Digital Loan: ಡಿಜಿಟಲ್ ಸಾಲಗಳ ಕುರಿತು ಆರ್‌ಬಿಐ ನಿಲುವೇನು? ಜನರನ್ನು ಸಾಲದ ಬಲೆಯಿಂದ ತಪ್ಪಿಸಲು ಹೊಸ ತಂತ್ರ

ಬೀಜಿಂಗ್‌ನ ದಶಕಗಳ ಕಾಲದ ಮೂಲಸೌಕರ್ಯ ಪ್ರಚೋದನೆ ಮತ್ತು ಹೂಡಿಕೆ-ನೇತೃತ್ವದ ಬೆಳವಣಿಗೆಯನ್ನು ಭಾರತವು ಅನುಕರಿಸಲು ಬಯಸುತ್ತಿದ್ದರೂ ಗ್ರಾಹಕ ಆರ್ಥಿಕತೆಯ ವಿಷಯಕ್ಕೆ ಬಂದಾಗ, ಚೀನಾದ ನಿಯಂತ್ರಣವಿಲ್ಲದ ಡಿಜಿಟಲ್ ಸಾಲದ ಏರಿಕೆ ನೀತಿಯನ್ನು ಕಾರ್ಯಸೂಚಿಯಿಂದ ಕಟ್ಟುನಿಟ್ಟಾಗಿ ಹೊರಗಿರಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ ಆ್ಯಪ್-ಆಧಾರಿತ ಸಾಲಗಳ ಮಾರ್ಗಸೂಚಿಗಳು ಅಂತೆಯೇ ಸಾಂಕ್ರಾಮಿಕ ಉಲ್ಬಣಗೊಂಡ ನಂತರ ಉದ್ಯಮದಲ್ಲಿ ಹಿಡಿತ ಸಾಧಿಸುವ ಸ್ಪಷ್ಟ ಬಯಕೆಯನ್ನು ಪ್ರದರ್ಶಿಸಿವೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಬೀಜಿಂಗ್‌ನ (Beijing) ದಶಕಗಳ ಕಾಲದ ಮೂಲಸೌಕರ್ಯ ಪ್ರಚೋದನೆ ಮತ್ತು ಹೂಡಿಕೆ-ನೇತೃತ್ವದ ಬೆಳವಣಿಗೆಯನ್ನು ಭಾರತವು ಅನುಕರಿಸಲು ಬಯಸುತ್ತಿದ್ದರೂ ಗ್ರಾಹಕ ಆರ್ಥಿಕತೆಯ ವಿಷಯಕ್ಕೆ ಬಂದಾಗ, ಚೀನಾದ ನಿಯಂತ್ರಣವಿಲ್ಲದ ಡಿಜಿಟಲ್ ಸಾಲದ (Digital Loan) ಏರಿಕೆ ನೀತಿಯನ್ನು ಕಾರ್ಯಸೂಚಿಯಿಂದ ಕಟ್ಟುನಿಟ್ಟಾಗಿ ಹೊರಗಿರಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಇತ್ತೀಚೆಗೆ ಬಿಡುಗಡೆ ಮಾಡಿದ ಆ್ಯಪ್-ಆಧಾರಿತ ಸಾಲಗಳ ಮಾರ್ಗಸೂಚಿಗಳು (Guidelines for App-Based Loans) ಅಂತೆಯೇ ಸಾಂಕ್ರಾಮಿಕ ಉಲ್ಬಣಗೊಂಡ ನಂತರ ಉದ್ಯಮದಲ್ಲಿ ಹಿಡಿತ ಸಾಧಿಸುವ ಸ್ಪಷ್ಟ ಬಯಕೆಯನ್ನು ಪ್ರದರ್ಶಿಸಿವೆ. ಆರ್ಥಿಕ ಸಾಮರ್ಥ್ಯವನ್ನು ಪ್ರಜಾಪ್ರಭುತ್ವಗೊಳಿಸುವ ಡಿಜಿಟಲ್ ಸಾಲದ ಸಾಮರ್ಥ್ಯ ಮತ್ತು ಜನರನ್ನು ಸಾಲದ ಬಲೆಗೆ ಬೀಳಿಸುವ ಸಾಮರ್ಥ್ಯದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು RBI ಬಯಸುತ್ತದೆ.


ಜನರನ್ನು ಸಾಲದ ಬಲೆಯಿಂದ ತಪ್ಪಿಸಲು ಆರ್‌ಬಿಐ ತಂತ್ರ:
ಸಾಲವನ್ನು ಹುಟ್ಟುಹಾಕುವ, ಸರ್ವೀಸ್ ಮಾಡುವ ಹಾಗೂ ಲೋನ್ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ತಗುಲುವ ವೆಚ್ಚ ರೂ 5000 ಆಗಿದೆ ಆದರೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ತಗುಲುವ ವೆಚ್ಚ ಕೇವಲ ನೂರು ರೂಪಾಯಿ ಎಂಬುದಾಗಿ ಉದ್ಯಮದ ಮೂಲಗಳು ಉಲ್ಲೇಖಿಸಿವೆ. ಮೊಬೈಲ್ ಇಂಟರ್‌ನೆಟ್ ಸರ್ವವ್ಯಾಪಿಯಾಗುತ್ತಿದ್ದಂತೆ, ಆ್ಯಪ್‌ಗಳು ಸಾಂಪ್ರದಾಯಿಕ ಸಾಲದಾತರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ದೇಶದಾದ್ಯಂತ ಸಣ್ಣ ಮಟ್ಟದ ಸಾಲವನ್ನು ಸುಲಿಗೆ ಮಾಡಲೂಬಹುದು.


ಇದನ್ನೂ ಓದಿ:  RBI: ಸಾರ್ವಜನಿಕ, ಖಾಸಗಿ ಬ್ಯಾಂಕ್​ಗಳು ಕೆಲಸದ ಬಗ್ಗೆ ಆರ್​ಬಿಐ ಹೇಳಿದ್ದೇನು? ಇಲ್ಲಿದೆ ಉತ್ತರ

ಇದರ ಇನ್ನೊಂದು ಮುಖ್ಯ ಅಂಶ 
ಇದರ ಇನ್ನೊಂದು ಅಂಶವನ್ನು ನೋಡುವುದಾದರೆ ಆರ್‌ಬಿಐ ಉದ್ಯಮದ ಹೆಚ್ಚು ಹಾನಿಕಾರಕ ಅಂಶಗಳನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದು ಸಾಲಗಾರರಿಗೆ ಕಿರುಕುಳವನ್ನುಂಟು ಮಾಡುವ ಫೈಲ್ ಮತ್ತು ಮಾಧ್ಯಮ, ಸಂಪರ್ಕ ಪಟ್ಟಿ, ಕರೆ ದಾಖಲೆಗಳು, ಟೆಲಿಫೋನಿ ಕಾರ್ಯಗಳಂತಹ ಮೊಬೈಲ್ ಫೋನ್ ಸಂಪನ್ಮೂಲಗಳಂತಹ ವೈಯಕ್ತಿಕ ಡೇಟಾಗೆ ಅಪ್ಲಿಕೇಶನ್‌ಗಳ ಪ್ರವೇಶವನ್ನು ನಿಲ್ಲಿಸುತ್ತದೆ ಎಂದು ನಿಯಂತ್ರಕ ಹೇಳಿದೆ.


ಈ ಬಗ್ಗೆ ಭಾರತೀಯ ನಿಯಂತ್ರಕ ಬ್ಯಾಂಕುಗಳು ಏನು ಹೇಳಿವೆ?
ಗ್ರಾಹಕರಿಗೆ ಬಡ್ಡಿ ವೆಚ್ಚದ ಬಗ್ಗೆ ಮುಂಗಡವಾಗಿ ತಿಳಿಸಬೇಕು ಮತ್ತು ಅವರು ತಮ್ಮ ಮನಸ್ಸನ್ನು ಬದಲಾಯಿಸಬಹುದಾದ ಅವಕಾಶವನ್ನು ನೀಡಬೇಕು ಎಂಬುದಾಗಿ ಭಾರತೀಯ ನಿಯಂತ್ರಕವು ತಿಳಿಸಿದೆ. ಡಿಜಿಟಲ್ ಆ್ಯಪ್‌ಗಳಿಗೆ ನಿಯಂತ್ರಿತ ಬ್ಯಾಂಕ್‌ಗಳು ಪಾವತಿಸುತ್ತವೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅವುಗಳನ್ನು ಮಧ್ಯವರ್ತಿಗಳಾಗಿ ತೊಡಗಿಸಿಕೊಳ್ಳುತ್ತವೆ, ಸಾಲಗಾರರಿಂದ ಅಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.


ಚೀನೀ ನಿಯಂತ್ರಕ ಬ್ಯಾಂಕ್‌ಗಳು ಕೇವಲ ಸಾಲ ವಿತರಣೆಯನ್ನು ಹೊರಗುತ್ತಿಗೆಗೆ ಅವಕಾಶ ಮಾಡಿಕೊಡುತ್ತಾರೆ ಆದರೆ ಪ್ರಾಯೋಗಿಕವಾಗಿ ಎಲ್ಲಾ ಸಾಲ ಹೊಣೆ ನಿರ್ವಹಣೆಯನ್ನು ಅನಿಯಂತ್ರಿತ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಂಸ್ಥೆಗಳಿಗೆ ನೀಡುತ್ತಾರೆ. ಪರಿಣಾಮವಾಗಿ, ಅವರು ಲಾಭದ ಬಹುಪಾಲು ಪಡೆದುಕೊಳ್ಳುತ್ತಾರೆ.


ಇದನ್ನೂ ಓದಿ:   Business Idea: ಮಹಿಳೆಯರಿಗೆ ಹೇಳಿ ಮಾಡಿಸಿದ ಕೆಲಸಗಳಿವು, ಕೈ ತುಂಬಾ ದುಡ್ಡು ಮಾಡುವ ದಾರಿ ಇಲ್ಲಿದೆ ನೋಡಿ!

ಸಾಂಕ್ರಾಮಿಕ-ಪ್ರೇರಿತ ಅವ್ಯವಸ್ಥೆಯ ಉತ್ತುಂಗದಲ್ಲಿ ಸುಮಾರು 1,100 ಸಾಲ ನೀಡುವ ಅಪ್ಲಿಕೇಶನ್‌ಗಳು ಭಾರತದಲ್ಲಿ ಪ್ರಸರಣಗೊಂಡಿವೆ, ಎಲ್ಲಾ ರೀತಿಯ ತ್ವರಿತ ಸಾಲ ಮತ್ತು ಖರೀದಿ ಹಾಗೂ ಇದೀಗ ಪಾವತಿ ನಂತರದ ವ್ಯವಸ್ಥೆಗಳ ಭರವಸೆ ನೀಡುತ್ತವೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕರು ಸ್ಥಳೀಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಬಾಡಿಗೆಗೆ ಪಡೆದುಕೊಂಡು ಲಾಭವನ್ನು ಕ್ರಿಪ್ಟೋ ಕರೆನ್ಸಿಗಳಾಗಿ ಮಾರ್ಪಡಿಸಿ ಕಣ್ಮರೆಗೊಂಡರು. ವ್ಯವಸ್ಥಿತಿ ಅಪಾಯವೆಂದು ಪರಿಗಣಿತವಾಗುವ ಮುನ್ನವೇ ಆರ್‌ಬಿಐಯ ಮಾರ್ಗಸೂಚಿಗಳು ಇಂತಹವುಗಳಿಗೆ ಕಡಿವಾಣ ಹಾಕುವ ದಿಕ್ಕಿನಲ್ಲಿವೆ.

Published by:Ashwini Prabhu
First published: