• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Divya Gokulnath: ಭಾರತೀಯ ಶ್ರೀಮಂತ ಮಹಿಳೆ ದಿವ್ಯಾ ಗೋಕುಲನಾಥ್‌ ಪಡೆಯುವ ವೇತನ ಎಷ್ಟು? ಇವರ ಸಾಧನೆಯ ಕಥೆ ಇಲ್ಲಿದೆ

Divya Gokulnath: ಭಾರತೀಯ ಶ್ರೀಮಂತ ಮಹಿಳೆ ದಿವ್ಯಾ ಗೋಕುಲನಾಥ್‌ ಪಡೆಯುವ ವೇತನ ಎಷ್ಟು? ಇವರ ಸಾಧನೆಯ ಕಥೆ ಇಲ್ಲಿದೆ

ಬೈಜೂಸ್​ ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್​

ಬೈಜೂಸ್​ ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್​

ಬೈಜು ರವೀಂದ್ರನ್ ಅವರ ಪತ್ನಿ ದಿವ್ಯಾ ಗೋಕುಲನಾಥ್ ಅವರು ದೇಶದ ಶ್ರೀಮಂತ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಾ. ಹಾಗಿದ್ರೆ ಅವರು ಯಾರು? ಅವರ ಆಸ್ತಿಯ ನಿವ್ವಳ ಮೌಲ್ಯ ಎಷ್ಟು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಮುಂದೆ ಓದಿ ...
  • Share this:

ಬೈಜು ರವೀಂದ್ರನ್‌ ಅವರ ಥಿಂಕ್‌ & ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿದೇಶಿ ಹೂಡಿಕೆ ಕಾನೂನನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೈಜೂಸ್‌ ಸಿಇಒ ರವೀಂದ್ರನ್‌ (Byju Raveendran) ಮನೆ ಹಾಗೂ ಅವರ ಎರಡು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಎಲ್ಲದರ ಮಧ್ಯೆ ಬೈಜು ರವೀಂದ್ರನ್‌ ಹಾಗೂ ಅವರ ಪತ್ನಿ ದಿವ್ಯಾ ಗೋಕುಲನಾಥ್‌ (Divya Gokulnath) ಕಂಪನಿಯನ್ನು ಇಷ್ಟು ಎತ್ತರಕ್ಕೆ ಕಟ್ಟಿ ನಿಲ್ಲಿಸಲು ಸಾಕಷ್ಟು ಕಷ್ಟಪಟ್ಟಿದ್ದು ಸುಳ್ಳಲ್ಲ. ಬೈಜೂಸ್‌ (BYJU'S) ಅನ್ನು ಇಷ್ಟು ದೊಡ್ಡ ಕಂಪನಿಯಾಗಿ ಮಾಡುವಲ್ಲಿ ಈ ಇಬ್ಬರ ಪರಿಶ್ರಮ ಸಾಕಷ್ಟಿದೆ.


ಈ ಮಧ್ಯೆ ಮಧ್ಯಮ ವರ್ಗದ ಶಿಕ್ಷಕಿಯಾಗಿದ್ದ ಬೈಜು ರವೀಂದ್ರನ್ ಅವರ ಪತ್ನಿ ದಿವ್ಯಾ ಗೋಕುಲನಾಥ್ ಅವರು ದೇಶದ ಶ್ರೀಮಂತ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಾ. ಹಾಗಿದ್ರೆ ಅವರು ಯಾರು? ಹಾಗೂ ಅವರ ಆಸ್ತಿಯ ನಿವ್ವಳ ಮೌಲ್ಯ ಎಷ್ಟು? ಅವರು ಪಡೆಯುವ ವೇತನ ಎಷ್ಟು? ಅಷ್ಟಕ್ಕೂ ಏನಿದು ವಿದೇಶಿ ಹೂಡಿಕೆ ಕಾನೂನು ಉಲ್ಲಂಘನೆ ಪ್ರಕರಣ ಅನ್ನೋದನ್ನು ನೋಡೋಣ.


ದಿವ್ಯಾ ಗೋಕುಲನಾಥ್‌ ಆಸ್ತಿಯ ನಿವ್ವಳ ಮೌಲ್ಯ ಎಷ್ಟು?


ಬೈಜೂಸ್‌ ಸಹ-ಸಂಸ್ಥಾಪಕಿ ಮತ್ತು ಬೈಜು ರವೀಂದ್ರನ್ ಅವರ ಪತ್ನಿ ದಿವ್ಯಾ ಗೋಕುಲನಾಥ್ ಶ್ರೀಮಂತ ಭಾರತೀಯ ಮಹಿಳೆಯರು ಮತ್ತು ಉದ್ಯಮಿಗಳಲ್ಲಿ ಒಬ್ಬರು. ಅವರ ಆಸ್ತಿಯ ನಿವ್ವಳ ಮೌಲ್ಯ 4,550 ಕೋಟಿ ರೂಪಾಯಿ. ಬೈಜು ರವೀಂದ್ರನ್ ಅವರ ಪತ್ನಿ ದಿವ್ಯಾ ಗೋಕುಲನಾಥ್ ಅವರು edtech ದೈತ್ಯ ಬೈಜೂಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಇದು ಈ ಒಂದು ದಶಕದಿಂದ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಕಂಪನಿಯ ಪ್ರಾರಂಭದ ಕೆಲವು ವರ್ಷಗಳಲ್ಲಿ ನಟ ಶಾರುಖ್ ಖಾನ್ ಅದರ ಬ್ರಾಂಡ್ ಅಂಬಾಸಿಡರ್ ಆಗಿದ್ದರು.


ಇದನ್ನೂ ಓದಿ: ಕಾರಿನಲ್ಲಿ ಎಸಿ ಬಳಸಿದ್ರೆ ನಿಜವಾಗ್ಲೂ ಪೆಟ್ರೋಲ್​ ಖಾಲಿಯಾಗುತ್ತಾ?


ದಿವ್ಯಾ ಗೋಕುಲನಾಥ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಬೈಜು ರವೀಂದ್ರನ್ ಟ್ಯೂಷನ್ ತರಗತಿಗಳಿಗೆ ಹಾಜರಾಗಿದ್ದರು. ಅವಳು ಸ್ವತಃ ಕೆಲವು ವರ್ಷಗಳ ನಂತರ ಶಿಕ್ಷಕಿಯಾದರು. ನಂತರ ಬೈಜು ರವೀಂದ್ರನ್‌ ಅವರನ್ನು ಪ್ರೇಮ ವಿವಾಹವಾದರು. ರವಿಂದ್ರನ್‌ ಜೊತೆ ಸೇರಿ ಎಡ್ಟೆಕ್ ಕಂಪನಿ ಬೈಜುಸ್ ಅನ್ನು ಸ್ಥಾಪಿಸಿದರು.


ಬೈಜೂಸ್​ ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್​


ದಿವ್ಯಾ ಗೋಕುಲನಾಥ್ ಸಂಬಳ ಎಷ್ಟು?


ಕೋಟಕ್ ಹುರುನ್ ಸಮೀಕ್ಷೆಯ ಪ್ರಕಾರ ಬೈಜು ಅವರ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 4,550 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ಅವರು ಬೈಜುಸ್‌ನಲ್ಲಿ ಪಾಲನ್ನು ಹೊಂದಿದ್ದಾರೆ.


Inc42 ಪ್ರಕಾರ, ದಿವ್ಯಾ ಗೋಕುಲನಾಥ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಎಡ್ಟೆಕ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 2020 ರ ಹಣಕಾಸು ವರ್ಷದಲ್ಲಿ 1.94 ಕೋಟಿ ರೂಪಾಯಿಗಳ ಒಟ್ಟು ಸಂಬಳವನ್ನು ಅವರ ಪಡೆದಿದ್ದಾರೆ ಎನ್ನಲಾಗಿದೆ.




ಏನಿದು ಫೆಮಾ ಉಲ್ಲಂಘನೆ ಪ್ರಕರಣ?


ಇನ್ನು ಬೈಜು ರವೀಂದ್ರನ್‌ ಅವರ ಕಂಪನಿ 'ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್' ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ಉಲ್ಲಂಘನೆ ಆರೋಪಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ ಅವರ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ದಾಳಿ ವೇಳೆ ಹಲವಾರು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದೆ.


ಅಂದಹಾಗೆ ಬೈಜು ರವೀಂದ್ರನ್ ಮತ್ತು ಅವರ ವಿದ್ಯಾರ್ಥಿ ಪತ್ನಿ ದಿವ್ಯಾ ಗೋಕುಲನಾಥ್ ಅವರು ಸ್ಥಾಪಿಸಿದ ಕಂಪನಿಯು 22 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಅಂದರೆ ಸುಮಾರು 1,89,000 ಕೋಟಿ ರೂಗಳಷ್ಟು. ಆದರೆ 2021 ರಲ್ಲಿ ಕಂಪಪನಿಗೆ 573 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ನಷ್ಟ ಆಗಿದೆ ಎಂದು ಅವರು ಪೋಸ್ಟ್‌ ಮಾಡಿದ ನಂತರ ಫೆಮಾ ತನಿಖೆಗಳು ಆರಂಭಗೊಂಡವು.

top videos
    First published: