Interesting Fact: ಈ ಹಂದಿಗೂ, ದುಡ್ಡಿಗೂ ಏನು ಸಂಬಂಧ? ಪಿಗ್ಗಿ ಬ್ಯಾಂಕ್​ ಪದ ಬಂದಿದ್ದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವಾತ್ತಾದ್ರೂ ಹುಂಡಿಯನ್ನು ಯಾಕೆ ಹಂದಿಯ ಆಕಾರದಲ್ಲಿ ಮಾಡಿರುತ್ತಾರೆ ಅಂತ ಯೋಚಿಸಿದ್ದೀರಾ? ಹುಂಡಿಗೂ ಹಂದಿಗೂ ಏನೂ ಸಂಬಂಧ ಅಂತ ಯೋಚಿಸಿದ್ದೀರಾ? ಇಲ್ಲಿದೆ ಕಂಪ್ಲೀಟ್​ ಮಾಹಿತಿ.

  • Share this:

ಮಕ್ಕಳಿಗೆ (Childrens) ಬಾಲ್ಯದಿಂದಲೇ ಹಣವನ್ನು ಉಳಿಸುವ (Money Savings) ಅಭ್ಯಾಸವನ್ನು ಕಲಿಸಲಾಗುತ್ತದೆ. ಇದಕ್ಕೆ ಉತ್ತಮ ಮಾರ್ಗವೆಂದರೆ ಪಿಗ್ಗಿ ಬ್ಯಾಂಕ್ (Piggy Bank) . ಇಂದು, ಸಹಜವಾಗಿ, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಪಿಗ್ಗಿ ಬ್ಯಾಂಕ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಒಂದು ಕಾಲದಲ್ಲಿ ಮಕ್ಕಳಿಗೆ ಹಂದಿಯ ಆಕಾರದಲ್ಲಿ ಹುಂಡಿಯನ್ನು ನೀಡಲಾಗ್ತಿತ್ತು. ಅದನ್ನು ಹುಂಡಿ ಅಂತ ಕರೆಯುತ್ತ ಇದ್ವಿ. ನಿಮ್ಗೂ ನೆನಪಿದೆ ಅಲ್ವಾ? ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರು ಈ ಹುಂಡಿಯನ್ನು ಬಳಸಿರುತ್ತೇವೆ. ಆದರೆ ಯಾವಾತ್ತಾದ್ರೂ ಹುಂಡಿಯನ್ನು ಯಾಕೆ ಹಂದಿಯ (Pig) ಆಕಾರದಲ್ಲಿ ಮಾಡಿರುತ್ತಾರೆ ಅಂತ ಯೋಚಿಸಿದ್ದೀರಾ? ಹುಂಡಿಗೂ ಹಂದಿಗೂ ಏನೂ ಸಂಬಂಧ ಅಂತ ಯೋಚಿಸಿದ್ದೀರಾ? ಇಲ್ಲಿದೆ ಕಂಪ್ಲೀಟ್​ ಮಾಹಿತಿ.


ಈ ಹುಂಡಿ ಕಾನ್ಸೆಪ್ಟ್​ ಹುಟ್ಟಿದ್ಯಾವಾಗ?


ಈ ಹುಂಡಿಗಳ ಪರಿಕಲ್ಪನೆಯು 15 ನೇ ಶತಮಾನದಿಂದ ಪ್ರಾರಂಭವಾಯಿತು ಅಂತ ಹೇಳಲಾಗುತ್ತೆ. ಆ ಸಮಯದಲ್ಲಿ ಲೋಹ ಮತ್ತು ಗಾಜಿನ ಪಾತ್ರೆಗಳನ್ನು ಬಳಸುವುದು ತುಂಬಾ ದುಬಾರಿಯಾಗಿತ್ತು. ಆದ್ದರಿಂದ ಜನರು ಮಡಿಕೆಗಳನ್ನು ಮಾಡುವುದಕ್ಕೆ ಕಿತ್ತಳೆ ಬಣ್ಣದ ಜೇಡಿ ಮಣ್ಣನ್ನು ಬಳಸುತ್ತಿದ್ದರು. ಈ ಮಣ್ಣನ್ನು PYGG ಎಂದು ಕರೆಯಲಾಗುತ್ತಿತ್ತು.


ಆ ಸಮಯದಲ್ಲಿ, ಪಿವೈಜಿಜಿ ತಯಾರಿಸಿದ ಮಡಿಕೆಗಳನ್ನು ಹಣವನ್ನು ಉಳಿಸಲು ಅಥವಾ ಇಡಲು ಮಾತ್ರ ಬಳಸಲಾಗುತ್ತಿತ್ತು. ಅವುಗಳನ್ನು PYGGY ಬ್ಯಾಂಕುಗಳು ಅಥವಾ PYGGY ಜಾರ್ ಎಂದು ಕರೆಯಲಾಗುತ್ತಿತ್ತು. PYGG ಅನ್ನು ದೀರ್ಘಕಾಲದವರೆಗೆ ಹೀಗೆ ಬಳಸಲಾಗುತ್ತಿತ್ತು.


19 ನೇ ಶತಮಾನದದಲ್ಲಿ ಮಕ್ಕಳೂ ಬಳಸುತ್ತಿದ್ರು!


ಅಗತ್ಯದ ಸಮಯದಲ್ಲಿ, ಈ PYGG ಬ್ಯಾಂಕ್ ಅನ್ನು ಮುರಿದು ಹಣವನ್ನು ಹಿಂಪಡೆಯಬೇಕಾಗಿತ್ತು. ಕಾಲಾನಂತರದಲ್ಲಿ, ನಿಧಾನವಾಗಿ ಲೋಹದ ಮಡಕೆಗಳು ಪ್ರವೃತ್ತಿಯಲ್ಲಿ ಬರಲು ಪ್ರಾರಂಭಿಸಿದವು. 19 ನೇ ಶತಮಾನದ ವೇಳೆಗೆ, ಲೋಹದ ಪಾತ್ರೆಗಳು ಬಂದವು. ಆದರೆ ಪಿವೈಜಿಜಿ ಬ್ಯಾಂಕಿನ ಪದ್ಧತಿ ಇನ್ನೂ ಹಾಗೇ ಇತ್ತು.




ಹಂದಿ ಆಕಾರದ ಹುಂಡಿ ಬಂದಿದ್ದು ಎಲ್ಲಿಂದ?


19 ನೇ ಶತಮಾನದಲ್ಲಿ, ಇಂಗ್ಲೆಂಡ್‌ನ ಕುಂಬಾರರು ಈ PYGG ಬ್ಯಾಂಕ್ ಅನ್ನು ಹಂದಿಯ ಆಕಾರದಲ್ಲಿ ಮಕ್ಕಳಿಗೆ ಆಕರ್ಷಕವಾಗಿ ಮಾಡಲು ಪ್ರಾರಂಭಿಸಿದರು.


ಏಕೆಂದರೆ PYGGY ಮತ್ತು Pig ಪದಗಳು ಹೋಲುತ್ತವೆ. ಅವರ ಈ ಪ್ರಯೋಗವು ವರ್ಕೌಟ್​ ಆಯ್ತು. ಹಂದಿಯ ಆಕಾರದ ಪಿಗ್ಗಿ ಬ್ಯಾಂಕ್ ಬಹಳ ಜನಪ್ರಿಯವಾಯಿತು. ಅದರ ಬೇಡಿಕೆಯು ವೇಗವಾಗಿ ಬೆಳೆಯಿತು.


ದುಂಡು ಮುಖದ ಹಂದಿ ಹುಂಡಿ ಎಲ್ಲರಿಗೂ ಇಷ್ಟ!


ಅಂದಿನಿಂದ ಪಿಗ್ಗಿ ಬ್ಯಾಂಕ್‌ಗಳೊಂದಿಗೆ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಅದರ ಹಲವು ಆಕಾರಗಳು ಸಹ ಬದಲಾಗಿವೆ. ಬೀಗ ಮತ್ತು ಕೀಲಿಯೊಂದಿಗೆ ಪಿಗ್ಗಿ ಬ್ಯಾಂಕ್‌ಗಳನ್ನು ಪರಿಚಯಿಸಲಾಯಿತು. ಆದರೆ ಇಂದಿಗೂ ಇದನ್ನೂ ಹುಂಡಿ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಹಂದಿಯ ಆಕಾರದಲ್ಲಿರುವ ದುಂಡುಮುಖದ ಹುಂಡಿ ಇಂದಿಗೂ ಜನಪ್ರಿಯವಾಗಿದೆ.


ಇದನ್ನೂ ಓದಿ: ಒಂದೇ ಬಾರಿ ನಿಮ್ಮ ಖಾತೆ ಸೇರುತ್ತೆ 16 ಲಕ್ಷ, ಪೋಸ್ಟ್ ಆಫೀಸ್ ಬಂಪರ್ ಯೋಜನೆ!


ಚೀನಾದಿಂದ ಬಂತಾ ಈ ಪಿಗ್ಗಿ ಕಲ್ಪನೆ?


ಕೆಲವು ಇತಿಹಾಸಕಾರರು ನೀಡಿರುವ ಮಾಹಿತಿ ಪ್ರಕಾರ ಈ ಪಿಗ್ಗಿ ಬ್ಯಾಂಕ್ ಗಳ ಸಂಬಂಧ ಚೀನಾದ ಕಿಂಗ್ ಸಾಮ್ರಾಜ್ಯದ ಜೊತೆಗಿದೆ ಎನ್ನಲಾಗುತ್ತದೆ. ಆದರೆ ವರಾಹವನ್ನು ಚೀನಾದಲ್ಲಿ ಸಮೃದ್ಧಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಹೀಗಾಗಿ ಅಲ್ಲಿನ ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ವರಾಹದ ಆಕಾರದ ಪಾತ್ರೆಗಳನ್ನು ತಯಾರಿಸಿ ಅದರಲ್ಲಿ ಇಡುತ್ತಿದ್ದರು.

top videos


    ಕೆಲ ಇಂಗ್ಲಿಷ್ ನಿಘಂಟುಗಳಲ್ಲಿ pygg ಮತ್ತು pig ಎರಡೂ ಸಮಾನಾರ್ಥಕ ಪದದ ರೂಪದಲ್ಲಿ ಬಳಸಲಾಗಿದೆ. ಇದರ ಅರ್ಥ ಒಂದು ರೀತಿಯ ಸೆರಾಮಿಕ್ ಪದಾರ್ಥದಿಂದ ತಯಾರಿಸಲಾದ ವಸ್ತು ಎಂದರ್ಥ. ಉದಾಹರಣೆಗಾಗಿ 15ನೇ ಶತಮಾನದಲ್ಲಿ ಸ್ಕಾಟ್ಲೆಂಡ್ ನಲ್ಲಿನ ಒಂದು ಮನಿಬಾಕ್ಸ್ ಗೆ 'ಪಾಯರ್ಲಿ ಪಿಗ್' ಎಂದು ಹೆಸರಿಡಲಾಗಿತ್ತು.

    First published: