Loan Payment: ಸಾಲಗಾರ ಅಕಸ್ಮಾತ್ ಸಾವನ್ನಪ್ಪಿದರೆ ಆತನ ಸಾಲ ಯಾರು ಮರುಪಾವತಿಸಬೇಕು?

ಸಾಲ ಮರುಪಾವತಿಯ ಅವಧಿಯಲ್ಲಿ ಅಕಸ್ಮಾತ್ ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ಏನಾಗುತ್ತದೆ? ಆಗ ಸಾಲ ಮರುಪಾವತಿಗೆ ಯಾರು ಜವಾಬ್ದಾರರಾಗುತ್ತಾರೆ? ಇದು ತೆಗೆದುಕೊಂಡ ಸಾಲ ಮತ್ತು ನೀಡಿದ ಗ್ಯಾರಂಟಿಯನ್ನು ಅವಲಂಬಿಸಿರುತ್ತದೆ. ವಿಭಿನ್ನ ಸಂದರ್ಭಗಳಲ್ಲಿ ಈ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಯಾವುದಾದರೂ ಸಾಲವನ್ನು (Loan) ಪಡೆದಿದ್ದರೆ ಅದನ್ನು ಸಕಾಲಕ್ಕೆ ಮರುಪಾವತಿ ಮಾಡುವುದು ಬಹಳ ಅಗತ್ಯ. ಒಂದು ವೇಳೆ ನೀವು ಸಾಲ ಮರುಪಾವತಿ ಮಾಡಲು ವಿಫಲರಾದಲ್ಲಿ ಬಾಕಿ ಮೊತ್ತ ವಸೂಲಿ ಮಾಡಲು ಬ್ಯಾಂಕಿನವರು (Bank) ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆ. ನಿಗದಿತ ಅವಧಿಯೊಳಗೆ ಸಾಲವನ್ನು ಪಾವತಿಸದಿದ್ದರೆ ಸಾಲಗಾರನ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಹಕ್ಕನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು (Financial Institution) ಹೊಂದಿವೆ. ಆದರೆ, ಸಾಲ ಮರುಪಾವತಿಯ ಅವಧಿಯಲ್ಲಿ ಅಕಸ್ಮಾತ್ ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ಏನಾಗುತ್ತದೆ? ಆಗ ಸಾಲ ಮರುಪಾವತಿಗೆ ಯಾರು ಜವಾಬ್ದಾರರಾಗುತ್ತಾರೆ (Responsible)? ಇದು ತೆಗೆದುಕೊಂಡ ಸಾಲ ಮತ್ತು ನೀಡಿದ ಗ್ಯಾರಂಟಿಯನ್ನು ಅವಲಂಬಿಸಿರುತ್ತದೆ. ವಿಭಿನ್ನ ಸಂದರ್ಭಗಳಲ್ಲಿ ಈ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಸಾಲಗಾರನ ಮರಣದ ನಂತರ ಬ್ಯಾಂಕ್ ಯಾರನ್ನು ಸಂಪರ್ಕಿಸುತ್ತದೆ
ಪ್ರಾಥಮಿಕ ಸಾಲಗಾರನಿಗೆ ಏನಾದರೂ ಆದಲ್ಲಿ ಅಂದರೆ ಮರಣ ಹೊಂದಿದಾಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಹ - ಸಾಲಗಾರನನ್ನು ಸಂಪರ್ಕಿಸುತ್ತವೆ. ಒಂದು ವೇಳೆ ಸಹ-ಸಾಲಗಾರನು ಸಾಲ ಮರುಪಾವತಿ ಮಾಡದಿದ್ದರೆ ಗ್ಯಾರಂಟಿ ನೀಡಿದವರು ಅಥವಾ ಸಾಲಗಾರನ ಉತ್ತರಾಧಿಕಾರಿಗಳನ್ನು ಬ್ಯಾಂಕ್ ಸಂಪರ್ಕಿಸುತ್ತದೆ.

ಇದನ್ನೂ ಓದಿ: Business Idea: ಭಾರತೀಯರ ಕೂದಲಿಗೂ ಇದೆ ಕೋಟಿ ಕೋಟಿ ಬೆಲೆ, ಈ ಬ್ಯುಸಿನೆಸ್ ಆರಂಭಿಸಿ ಕೋಟ್ಯಧಿಪತಿಯಾಗಬಹುದು!

ಇದು ತೆಗೆದುಕೊಂಡ ಸಾಲದ ಪ್ರಕಾರ ಮತ್ತು ಮೇಲಾಧಾರಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಗಮನಿಸಬೇಕು. ವೈಯಕ್ತಿಕ ಸಾಲವನ್ನು ತೆಗೆದುಕೊಂಡ ಸಂದರ್ಭದಲ್ಲಿ, ಇದು ಅಸುರಕ್ಷಿತ ಸಾಲವಾಗಿದೆ. ಏಕೆಂದರೆ, ಸಾಲ ನೀಡಿದ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕಾನೂನಿನ ಪ್ರಕಾರ ಉತ್ತರಾಧಿಕಾರಿಗಳನ್ನು ಅಥವಾ ಮರಣ ಹೊಂದಿದ ಸಾಲಗಾರನ ಉಳಿದಿರುವ ಸದಸ್ಯರನ್ನು ಬಾಕಿ ಮೊತ್ತವನ್ನು ಪಾವತಿಸಲು ಕೇಳುವಂತಿಲ್ಲ.

ಇಂತಹ ಸಾಲಗಳು ಯಾವುದೇ ಆಧಾರವನ್ನು ಹೊಂದಿರುವುದಿಲ್ಲ. ಆದ್ದರಿಂದ, ಮೊತ್ತವನ್ನು ಮರುಪಡೆಯಲು ಬ್ಯಾಂಕ್ ಸಾಲಗಾರನ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ. ಬಾಕಿ ಉಳಿದಿರುವ ಮೊತ್ತವನ್ನು ಅಂತಿಮವಾಗಿ ಬರೆಯಲಾಗುತ್ತದೆ ಮತ್ತು ಅದನ್ನು ಬ್ಯಾಂಕ್‌ನಿಂದ NPA ಖಾತೆಗೆ ಜಮಾ ಮಾಡಲಾಗುತ್ತದೆ.

ಬ್ಯಾಂಕಿನ ಇನ್ನೊಂದು ನಿಯಮದ ಪ್ರಕಾರ ಏನಿದೆ?
ಇನ್ನೊಂದು ನಿಯಮದ ಪ್ರಕಾರ, ಸಹ-ಸಹಿದಾರ ಅಥವಾ ಸಹ-ಅರ್ಜಿದಾರರಿದ್ದರೆ, ಪ್ರಾಥಮಿಕ ಸಾಲಗಾರನ ಮರಣದ ನಂತರ ಬ್ಯಾಂಕ್ ಆ ವ್ಯಕ್ತಿಗೆ ಹಣ ಮರು ಪಾವತಿಯ ಹೊಣೆಗಾರಿಕೆಯನ್ನು ವರ್ಗಾಯಿಸಬಹುದು. ಕ್ರೆಡಿಟ್ ಕಾರ್ಡ್ ಸಾಲಗಳಂತಹ ಇತರ ಅಸುರಕ್ಷಿತ ಸಾಲಗಳಿಗೂ ಇದು ಅನ್ವಯಿಸುತ್ತದೆ.

ಪ್ರಸ್ತುತ, ಹೆಚ್ಚಿನ ಅಸುರಕ್ಷಿತ ಸಾಲಗಳು ಈಗ ಪ್ರಾಥಮಿಕ ಸಾಲಗಾರನಿಗೆ ವಿಮೆಯೊಂದಿಗೆ ಬರುತ್ತವೆ. ವಿಮೆಯು ಸಾಲದ ಮೊತ್ತವನ್ನು ಒಳಗೊಳ್ಳುತ್ತದೆ ಮತ್ತು ಸಂಪೂರ್ಣ ಸಾಲ ಮರುಪಾವತಿ ಅವಧಿಗೆ ಮಾನ್ಯವಾಗಿರುತ್ತದೆ. ಪ್ರಾಥಮಿಕ ಸಾಲಗಾರನ ಮರಣದ ಸಂದರ್ಭದಲ್ಲಿ, ಬಾಕಿ ಇರುವ ಸಾಲದ ಮೊತ್ತವನ್ನು ವಿಮೆಯ ಮೂಲಕ ಮರುಪಡೆಯಬಹುದು. ಸಾಮಾನ್ಯವಾಗಿ, ಸಾಲವನ್ನು ತೆಗೆದುಕೊಳ್ಳುವಾಗ, ಸಾಲಗಾರನು ಅಂತಹ ವಿಮೆಯ ಪ್ರೀಮಿಯಂ ಅನ್ನು ಪಾವತಿಸಿರುತ್ತಾನೆ.

ಕಾನೂನು ಉತ್ತರಾಧಿಕಾರಿಗಳು  ಸಾಲವನ್ನು ಮರುಪಾವತಿಸಬೇಕು 
ಗೃಹ ಸಾಲದ ಪ್ರಾಥಮಿಕ ಸಾಲಗಾರನು ಸಾಲವನ್ನು ಮರುಪಾವತಿ ಮಾಡುವ ಮೊದಲು ಮರಣಹೊಂದಿದಾಗ, ಸಾಲದಾತನು ಸಾಮಾನ್ಯವಾಗಿ ಆ ಸಾಲಕ್ಕೆ ಇರುವ ಸಹ-ಅರ್ಜಿದಾರರನ್ನು ಪರಿಶೀಲಿಸುತ್ತಾನೆ. ಸಹ-ಅರ್ಜಿದಾರರು ಸಾಲವನ್ನು ಪೂರೈಸಲು ಸಾಧ್ಯವಾಗದಿದ್ದರೆ, ಬ್ಯಾಂಕ್ ಸಾಲಗಾರನ ಕುಟುಂಬ ಸದಸ್ಯರು, ಕಾನೂನು ಉತ್ತರಾಧಿಕಾರಿಗಳು ಅಥವಾ ಜಾಮೀನುದಾರರನ್ನು ಸಂಪರ್ಕಿಸುತ್ತದೆ. ಅವರಲ್ಲಿ ಯಾರಾದರೂ ಗೃಹ ಸಾಲವನ್ನು ಮರುಪಾವತಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಸಾಲ ನೀಡಿದ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳು ಸುರಕ್ಷಿತ ಆಸ್ತಿಯನ್ನು ಅದರ ಮಾಲೀಕರಿಗೆ ಹಿಂದಿರುಗಿಸುತ್ತದೆ.

ಇದನ್ನೂ ಓದಿ:  Business Idea: ರೈತರನ್ನು ಲಕ್ಷಾಧಿಪತಿ ಮಾಡುವ ಮರ ಇದು, ಒಂದು ಎಕರೆಗೆ 5 ಲಕ್ಷ ಆದಾಯ!

ಆದರೆ, ನಿಗದಿತ ಸಮಯದೊಳಗೆ ಬಾಕಿ ಮೊತ್ತವನ್ನು ಪಾವತಿಸಲು ಯಾರೂ ಭರವಸೆ ನೀಡದಿದ್ದರೆ, ಸಾಲವನ್ನು ಮರುಪಡೆಯಲು ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತದೆ. ಸಾಲಗಾರನ ಮರಣದ ಕಾರಣ ವಾಹನದ ಸಾಲವನ್ನು ಮರುಪಾವತಿಸದಿದ್ದಾಗ, ಅದನ್ನು ಮರುಪಾವತಿಸಲು ಕಾನೂನು ಉತ್ತರಾಧಿಕಾರಿಗಳನ್ನು ಬ್ಯಾಂಕ್ ಕೇಳುತ್ತದೆ. ಕಾನೂನು ಉತ್ತರಾಧಿಕಾರಿ ನಿರಾಕರಿಸಿದರೆ, ಬ್ಯಾಂಕ್‌ ಬಾಕಿ ಮೊತ್ತವನ್ನು ಮರುಪಡೆಯಲು ಕಾರನ್ನು ವಶಪಡಿಸಿಕೊಂಡು ನಂತರ ಅದನ್ನು ಹರಾಜು ಹಾಕುತ್ತದೆ.
Published by:Ashwini Prabhu
First published: