Infosys CEO Salil Parekh: ಇನ್ಫೋಸಿಸ್ ಸಿಇಒ ಆಗಿ ಮರು ನೇಮಕವಾದ ಸಲೀಲ್ ಪರೇಖ್ ಯಾರು? ಅವರ ಅನುಭವ ಏನು?
Salil Parekh: ಸಲೀಲ್ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ಮರುನೇಮಕವು ಷೇರುದಾರರ ಅನುಮೋದನೆಗೆ ಒಳಪಟ್ಟಿದೆ ಎಂದು ಕಂಪನಿಯು ತಿಳಿಸಿದೆ.
ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಲಿಮಿಟೆಡ್ ಐದು ವರ್ಷಗಳ ಅವಧಿಗೆ ಸಲೀಲ್ ಪರೇಖ್ ಅವರನ್ನು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಆಗಿ ಮರುನೇಮಕ (Infosys Chief Salil Parekh) ಮಾಡಿದೆ ಎಂದು ಭಾನುವಾರ ತಿಳಿಸಿದೆ. ಈಮೂಲಕ ಸಲೀಲ್ ಪರೇಖ್ ಅವರು ಮಾರ್ಚ್ 2027 ರವರೆಗೆ ಇನ್ಫೋಸಿಸ್ ಸಿಇಒ ಮತ್ತು ಎಂಡಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮೇ 21, 2022 ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಮಾಹಿತಿ ನೀಡಿದೆ.
ಕಂಪನಿಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ (NRC) ಶಿಫಾರಸುಗಳನ್ನು ಆಧರಿಸಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಇನ್ಫೋಸಿಸ್ ಲಿಮಿಟೆಡ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಸಲೀಲ್ ಪರೇಖ್ ಅವರ ಅನುಭವವೇನು? ಪರೇಖ್ ಅವರು ಐಟಿ ಸೇವಾ ಉದ್ಯಮದಲ್ಲಿ ಮೂವತ್ತು ವರ್ಷಗಳ ಜಾಗತಿಕ ಅನುಭವವನ್ನು ಹೊಂದಿದ್ದಾರೆ. ಉದ್ಯಮಗಳಿಗೆ ಡಿಜಿಟಲ್ ರೂಪಾಂತರವನ್ನು ಚಾಲನೆ ಮಾಡುವಲ್ಲಿ ವ್ಯಾಪಾರದ ತಿರುವುಗಳನ್ನು ಕಾರ್ಯಗತಗೊಳಿಸುವ ಮತ್ತು ಸ್ವಾಧೀನಪಡಿಸಿಕೊಂಡ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಬಲವಾದ ದಾಖಲೆಯನ್ನು ಹೊಂದಿದ್ದಾರೆ ಎಂದು ಇನ್ಫೋಸಿಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅಪಾರ ಅನುಭವ ಇವರ ಬಲ ಸಲೀಲ್ ಪರೇಖ್ ಈ ಹಿಂದೆ ಕ್ಯಾಪ್ಜೆಮಿನಿಯಲ್ಲಿ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ನ ಸದಸ್ಯರಾಗಿದ್ದರು. ಅಲ್ಲಿ ಅವರು 25 ವರ್ಷಗಳ ಕಾಲ ಹಲವಾರು ನಾಯಕತ್ವ ಸ್ಥಾನಗಳನ್ನು ಹೊಂದಿದ್ದರು. ಅವರು ಅರ್ನ್ಸ್ಟ್ ಮತ್ತು ಯಂಗ್ನಲ್ಲಿ ಪಾಲುದಾರರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಈ ಸಲಹಾ ಸಂಸ್ಥೆಯ ಭಾರತೀಯ ಕಾರ್ಯಾಚರಣೆಗಳಿಗೆ ಪ್ರಮಾಣ ಬದ್ಧತೆ ಮೌಲ್ಯವನ್ನು ತರುವ ಮೂಲಕ ವ್ಯಾಪಕವಾಗಿ ಮನ್ನಣೆ ಪಡೆದಿದ್ದಾರೆ.
ಸಲೀಲ್ ಪರೇಖ್ ಅವರ ಶೈಕ್ಷಣಿಕ ಹಿನ್ನೆಲೆ ಗಮನಿಸಿ ಸಲೀಲ್ ಪರೇಖ್ ಅವರ ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಹೊಂದಿದ್ದಾರೆ.
2018 ರಿಂದ ಇನ್ಫೋಸಿಸ್ನ ಮುಖ್ಯ ಜವಾಬ್ದಾರಿ ಸಲೀಲ್ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ಮರುನೇಮಕವು ಷೇರುದಾರರ ಅನುಮೋದನೆಗೆ ಒಳಪಟ್ಟಿದೆ ಎಂದು ಕಂಪನಿಯು ತಿಳಿಸಿದೆ.
ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ ಸಲೀಲ್ ಪರೇಖ್
ಸಲೀಲ್ ಪರೇಖ್ ಅವರು ನಿರ್ದೇಶಕರ ಮಂಡಳಿಯ ಯಾವುದೇ ಸದಸ್ಯರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಕಾಲಕಾಲಕ್ಕೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಹೊರಡಿಸಿದ ಸುತ್ತೋಲೆಗಳು ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮರುನೇಮಕವಾಗುವ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಇನ್ಫೋಸಿಸ್ ಮಾಹಿತಿ ನೀಡಿದೆ.
ಸಲೀಲ್ ಪರೇಖ್ ಅವರ ಮರು ನೇಮಕಾತಿಯ ಪ್ರಕಟಣೆಯ ನಂತರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಇನ್ಪೋಸಿಸ್, ಮುಂದಿನ ಕೆಲವು ವರ್ಷಗಳಲ್ಲಿ ಬೆಳವಣಿಗೆಯ ಪ್ರಯಾಣವನ್ನು ಮುಂದುವರೆಸುವ ಕುರಿತು ವಿವರಣೆಗಳನ್ನು ನೀಡಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ