5G in Karnataka: ಕರ್ನಾಟಕದಲ್ಲಿ 5ಜಿ ಇಂಟರ್ನೆಟ್! ಸಿಗೋದು ಯಾವಾಗ?
5G ಅಂದರೆ ಅತ್ಯಂತ ವೇಗದ ಇಂಟರ್ನೆಟ್ ಅಂತಾರಲ್ಲ, ಅದು ಎಷ್ಟು ಸ್ಪೀಡ್ ಇರಬಹುದು? ನಾವೆಲ್ಲ 5G ಬಳಸೋದು ಯಾವಾಗ? ಈತರ ನಿಮಗೂ ಯೋಚನೆ ಬಂದಿರಬಹುದು. ನಿಮ್ಮ ಪ್ರಶ್ನೆಗೆ ಉತ್ತರ ಸಿಗೋ ಕಾಲ ಬಂದಾಯ್ತು.
ಕೈಯಲ್ಲೇನೋ 5G ಫೋನ್ ಇದೆ! ಆದರೆ 5G ಸಿಗ್ನಲ್ಲೇ ಇಲ್ವೇ?! ಭಾರತಿಯರು ಹೀಗೆ ಯೋಚಿಸಲಿಕ್ಕೆ ತಾಗಿ ಸುಮಾರು ವರ್ಷಗಳೇ ಆಗಿಹೋಗಿವೆ. ಭಾರತದಲ್ಲಿ 5G ಸೇವೆ ಶುರುವಾಗೋದು ಯಾವಾಗ? 5G ಅಂದರೆ ಅತ್ಯಂತ ವೇಗದ ಇಂಟರ್ನೆಟ್ ಅಂತಾರಲ್ಲ, ಅದು ಎಷ್ಟು ಸ್ಪೀಡ್ ಇರಬಹುದು? ನಾವೆಲ್ಲ 5G ಬಳಸೋದು ಯಾವಾಗ? ಈತರ ನಿಮಗೂ ಯೋಚನೆ ಬಂದಿರಬಹುದು. ನಿಮ್ಮ ಪ್ರಶ್ನೆಗೆ (When 5G services launch in India) ಉತ್ತರ ಸಿಗೋ ಕಾಲ ಬಂದಾಯ್ತು. 2022 ರಲ್ಲಿಯೇ ಭಾರತದಲ್ಲಿ 5G ಸೇವೆಗಳು ಪ್ರಾರಂಭವಾಗಲಿದೆ ಎಂದು ದೂರಸಂಪರ್ಕ ಇಲಾಖೆ (DoT) ದೃಢಪಡಿಸಿದೆ. ಆರಂಭದಲ್ಲಿ 13 ಭಾರತೀಯ ನಗರಗಳಲ್ಲಿ 5G ಸೇವೆಗಳು (5G in 13 Cities) ಲಭ್ಯವಾಗಲಿವೆ. ನಂತರ ಉಳಿದ ನಗರಗಳಲ್ಲಿ 5G ಸೇವೆ ದೊರೆಯಲಿದೆ.
ಮೊದಲ ಹಂತದಲ್ಲಿ ಬೆಂಗಳೂರು, ಅಹಮದಾಬಾದ್, ಚಂಡೀಗಢ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಚೆನ್ನೈ, ಲಕ್ನೋ, ಪುಣೆ, ದೆಹಲಿ ಮತ್ತು ಮುಂಬೈ ಸೇರಿದಂತೆ 13 ನಗರಗಳು 5G ಸೇವೆಗಳನ್ನು ಪಡೆಯಲಿವೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. 224 ಕೋಟಿ ವೆಚ್ಚದ ಈ ಯೋಜನೆಯು ಡಿಸೆಂಬರ್ 31, 2021 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಯಾವ ಸಿಮ್ನಲ್ಲಿ ಮೊದಲು 5G ಇಂಟರ್ನೆಟ್ ಸಿಗುತ್ತದೆ? ಜಿಯೋ, ವೊಡಾಫೋನ್ ಮತ್ತು ಏರ್ಟೆಲ್ಗಳಲ್ಲಿ ಯಾವ ಟೆಲಿಕಾಂ ಆಪರೇಟರ್ ಮೊದಲು 5G ಸೇವೆಗಳನ್ನು ಹೊರತರುತ್ತದೆ ಎಂಬುದನ್ನು DoT ಬಹಿರಂಗಪಡಿಸಿಲ್ಲ. ಆದರೂ ಎಲ್ಲಾ ಮೂರು ಟೆಲಿಕಾಂ ಆಪರೇಟರ್ಗಳು ತಮ್ಮ 5G ಸೇವೆಗಳನ್ನು ಒಂದೇ ಸಮಯದಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ.
ಜಿಯೋ ಎಲ್ಲರಿಗಿಂತ ಮುಂದಿದೆ! ವರದಿಗಳ ಪ್ರಕಾರ, Jio, Airtel ಮತ್ತು Vodafone ಈಗಾಗಲೇ 5G ಸೇವೆಗಳನ್ನು ಪಡೆಯುವ ನಿರೀಕ್ಷೆಯಿರುವ 13 ನಗರಗಳಲ್ಲಿ ತಮ್ಮ ಪ್ರಾಯೋಗಿಕ ಸೈಟ್ಗಳನ್ನು ಸ್ಥಾಪಿಸಿವೆ. ಜಿಯೋ ಮತ್ತು ಏರ್ಟೆಲ್ ಭಾರತದಲ್ಲಿ 5G ಸೇವೆಗಳನ್ನು ಹೊರತರುವ ಮೊದಲ ಆಪರೇಟರ್ಗಳು ಎಂದು ಹೇಳಿಕೊಂಡಿವೆ
1000 ಕ್ಕೂ ಹೆಚ್ಚು ನಗರಗಳಿಗೆ 5G ಕವರೇಜ್ ಯೋಜನೆ ಜಿಯೋ ದೇಶಾದ್ಯಂತ 1000 ಕ್ಕೂ ಹೆಚ್ಚು ನಗರಗಳಿಗೆ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದೆ. ಈ ಬೃಹತ್ ಟೆಲಿಕಾಂ ಕಂಪನಿಯು ಭಾರತದಲ್ಲಿ ಹಂತ ಹಂತವಾಗಿ 5G ಅನ್ನು ಹೊರತರಲು ಯೋಜಿಸಿದೆ ಎಂದು ತಿಳಿಸಿದೆ. ಮತ್ತೊಂದೆಡೆ, ಏರ್ಟೆಲ್ನ ಭಾರ್ತಿ ಮಿತ್ತಲ್ ಕಂಪನಿಯ 5G ನೆಟ್ವರ್ಕ್ ಸಿದ್ಧವಾಗಿದೆ. ಹರಾಜು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಹೊರತರಲಿದೆ ಎಂದು ಖಚಿತಪಡಿಸಿದ್ದಾರೆ.
ಆನ್ಲೈನ್ ಶಾಪಿಂಗ್ ಅನುಭವವು ತೀವ್ರವಾಗಿ ವೇಗ ಪಡೆಯುತ್ತದೆ. 5G ಹೆಚ್ಚಿನ ಕಾರ್ಯಕ್ಷಮತೆಯ, ನೆಟ್ವರ್ಕ್ಗಳನ್ನು ನೀಡುತ್ತದೆ. ಆನ್ಲೈನ್ ಆರ್ಡರ್ ಹಾಕುವುದು, ಸಣ್ಣ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಆನ್ಲೈನ್ ವೇದಿಕೆಗಳ ಮೂಲಕ ಮಾರಾಟ ಮಾಡುವುದು ಮುಂತಾದ ಸೌಲಭ್ಯಗಳು ಇನ್ನಷ್ಟು ಅಭಿವೃದ್ಧಿಗೊಳ್ಳಲಿವೆ.
ವೈದ್ಯಕೀಯ ಸೇವೆಗಳು ಹೈ ಸ್ಪೀಡ್ ಇಂಟರ್ನೆಟ್ ಮತ್ತು ವರ್ಚುವಲ್ ರಿಯಾಲಿಟಿ ಕಂಟ್ರೋಲರ್ಗಳ ಮೂಲಕ ದೇಶದ ಯಾವುದೇ ದೂರದ ಪ್ರದೇಶದಲ್ಲಿ ಗಾಯಗೊಂಡವರು ಅಥವಾ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ವೈದ್ಯರಿಂದ ಸಾಧ್ಯವಾಗುತ್ತದೆ.
ಸ್ವಯಂ ಚಾಲಿತ ಕಾರುಗಳು ಮತ್ತು ಡ್ರೋನ್ಗಳು ಸ್ವಯಂ ಚಾಲಿತ ಕಾರುಗಳು ಹೊಸದೇನಲ್ಲ. ಪ್ರಪಂಚದಾದ್ಯಂತದ ಕೆಲವು ದೇಶಗಳು ಚಾಲಕರಹಿತ ಕಾರುಗಳನ್ನು ಪ್ರಯೋಗಿಸುತ್ತಿವೆ. ವಾಸ್ತವವಾಗಿ ದೆಹಲಿ ಮೆಟ್ರೋದ ಮೆಜೆಂಟಾ ಲೈನ್ನಲ್ಲಿ ಭಾರತದ ಮೊದಲ ಚಾಲಕರಹಿತ ರೈಲು ಕಾರ್ಯಾಚರಣೆಯನ್ನು ಕಳೆದ ವರ್ಷ ಡಿಸೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. 5G ಉತ್ತಮ ಮತ್ತು ಸುರಕ್ಷಿತ ಸ್ವಯಂ ಚಾಲಿತ ಕಾರುಗಳು, ಡ್ರೋನ್ಗಳ ಬಳಕೆಯನ್ನು ಹೆಚ್ಚು ಮಾಡಲಿದೆ.
ಹೆಚ್ಚಿನ ಇಂಟರ್ನೆಟ್ ವೇಗ ಮೊಬೈಲ್ ಫೋನ್ಗಳಲ್ಲಿ ಬಫರಿಂಗ್ ಆಗುವುದು 5G ಕಾಲದಲ್ಲಿ ಇರಲ್ಲ. ಏಕೆಂದರೆ ಮೊಬೈಲ್ ಫೋನ್ಗಳಲ್ಲಿನ ಇಂಟರ್ನೆಟ್ ವೇಗವು 4G ಗೆ ಹೋಲಿಸಿದರೆ 5G ನೆಟ್ವರ್ಕ್ನಲ್ಲಿ 100 ಪಟ್ಟು ಹೆಚ್ಚಾಗಿರುತ್ತದೆ. ಹೈ ಡೆಫಿನಿಷನ್ ಫಿಲ್ಮ್ಗಳನ್ನು ತಕ್ಷಣವೇ ಡೌನ್ಲೋಡ್ ಮಾಡಬಹುದಾಗಿದೆ. ಇದು OTT ಪ್ಲಾಟ್ಫಾರ್ಮ್ಗಳಿಗೂ ದೊಡ್ಡ ವರದಾನವಾಗಲಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ