Windfall Tax: ವಿಂಡ್ ಫಾಲ್ ಟ್ಯಾಕ್ಸ್ ಎಂದರೇನು? ಈ ಬಗ್ಗೆ ಮಾರುಕಟ್ಟೆಯಲ್ಲಿ ಪ್ರತಿಕ್ರಿಯೆ ಹೇಗಿದೆ?

ಇತ್ತೀಚಿನ ಸಂದರ್ಶನವೊಂದರಲ್ಲಿ ONGC ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಅಲ್ಕಾ ಮಿತ್ತಲ್ ಅವರು ಅಂತಹ ಯಾವುದೇ ಸಂದೇಶವನ್ನು ಅವರು ಸರ್ಕಾರದಿಂದ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ, ಆದಾಗ್ಯೂ ಈ ವಿಂಡ್ ಫಾಲ್ ತೆರಿಗೆ ಅಂದರೇನು ಹಾಗೂ ಇದರ ಅರ್ಥವೇನು ಎಂಬುದರ ಕುರಿತು ಇಲ್ಲಿ ತಿಳಿಯೋಣ.

ವಿಂಡ್ ಫಾಲ್ ಟ್ಯಾಕ್ಸ್

ವಿಂಡ್ ಫಾಲ್ ಟ್ಯಾಕ್ಸ್

  • Share this:
ಇತ್ತೀಚೆಗೆ ಕಚ್ಚಾತೈಲ ಬೆಲೆಯು (Price of crude oil) ದಾಖಲೆಯ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ತೈಲ (Oil) ಮತ್ತು ಅನಿಲ ಉತ್ಪಾದಕರು (Gas producers) ವಿಂಡ್ ಫಾಲ್ ಟ್ಯಾಕ್ಸ್ (Windfall Tax) ಕಟ್ಟುವಂತೆ ಸರ್ಕಾರ ಕೇಳಬಹುದೆಂಬ ದಟ್ಟವಾದ ಮಾತುಗಳು ಕೇಳಿಬರುತ್ತಿವೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ (Interview) ONGC ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಅಲ್ಕಾ ಮಿತ್ತಲ್ ಅವರು ಅಂತಹ ಯಾವುದೇ ಸಂದೇಶವನ್ನು ಅವರು ಸರ್ಕಾರದಿಂದ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ, ಆದಾಗ್ಯೂ ಈ ವಿಂಡ್ ಫಾಲ್ ತೆರಿಗೆ ಅಂದರೇನು ಹಾಗೂ ಇದರ ಅರ್ಥವೇನು ಎಂಬುದರ ಕುರಿತು ಇಲ್ಲಿ ತಿಳಿಯೋಣ.

ವಿಂಡ್ ಫಾಲ್ ಒಂದು ಜಾಕ್‌ಪಾಟ್‌ನಂತಿದೆಯೇ?

ಹೌದು, ನೀವು ಅನಿರೀಕ್ಷಿತವಾಗಿ ಬಹಳಷ್ಟು ಹಣವನ್ನು ಗಳಿಸಿದಾಗ ಅದಕ್ಕೆ ಕೇವಲ ಒಂದು-ಬಾರಿ ತೆರಿಗೆ ಇರುತ್ತದೆ. ತೈಲ ಮತ್ತು ಅನಿಲ ಉತ್ಪಾದಕರು ಹಠಾತ್ತನೆ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ, ಏಕೆಂದರೆ ರಷ್ಯಾ-ಉಕ್ರೇನ್ ಸಂಘರ್ಷವು ಪೂರೈಕೆ ಅಡಚಣೆಯನ್ನು ಉಂಟುಮಾಡಿದೆ, ಕಚ್ಚಾ ಬೆಲೆಗಳು ಬ್ಯಾರೆಲ್‌ಗೆ 14 ವರ್ಷಗಳ ಗರಿಷ್ಠ $ 139 ಅನ್ನು ಮುಟ್ಟಿದ್ದರ ಪರಿಣಾಮ ತೈಲ ಮತ್ತು ಅನಿಲ ಉತ್ಪಾದಕರು ಅತಿ ಹೆಚ್ಚು ಹಣಗಳಿಸುವಂತಾಗಿದೆ.

ಅಲ್ಲದೆ, ಈ ಕಂಪನಿಗಳು ತಮ್ಮ ದಕ್ಷತೆಯನ್ನು ಸುಧಾರಿಸಿದ ಕಾರಣದಿಂದಾಗಲಿ ಅಥವಾ ಅವರು ಮಾಡಿದ ಯಾವುದೇ ಆವಿಷ್ಕಾರದ ಕಾರಣದಿಂದಾಗಲಿ ಹಣವನ್ನು ಗಳಿಸುತ್ತಿಲ್ಲ, ಆದರೆ ಅವರು ಯಾವುದೇ ರೀತಿಯ ಅರ್ಹವಾದ ಕೆಲಸ ಮಾಡದೆ ಈ ದೊಡ್ಡ ಲಾಭವನ್ನು ಗಳಿಸುತ್ತಿದ್ದಾರೆ.

ಆದ್ದರಿಂದ, ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $ 70 ಕ್ಕಿಂತ ಹೆಚ್ಚಾದಾಗಲೆಲ್ಲಾ ತೆರಿಗೆಯು ಅನ್ವಯಿಸುತ್ತದೆ ಮತ್ತು ಈ ತೆರಿಗೆಯಿಂದ ಬರುವ ಆದಾಯವನ್ನು ನಂತರ ಗ್ರಾಹಕರ ಇಂಧನ ಬಿಲ್‌ಗಳಿಗೆ ಸಬ್ಸಿಡಿ ನೀಡಲು ಬಳಸಲಾಗುತ್ತದೆ.

ಅಂದರೆ, ಸರಳವಾಗಿ ಹೇಳಬೇಕೆಂದರೆ ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯನ್ನೇ ವಿಂಡ್ ಫಾಲ್ ಟ್ಯಾಕ್ಸ್ ಅಥವಾ ತೆರಿಗೆ ಎಂದು ಕರೆಯಲಾಗುತ್ತದೆ.

ಆದರೆ ಈಗ ಏಕೆ?

2018ರಲ್ಲಿ ತೈಲ ಬೆಲೆಗಳು ಬ್ಯಾರೆಲ್‌ಗೆ $80 ದಾಟಿದಾಗಲೂ ಇಂತಹ ತೆರಿಗೆ ನೀತಿಯೊಂದನ್ನು ಜಾರಿಗೊಳಿಸುವ ಬಗ್ಗೆ ನಿರೂಪಕರ ಮನಸ್ಸಿನಲ್ಲಿತ್ತು. ತದನಂತರ, ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಯಿಂದ ಹಿಂದೆ ಸರಿದ ಮೇಲೆ ಯುಎಸ್ ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿತ್ತು.

ಇದನ್ನೂ ಓದಿ:  Mutual Fund: ಮ್ಯೂಚುವಲ್ ಫಂಡ್‌ ಹಣವನ್ನು ಉತ್ತರಾಧಿಕಾರಿಗಳಿಗೆ ವರ್ಗಾಯಿಸುವುದು ಹೇಗೆ?

ಈಗ ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರ ಏರಿಕೆಯೊಂದಿಗೆ ಈ ತೆರಿಗೆ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಹಂಗೇರಿ ಮತ್ತು ಇಟಲಿಯಂತಹ ಕೆಲವು ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ಈ ತೆರಿಗೆಯನ್ನು ವಿಧಿಸಿವೆ ಮತ್ತು ಕಳೆದ ಗುರುವಾರ, ಯುನೈಟೆಡ್ ಕಿಂಗ್‌ಡಮ್ ಸುಮಾರು £5 ಶತಕೋಟಿ ಸಂಗ್ರಹಿಸಲು ಒಂದು ವರ್ಷಕ್ಕೆ ಹೆಚ್ಚುವರಿ 25 ಪ್ರತಿಶತ ಲೆವಿಯನ್ನು ಘೋಷಿಸಿದೆ.

ಮಾರುಕಟ್ಟೆಯ ಪ್ರತಿಕ್ರಿಯೆ

ತೆರಿಗೆಯ ಬಗ್ಗೆ ವರದಿಗಳು ಹೊರಬಂದ ಕೆಲವು ದಿನಗಳ ನಂತರ, ಒಎನ್‍ಜಿಸಿ ಮತ್ತು ಬಿಪಿಸಿಎಲ್ ಷೇರುಗಳು ಕ್ರಮವಾಗಿ 9 ಪ್ರತಿಶತ ಮತ್ತು 5 ಪ್ರತಿಶತಗಳಿಂದ ಸರಿದೂಗಿಸಲ್ಪಟ್ಟವು.

ಒಎನ್‌ಜಿಸಿ ಬಗೆಗಿನ ತನ್ನ ಇತ್ತೀಚಿನ ವರದಿಯಲ್ಲಿ, ನೋಮುರಾ ಕಂಪನಿಯು "ಕಳೆದ ಕೆಲವು ವರ್ಷಗಳಿಂದ ತೀವ್ರವಾಗಿ ಡಿ-ರೇಟ್ ಆಗಿದೆ" ಮತ್ತು ವಿಂಡ್‌ಫಾಲ್ ತೆರಿಗೆಗಳು ಇದಕ್ಕೆ ಪ್ರಮುಖ ಪ್ರಚೋದಕವಾಗಿದೆ ಎಂದು ಗಮನಿಸಿದೆ.

ಅಲ್ಲದೆ ಅದು ತೈಲ ವಿಚಾರದಲ್ಲಿ ಪ್ರತಿ ಬ್ಯಾರೆಲ್ ಗೆ 5 ಡಾಲರ್ ಹೆಚ್ಚಾದರೆ ಅದು ಒಎನ್‍ಜಿಸಿಯ ಆರ್ಥಿಕ ವರ್ಷ 23ರ ಸ್ಟ್ಯಾಂಡ್‌ಅಲೋನ್ ಇಪಿಎಸ್ ಮೇಲೆ 8 ಪ್ರತಿಶತದಷ್ಟು (Rs 2.67/sh) ಪರಿಣಾಮ ಬೀರುತ್ತದೆ ಮತ್ತು ಅನಿಲ ವಿಚಾರದಲ್ಲಿ ಪ್ರತಿ $0.5/mmbtu ಬದಲಾವಣೆಯು ಒಎನ್‍ಜಿಸಿಯ ಆರ್ಥಿಕ ವರ್ಷ 23 ಸ್ಟ್ಯಾಂಡ್‌ಲೋನ್ ಇಪಿಎಸ್ ಮೇಲೆ 4 ಪ್ರತಿಶತದಷ್ಟು ಪರಿಣಾಮ ಬೀರಬಹುದು ಎಂದು ನೋಮುರಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದರಿಂದ ಸರ್ಕಾರಕ್ಕೆ ಸಹಾಯವಾಗಲಿದೆಯೆ?

ಹೌದು ಖಚಿತವಾಗಿ. ಕೇಂದ್ರೀಯ ಬ್ಯಾಂಕ್ ತನ್ನ ಹೊಂದಾಣಿಕೆಯ ನಿಲುವನ್ನು ಹಿಂತೆಗೆದುಕೊಳ್ಳುತ್ತಿರುವಾಗ, ಹೆಚ್ಚಿನ ವೆಚ್ಚದೊಂದಿಗೆ ಆರ್ಥಿಕತೆಯನ್ನು ಬೆಂಬಲಿಸಬೇಕಾದಾಗ ಮತ್ತು ಹೆಚ್ಚುತ್ತಿರುವ ಕಚ್ಚಾ ಬೆಲೆಗಳಿಂದಾಗಿ ಚಾಲ್ತಿ ಖಾತೆ ಕೊರತೆ ಉಂಟಾದಾಗ ಅದಕ್ಕೆ ತೆರಿಗೆಗಳು ಬೇಕಾಗುತ್ತವೆ.

ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದರೊಂದಿಗೆ - ಪೆಟ್ರೋಲ್ ಮೇಲೆ ರೂ 8 ಮತ್ತು ಡೀಸೆಲ್ ಮೇಲೆ ರೂ 6 ಅನ್ನು ಇಳಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತದೆ, ಇದನ್ನು ಚೇತರಿಸಿಕೊಳ್ಳಬೇಕೆಂದರೆ ವಿಂಡ್‌ಫಾಲ್ ತೆರಿಗೆ ಖಂಡಿತ ಸಹಾಯ ಮಾಡಬಹುದಾಗಿದೆ.

ಇದನ್ನೂ ಓದಿ:   Fixed Deposits: ಕೈಯಲ್ಲಿರುವ ಹಣವನ್ನು FD ಮಾಡಬೇಕೇ? ಈ ಸುದ್ದಿಯನ್ನು ತಪ್ಪದೇ ಓದಿ!

ಆದರೆ, ಇದನ್ನು ವಿಧಿಸಬೇಕಾದ ಸಂದರ್ಭದಲ್ಲಿ ಸರ್ಕಾರ ಪರಿಗಣಿಸಬೇಕಾದ ಇತರೆ ಅಂಶಗಳಿವೆ. ಮೊದಲನೇಯದಾಗಿ ಸರ್ಕಾರ ತೈಲ ಉತ್ಪಾದಕರೊಂದಿಗೆ ಉತ್ಪಾದನೆ-ಹಂಚಿಕೆ ಒಪ್ಪಂದಗಳಿಗೆ (PSC) ಸಹಿ ಮಾಡಿದ್ದು, ಅವುಗಳಿಂದ ಲಾಭಾಂಶವನ್ನು ಸರ್ಕಾರ ಪಡೆದುಕೊಳ್ಳುತ್ತಿದೆ.

ಆದ್ದರಿಂದ, ಈ ತೆರಿಗೆಯಿಂದಾಗಿ ಸರ್ಕಾರ ಲಾಭದ ಪಾಲನ್ನು ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದು. ನಂತರ, ತೈಲ ಮತ್ತು ಅನಿಲ ಉತ್ಪಾದಕರು ಸೇರಿದಂತೆ ಪಿಎಸ್‍ಯುಗಳಿಂದ ಸರ್ಕಾರವು ಉದಾರ ಲಾಭಾಂಶವನ್ನು ಪಡೆಯುತ್ತಿದೆ.

ಕಳೆದ ನವೆಂಬರ್ ‌ನಲ್ಲಿ ಡಿಐಪಿಎಎಂ ಕಾರ್ಯದರ್ಶಿ ಒಎನ್‌ಜಿಸಿ 4,180 ಕೋಟಿ ರೂಪಾಯಿ ಮತ್ತು ಬಿಪಿಸಿಎಲ್ 575 ಕೋಟಿ ರೂಪಾಯಿ ಲಾಭಾಂಶವನ್ನು ಪಾವತಿಸಿದೆ ಎಂದು ಟ್ವೀಟ್ ಮಾಡಿದ್ದರು. ಹಾಗಾಗಿ ಈ ಹೊಸ ತೆರಿಗೆಯನ್ನು ಪಾವತಿಸುವುದರಿಂದ ಲಾಭವು ಕಡಿಮೆಯಾದರೆ, ಈ ಲಾಭಾಂಶಗಳು ಸಹ ಗಮನಾರ್ಹವಾಗಿ ಕಡಿಮೆಯಾಗುತ್ತವೆ.
Published by:Ashwini Prabhu
First published: