Reliance: 3ನೇ ತ್ರೈಮಾಸಿಕದಲ್ಲಿ 20,539 ಕೋಟಿ ರೂ. ಲಾಭ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್!

Reliance Industries: ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2021-22ರ ಮೂರನೇ ತ್ರೈಮಾಸಿಕದಲ್ಲಿ 3,795 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) 2021-22ನೇ ಸಾಲಿನ ಮೂರನೆಯ (Financial Year)ತ್ರೈಮಾಸಿಕದಲ್ಲಿ 20,539 ಕೋಟಿ ರೂ. ಲಾಭ ಗಳಿಸಿದೆ. ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಎಲ್ಲ ವಿಭಾಗಗಳೂ ಶೇ. 37.9ರಷ್ಟು ಬಲಿಷ್ಠ ಬೆಳವಣಿಗೆ ಸಾಧಿಸಿವೆ. ಅರ್ಥಾತ್ ತೈಲದಿಂದ ರಾಸಾಯನಿಕ ವಲಯ(Chemical Sector), ಟೆಲಿಕಾಂನಿಂದ ಚಿಲ್ಲರೆ ಮಾರಾಟ ವಲಯದವರೆಗೆ ಈ ಬೆಳವಣಿಗೆಯನ್ನು ಸಾಧಿಸಲಾಗಿದೆ ಎಂದು ಜನವರಿ 21ರಂದು ಪ್ರಕಟಿಸಲಾಗಿದೆ.

ಡಿಜಿಟಲ್ ಸೇವೆ

ಅಮೆರಿಕದಲ್ಲಿನ ಟೆಕ್ಸಾಸ್‍ನಲ್ಲಿರುವ ಶೇಲ್ ಗ್ಯಾಸ್ ಸ್ವತ್ತಿನ ಮಾರಾಟದಿಂದ ಕಂಪನಿಯ ನಿವ್ವಳ ಲಾಭ ಒಂದೇ ಬಾರಿಗೆ 2,836 ಕೋಟಿ ರೂ. ನಷ್ಟಾಗಿದೆ. ಇದರಿಂದ ಉತ್ತರ ಅಮೆರಿಕದಲ್ಲಿ ಶೇಲ್ ಗ್ಯಾಸ್ ನಿರ್ವಹಿಸಲಿರುವ ಪಾತ್ರದ ಬಗ್ಗೆ ಕಂಪನಿಯು ರೋಮಾಂಚನಗೊಂಡಿದೆ.

ವರ್ಷದಿಂದ ವರ್ಷಕ್ಕೆ ದೇಶದ ಅತ್ಯಂತ ಮೌಲ್ಯಯುತ ಕಂಪನಿಯ ಮಾರುಕಟ್ಟೆ ನಗದೀಕರಣದಿಂದ ಅದರ ಸಮಗ್ರ ಆದಾಯವು ಮೂರನೆ ತ್ರೈಮಾಸಿಕದಲ್ಲಿ 2,09,823 ಕೋಟಿ ರೂ. ಗೇರಿದೆ. ತಾನು ಬಡ್ಡಿ, ತೆರಿಗೆ, ಸವಕಳಿ ಹಾಗೂ ಋಣಮುಕ್ತತೆಯ ನಂತರ ದಾಖಲೆಯ ಗಳಿಕೆಯನ್ನು ತೈಲದಿಂದ ರಾಸಾಯನಿಕ, ತೈಲ ಮತ್ತು ಅನಿಲ, ಚಿಲ್ಲರೆ ಮಾರಾಟ ಹಾಗೂ ಡಿಜಿಟಲ್ ಸೇವೆಗಳಿಂದ ಮಾಡಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

ಗ್ರಾಹಕರ ಧಾರಣ ಶಕ್ತಿ

ಜಿಯೋ ವೇದಿಕೆಯ ವಹಿವಾಟು ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 24,176 ಕೋಟಿ ರೂ. ಆದಾಯ ಗಳಿಸಿದ್ದು, ಪರಸ್ಪರ ಬಳಕೆಯ ಶುಲ್ಕದ ಹೊಂದಾಣಿಕೆಯ ನಂತರ ಶೇ. 13.8ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವರದಿಯಾಗಿದೆ.34.6 ಮಿಲಿಯನ್ ಬಳಕೆದಾರರ ಸೇರ್ಪಡೆಯು ಆರೋಗ್ಯಕರವಾಗಿದ್ದು, ಇದರಿಂದ ಸಿಮ್ ಏಕತ್ರೀಕರಣದಿಂದ ಉಂಟಾಗಿದ್ದ ಬಾಕಿ ಹಾಗೂ ಗ್ರಾಹಕರ ಧಾರಣ ಶಕ್ತಿಯನ್ನು ಉಳಿಸಲು ನೆರವಾಗಿದೆ ಎಂದು ಆರ್‌ಐಎಲ್ ಹೇಳಿಕೊಂಡಿದೆ.

ಇದನ್ನೂ ಓದಿ: Digital India Sale: ಗಣರಾಜ್ಯೋತ್ಸವಕ್ಕೆ ರಿಲಾಯನ್ಸ್‌ನಿಂದ ಭರ್ಜರಿ ಆಫರ್! ರಿಯಾಯಿತಿ ಬೆಲೆಗೆ ಉತ್ಪನ್ನಗಳನ್ನು ಖರೀದಿಸುವ ಅವಕಾಶ

ರಿಲಯನ್ಸ್ ಇಂಡಸ್ಟ್ರೀಸ್‍ನ ಪ್ರತಿ ಶೇರು ಬೆಲೆಯ ಗುರಿಯನ್ನು 2,925 ರೂ.ಗೆ ನಿಗದಿಗೊಳಿಸುವ ತನ್ನ ನೀತಿಯನ್ನು ಮಾರ್ಗನ್ ಸ್ಟ್ಯಾನ್ಲಿ ಕಾಯ್ದುಕೊಂಡಿದೆ. “ಕಂಪನಿಯು ಹೆಚ್ಚುವರಿ ಟೆಲಿಕಾಂ ಆದಾಯ, ಅನಿಲ ಋಣಮುಕ್ತತೆ ಹಾಗೂ ಚಿಲ್ಲರೆ ಮಾರಾಟದಲ್ಲಿನ ಲಾಭ ಪ್ರಮಾಣದಿಂದ ಶೇ. 5ರಷ್ಟು ಬೆಳವಣಿಗೆ ಸಾಧಿಸಿರುವುದಾಗಿ ವರದಿ ಮಾಡಿದೆ. ಹೀಗಿದ್ದೂ, ಒಟ್ಟು ಟೆಲಿಕಾಂ ಚಂದಾದಾರರ ಸಂಖ್ಯೆ ಈಗಲೂ ಪ್ರಮುಖವಾಗಿ ಋಣಾತ್ಮಕವಾಗಿಯೇ ಇದೆ. ಒಟ್ಟಾರೆ ಗಳಿಕೆಯ ಕತೆಯು ಸ್ಥಿರ ಪ್ರದರ್ಶನ ನೀಡುತ್ತಿದೆ” ಎಂದು ಮಾರ್ಗನ್ ಸ್ಟ್ಯಾನ್ಲಿ ಹೇಳಿದೆ.

ಬಲಿಷ್ಠ ಜಾಲದ ವಿಸ್ತರಣೆ

ಮತ್ತೊಂದು ಸಂಶೋಧನಾ ಸಂಸ್ಥೆ ಜೆಫ್ಫರೀಸ್ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಶೇರು ಬೆಲೆಗೆ ನಿಗದಿಗೊಳಿಸಿರುವ 2,950 ರೂ. ಗುರಿಯನ್ನು ಮುಂದುವರಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗಳಿಸಿರುವ ಲಾಭಾಂಶಕ್ಕಿಂತ ಶೇ. 6ರಷ್ಟು ಋಣಮುಕ್ತತೆ ಬೆಳವಣಿಗೆ ಮುಂದಿದೆ. ಬಲಿಷ್ಠ ಜಾಲದ ವಿಸ್ತರಣೆ, ಆದಾಯ ಗಳಿಕೆ, ಲಾಭಾಂಶದಲ್ಲಿನ ಸುಧಾರಣೆ ಪ್ರಮುಖವಾಗಿ ಒತ್ತು ನೀಡಬಹುದಾದ ಅಂಶಗಳಾಗಿವೆ ಎಂದು ಅದು ಹೇಳಿದೆ.

ಜಿಯೋ ಹೊಂದಿರುವ ಚಂದಾದಾರರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಈಚೆಗೆ ಜಿಯೋ ಸಂಸ್ಥೆಯು ತನ್ನ ಸೇವಾ ದರವನ್ನು ಹೆಚ್ಚಿಸಿರುವುದು ಜಿಯೋದಿಂದ ಗ್ರಾಹಕರು ಹಿಮ್ಮುಖವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಹೀಗಿದ್ದೂ ಬಲಿಷ್ಠ ಲಾಭಾಂಶ ನಿರ್ವಹಣೆ ಧನಾತ್ಮಕ ಅಚ್ಚರಿಯಾಗಿದೆ. ತೈಲ ಸಂಸ್ಕರಣಾ ಘಟಕಗಳು ಸ್ಥಿರವಾಗಿವೆ. ಆದರೆ, ಚೀನಾದ ದುರ್ಬಲ ಬೇಡಿಕೆಯಿಂದಾಗಿ ಪೆಟ್ರೋಕೆಮಿಕಲ್ ಮೃದುವಾದ ಹೊಡೆತ ಅನುಭವಿಸಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: Reliance Jio: 6Gಯತ್ತ ಹೆಜ್ಜೆ ಹಾಕಿದ ಜಿಯೋ.. 5Gಗಿಂತ 100 ಪಟ್ಟು ವೇಗ!

ಲಾಭದಲ್ಲಿ ಜಿಯೋ:

ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2021-22ರ ಮೂರನೇ ತ್ರೈಮಾಸಿಕದಲ್ಲಿ 3,795 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಜಿಯೋ ಚಂದಾದಾರರ ಸಂಖ್ಯೆ 421.0 ದಶಲಕ್ಷಕ್ಕೆ ತಲುಪಿದ್ದು, ಈ ಸಂಖ್ಯೆಯಲ್ಲಿ 10.2 ದಶಲಕ್ಷದಷ್ಟು ನಿವ್ವಳ ಹೆಚ್ಚಳ ಕಂಡುಬಂದಿದೆ.
Published by:vanithasanjevani vanithasanjevani
First published: