Cash Withdrawal: ಬ್ಯಾಂಕ್‌ಗಳಲ್ಲಿ ಎಟಿಎಮ್ ವಿತ್​ಡ್ರಾ ಮಿತಿ ಎಷ್ಟಿದೆ? ಉಚಿತ ವಹಿವಾಟು ಮುಗಿದಿದ್ರೆ ಏನ್​ ಮಾಡ್ಬೇಕು ಅಂತ ನೋಡಿ

ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮಾಸಿಕ ಉಚಿತ ವಹಿವಾಟು ಮಿತಿಗಿಂತ ಎಟಿಎಂನಲ್ಲಿ ಹೆಚ್ಚಿನ ವಹಿವಾಟು ನಡೆಸಿದಲ್ಲಿ ಪ್ರತಿ ವಹಿವಾಟಿಗೆ ರೂ 21 ಶುಲ್ಕ ವಿಧಿಸುವಂತೆ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ. ಈ ನಿಯಮ ಜನವರಿ 1, 2022 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಕೂಡ ಇಂತಹ ವಹಿವಾಟಿಗೆ ರೂ 20 ರಂತೆ ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಖಾಸಗಿ ಹಾಗೂ ಸಾರ್ವಜನಿಕ ವಲಯದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಪ್ರತೀ ತಿಂಗಳು ಎಟಿಎಮ್‌ ಗಳು (ATM) ಸೀಮಿತ ಸಂಖ್ಯೆಯ ಉಚಿತ ವಹಿವಾಟುಗಳನ್ನು (Free transaction) ಅನುಮತಿಸುತ್ತವೆ. ಆರ್ಥಿಕ ಹಾಗೂ ಆರ್ಥಿಕೇತರ ಸೇವೆಗಳನ್ನೊಳಗೊಂಡ ಉಚಿತ ವಹಿವಾಟುಗಳಾಚೆಗೂ, ಸಾಲದಾತರು ಅನ್ವಯವಾಗುವ ತೆರಿಗೆಗಳೊಂದಿಗೆ (Tax) ಶುಲ್ಕವನ್ನು ವಿಧಿಸುತ್ತಾರೆ. ಖಾತೆಯ ವಿಧ ಹಾಗೂ ನಿಮ್ಮ ಬಳಿ ಇರುವ ಡೆಬಿಟ್ ಕಾರ್ಡ್ ಅನ್ನು (Debit Card) ಆಧರಿಸಿ ಎಟಿಎಮ್‌ಗಳಲ್ಲಿರುವ ಉಚಿತ ವಹಿವಾಟುಗಳ ಸಂಖ್ಯೆಯು ವಿಭಿನ್ನವಾಗಿರಬಹುದು. ಬ್ಯಾಂಕ್‌ಗಳು (Bank) ಅನುಮತಿಸುವ ಉಚಿತ ಮಾಸಿಕ ವಹಿವಾಟಿನ ಮಿತಿಯನ್ನು ಮೀರಿ ಎಟಿಎಮ್‌ಗಳನ್ನು ಬಳಸಿದರೆ ಶುಲ್ಕ ವಿಧಿಸಲಾಗುತ್ತದೆ.

ಉಚಿತ ವಹಿವಾಟು ಮುಗಿದಲ್ಲಿ ಎಟಿಎಮ್ ಶುಲ್ಕವೆಷ್ಟು?
ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮಾಸಿಕ ಉಚಿತ ವಹಿವಾಟು ಮಿತಿಗಿಂತ ಎಟಿಎಂನಲ್ಲಿ ಹೆಚ್ಚಿನ ವಹಿವಾಟು ನಡೆಸಿದಲ್ಲಿ ಪ್ರತಿ ವಹಿವಾಟಿಗೆ ರೂ 21 ಶುಲ್ಕ ವಿಧಿಸುವಂತೆ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ. ಈ ನಿಯಮ ಜನವರಿ 1, 2022 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಕೂಡ ಇಂತಹ ವಹಿವಾಟಿಗೆ ರೂ 20 ರಂತೆ ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು.

ಪ್ರತೀ ತಿಂಗಳು ಗ್ರಾಹಕರು ತಮ್ಮ ಬ್ಯಾಂಕ್‌ನ ಎಟಿಎಮ್‌ಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಇತರ ಬ್ಯಾಂಕ್‌ನ ಎಟಿಎಮ್‌ಗಳಲ್ಲಿ ಮೂರು ಉಚಿತ ವಹಿವಾಟುಗಳನ್ನು ನಡೆಸಲು ಅನುಮತಿಸಲಾಗಿದೆ. ಗ್ರಾಮೀಣ ಹಾಗೂ ಅರೆ-ಗ್ರಾಮೀಣ ವಲಯದ ಗ್ರಾಹಕರಿಗೆ ಇತರ ಬ್ಯಾಂಕ್‌ಗಳ ಎಟಿಎಮ್‌ಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನಡೆಸಬಹುದಾಗಿದೆ.

ಬ್ಯಾಂಕ್ ಶುಲ್ಕದ ಹಣವನ್ನು ಏನು ಮಾಡುತ್ತದೆ?
1 ಆಗಸ್ಟ್ 2022 ರಿಂದ ಎಲ್ಲಾ ಕೇಂದ್ರಗಳಲ್ಲಿ ಪ್ರತಿ ಹಣಕಾಸು ವಹಿವಾಟಿಗೆ ರೂ 17 ಮತ್ತು ಪ್ರತಿ ಹಣಕಾಸೇತರ ವಹಿವಾಟಿಗೆ ರೂ 6 ವಿನಿಮಯ ಶುಲ್ಕ ವಿಧಿಸಲು ಆರ್‌ಬಿಐ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಹೆಚ್ಚುತ್ತಿರುವ ಎಟಿಎಮ್ ಅಳವಡಿಸುವಿಕೆ ಹಾಗೂ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಲು ಬ್ಯಾಂಕ್‌ಗಳು ಎಟಿಎಮ್ ಸೇವಾ ಶುಲ್ಕಗಳನ್ನು ಸಂಗ್ರಹಿಸುತ್ತವೆ.

ಗ್ರಾಹಕರು ಹೊಂದಿರುವ ಕಾರ್ಡ್‌ನ ಪ್ರಕಾರವನ್ನು ಅವಲಂಬಿಸಿ, ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ಅಥವಾ ಎಟಿಎಮ್ ಕಾರ್ಡ್‌ಗಳ ಮೇಲೆ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್; ನಗದು ಹಿಂಪಡೆಯುವಿಕೆ ಎಟಿಎಮ್ ಶುಲ್ಕಗಳು
ಭಾರತದ ಉನ್ನತ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ (SBI), ಪ್ರತಿ ಪ್ರದೇಶದಲ್ಲಿ ಐದು ಉಚಿತ ಎಟಿಎಮ್ ವಿದ್‌ಡ್ರಾಲ್‌ಗಳನ್ನು ಒದಗಿಸುತ್ತಿದ್ದು, ಮೆಟ್ರೋ ನಗರಗಳಲ್ಲಿ ಗರಿಷ್ಠ ಮೂರು ವಹಿವಾಟುಗಳನ್ನು ಅನುಮತಿಸುತ್ತವೆ. ಎಸ್‌ಬಿಐ ಎಟಿಎಂ ವಹಿವಾಟುಗಳಿಗೆ ರೂ 5. ಮತ್ತು ಎಸ್‌ಬಿಐ ಅಲ್ಲದ ಎಟಿಎಮ್‌ಗಳಿಂದ ಹಣ ಡ್ರಾ ಮಾಡಲು ರೂ 10 ಶುಲ್ಕವನ್ನು ವಿಧಿಸುತ್ತವೆ. ಕನಿಷ್ಠ ಮತ್ತು ಗರಿಷ್ಠ ದೈನಂದಿನ ವಹಿವಾಟಿನ ಮಿತಿಗಳು ಕ್ರಮವಾಗಿ ರೂ 100 ಮತ್ತು ರೂ 20,000 ಆಗಿದೆ.

ಇದನ್ನೂ ಓದಿ:  Business Idea: ಈ ಬ್ಯುಸಿನೆಸ್​ಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​, ನೋಡೋಕೆ ಸಿಂಪಲ್​-ಆದಾಯ ​ಸೂಪರ್​!

ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ಎಟಿಎಮ್ ಶುಲ್ಕಗಳು
ಪಿಎನ್‌ಬಿ ಪ್ರಮುಖ ನಗರಗಳಲ್ಲಿ ಮೂರು ಉಚಿತ ಎಟಿಎಮ್ ವಹಿವಾಟುಗಳನ್ನು ಅನುಮತಿಸಿದ್ದು ಎಸ್‌ಬಿಐ ಅಂತೆಯೇ ಇತರ ಪ್ರಮುಖ ಸ್ಥಳಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಅನುಮತಿಸುತ್ತವೆ. ಇದಾದ ನಂತರ ಬ್ಯಾಂಕ್, ಎಟಿಎಮ್ ವಿದ್‌ಡ್ರಾಲ್‌ಗಳಿಗೆ ರೂ 10 ಶುಲ್ಕವನ್ನು ವಿಧಿಸುತ್ತದೆ

ಎಚ್‌ಡಿಎಫ್‌ಸಿ ಬ್ಯಾಂಕ್ ವಿದ್‌ಡ್ರಾಲ್ ಎಟಿಎಮ್ ಶುಲ್ಕಗಳು
ಎಚ್‌ಡಿಎಫ್‌ಸಿ ಐದು ಉಚಿತ ವಹಿವಾಟುಗಳನ್ನು ಮತ್ತು ಮಹತ್ವದ ನಗರಗಳಲ್ಲಿ ಮೂರು ಉಚಿತ ವಹಿವಾಟುಗಳನ್ನು ಅನುಮತಿಸುತ್ತದೆ. ಕಾರ್ಡ್ ಅವಲಂಬಿಸಿ, ವಿದ್‌ಡ್ರಾಲ್ ಮಿತಿಯು ರೂ 10,000 ದಿಂದ ರೂ 25,000 ಆಗಿದೆ.

ಇದನ್ನೂ ಓದಿ:  Money: ಕೇಂದ್ರ ಸರ್ಕಾರದಿಂದ ಅದ್ಭುತ ಅವಕಾಶ, ಉಚಿತವಾಗಿ 75 ಸಾವಿರ ಹಣ ನಿಮ್ಮದಾಗಿಸಿಕೊಳ್ಳಿ!

ಐಸಿಐಸಿಐ ಬ್ಯಾಂಕ್ ಎಟಿಎಮ್ ವಿದ್‌ಡ್ರಾಲ್ ಮಿತಿ ಹಾಗೂ ಶುಲ್ಕ
ಐಸಿಐಸಿಐ ಬ್ಯಾಂಕ್ ಕೂಡ ಉಚಿತ ವಿದ್‌ಡ್ರಾ ವಿಷಯದಲ್ಲಿ 3 ಹಾಗೂ 5 ನಿಯಮಗಳನ್ನು ಅನುಸರಿಸುತ್ತದೆ. ಎಟಿಎಮ್ ವಿದ್‌ಡ್ರಾಲ್‌ಗಳು ಹೆಚ್ಚುವರಿ ಬ್ಯಾಂಕ್ ಶುಲ್ಕ ರೂ 21 ಕ್ಕೆ ಕಾರಣವಾಗುತ್ತದೆ.
Published by:Ashwini Prabhu
First published: