಸ್ಕರ್ ( Toyota Motor) ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಎಸ್ ಕಿರ್ಲೋಸ್ಕರ್ (Industrialist Vikram Kirloskar) ಅವರ ನಿಧನದ ನಂತರ ಅಪ್ಪನ ಕನಸಿನ ಉದ್ಯಮದ ಚುಕ್ಕಾಣಿಯನ್ನು ಮಗಳು ವಹಿಸಿಕೊಂಡಿದ್ದಾರೆ.
ಕಿರ್ಲೋಸ್ಕರ್ ಕಂಪನಿ ನಿರ್ದೇಶಕಿಯಾಗಿ ಮಾನಸಿ ನೇಮಕ
ವಿಕ್ರಮ್ ಕಿರ್ಲೋಸ್ಕರ್ ನಿಧನದ ನಂತರ ಈಗ ಅವರ ಏಕೈಕ ಪುತ್ರಿ ಮಾನಸಿ ಕಿರ್ಲೋಸ್ಕರ್ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಮಾನಸಿ ಅವರು ವಿಕ್ರಮ್ ಕಿರ್ಲೋಸ್ಕರ್ ಮತ್ತು ಗೀತಾಂಜಲಿ ಕಿರ್ಲೋಸ್ಕರ್ ದಂಪತಿಯ ಏಕೈಕ ಪುತ್ರಿ.
ಈ ಕಾರಣದಿಂದಾಗಿ ಅವರು ಈಗ ಕಿರ್ಲೋಸ್ಕರ್ ಕುಟುಂಬದ ಉತ್ತರಾಧಿಕಾರಿಯಾಗಿದ್ದು, ಕಿರ್ಲೋಸ್ಕರ್ ಗ್ರೂಪ್ ಅನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಪ್ರಸ್ತುತ ಮಾನಸಿ ಅವರನ್ನು ಕಿರ್ಲೋಸ್ಕರ್ ಜಂಟಿ ಉದ್ಯಮ ಮಂಡಳಿಯ ಅಧ್ಯಕ್ಷೆಯಾಗಿ ನೇಮಿಸಲಾಗಿದೆ. 32 ವರ್ಷದ ಮಾನಸಿ ಈಗಾಗಲೇ ತಮ್ಮ ವ್ಯವಹಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.
ಮಾನಸಿ ಹೆಗಲಿಗೆ ಹಲವು ಜವಾಬ್ದಾರಿ
ಅಪ್ಪನ ನಂತರ ಮಾನಸಿ ಈಗ ಟೊಯೋಟಾ ಮೆಟೀರಿಯಲ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಇಂಜಿನ್ ಇಂಡಿಯಾ ಲಿಮಿಟೆಡ್ ಮತ್ತು ಇತರ ಕಂಪನಿಗಳನ್ನು ಮುನ್ನಡೆಸುತ್ತಾರೆ.
ಮಾನಸಿ ತಾಯಿ ಗೀತಾಂಜಲಿ ಕಿರ್ಲೋಸ್ಕರ್, ಕಿರ್ಲೋಸ್ಕರ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
"ತಂದೆಯ ಸ್ಥಾನವನ್ನು ತುಂಬುವಲ್ಲಿ ಮಾನಸಿ ಬದ್ಧವಾಗಿದ್ದಾರೆ"
"ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್ಜಿ) ಕಾಳಜಿಗಳೊಂದಿಗೆ ಆಳವಾಗಿ ಹೆಣೆದುಕೊಂಡಿರುವ ಮಾನಸಿ ಟಾಟಾ ಅವರು ತಮ್ಮ ತಂದೆಯ ದೃಷ್ಟಿ ಮತ್ತು ಕನಸನ್ನು ಮುಂದಕ್ಕೆ ಕೊಂಡೊಯ್ಯಲು ನಿಜವಾಗಿಯೂ ಬದ್ಧರಾಗಿದ್ದಾರೆ. ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೊಡುಗೆ ನೀಡುತ್ತಾರೆ ಮತ್ತು ವಿವಿಧ ಪಾಲುದಾರರೊಂದಿಗೆ ಪಾಲುದಾರಿಕೆಯ ಬಲವನ್ನು ಉಳಿಸಿಕೊಳ್ಳಲು ಸಮರ್ಪಿತರಾಗಿದ್ದಾರೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಮಾನಸಿ ಪರಿಚಯ
* ಮಾನಸಿ ಕಿರ್ಲೋಸ್ಕರ್ ಸಾಮ್ರಾಜ್ಯದ ಐದನೇ ತಲೆಮಾರಿನ ಕುಡಿ
* ಮಾನಸಿ ಈಗಾಗಲೇ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ನ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನಿಂಗ್ನಿಂದ ಪದವಿ ಪಡೆದು ವಿದ್ಯಾಭ್ಯಾಸದ ನಂತರ ತಂದೆಯ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದರು.
* ಮಾನಸಿ ಕೇರಿಂಗ್ ವಿತ್ ಕಲರ್ ಎಂಬ ಎನ್ಜಿಒ ಸಹ ನಡೆಸುತ್ತಿದ್ದಾರೆ. ಈ ಎನ್ಜಿಒ ಕರ್ನಾಟಕದ 3 ಜಿಲ್ಲೆಗಳ ಸರ್ಕಾರಿ ಶಾಲೆಗಳೊಂದಿಗೆ ಕೆಲಸ ಮಾಡುತ್ತದೆ
* ಮಾನಸಿ 2019 ರಲ್ಲಿ ನೋಯೆಲ್ ಟಾಟಾ ಅವರ ಮಗ ನೆವಿಲ್ಲೆ ಟಾಟಾ ಅವರನ್ನು ವಿವಾಹವಾಗಿದ್ದಾರೆ.
* ನೋಯೆಲ್ ಟಾಟಾ ಅವರು ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಮಲಸಹೋದರರಾಗಿದ್ದಾರೆ.
* ಟ್ರೆಂಟ್ ಲಿಮಿಟೆಡ್, ಟಾಟಾ ಗ್ರೂಪ್ನ ಚಿಲ್ಲರೆ ವಿಭಾಗ, ನೋಯೆಲ್ ನೇತೃತ್ವದಲ್ಲಿದೆ.
* ಮಾನಸಿ ಕಿರ್ಲೋಸ್ಕರ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಉದ್ಯಮದಲ್ಲಿ ಹೆಸರು ಮಾಡಿದವರು. 2018ರಲ್ಲಿ ವಿಶ್ವಸಂಸ್ಥೆಯಿಂದ ಉದಯೋನ್ಮುಖ ಉದ್ಯಮ ನಾಯಕರಾಗಿ ಮಾನಸಿ ಆಯ್ಕೆಯಾಗಿದ್ದರು.
ಜಪಾನಿನ ಆಟೋ ಬೆಹೆಮೊತ್ ಟೊಯೊಟಾ ಮೋಟಾರ್ ಕಾರ್ಪೊರೇಷನ್ 1997 ರಲ್ಲಿ ಕಿರ್ಲೋಸ್ಕರ್ ಗುಂಪಿನೊಂದಿಗೆ JV ಮೂಲಕ ಭಾರತವನ್ನು ಪ್ರವೇಶಿಸಿತು.
ಇದನ್ನೂ ಓದಿ: Vikram Kirloskar: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ನ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ನಿಧನ
ಟೊಯೊಟಾ ಮೋಟಾರ್ JV ನಲ್ಲಿ 89% ಪಾಲನ್ನು ಹೊಂದಿದೆ, ಉಳಿದವು ಕರ್ನಾಟಕದ ಬಿಡದಿಯಲ್ಲಿ ನೆಲೆಗೊಂಡಿರುವ ಕಿರ್ಲೋಸ್ಕರ್ ಸಮೂಹದಿಂದ ಹೊಂದಿದೆ.
ಬೆಂಗಳೂರಿನ ವಿಮಾನ ನಿಲ್ದಾಣ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಎಸ್ ಕಿರ್ಲೋಸ್ಕರ್ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ನಲ್ಲಿ ವಿಧಿವಶರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ