Wheat Price Hike: ಹೆಚ್ಚಾಯ್ತು ಗೋಧಿ ಬೆಲೆ! ಎಲ್ಲಿ ಎಷ್ಟು ರೇಟ್? ರೈತರಿಗೆ ಸಿಗುವ ಹಣವೆಷ್ಟು?

ಈಗ ಪಂಜಾಬ್‌ನಲ್ಲಿ ಲಭ್ಯವಿರುವ ಗೋಧಿಯ ಪ್ರತಿ ಕ್ವಿಂಟಲ್‌ನ ಬೆಲೆ ಎಷ್ಟಾಗಿದೆ ಎಂದು ನೀವು ಕೇಳಿದರೆ, ಒಮ್ಮೆ ನಿಮ್ಮ ಕಣ್ಣಿನ ಹುಬ್ಬುಗಳು ಮೇಲೆ ಹೋಗುವುದಂತೂ ನಿಜ!

ಗೋಧಿ

ಗೋಧಿ

  • Share this:
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದದ (Russia Ukraine War Effect) ಪರಿಣಾಮವಾಗಿ ಈಗ ಭಾರತ ದೇಶದ ದೊಡ್ಡ ಆಹಾರದ ಬಟ್ಟಲು ಎಂದೇ ಖ್ಯಾತಿಯಾಗಿರುವ ಪಂಜಾಬ್‌ (Punjab) ರಾಜ್ಯದಲ್ಲಿ ಬೆಳೆಯುವ ಗೋಧಿ ಬೆಲೆಯು (Wheat Price Hike)  ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯನ್ನು ನೀವು ಒಂದು ಕ್ಷಣ ನಂಬಲಿಕ್ಕಿಲ್ಲ, ಆದರೆ ಇದು ಸತ್ಯವಾದ ಸಂಗತಿಯಾಗಿದೆ. ಏಕೆಂದರೆ ಈ ಯುದ್ಧದಿಂದಾಗಿ ಅಲ್ಲಿನ ಗೋಧಿ ಉತ್ಪಾದನೆ ಮೇಲೆ ದೊಡ್ಡ ಹೊಡೆತ ಬಿದ್ದು, ಜಾಗತಿಕವಾಗಿ ಗೋಧಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಈಗ ಪಂಜಾಬ್‌ನಲ್ಲಿ ಲಭ್ಯವಿರುವ ಗೋಧಿಯ ಪ್ರತಿ ಕ್ವಿಂಟಲ್‌ನ ಬೆಲೆ ಎಷ್ಟಾಗಿದೆ ಎಂದು ನೀವು ಕೇಳಿದರೆ, ಒಮ್ಮೆ ನಿಮ್ಮ ಕಣ್ಣಿನ ಹುಬ್ಬುಗಳು ಮೇಲೆ ಹೋಗುವುದಂತೂ ನಿಜ.

ಹೌದು.. ಕಳೆದ ವರ್ಷದಂತೆಯೇ 132 ಲಕ್ಷ ಮೆಟ್ರಿಕ್ ಟನ್ ಗೋಧಿ ಉತ್ಪಾದನೆಯ ಗುರಿಯ ಹೊರತಾಗಿಯೂ ಪಂಜಾಬ್ ಸರ್ಕಾರವು ಕಳೆದ ವರ್ಷ ತಾನು ಸಂಗ್ರಹಿಸಿದ್ದಕ್ಕಿಂತ ಕನಿಷ್ಠ 10 ಲಕ್ಷ ಮೆಟ್ರಿಕ್ ಟನ್ ಕಡಿಮೆ ಗೋಧಿಯನ್ನು ಈ ಭಾರಿ ಸಂಗ್ರಹಿಸುವ ನಿರೀಕ್ಷೆಯಿದೆಯಂತೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಏನು ಕಾರಣ ಎಂದು ನೀವು ತಿಳಿದುಕೊಂಡರೆ ಶಾಕ್ ಆಗುವುದಂತೂ ಖಂಡಿತ.

ಜಾಗತಿಕವಾಗಿ ಗೋಧಿಯ ಕೊರತೆ ಮತ್ತು ನಂತರ ಭಾರತೀಯ ಗೋಧಿಗೆ ಹೆಚ್ಚಿದ ಬೇಡಿಕೆ
ಖಾಸಗಿ ವ್ಯಾಪಾರಿಗಳಿಂದ ಹೆಚ್ಚಿನ ಬೆಲೆಗಳನ್ನು ಪಡೆಯುವ ಭರವಸೆಯಲ್ಲಿ ರೈತರು ಸ್ವಲ್ಪ ಗೋಧಿಯನ್ನು ಪ್ರತಿ ವರ್ಷವೂ ತಡೆ ಹಿಡಿಯುತ್ತಾರೆ. ಈ ಬಾರಿ ಹೆಚ್ಚಿನ ಗೋಧಿ ತಡೆ ಹಿಡಿಯುತ್ತಾರೆ ಎಂಬುದು ಸರ್ಕಾರದ ನಿರೀಕ್ಷೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಗೋಧಿಯ ಕೊರತೆ ಮತ್ತು ನಂತರ ಭಾರತೀಯ ಗೋಧಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

ಬೆಲೆ ಎಷ್ಟಾಗಿದೆ?
ಇಂದು, ರಾಜ್ಯದ ವಿವಿಧ ಮಂಡಿಗಳ ಕಮಿಷನ್ ಏಜೆಂಟರು ಗೋಧಿಯ (ಹಳೆಯ ದಾಸ್ತಾನು) ಮಾರುಕಟ್ಟೆ ಬೆಲೆ ಕ್ವಿಂಟಲ್‌ಗೆ 2,250 ರಿಂದ 2,300 ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವರ್ಷ ಗೋಧಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 2,015 ರೂಪಾಯಿಯನ್ನು ನಿಗದಿಪಡಿಸಲಾಗಿತ್ತು. ಈಗ ಪ್ರಸ್ತುತವಾಗಿ ನಡೆಯುತ್ತಿರುವ ಗೋಧಿಯ ಬೆಲೆಯು ಕನಿಷ್ಠ ಬೆಂಬಲ ಬೆಲೆಯನ್ನು ದಾಟಿ ಹೋಗಿದೆ ಎಂದು ಹೇಳಬಹುದು.

ಲಭ್ಯವಿಲ್ಲ ಗೋಧಿ
ಜಾಗತಿಕವಾಗಿ, ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿರುವ ಎರಡು ಯುದ್ಧಪೀಡಿತ ದೇಶಗಳ ಗೋಧಿ ಲಭ್ಯವಿಲ್ಲದ ಕಾರಣ, ಬೆಲೆಗಳು ಕನಿಷ್ಠ ಬೆಂಬಲ ಬೆಲೆಯನ್ನು ಮೀರಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬ ರೈತನ ಹಿಡುವಳಿ ಮತ್ತು ಸಂಗ್ರಹಣಾ ಸಾಮರ್ಥ್ಯದ ಆಧಾರದ ಮೇಲೆ, ಅವರು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ದರಗಳಲ್ಲಿ ಮಾರಾಟ ಮಾಡಲು ಸ್ಟಾಕ್‌ಗಳನ್ನು ತಡೆ ಹಿಡಿಯುತ್ತಾರೆ ಎಂದು ನಂಬಲಾಗಿತ್ತು.

ಇದನ್ನೂ ಓದಿ: Indian Economy: 7-8 ವರ್ಷಗಳಲ್ಲಿ ಭಾರತದ ಆರ್ಥಿಕತೆ ದ್ವಿಗುಣ! ಇದು ಓದಲೇಬೇಕಾದ ಒಳ್ಳೇ ಸುದ್ದಿ

"ಸದ್ಯಕ್ಕೆ, ಎಲ್ಲೆಲ್ಲಿ ದಾಸ್ತಾನು ಲಭ್ಯವಿದೆಯೋ, ಅಲ್ಲಿನ ಹಿಟ್ಟಿನ ಗಿರಣಿ ಮಾಲೀಕರು ಮಾತ್ರ ಮಂಡಿಗಳಿಂದ ಗೋಧಿಯನ್ನು ಖರೀದಿಸುತ್ತಿದ್ದಾರೆ. ಮುಂದಿನ ವಾರ ಹೊಸ ಗೋಧಿ ಬೆಳೆ ಬರುವುದು ಪ್ರಾರಂಭವಾದ ನಂತರ, ಹಲವಾರು ವಿದೇಶಿ ಮಾರಾಟಗಾರರು ಬಂದು ಗೋಧಿಯನ್ನು ಖರೀದಿಸಲು ಪ್ರಾರಂಭಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಪ್ರಮುಖ ಕಮಿಷನ್ ಏಜೆಂಟ್ ವಿಜಯ್ ಕಾಲ್ರಾ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

130 ಲಕ್ಷ ಮೆಟ್ರಿಕ್ ಟನ್ ಗೋಧಿಯ ಮಾರುಕಟ್ಟೆ ಆಗಮನಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದ್ದರೂ, ಶುಕ್ರವಾರದಿಂದ ಪ್ರಾರಂಭವಾಗುವ ಖರೀದಿ ಋತುವಿನಲ್ಲಿ, ಭಾರತೀಯ ಆಹಾರ ನಿಗಮ (ಎಫ್‌ಸಿಐ) ಸೇರಿದಂತೆ ಸರ್ಕಾರಿ ಏಜೆನ್ಸಿಗಳಿಂದ ಕೇವಲ 122 ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿಸಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:New IT Rules: ಏಪ್ರಿಲ್ 1ರಿಂದ ಏನೆಲ್ಲ ಬದಲಾವಣೆ ಆಗಲಿದೆ? ಬೇಗನೆ ತಿಳಿಯಿರಿ

ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಸಂಗ್ರಹಿಸಿದ ಗೋಧಿಯನ್ನು ಒಂದೆಡೆ ಸಂಗ್ರಹಿಸಿಡಲು ಸ್ಥಳವನ್ನು ಸೃಷ್ಟಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ದಾಸ್ತಾನುಗಳನ್ನು ಸ್ವೀಕರಿಸುವ ರಾಜ್ಯಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಹೇಳುತ್ತಾರೆ.
Published by:guruganesh bhat
First published: