ಚಾಟ್‌ಜಿಪಿಟಿ.. ಚಾಟ್‌ಜಿಪಿಟಿ.. ಎಲ್ಲೆಡೆ ಚಾಟ್‌ಜಿಪಿಟಿ (ChatGPT) . ವಿವಿಧ ಪಶ್ನೆಗಳಿಗೆ (Question) ಉತ್ತರಿಸುವ ಚಾಟ್ ಬಾಟ್ (Chatbot) ವಿಶ್ವದಲ್ಲಿ ಮೋಡಿ ಮಾಡುತ್ತಿದೆ. ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ, ಪರೀಕ್ಷೆ ಬರೆಯುವ, ಪ್ರಬಂಧ ಬರೆಯುವ ಚಾಟ್ ಬಾಟ್ ಮನುಷ್ಯನನ್ನೇ ಹಿಂದಿಕ್ಕಿ ಸವಾಲುಗಳನ್ನು ಬಗೆಹರಿಸುತ್ತಿದೆ, ಹೀಗಾಗಿ ಯಂತ್ರವೇ (Machine) ಎಲ್ಲಾ ಮಾಡಿದರೆ ಮನುಷ್ಯನಿಗೆ ಕೆಲಸವೇನೂ, ಈ ರೆಡಿಫುಡ್ ವಿದ್ಯಾರ್ಥಿಗಳಿಗೆ (Students) ಇನ್ನೂ ದೊಡ್ಡ ಹಾನಿ, ಇದರಿಂದ ದುರಪಯೋಗಗಳು ಹೆಚ್ಚಾಗುತ್ತಿವೆ ಎಂತೆಲ್ಲಾ ಟೀಕೆಗಳು, ವಿರೋಧಗಳು, ಕಳವಳ ವ್ಯಕ್ತವಾಗುತ್ತಿದೆ. ಹಲವು ವಿಶ್ವವಿದ್ಯಾನಿಲಯಗಳು ಈ ಅತ್ಯಾಧುನಿಕ ಟೆಕ್ ಸೇವೆಗೆ ಈಗಾಗ್ಲೇ ನಿಷೇಧ ಕೂಡ ಹೇರಿವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಚಾಟ್‌ಜಿಪಿಟಿ ಅನ್ನು ಬಳಸದಂತೆ ಆದೇಶ ಹೊರಡಿಸಿವೆ.
ಚಾಟ್‌ಜಿಪಿಟಿ ಪರ ಬ್ಯಾಟ್ ಬೀಸಿದ ನಾರಾಯಣ ಮೂರ್ತಿ!
ಹೀಗೆ ChatGPT ಕೃತಕ ಬುದ್ಧಿಮತ್ತೆ (AI) ಚಾಲಿತ ಚಾಟ್‌ಬಾಟ್ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದರೆ, ಇತ್ತ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿಯವರು ಈ ಟೆಕ್ನಾಲಜಿ ಬಗ್ಗೆ ಬ್ಯಾಟಿಂಗ್ ಮಾಡಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ AI ಚಾಟ್‌ಬಾಟ್ ಅನ್ನು ನಿಷೇಧಿಸುವುದು ಒಳ್ಳೆಯ ಆಲೋಚನೆಯಲ್ಲ ಎಂದ ಹೇಳಿದ್ದಾರೆ.
"ಇದು ಅತ್ಯಂತ ಶಕ್ತಿಯುತ ಸಾಧನ"
ಚಾಟ್‌ಜಿಪಿಟಿ ಸೇವೆ ಬಗ್ಗೆ ಮಾತನಾಡಿದ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿಯವರು "ನನ್ನ ಮಗ ಹಲವಾರು ತಿಂಗಳುಗಳ ಹಿಂದೆ ನನಗೆ ಚಾಟ್ ಜಿಪಿಟಿಯನ್ನು ಪರಿಚಯಿಸಿದನು. ಇದನ್ನು ಬಳಕೆ ಮಾಡಿದ ನಂತರ ಇದರ ಬಗ್ಗೆ ನನಗೆ ತಿಳಿಯಿತು. ಜನರಿಗೆ ಮಾಹಿತಿ ನೀಡುವಲ್ಲಿ ಇದು ಅತ್ಯಂತ ಶಕ್ತಿಯುತ ಸಾಧನವಾಗಿದೆ ಮತ್ತು ಇದು ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದರು.
ಇದನ್ನೂ ಓದಿ: ನಾರಾಯಣ ಮೂರ್ತಿಯವರ ದಿನ ಶುರುವಾಗೋದೇ ಆಫೀಸ್‌ನಲ್ಲಂತೆ! ಇನ್ಫೋಸಿಸ್ ಕಟ್ಟಿ ಬೆಳೆಸೋದು ಅಂದ್ರೆ ಸುಮ್ನೇನಾ?
"ನಿಷೇಧ ಹೇರಿರುವುದು ಒಳ್ಳೆಯ ಆಲೋಚನೆಯಲ್ಲ"
ಹಲವು ವಿಶ್ವವಿದ್ಯಾನಿಲಯದಲ್ಲಿ ಚಾಟ್ ಜಿಪಿಟಿಯನ್ನು ಬ್ಯಾನ್ ಮಾಡಿದ್ದಾರೆ. ಆದರೆ ವಿಶ್ವವಿದ್ಯಾನಿಲಯಗಳು ಹೇರಿರುವ ಈ ನಿಷೇಧ ಒಳ್ಳೆಯ ಯೋಚನೆಯಲ್ಲ. ಏಕೆಂದರೆ ನಮ್ಮ ಯುವಕರು ಚಾಟ್ ಜಿಪಿಟಿಯನ್ನು ಬಳಸಿಕೊಂಡು ಬಹಳ ಬಲವಾದ ವಾದಗಳನ್ನು, ಲೇಖನಗಳನ್ನು, ಉತ್ತರಗಳನ್ನು ತಯಾರಿಸಲು ಎಷ್ಟು ಬುದ್ಧಿವಂತರಾಗಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ, ಇದು ಕೂಡ ಅವರಿಗೆ ಒಂದು ರೀತಿಯ ಪರೀಕ್ಷೆಯಾಗಿದೆ. ಹೀಗಾಗಿ ಇದರ ನಿಷೇಧ ಒಳ್ಳೆಯ ಚರ್ಚೆಯಲ್ಲ ಅನ್ನೋದು ನನ್ನ ಭಾವನೆ ಎಂದಿದ್ದಾರೆ.
'ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳಬೇಕು'
ಭಾರತವು ತಂತ್ರಜ್ಞಾನವನ್ನು ತುಂಬು ಹೃದಯದಿಂದ ಅಳವಡಿಸಿಕೊಳ್ಳಬೇಕು ಏಕೆಂದರೆ ತಂತ್ರಜ್ಞಾನವು ದೇಶವನ್ನು ಫಲಾನುಭವಿಯನ್ನಾಗಿ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತದೆ ಎಂದು ನಾರಾಯಣ ಮೂರ್ತಿ ತಿಳಿಸಿದರು.
ಏನಿದು ಚಾಟ್‌ಜಿಪಿಟಿ?
ಚಾಟ್‌ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಂಶೋಧನಾ ಕಂಪನಿ ಓಪನ್‌ಎಐ ಅಭಿವೃದ್ಧಿಪಡಿಸಿದ AI-ಚಾಲಿತ ಚಾಟ್‌ಬಾಟ್ ಆಗಿದೆ. ಇದು ಪಠ್ಯರೂಪದಲ್ಲಿ ನಾವು ಸಲ್ಲಿಸುವ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಅವಕ್ಕೆ ಪಠ್ಯರೂಪದಲ್ಲೇ ಉತ್ತರಗಳನ್ನು ಕೊಡುವ ಕೆಲಸ ಮಾಡುತ್ತದೆ. ಗೂಗಲ್ ಚರ್ಚ್‌ಗಿಂತ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಈ AI ಬೆಂಬಲಿತ ಚಾಟ್‌ಬಾಟ್ ಇಂಟರ್ನೆಟ್ ಅಲ್ಲಿ ಬಿರುಗಾಳಿ ಎಬ್ಬಿಸಿದೆ.
ChatGPT ಮೇಲೆ ನಿಷೇಧ
ChatGPT ಯಶಸ್ಸಿನ ನಂತರ, ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳು (ಹ್ಯಾಕರ್‌ಗಳು ಸಹ) ಶೈಕ್ಷಣಿಕ ಕಾರ್ಯಯೋಜನೆಗಳು ಮತ್ತು ಕಂಪ್ಯೂಟರ್ ಕೋಡ್‌ಗಳನ್ನು ಬರೆಯಲು ವೇದಿಕೆಯನ್ನು ಬಳಸುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ. ಬೆಂಗಳೂರು ಮೂಲದ ಆರ್‌ವಿ ವಿಶ್ವವಿದ್ಯಾನಿಲಯ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ), ನ್ಯೂಯಾರ್ಕ್ ಸಿಟಿ ಮತ್ತು ಸಿಯಾಟಲ್‌ನಲ್ಲಿರುವ ಕೆಲವು ಸಾರ್ವಜನಿಕ ಶಾಲೆಗಳು ಮತ್ತು ಫ್ರೆಂಚ್ ಯೂನಿವರ್ಸಿಟಿ ಸೈನ್ಸಸ್ ಪೊ ನಂತಹ ಹಲವಾರು ಸಂಸ್ಥೆಗಳು ಈ ವರ್ಷದ ಆರಂಭದಲ್ಲಿ ಚಾಟ್‌ಜಿಪಿಟಿಯನ್ನು ನಿಷೇಧಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ