India-Russia ವ್ಯಾಪಾರ ಅಭಿವೃದ್ಧಿಗೆ INSTC ಕೊಡುಗೆ ಏನು? ಈ ಬಗ್ಗೆ ಕಂಪ್ಲೀಟ್​ ಡೀಟೆಲ್ಸ್ ಇಲ್ಲಿದೆ

ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಯು ಭಾರತ, ಇರಾನ್, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆಗಾಗಿ ಹಡಗು, ರೈಲು ಮತ್ತು ರಸ್ತೆ ಮಾರ್ಗದ 7,200-ಕಿಮೀ-ಉದ್ದದ ಬಹು-ಮಾರ್ಗ ಜಾಲವಾಗಿದೆ. ಈ ಜಾಲವು (INSTC) ಉಕ್ರೇನ್ ಯುದ್ಧದ ನಂತರ ಮಾಸ್ಕೋದ ಮೇಲೆ ಪಶ್ಚಿಮ ರಾಷ್ಟ್ರಗಳ ನಿರ್ಬಂಧಗಳ ನಡುವೆಯೇ, ಇರಾನ್ ಮೂಲಕ ಭಾರತ ಮತ್ತು ರಷ್ಯಾ ದೇಶಗಳ ನಡುವೆ ಕಳೆದ ಮೂರು ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದ ವ್ಯಾಪಾರವನ್ನು ಸುಗಮಗೊಳಿಸುತ್ತಿದೆ. 

ಭಾರತ ಮತ್ತು ರಷ್ಯಾ

ಭಾರತ ಮತ್ತು ರಷ್ಯಾ

  • Share this:
ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಯು ಭಾರತ (India), ಇರಾನ್, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆಗಾಗಿ ಹಡಗು, ರೈಲು ಮತ್ತು ರಸ್ತೆ ಮಾರ್ಗದ 7,200-ಕಿಮೀ-ಉದ್ದದ ಬಹು-ಮಾರ್ಗ ಜಾಲವಾಗಿದೆ. ಈ ಜಾಲವು (INSTC) ಉಕ್ರೇನ್ ಯುದ್ಧದ ನಂತರ ಮಾಸ್ಕೋದ ಮೇಲೆ ಪಶ್ಚಿಮ ರಾಷ್ಟ್ರಗಳ (Western nation) ನಿರ್ಬಂಧಗಳ ನಡುವೆಯೇ, ಇರಾನ್ ಮೂಲಕ ಭಾರತ ಮತ್ತು ರಷ್ಯಾ ದೇಶಗಳ ನಡುವೆ ಕಳೆದ ಮೂರು ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದ ವ್ಯಾಪಾರವನ್ನು ಸುಗಮಗೊಳಿಸುತ್ತಿದೆ. ಇರಾನ್ ಶಿಪ್ಪಿಂಗ್ ಲೈನ್‌ಗಳು (Iran Shipping Line) INSTC ಜೊತೆಗೂಡಿ 3,000 ಟನ್‌ಗಳಷ್ಟು ಸರಕು ಹಾಗೂ 114 ಕಂಟೇನರ್‌ಗಳನ್ನು ಮೇ ಹಾಗೂ ಜುಲೈ ತಿಂಗಳ ನಡುವೆ ಸಾಗಿಸಿದೆ ಎಂಬ ಮಾಹಿತಿ ದೊರಕಿದೆ.

ಸಾಗಣೆ ವೆಚ್ಚವನ್ನು ಸುಮಾರು 30% ರಷ್ಟು ಕಡಿಮೆ ಮಾಡಿದೆ
7,200 ಕಿಮೀ ಉದ್ದದ ಮಾರ್ಗ ಜಾಲವು ಸಮುದ್ರ ಹಾಗೂ ರೈಲು ಮಾರ್ಗಗಳು ಸೇರಿದಂತೆ ರಷ್ಯಾ ಹಾಗೂ ಭಾರತ ದೇಶಗಳ ನಡುವೆ ಕಡಿಮೆ ಸಂಪರ್ಕವನ್ನು ಏರ್ಪಡಿಸುತ್ತದೆ. ತಜ್ಞರು ಹೇಳುವಂತೆ ಈ ಜಾಲವು ಎರಡು ರಾಷ್ಟ್ರಗಳ ನಡುವಿನ ಸಾಗಣೆ ವೆಚ್ಚವನ್ನು ಸುಮಾರು 30% ರಷ್ಟು ಕಡಿಮೆ ಮಾಡುತ್ತದೆ. ಪ್ರಸ್ತುತ, ಈ ಮಾರ್ಗದಲ್ಲಿ ಇರಾನ್ ಮೂಲಕ ಸಾಗಿಸುವ ಹೆಚ್ಚಿನ ಸರಕುಗಳು ರಷ್ಯಾ ಮತ್ತು ಭಾರತ ನಡುವಿನ ಸಾಗಣೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಇರಾನ್ ಶಿಪ್ಪಿಂಗ್ ಲೈನ್‌ಗಳು ಏಪ್ರಿಲ್ ಆರಂಭದಲ್ಲೇ INSTC ಯುದ್ದಕ್ಕೂ ಸಾರಿಗೆ ಅಭಿವೃದ್ಧಿಗಾಗಿ ಕಾರ್ಯಾಚರಣೆಯಲ್ಲಿರುವ ಸಮೂಹವೊಂದನ್ನು ಸಿದ್ಧಪಡಿಸಿದ್ದು ಕಂಪನಿಯು ಈ ಕಾರಿಡಾರ್ ಮೂಲಕ ಸರಕುಗಳ ಸಾಗಣೆಗೆ ಇದುವರೆಗೆ 300 ಹಡಗುಗಳನ್ನು ನಿಯೋಜಿಸಿದೆ ಎಂಬುದು ದೊರಕಿರುವ ಮಾಹಿತಿಯಾಗಿದೆ.

INSTC ಯ ಇತರ ಕೊಡುಗೆಗಳೇನು?
ಭಾರತ ಹಾಗೂ ರಷ್ಯಾ ದೇಶಗಳೆರಡೂ ಕೂಡ ದ್ವಿಪಕ್ಷೀಯ ವ್ಯಾಪಾರ ಮತ್ತು ಭಾರತ ಮತ್ತು ಯುರೇಷಿಯಾ ನಡುವಿನ ವ್ಯಾಪಾರವನ್ನು ವೃದ್ಧಿಸಲು INSTC ಯ ಅತ್ಯುತ್ತಮ ಬಳಕೆಯನ್ನು ಉಪಯೋಗಿಸಿಕೊಂಡಿವೆ. ವಿಸ್ತರಣೆಗಾಗಿ ನೆರವನ್ನು ನೀಡಿರುವ ಚಬಹಾರ್ ಬಂದರಿನೊಂದಿಗೆ INSTC ಅನ್ನು ಸೇರ್ಪಡೆಗೊಳಿಸಲು ಭಾರತ ಸರಕಾರವು ಒತ್ತಾಯಿಸಿದೆ. ವಿಸ್ತರಣೆಯಲ್ಲದೆ INSTC ಯು ಮೂಲಸೌಕರ್ಯ ಅಭಿವೃದ್ಧಿಗಳಾದ ಹೊಸ ಗಡಿ ಚೆಕ್‌ಪೋಸ್ಟ್‌ಗಳು, ಕಾರ್ಗೋ ಟರ್ಮಿನಲ್‌ಗಳು, ಕಾರಿಡಾರ್‌ನ ವಿವಿಧ ಮಧ್ಯಸ್ಥಗಾರ ರಾಜ್ಯಗಳ ಕಸ್ಟಮ್ಸ್ ಮತ್ತು ಇತರ ನಿಯಂತ್ರಕರ ನಡುವಿನ ನಿಕಟ ಸಂವಹನ ಸೇರಿದಂತೆ ಇನ್ನಷ್ಟು ಸೌಕರ್ಯಗಳಿಗೆ ಕೊಡುಗೆ ನೀಡಿದೆ.

ಇದನ್ನೂ ಓದಿ: Bengaluru Rent Home: ಮುಸ್ಲಿಂ ಆಗಿದ್ದಕ್ಕೆ ಬೆಂಗಳೂರಲ್ಲಿ ಬಾಡಿಗೆಮನೆ ಸಿಕ್ಕಿಲ್ಲ; ವೈರಲ್ ಆಯ್ತು ಟ್ವೀಟ್

ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ INSTC ಅನ್ನು ಇರಾನ್ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಎಂದು ಹೊಗಳಿದ್ದಾರೆ. ಕಝಾಕಿಸ್ತಾನ್ ಸೇರಿದಂತೆ ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ದೇಶಗಳನ್ನು ಸಂಪರ್ಕಿಸುವ ಗುರಿಯನ್ನು ಈ ಕಾರಿಡಾರ್ ಹೊಂದಿದೆ.

ಇಂಡೋ-ರಷ್ಯನ್ ವ್ಯಾಪಾರಕ್ಕೆ ಒಂದು ಕಾರ್ಯಸಾಧ್ಯವಾದ ಆಯ್ಕೆ:
ರಷ್ಯಾ ಹಾಗೂ ಭಾರತದ ನಡುವೆ INSTC ಮೂಲಕ ಸರಕು ಸಾಗಿಸಲು 25 ದಿನಗಳಿಗಿಂತಲೂ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತಿದ್ದು, ಇದು ಸಾಂಪ್ರದಾಯಿಕ ಮಾರ್ಗಗಳ ಮೂಲಕ ಸಾಗಿಸುತ್ತಿದ್ದುದಕ್ಕಿಂತಲೂ ಸುಮಾರು 40 ದಿನಗಳಿಗಿಂತ ಕಡಿಮೆಯಾಗಿದೆ. ಸಮಯ ಉಳಿಸುವುದರ ಜೊತೆಗೆ INSTC ಯು ಇಂಡೋ-ರಷ್ಯನ್ ವ್ಯಾಪಾರಕ್ಕೆ ಒಂದು ಕಾರ್ಯಸಾಧ್ಯವಾದ ಆಯ್ಕೆಯಾಗಿಯೂ ಕಂಡುಬರುತ್ತದೆ.

INSTC ಯು ಕೆಲವು ರಾಷ್ಟ್ರಗಳ ಹಾಗೂ ಬಾಸ್ಪೊರಸ್ ಜಲಸಂಧಿಯ ಪ್ರಾಬಲ್ಯಕ್ಕೆ ಒಳಪಟ್ಟಿದ್ದ ಸೂಯೆಜ್ ಕಾಲುವೆ ಮತ್ತು ಮೆಡಿಟರೇನಿಯನ್ ಸಮುದ್ರಕ್ಕೆ ಪರ್ಯಾಯವಾಗಿದೆ. ಅದೂ ಅಲ್ಲದೆ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಗೆ (ಚೀನಾದ ಬೆಲ್ಟ್ ಏಂಡ್ ರೋಡ್ ಇನಿಶಿಯೇಟಿವ್) ಪರ್ಯಾಯವನ್ನು ಒದಗಿಸುತ್ತದೆ.

BRI ಯೋಜನೆಗಳಿಂದ ಭಾರತ ತನ್ನನ್ನು ತಾನು ಏಕೆ ರಕ್ಷಿಸಿಕೊಂಡಿದೆ?
ಯುರೇಷಿಯನ್ ಪ್ರದೇಶದ BRI ಯೋಜನೆಗಳು ಮಧ್ಯ ಏಷ್ಯಾದ ರಾಷ್ಟ್ರಗಳು ಮತ್ತು ರಷ್ಯಾದ ಮೂಲಕ ಯುರೋಪ್ ಅನ್ನು ಚೀನಾಕ್ಕೆ ಸಂಪರ್ಕಿಸುತ್ತದೆ ಮತ್ತು ಯುರೇಷಿಯಾದ ಸಂಪನ್ಮೂಲಗಳಿಗೆ ಬೀಜಿಂಗ್ ಪ್ರವೇಶವನ್ನು ನೀಡುತ್ತದೆ. ಬಿಆರ್‌ಐ ಮೂಲಕ ಟರ್ಕಿ ಮತ್ತು ಇರಾನ್‌ಗಳನ್ನು ಸಂಪರ್ಕಿಸುವ ಯೋಜನೆಯನ್ನು ಬೀಜಿಂಗ್ ಹೊಂದಿದೆ. ಶಾಂಘೈ ಸಹಕಾರ ಸಂಸ್ಥೆ (SCO) ದಾಖಲೆಗಳಲ್ಲಿ, BRI ಅನ್ನು ಅನುಮೋದಿಸದಂತೆ ಭಾರತವು ತನ್ನನ್ನು ತಾನು ರಕ್ಷಿಸಿಕೊಂಡಿದೆ.

ಇದನ್ನೂ ಓದಿ: Salary Hike: ಉದ್ಯೋಗಿಗಳಿಗೆ ಬಂಪರ್​​ ನ್ಯೂಸ್​, ಇನ್ಮುಂದೆ ಇವರಿಗೆಲ್ಲಾ ಸ್ಯಾಲರಿ ಹೆಚ್ಚಳ-ಬೋನಸ್​​ ಗಿಫ್ಟ್​!

ಭಾರತ ಹೇಳುವಂತೆ ಚೀನಾದ ಪ್ರಾಜೆಕ್ಟ್, PoK (ಪಾಕ್ ಆಕ್ರಮಿತ ಕಾಶ್ಮೀರ) ಅನ್ನು ಹಾದುಹೋಗುವಾಗ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಅದೂ ಅಲ್ಲದೆ BRI ಯೋಜನೆಯು ದೇಶಗಳನ್ನು ಭಾರೀ ಸಾಲದೆಡೆಗೆ ತಳ್ಳುತ್ತಿದೆ ಎನ್ನಲಾಗಿದೆ. INSTC ಹಿಂದೂ ಮಹಾಸಾಗರವನ್ನು ಕ್ಯಾಸ್ಪಿಯನ್ ಸಮುದ್ರಕ್ಕೆ, ಪರ್ಷಿಯನ್ ಗಲ್ಫ್ ಮೂಲಕ ರಷ್ಯಾ ಮತ್ತು ಉತ್ತರ ಯುರೋಪ್‌ಗೆ ಸಂಪರ್ಕಿಸುತ್ತದೆ ಮತ್ತು ಅವುಗಳ ನಡುವೆ ಕಡಿಮೆ ಸಂಪರ್ಕ ಮಾರ್ಗವನ್ನು ಒದಗಿಸುತ್ತದೆ. ಸರಕುಗಳ ಸಾಗಣೆಗಾಗಿ INSTC ಯೊಂದಿಗೆ ರಷ್ಯಾದ ಆರ್ಕ್ಟಿಕ್ ಮೂಲಕ ಉತ್ತರ ಮಾರ್ಗವನ್ನು ಸಂಪರ್ಕಿಸುವ ಯೋಜನೆ ಇದೆ.

ಒಪ್ಪಂದವನ್ನು ಅನುಮೋದಿಸಿರುವ ರಾಷ್ಟ್ರಗಳು ಹಾಗೂ ಘಟಕಗಳು:
ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನ (INSTC) ಯೋಜನೆಗೆ ಮುಖ್ಯ ಬುನಾದಿಯನ್ನು ಸೆಪ್ಟೆಂಬರ್ 12, 2000 ರಂದು ರಷ್ಯಾ, ಇರಾನ್ ಮತ್ತು ಭಾರತದ ನಡುವೆ ಸಹಿ ಮಾಡಿದ ಅಂತರ್ ಸರ್ಕಾರಿ ಒಪ್ಪಂದಕ್ಕೆ ಅನುಗುಣವಾಗಿ ರಚಿಸಲಾಯಿತು. ಅಜೆರ್ಬೈಜಾನ್ 2005 ರಲ್ಲಿ ಈ ಒಪ್ಪಂದಕ್ಕೆ ಸೇರಿತು. ಈ ಒಪ್ಪಂದವನ್ನು 13 ದೇಶಗಳು (ಅಜೆರ್ಬೈಜಾನ್, ಬೆಲಾರುಸ್, ಬಲ್ಗೇರಿಯಾ, ಅರ್ಮೇನಿಯಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಓಮನ್, ರಷ್ಯಾ, ತಜಿಕಿಸ್ತಾನ್, ಟರ್ಕಿ ಮತ್ತು ಉಕ್ರೇನ್) ಅನುಮೋದಿಸಿವೆ. ಯೋಜನೆಯು ಹಲವಾರು ಘಟಕಗಳನ್ನು ಹೊಂದಿದೆ: ಉತ್ತರ ಮತ್ತು ಪಶ್ಚಿಮ ಯುರೋಪ್ –– ರಷ್ಯಾದ ಒಕ್ಕೂಟ, ಕಾಕಸಸ್ –– ಪರ್ಷಿಯನ್ ಗಲ್ಫ್ (ಪಶ್ಚಿಮ ಮಾರ್ಗ); ಮಧ್ಯ ಏಷ್ಯಾ –– ಪರ್ಷಿಯನ್ ಗಲ್ಫ್ (ಪೂರ್ವ ಮಾರ್ಗ); ಮತ್ತು ಕ್ಯಾಸ್ಪಿಯನ್ ಸಮುದ್ರ –– ಇರಾನ್-ಪರ್ಷಿಯನ್ ಗಲ್ಫ್ (ಸೆಂಟ್ರಲ್ ರೂಟ್).
Published by:Ashwini Prabhu
First published: