Dan Bilzerian: ಭೂಮಿ ಮೇಲೆ ಇವನಂತೆ ಬದುಕೋರು ಯಾರು ಇಲ್ಲ! ಸದಾ ಇವನ ಸುತ್ತ ಇರ್ತಾರೆ ರಂಭೆ, ಊವರ್ಶಿಯರು

ಹಣದ ಹೊಳೆಯಲ್ಲಿ ಬಿಕಿನಿ ತೊಟ್ಟು ಸುಂದರಿಯರು ಕುಣಿಯುತ್ತಿರುವುದನ್ನು ನೋಡಿದರೆ, ಅಯ್ಯೋ, ನಾವು ಒಂದುದಿನವಾದ್ರೂ ಹೀಗೆ ಬದುಕಬೇಕು ಎಂದು ಅನ್ನಿಸದೇ ಇರದು. ಅಸಲಿಗೆ ಈತನ ಹಿನ್ನಲೆ ಏನು? ಈತನಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಈತನ ಒಟ್ಟು ಆಸ್ತಿ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ ನೋಡಿ.

ಡ್ಯಾನ್ ಬಿಲ್ಜೇರಿಯನ್‌

ಡ್ಯಾನ್ ಬಿಲ್ಜೇರಿಯನ್‌

  • Share this:
ಈತನ ಸುತ್ತ ಚೆಂದುಳ್ಳಿ ಚೆಲುವೆಯರು.  ಅದು ಅರ್ಧಂಬರ್ಧ ಬಟ್ಟ ತೊಟ್ಟು ಈತನ ಮುಂದೆ ಓಡಾಡುತ್ತಿರುತ್ತಾರೆ. ಈತ ಕಾರಿ (Car) ನಲ್ಲಿಓಡಾಡೋದು ತುಂಬಾ ಕಮ್ಮಿ. ಏನಿದ್ದರು ಪ್ರೈವೆಟ್​ ಜೆಟ್ (Private jet) ​. ಅದು ಅಂತಿಂತಾ ಪ್ರೈವೆಟ್​ ಜೆಟ್​ ಅಲ್ಲ ರೀ. ಆತ್ಯಾಧುನಿಕ ಫೂಚರ್ಸ್​ ಹೊಂದಿರುವ ಜೆಟ್​. ಆ ಜೆಟ್​​ನಲ್ಲೂ ಬಿಕಿನಿ (Bikini) ತೊಟ್ಟು ಚೆಲುವೆಯರು ಇವನ ಸುತ್ತ ಇರ್ತಾರೆ. ಅಸಲಿಗೆ ಈತನ ಹೆಸರು ಡ್ಯಾನ್ ಬಿಲ್ಜೇರಿಯನ್‌ (Dan Bilzerian) . ಕಿಂಗ್ ಆಫ್​ ಫೋಕರ್ (King of Poker)​.  ಅಂದರೆ ಜೂಜಾಟದ ಸಾಮ್ರಜ್ಯಕ್ಕೆ ಈತನೇ ಒಡೆಯ, ರಾಜ ಎನ್ನಬಹುದು. ಡ್ಯಾನ್ ಬಿಲ್ಜೇರಿಯನ್‌ ಜೂಜಾಟದ ಅಂದರೆ ಪೋಕರ್ ಗೇ ಕಿಂಗ್ (King) ಎಂದೇ ಫೇಮಸ್. ಈತನ ಹಾಗೇ ಈ ಭೂಮಿ (Earth) ಮೇಲೆ ಬದುಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನಿಸುತ್ತೆ. ಹಣದ ಹೊಳೆಯಲ್ಲಿ ಬಿಕಿನಿ ತೊಟ್ಟು ಸುಂದರಿಯರು ಕುಣಿಯುತ್ತಿರುವುದನ್ನು ನೋಡಿದರೆ, ಅಯ್ಯೋ, ನಾವು ಒಂದುದಿನವಾದ್ರೂ ಹೀಗೆ ಬದುಕಬೇಕು ಎಂದು ಅನ್ನಿಸದೇ ಇರದು. ಅಸಲಿಗೆ ಈತನ ಹಿನ್ನಲೆ ಏನು? ಈತನಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಈತನ ಒಟ್ಟು ಆಸ್ತಿ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ ನೋಡಿ.

1980 ಡಿಸೆಂಬರ್​ 7 ರಂದು ಜನಿಸಿದ ಡ್ಯಾನ್​!

1980 ರಲ್ಲಿ ಡಿಸೆಂಬರ್ 7 ರಂದು ಫ್ಲೋರಿಡಾದಲ್ಲಿ ಜನಿಸಿದ ಡ್ಯಾನ್ ಇಂದು ಜೂಜಾಟದ ಪ್ರೊಫೆಶನಲ್ ಆಟಗಾರ. ಈತ ಈ ಆಟದಲ್ಲಿ ಕಿಂಗ್​. ಈತನನ್ನು ಸೋಲಿಸೋದು ಕಷ್ಟ. ಜೊತೆಗೆ ಈತ ಸ್ಟಂಟ್​ಮನ್​ ಆ್ಯಕ್ಟರ್​. Other Woman, The Equalizer & Cat Run 2  ಮೊದಲದ ಹಾಲಿವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾನೆ. ಪೋಕರ್​​ನಿಂದಲೇ ಹಣದ ಹೊಳೆಯನ್ನು ಹರಿಸಿದ್ದಾನೆ. ಐಷಾರಾಮಿ ಬಂಗಲೆಗಳು, ಕಾಸ್ಟ್ಲಿ ಕಾರುಗಳು, ಪ್ರೈವೆಟ್​ ಜೆಟ್​ ಎಲ್ಲವೂ ಈತನ ಬಳಿ ಇದೆ.

ಬಾಲ್ಯದಲ್ಲೇ ಐಷಾರಾಮಿ ಜೀವನ ನೋಡಿದ್ದ ಡ್ಯಾನ್​!

ಉದ್ಯಮಿಯ ಮಗನಾಗಿದ್ದ ಡ್ಯಾನ್ ಐಷಾರಾಮಿಯಾಗಿ ಬೆಳೆದಿದ್ದರು. ಅವರ ಬಳಿ ಎಲ್ಲಾ ರೀತಿಯ ಸೌಕರ್ಯವಿತ್ತು ಆದರೆ ತಂದೆ ತಾಯಿಯ ಪ್ರೀತಿ ಮಾತ್ರ ಸಿಗುತ್ತಿರಲಿಲ್ಲ. ತನ್ನಿಚ್ಛೆಯಂತೆ ಬೆಳೆದಿದ್ದ ಡ್ಯಾನ್ ಹಲವಾರು ಸಂದರ್ಶನಗಳಲ್ಲಿ ತಾನು ಚಿಕ್ಕವನಿದ್ದಾಗ ಯಾರೂ ತನ್ನ ಬಗ್ಗೆ ಕೇರ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಆತನ ತಂದೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಜೖಲು ಪಾಲಾದಾರು  ಡ್ಯಾನ್ ತಂದೆ ವಿಯೆಟ್ನಾಂ ಯುದ್ಧದಲ್ಲೂ ಪಾಲ್ಗೊಂಡಿದ್ದರು. ಅವರ ಬಳಿ ಯುದ್ಧಕ್ಕೆ ಬಳಸಿದ್ದ ಒಂದು ಬಂದೂಕು ಕೂಡಾ ಇತ್ತು. ಒಂದು ದಿನ ಡ್ಯಾನ್ ತಂದೆಯ ಆ ಬಂದೂಕನ್ನು ಶಾಲೆಯಲ್ಲಿ ತನ್ನ ಸಹಪಾಠಿಗಳಿಗೆ ತೋರಿಸಲು ಕೊಂಡೊಯ್ದಿದ್ದರು. ಈ ಕಾರಣಕ್ಕೆ ಅವರನ್ನು ಶಾಲೆಯಿಂದ, ಆ ನಗರದಿಂದ ಬಹಿಷ್ಕಾರ ಮಾಡಲಾಯಿತು.ಇದನ್ನೂ ಓದಿ: ನಮಸ್ಕಾರ ದೇವ್ರು, ಹೀಗ್​ ಅನ್ನುತ್ತಲೇ ದುಡ್ಡು ಮಾಡ್ತಿರೋ ಯುಟ್ಯೂಬರ್​​! ವಿಡಿಯೋಗಳಿಂದಲೇ ತಿಂಗಳಿಗೆ ಇಷ್ಟೊಂದು ಸಂಪಾದನೆನಾ?

ಕಾಲೇಜು ಟೈಮ್​ನಲ್ಲೇ ಜೂಜಾಟ ಆಡುತ್ತಿದ್ದ ಡ್ಯಾನ್​

ಡ್ಯಾನ್‌ಗೆ ಬಂದೂಕು ಹಾಗೂ ಸೖನ್ಯ ಇವೆರಡೂ ಬಹಳ ಇಷ್ಟವಾಗುತ್ತಿತ್ತು. ಒಂದು ಬಾರಿ ನೌಕಾದಳಕ್ಕೂ ಆಯ್ಕೆಯಾಗಿದ್ದರು. ಆದರೆ ಕೆಲ ಕಾರಣಗಳಿಂದ ಅವರನ್ನು ಅಲ್ಲಿಂದ ತೆಗೆದು ಹಾಕಲಾಯ್ತು. ಕಾಲೇಜು ಟೈಮ್​ನಲ್ಲೇ ಈತ ಪೋಕರ್ ಆಡುವುದನ್ನು ಕಲಿತಿದ್ದ. ಆರಂಭದಲ್ಲಿ ಆತ ತನ್ನ ಬಳಿ ಇದ್ದ ಎಲ್ಲಾ ಹಣವನ್ನು ಕಳೆದುಕೊಂಡಿದ್ದ, ಆದರೆ ಧೃತಿಗೆಡದ ಆತ ಇದೇ ಆಟದಲ್ಲಿ ಗೆಲ್ಲುವುದಾಗಿ ನಿರ್ಧರಿಸಿದರು. ಮುಂದೆ ಆಟವಾಡಲು ಅವರು ತಮ್ಮ ಬಳಿ ಇದ್ದ ಬಂದೂಕನ್ನೂ ಮಾರಿದ್ದರು. ಈ ಬಾರಿ 10 ಸಾವಿರ ರೂಪಾಯಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ. ಇದಾದ ಬಳಿಕ ಅಲ್ಲಿಂದ ನೇರವಾಗಿ ಲಾಸ್‌ ವೇಗಾಸ್‌ಗೆ ಬಂದಿದ್ದರು.

ಇದನ್ನೂ ಓದಿ: ಡಾಲರ್ ಎದುರು ದಾಖಲೆಯ ಕುಸಿತ ಕಂಡ ರೂಪಾಯಿ ಮೌಲ್ಯ!

ಈತನ ಒಟ್ಟು ಆಸ್ತಿ 15 ಕೋಟಿ ಡಾಲರ್​​!

ಲಾಸ್ ವೆಗಾಸ್‌ಗೆ ತೆರಳಿದ ಡ್ಯಾನ್ ದೊಡ್ಡ ಮಟ್ಟದ ಪೋಕರ್ ಆಟವಾಡಿದರು. ಅವರು ರಾತ್ರಿ ಬೆಳಗಾಗುವುದರೊಳಗೆ 10 ಸಾವಿರ ಡಾಲರ್‌ನಿಂದ 1,87,000 ಡಾಲರ್‌ವರೆಗೂ ಗೆದ್ದಿದ್ದಿದೆ ಎಂದು ಹೇಳಲಾಗುತ್ತದೆ. ಆತ ಪೋಕರ್‌ನ ವರ್ಲ್ಡ್‌ ಸೀರೀಸ್‌ನಲ್ಲೂ ಭಾಗಿಯಾಗಿದ್ದ,.  2013ರ ಒಂದು ರಾತ್ರಿ ಈತ ಸುಮಾರು ಮಿಲಿಯನ್ ಡಾಲರ್ ಸಂಪಾದಿಸಿ ಸದ್ದು ಮಾಡಿದ್ದ. 30ರ ಹರೆಯದಲ್ಲಿ ಡ್ರಗ್ಸ್ ಛಟಕ್ಕೆ ದಾಸನಾಗಿದ್ದ. ಒಂದು ಬಾರಿ  12 ಗಂಟೆಗಳೊಳಗೆ ಎರಡು ಮೂರು ಬಾರಿ ಹಾರ್ಟ್ ಅಟ್ಯಾಕ್​ ಆಗಿತ್ತು. ಈತನ ಸಂಪತ್ತು 15 ಕೋಟಿ ಡಾಲರ್[150 ಮಿಲಿಯನ್ ಡಾಲರ್] ಎಂದು ಅಂದಾಜಿಸಲಾಗಿದೆ.
Published by:Vasudeva M
First published: