Ancestral Property: ಪೂರ್ವಜರ ಆಸ್ತಿ ಸ್ವಯಂ-ಸ್ವಾಧೀನಕ್ಕೆ ಒಳಪಡುವುದು ಯಾವಾಗ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಮೇಲೆ ಶಿರ್ಷಿಕೆಯಲ್ಲಿ ಕೇಳಿದಂತೆ, ಈ ಸಂದರ್ಭವನ್ನು ವೈಯಕ್ತಿಕ ಕಾನೂನುಗಳ ಚೌಕಟ್ಟಿನಲ್ಲಿ ಒಳಪಟ್ಟಂತೆ ಇದು ಹಿಂದೂ ಧರ್ಮಕ್ಕೆ ಅನ್ವಯಿಸುತ್ತಿರುವುದನ್ನು ಕಲ್ಪಿಸಿಕೊಂಡು ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಭಾರತದಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ 1956 ಜಾರಿಗೆ ಬರುವುದಕ್ಕಿಂತ ಮುಂಚೆ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಇದ್ದ ನಿಯಮಾವಳಿಗಳು ಹಿಂದುಗಳಿಗಿದ್ದ ರೂಢಿಗತ ಕಾನೂನುಗಳಿಗೆ ಒಳಪಟ್ಟಿತ್ತು. ಅದರಲ್ಲೂ ವಿಶೇಷವಾಗಿ ಇವು ಮಿತಕ್ಷರ ಕಾನೂನಿನಿಂದ ಪ್ರಭಾವಿತಗೊಂಡಿದ್ದವು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಸ್ತಿ ವಿಚಾರಗಳು (Property issue) ಬಂದಾಗ ನಮ್ಮ ನೆಲದ ಕಾನೂನುಗಳು ಆಯಾ ಧರ್ಮಕ್ಕನುಸಾರವಾಗಿ ರೂಢಿಯಲ್ಲಿದ್ದು ಪ್ರತಿಯೊಬ್ಬರೂ ಅದರನ್ವಯವಾಗಿಯೇ ನಡೆದುಕೊಳ್ಳಬೇಕಾಗಿರುತ್ತದೆ. ಆದಾಗ್ಯೂ ಬಹು ಹಿಂದೂ ಜನರಲ್ಲಿ ತಮ್ಮ ಪೂರ್ವಜರ ಆಸ್ತಿಗೆ (Ancestral property) ಸಂಬಂಧಿಸಿದಂತೆ ಹಲವು ಗೊಂದಲ, ಸಂದೇಹ ಹಾಗೂ ಪ್ರಶ್ನೆಗಳಿರುವುದನ್ನು ಕಾಣಬಹುದು. ಅದರಲ್ಲೂ ವ್ಯಕ್ತಿಯೊಬ್ಬರಿಗೆ ಅವರ ಪೂರ್ವಜರ ಆಸ್ತಿ ಅವರ ಸ್ವಯಂ ಸ್ವಾಧೀನಕ್ಕೆ (Self-possession) ಯಾವಾಗ ಬರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಉತ್ತರಿಸಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ನಿಮಗೂ ತಿಳಿದುಕೊಳ್ಳಬೇಕೆಂದಿದ್ದಲ್ಲಿ ಮುಂದೆ ಓದಿ. ಮೇಲೆ ಶಿರ್ಷಿಕೆಯಲ್ಲಿ ಕೇಳಿದಂತೆ, ಈ ಸಂದರ್ಭವನ್ನು ವೈಯಕ್ತಿಕ ಕಾನೂನುಗಳ ಚೌಕಟ್ಟಿನಲ್ಲಿ ಒಳಪಟ್ಟಂತೆ ಇದು ಹಿಂದೂ ಧರ್ಮಕ್ಕೆ (Hinduism) ಅನ್ವಯಿಸುತ್ತಿರುವುದನ್ನು ಕಲ್ಪಿಸಿಕೊಂಡು ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಭಾರತದಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ 1956 ಜಾರಿಗೆ ಬರುವುದಕ್ಕಿಂತ ಮುಂಚೆ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಇದ್ದ ನಿಯಮಾವಳಿಗಳು ಹಿಂದುಗಳಿಗಿದ್ದ ರೂಢಿಗತ ಕಾನೂನುಗಳಿಗೆ ಒಳಪಟ್ಟಿತ್ತು. ಅದರಲ್ಲೂ ವಿಶೇಷವಾಗಿ ಇವು ಮಿತಕ್ಷರ ಕಾನೂನಿನಿಂದ ಪ್ರಭಾವಿತಗೊಂಡಿದ್ದವು.

ಪೂರ್ವಜರ ಆಸ್ತಿ ಎಂದರೆ ಯಾವುದು? 
ಹಿಂದೂ ಕಾನೂನು (22ನೇ ಆವೃತ್ತಿ) ವಿಷಯಕ್ಕೆ ಸಂಬಂಧಿಸಿದಂತೆ ಮುಲ್ಲಾ ಅವರು ಈ ರೀತಿ ವ್ಯಾಖ್ಯಾನಿಸುತ್ತಾರೆ, "ಪ್ರತಿಯೊಬ್ಬ ಹಿಂದೂ ಪುರುಷ ತನ್ನ ತಂದೆ, ತಂದೆಯವರ ತಂದೆ, ತಂದೆಯವರ ತಂದೆಯವರ ತಂದೆಯಿಂದ ಪಡೆದಿರುವ ಎಲ್ಲ ಸಂಪತ್ತು ಅಥವಾ ಆಸ್ತಿಯು ಪೂರ್ವಜರ ಆಸ್ತಿ ಎಂದೆನೆಸಿಕೊಳ್ಳುತ್ತದೆ". ಇನ್ನು ಮಿತಕ್ಷರ ಕಾನೂನನ್ನು ಗಮನಿಸಿದರೆ ಅದು ಹೇಳುತ್ತದೆ, ಪ್ರತಿಯೊಬ್ಬ ಮಗ, ಮೊಮ್ಮಗ ಹಾಗೂ ಮರಿ ಮೊಮ್ಮಗ ತನ್ನ ತಂದೆ, ಅಜ್ಜ, ಮುತ್ತಜ್ಜನಿಂದ ಪಡೆದುಕೊಂಡು ಬಂದ ಆಸ್ತಿಗೆ ಜನ್ಮ ಪಡೆದಾಗಿನಿಂದಲೇ ಹಕ್ಕುದಾರರಾಗಿರುತ್ತಾರೆ ಎಂದು.

ಇದನ್ನೂ ಓದಿ: Rent Agreement: ಮನೆ ಬಾಡಿಗೆಗೆ ನೀಡುವಾಗ 11 ತಿಂಗಳ ಒಪ್ಪಂದ ಮಾತ್ರ ಯಾಕೆ? ಕಾರಣ ನೋಡಿ ಮಜಾ ಇದೆ

ಮುಂದುವರೆದಂತೆ, ಹೆಣ್ಣು ಮಗು ತನ್ನ ಪೂರ್ವಜರ ಆಸ್ತಿಯಲ್ಲಿ ತನ್ನ ತಂದೆಯ ಸಹಬಾಳ್ವೆಯ ಆಸಕ್ತಿಗಾಧಾರವಾಗಿ ಸೀಮಿತವಾದ ಹಕ್ಕನ್ನಷ್ಟೇ ಪಡೆದಿರುತ್ತಾಳೆ. ಅವರು ಮಗ ಅಥವಾ ಗಂಡಿನಂತೆ ತನ್ನ ಪೂರ್ವಜರ ಆಸ್ತಿಯನ್ನು ಹೊಂದಲು ಅರ್ಹಳಾಗಿರುವುದಿಲ್ಲ. ಈ ರೀತಿಯ ಮಿತಕ್ಷರ ಕಾನೂನು ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಲಿಂಗ ತಾರತಮ್ಯ ಮಾಡಿರುವುದು ಕಂಡುಬರುತ್ತದೆ. ಅಲ್ಲದೆ ಈ ಕಾನೂನಿನ ಪಾಲನೆ ಭಾರತದ ಸಂವಿಧಾನ ನೀಡುವ ಸಮಾನತೆಯ ಮೂಲಭೂತ ಹಕ್ಕಿನ ನಿರಾಕರಣೆಯೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೆಣ್ಣು ಗಂಡು ಇಬ್ಬರಿಗೂ ಸಮಾನ ಆಸ್ತಿ
ಆದರೆ, ಈ ಕಾನೂನಿಗೆ ತಿದ್ದುಪಡಿ ತಂದು ಹೊಸ ಕಾನೂನನ್ನು 9 ಸೆಪ್ಟೆಂಬರ್ 2005 ರಿಂದ ಜಾರಿಗೊಳಿಸಲಾಗಿದೆ ಹಾಗೂ ಇದರ ಅನ್ವಯ ಮಗಳಾದವಳೂ ಸಹ ಹುಟ್ಟಿನಿಂದಲೇ ಸಹಬಾಳ್ವೆಯ ಹಕ್ಕನ್ನು ಹೊಂದಿರುತ್ತಾಳೆ ಹಾಗೂ ಒಬ್ಬ ಮಗನಂತೆಯೇ ಅವಳಿಗೂ ಸಹ ಪೂರ್ವಜರ ಆಸ್ತಿಯಲ್ಲಿ ಸಮಾನವಾದ ಹಕ್ಕಿರುತ್ತದೆ. ಪ್ರಸ್ತುತ ಇದೇ ಸ್ಥಿತಿಯನ್ನು ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳೂ ಸಹ ದೃಢೀಕರಿಸುತ್ತವೆ.

ಆದರೆ, ಈಗ ಹಿಂದೂ ಸಕ್ಸೆಷನ್ ಕಾಯಿದೆ, 1956, ಇದರಲ್ಲಿ "ಪೂರ್ವಜರ ಆಸ್ತಿ" ಈ ಪದಕ್ಕೆ ವ್ಯಾಖ್ಯಾನ ಮಾಡಲಾಗಿಲ್ಲ. ಹಾಗಾಗಿ, ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನು ಭಾರತದ ಎಲ್ಲಾ ನ್ಯಾಯಾಲಯಗಳಿಗೆ ಬದ್ಧವಾಗಿರುವುದರಿಂದ ಮತ್ತು ಹಿಂದೂ ಉತ್ತರಾಧಿಕಾರ ಕಾಯಿದೆ, 1956 ರ ಅಡಿಯಲ್ಲಿ ಯಾವುದೇ ಸ್ಪಷ್ಟವಾದ ನಿಬಂಧನೆ ಇಲ್ಲದಿರುವುದರಿಂದ, ಪೂರ್ವಜರ ಆಸ್ತಿಯನ್ನು ಸ್ವ-ಸ್ವಾಧೀನಪಡಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರವು ಸುಪ್ರೀಂ ಕೋರ್ಟ್ ಘೋಷಿಸಿದ ಕಾನೂನಿನ ಮೂಲಕ ಮತ್ತು ಅದರ ವಿವಿಧ ತೀರ್ಪುಗಳ ಅಡಿಯಲ್ಲಿ ವಿಶ್ಲೇಷಿಸಲಾಗುತ್ತದೆ.

ಇದನ್ನೂ ಓದಿ: Positive Thinking: ವೈಯಕ್ತಿಕ, ಆರ್ಥಿಕವಾಗಿ ಸದೃಢರಾಗಬೇಕೇ? ಹಾಗಿದ್ರೆ ಈ ಮೂರು ಮುತ್ತಿನಂತಹ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ

ಅಂದರೆ, ನಮಗೆ ಈ ಮೂಲಕ ತಿಳಿಯುವುದೇನೆಂದರೆ ಪೂರ್ವಜರ ಆಸ್ತಿ ಎಂಬುದಕ್ಕೆ ಇಂಥದ್ದೇ ಎಂಬ ಯಾವುದೇ ವ್ಯಾಖ್ಯಾನವಿಲ್ಲದ್ದರಿಂದ ಇದನ್ನು ಆಯಾ ಪ್ರಕರಣ ಹಾದೂ ಅದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂ ನ್ಯಾಯಾಲಯ ಕೊಟ್ಟಿರುವಂತಹ ಹಲವು ತೀರ್ಪುಗಳ ಬೆಳಕಿನಲ್ಲಿ ವಿಶ್ಲೇಷಿಸಿ ಅದಕ್ಕೆ ಸರಿ ಹೊಂದುವಂತಹ ತೀರ್ಪನ್ನು ನೀಡಲಾಗುತ್ತದೆ ಎಂಬುದನ್ನು ಗಮನಿಸಬಹುದು.
Published by:Ashwini Prabhu
First published: