Share market: ಕುಸಿತಗಳಿಂದ ಭಾರತೀಯ ಷೇರು ಮಾರುಕಟ್ಟೆಯನ್ನು ರಕ್ಷಿಸುತ್ತಿರುವುದು ಹೇಗೆ? ಜಿರೋಧಾ ಸಿಇಒ ಕೊಟ್ಟ ಟಿಪ್ಸ್ ಇದು!

ಸೆಬಿ (SEBI) ನಿಯಮಾವಳಿಗಳು ಇತ್ತೀಚಿಗಷ್ಟೇ ಒಬ್ಬ ಟ್ರೇಡರ್ ಸ್ಟಾಕ್ ಬ್ರೋಕರ್ ನಿಂದ ಪಡೆಯುವ ಲಿವರೇಜ್ ಮೊತ್ತವನ್ನು ಸೀಮಿತಗೊಳಿಸಿತ್ತು. ಒಂದು ವೇಳೆ ಸೆಬಿ ಇದನ್ನು ಸೀಮಿತಗೊಳಿಸದೆ ಹೋಗಿದ್ದಲ್ಲಿ ಈ ವರ್ಷ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಕುಸಿತವಾಗುತ್ತಿತ್ತು ಎಂದು ಎಚ್ಚರಿಸಿದ್ದಾರೆ ಜಿರೋಧಾ ಸಂಸ್ಥೆಯ ಸಿಇಒ ನಿತಿನ್ ಕಾಮತ್.

ಜಿರೋಧಾ ಸಂಸ್ಥೆಯ ಸಿಇಒ ನಿತಿನ್ ಕಾಮತ್

ಜಿರೋಧಾ ಸಂಸ್ಥೆಯ ಸಿಇಒ ನಿತಿನ್ ಕಾಮತ್

  • Share this:
ಸೆಬಿ (SEBI) ನಿಯಮಾವಳಿಗಳು ಇತ್ತೀಚಿಗಷ್ಟೇ ಒಬ್ಬ ಟ್ರೇಡರ್ ಸ್ಟಾಕ್ ಬ್ರೋಕರ್ (Trader Stock Broker) ನಿಂದ ಪಡೆಯುವ ಲಿವರೇಜ್ ಮೊತ್ತವನ್ನು ಸೀಮಿತಗೊಳಿಸಿತ್ತು. ಒಂದು ವೇಳೆ ಸೆಬಿ ಇದನ್ನು ಸೀಮಿತಗೊಳಿಸದೆ ಹೋಗಿದ್ದಲ್ಲಿ ಈ ವರ್ಷ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share market) ಸಿಕ್ಕಾಪಟ್ಟೆ ಕುಸಿತವಾಗುತ್ತಿತ್ತು ಎಂದು ಎಚ್ಚರಿಸಿದ್ದಾರೆ ಜಿರೋಧಾ ಸಂಸ್ಥೆಯ ಸಿಇಒ ನಿತಿನ್ ಕಾಮತ್ (Nithin Kamath) ಅವರು. ಷೇರು ಮಾರುಕಟ್ಟೆಯಲ್ಲಿ ನೀವು ಮೇಲೆ ಏರುವಾಗ ಏಣಿಯನ್ನು ಹತ್ತುತ್ತ ಏರುತ್ತೀರಿ, ಆದರೆ ಕುಸಿಯುವಾಗ ಇದು ಒಂದು ಕಟ್ಟಡದ ಮೇಲಿಂದ ನೇರವಾಗಿ ಕೆಳಗೆ ಧುಮುಕುವ ಹಾಗಿರುತ್ತದೆ. ಮಾರುಕಟ್ಟೆ ಇದೇ ರೀತಿಯಲ್ಲೇ ವರ್ತಿಸುತ್ತಿರುತ್ತದೆ. ಎಂದು ಹೇಳಿದ್ದಾರೆ ಮತ್ತು ಈ ಬಗ್ಗೆ ಅವರು ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದು ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ. 

ಪ್ರಶ್ನೆ: ಸ್ಥಳೀಯ ಈಕ್ವಿಟಿ ಮಾರುಕಟ್ಟೆಯನ್ನು ಬಲಿಷ್ಠಗೊಳಿಸಲು ಲಿವರೇಜ್ ಅನ್ನು ಸೆಬಿ ನಿಯಮಗಳ ಮೂಲಕ ಸೀಮಿತಗೊಳಿಸುವುದು ಎಷ್ಟು ಮಹತ್ವದ್ದಾಗಿದೆ? ಇತ್ತೀಚೆಗೆ ನಿಫ್ಟಿಯಲ್ಲಿ ಕಡಿಮೆ ಲಿವರೇಜ್ ಇದ್ದುದರಿಂದಾಗಿಯೇ ನಿಫ್ಟಿಯಲ್ಲಿ ಕುಸಿತ ಕಡಿಮೆಯಾಗಿರುವುದು ನಿಜವೆ?
ಉತ್ತರ:  ಸಾಮಾನ್ಯವಾಗಿ ಮಾರುಕಟ್ಟೆ ಬಿದ್ದಾಗ ಮೊದಲ 10-15% ಕುಸಿತ ಸಹಜ. ಆದರೆ, ಆ ಕೆಳಬೀಳುವಿಕೆ ನಿರಂತರವಾದರೆ ಅದು ಲಿವರೇಜ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹೀಗೆ ಕುಸಿಯುವ ದರ ನಿರಂತರವಾದಾಗ ಅದರ ಪರಿಮಾಣವು ದುಪ್ಪಟ್ಟಾಗುತ್ತದೆ. ಈ ಸಮಯದಲ್ಲಿ ಟ್ರೇಡರ್ ಗಳು ನಷ್ಟವನ್ನು ಅನುಭವಿಸುತ್ತಾರೆ. ಇದು ಮುಂದುವರೆದಂತೆ ದೊಡ್ಡ ಪರಿಣಾಮವನ್ನೇ ಸೃಷ್ಟಿಸುತ್ತದೆ. ಅಮೆರಿಕದಲ್ಲಿ ಈ ವರ್ಷ ಮಾರ್ಚ್ ನಿಂದ ಜೂನ್ ವರೆಗಿನ ಸಮಯದಲ್ಲಿ ಆಗಿದ್ದು ಇದೆ ಸ್ಥಿತಿ.

ಆದರೆ, ಭಾರತದ ಮಾರುಕಟ್ಟೆಗೆ ಸಂಬಂಧಿಸಿದಂತೆ ಈ ಪರಿಸ್ಥಿತಿ ಬರಲಿಲ್ಲ. ಕಾರಣ, ಇಲ್ಲಿ ಉದ್ಯಮಗಳಿಗಾಗಲಿ, ಬ್ರೋಕರ್ ಗಳಿಗಾಗಲಿ ಅಥವಾ ಟ್ರೇಡರ್ಸ್ ಬಳಿಯಾಗಲಿ ಪರಿಣಾಮ ಬೀರುವಂತಹ ಪ್ರಮಾಣದ ಲಿವರೇಜ್ ಅನ್ನುವುದು ಇರಲೇ ಇಲ್ಲ. ಇದರಿಂದಾಗಿಯೇ ಹಲವು ಮಾರ್ಕೆಟುಗಳು ಕುಸಿದರೂ ನಾವು ಅಷ್ಟೊಂದು ಕುಸಿತ ಅನುಭವಿಸಲಿಲ್ಲ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಮಾರ್ಕೆಟುಗಳು ಚೇತರಿಸಿಕೊಂಡಾಗ ನಾವು ಗರಿಷ್ಠ ಮಟ್ಟವನ್ನು ತಲುಪಿದ್ದೇವು. ಇದರ ತಾತ್ಪರ್ಯವೆಂದರೆ ಮಾರುಕಟ್ಟೆಯಲ್ಲಿ ಕಡಿಮೆ ಲಿವರೇಜ್ ಇದ್ದಾಗ ಕುಸಿತದ ಭಯ ಅಥವಾ ಆತಂಕ ಬಲು ಕಡಿಮೆಯೇ ಇರುತ್ತದೆ.

ಪ್ರಶ್ನೆ: ಹಾಗಾದರೆ ಕಳೆದ ಹಲವು ವರ್ಷಗಳಲ್ಲಿ ಯಾವ ನಿಯಮಗಳು ಬದಲಾಗಿವೆ? ಈ ಮೊದಲು ಲಿವರೇಜ್ ಪಡೆಯುವುದು ಎಷ್ಟು ಸುಲಭವಾಗಿತ್ತು?
ಉತ್ತರ: 2010ರ ವರೆಗೂ ಮಾರುಕಟ್ಟೆಯಲ್ಲಿ ಲಿವರೇಜ್ ಅನ್ನುವುದು ಅಸೀಮಿತವಾಗಿತ್ತು. ಒಬ್ಬ ಸ್ಟಾಕ್ ಬ್ರೋಕರ್ ತನ್ನ ಜ್ಞಾನಕ್ಕೆ ಸಂಬಂಧಿಸಿದಂತೆ ನೀವು ಎಷ್ಟು ಬೇಕಾದರೂ ಷೇರು ಕೂಳ್ಳಲು ಅನುಮತಿಸುತ್ತಿದ್ದ. ಉದಾಹರಣೆಗೆ, ನಿಮ್ಮ ಬ್ರೋಕರ್ ಗೆ ಯಾವುದೇ ಅಡ್ಡಿಯಿಲ್ಲವೆಂದಾಗಿದ್ದಲ್ಲಿ ನಿಮ್ಮ ಬಳಿಯಿರುವ ಒಂದು ಲಕ್ಷದ ಮೊತ್ತದೊಂದಿದೆ ನೀವು ಒಂದು ಕೋಟಿಯವರೆಗಿನ ವ್ಯವಹಾರಕ್ಕೂ ಕೈ ಹಾಕಬಹುದಾಗಿತ್ತು.

ಆದರೆ, ಪರಿಸ್ಥಿತಿ ಇಂದು ಹಾಗಿಲ್ಲ, ಇಂದು ಬ್ರೋಕರ್ ಗ್ರಾಹಕರಿಗೆ 60-70% ಗಿಂತ ಹೆಚ್ಚು ಫಂಡ್ ಮಾಡಲು ಅನುಮತಿಸುವುದಿಲ್ಲ. ಉದಾಹರಣೆಗೆ ಇಂದು ನೀವು ಒಂದು ಲಕ್ಷ ಮೊತ್ತದ ರಿಲಯನ್ಸ್ ಷೇರುಗಳನ್ನು ಖರೀದಿಸಬಯಸಿದರೆ ನಿಮ್ಮ ಬಳಿ ಕನಿಷ್ಠ 20,000 ದಷ್ಟು ಮೊತ್ತವಿರಬೇಕು. ನಿಮಗೆ ಒದಗುವ ಗರಿಷ್ಠ ಲಿವರೇಜ್ ಐದು ಪಟ್ಟಾಗಿರುತ್ತದೆ ಅಷ್ಟೆ. 2008ರ ಮಾರುಕಟ್ಟೆಯ ಹೀನಾಯ ಕುಸಿತಕ್ಕೆ ಕಾರಣ ಹೆಚ್ಚಿನ ಮಟ್ಟದ ಲಿವರೇಜ್ ನೀಡುವುದೇ ಆಗಿತ್ತು. ಅಲ್ಲದೆ, ಬ್ರೋಕರ್ ತಾನು ಒದಗಿಸುವ ಸಾಲದ ಮೇಲೆಯೂ ಬಡ್ಡಿ ಪಡೆಯುತ್ತಿದ್ದ ಹಾಗೂ ತನ್ನದ ಆದ ಹಣ ಹೂಡುತ್ತಿರಲಿಲ್ಲ. ಇತರರಿಂದ ಬಂದ ಹಣವನ್ನು ಇನ್ನೊಬ್ಬರಿಗೆ ಸಾಲವಾಗಿ ನೀಡುತ್ತಿದ್ದ. ಇದೊಂದು ಬಹು ಅಪಾಯಕಾರಿ ಪ್ರಕ್ರಿಯೆಯಾಗಿತ್ತು.

ಇದನ್ನೂ ಓದಿ:  Gautam Adani: ಸಾಲದ ಸುಳಿಯಲ್ಲಿ ಸಿಲುಕಿದ್ಯಾ ಅದಾನಿ ಸಾಮ್ರಾಜ್ಯ? ಭಾರತೀಯ ಬಿಲಿಯನೇರ್​​ಗೂ ತಪ್ಪದ ಸಂಕಷ್ಟ!

ಆದರೆ ಇಂದು ಲಿವರೇಜ್ ಕೇವಲ ಐದು ಪಟ್ಟಿನಷ್ಟಿದೆ. ಅಲ್ಲದೆ ಬ್ರೋಕರ್ ತನ್ನ ದುಡ್ಡನ್ನೇ ಹೂಡಬೇಕಾಗುತ್ತದೆ. ಮೊದಲಿನ ರೀತಿ ಒಬ್ಬರ ದುಡ್ಡನ್ನು ಇನ್ನೊಬ್ಬರಿಗಾಗಿ ಬಳಸುವ ಅಭ್ಯಾಸ ಈಗಿಲ್ಲ. ಇವೆಲ್ಲ ಸಾಧ್ಯವಾಗಿರುವುದು ಕಳೆದ ಕೆಲ ವರ್ಷಗಳಲ್ಲಿ ತರಲಾಗಿರುವ ಸೆಬಿ ನಿಯಮಗಳಿಂದಲೇ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸತ್ಯವಾಗಿ ಹೇಳಬೇಕೆಂದರೆ ಹನ್ನೆರಡು ವರ್ಷಗಳ ಹಿಂದೆ ನಾವು ಜಿರೋಧಾ ಪ್ರಾರಂಭಿಸಬೇಕೆಂದಿದ್ದಾಗ ಈ ಎಲ್ಲ ನಿಯಮಾವಳಿಗಳು ಬರಲಿರುವುದರ ಬಗ್ಗೆ ನಮಗೆ ತಿಳಿದೇ ಇತ್ತು. ಹಾಗಾಗಿ ನಾವು ಇತರೆ ಬ್ರೋಕರ್ ಗಳೋಂದಿಗೆ ಲಿವರೇಜ್ ಮೇಲೆ ಸ್ಪರ್ಧಿಸಲು ಬಯಸದೆ ಇದ್ದಿದ್ದರಿಂದ ಇದನ್ನು ಅಳವಡಿಸಿಕೊಳ್ಳಲು ಸರಾಗವಾಯಿತು. ಕಳೆದ 2-3 ವರ್ಷಗಳಲ್ಲಿ ನಿಯಮಾವಳಿಗಳು ತೀವ್ರಗತಿಯಲ್ಲಿ ಅಳವಡಿಸಿಕೊಳ್ಳಲ್ಪಡುತ್ತಿವೆ. ಹಾಗಾಗಿಯೇ ನೀವು ಅಮೆರಿಕದ ಮಾರುಕಟ್ಟೆಯೊಂದಿಗೆ ಹೋಲಿಸಿದರೆ ಕಳೆದ ಐದು ವರ್ಷಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಥೀರತೆ ಕಂಡುಬರುತ್ತಿದೆ.

ಪ್ರಶ್ನೆ: ಲಿವರೇಜ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾರುಕಟ್ಟೆ ಹೇಗಿದೆ? ನಮ್ಮಲ್ಲಿರುವ ನಿಯಮಗಳು ಸಾಕಷ್ಟು ಕಠಿಣವಾಗಿವೆಯೆ?
ಉತ್ತರ: ಅಲ್ಲಿ ಪರಿಸ್ಥಿತಿ ಒಂದು ರೀತಿಯಲ್ಲಿ ವೈಲ್ಡ್ ವೆಸ್ಟ್ ಅನ್ನುವ ಹಾಗಿದೆ. ನೀವು ಏನಾದರೂ ಮಾಡಬಹುದು. ಮೊದಲನೆಯದಾಗಿ ನೀವು ಅಲ್ಲಿ ಸುಲಭವಾಗಿ ಬ್ರೋಕರ್ ಆಗಲು ಸಾಧ್ಯವಿಲ್ಲ ಹಾಗೂ ಎರಡನೇಯದಾಗಿ ನೀವೊಬ್ಬ ಬ್ರೋಕರ್ ಆಗಿ ವಂಚನೆ ಮಾಡಿದರೆ ತೆರಬೇಕಾದ ದಂಡದ ಮೊತ್ತವೂ ಅಪಾರವಾಗಿರುತ್ತದೆ.

ಭಾರತದಲ್ಲಿ ಬ್ರೋಕಿಂಗ್ ವಲಯ ಉತ್ತಮವಾಗಿದ್ದರೂ ಬ್ಯಾಗಿನಲ್ಲಿರುವ ಕೆಲ ಕೊಳೆತ ಸೇಬು ಹಣ್ಣುಗಳು ಎಲ್ಲ ಉತ್ತಮ ಹಣ್ಣುಗಳಿಗೂ ಅಪಾಯ ತಂದೊಡ್ಡುವಂತಹ ಪರಿಸ್ಥಿತಿ ಇಲ್ಲಿದೆ. ಅಮೆರಿಕದಲ್ಲಿ ಬ್ರೋಕಿಂಗ್ ಲಾಬಿಯು ಬಲು ಸದೃಢವಾಗಿದ್ದು ಯಾವುದೇ ನಿಯಮಗಳನ್ನು ಜಾರಿಗೆ ತರುವುದು ಅಷ್ಟೊಂದು ಸುಲಭವಾಗಿಲ್ಲ. ಆದರೆ, ಭಾರತದಲ್ಲಿ ಬ್ರೋಕಿಂಗ್ ವಲಯ ಬಲಿಷ್ಠವಾಗಿಲ್ಲ, ಹಾಗಾಗಿ ಇಲ್ಲಿ ನಿಯಮಗಳನ್ನು ಹೆಚ್ಚಿನ ವಿರೋಧವಿಲ್ಲದೆ ಸುಲಭವಾಗಿ ಅಳವಡಿಸಬಹುದು.

ಇದನ್ನೂ ಓದಿ:  Millionaires: 2030ರಲ್ಲಿ ಶ್ರೀಮಂತ ರಾಷ್ಟ್ರವಾಗಲಿದ್ಯಾ ಭಾರತ? ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗಲಿದೆ ಅಂತಿದೆ ಈ ರಿಪೋರ್ಟ್!

ಅಮೆರಿಕದಲ್ಲಿ ಬ್ರೋಕರ್ ಗಳು ತಮ್ಮ ಲಾಭಕ್ಕಾಗಿ ಒಬ್ಬರ ದುಡ್ಡನ್ನು ಇನ್ನೊಬ್ಬರೊಂದಿಗೆ ನೀಡುವ ಮೂಲಕ ವ್ಯವಹರಿಸುತ್ತಾರೆ. ಭಾರತದಲ್ಲಿ ಒಬ್ಬ ಗ್ರಾಹಕ ತನ್ನ ದುಡ್ಡನ್ನು ಬಳಸಿಕೊಳ್ಳದೆ ಇದ್ದರೆ ಬ್ರೋಕರ್ ಆ ದುಡ್ಡನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮರಳಿಸಬೇಕಾಗುತ್ತದೆ. ಅಮೆರಿಕದಲ್ಲಿ ಸ್ಥಿತಿ ಹೀಗಿಲ್ಲ. ಗ್ರಾಹಕ ತನ್ನ ದುಡ್ಡನ್ನು ಬಳಸದೆ ಹೋದರೂ ಆ ದುಡ್ಡು ಬ್ರೋಕರ್ ಹೆಸರಿನಲ್ಲಿಯೇ ಇರುತ್ತದೆ. ಅದಕ್ಕಾಗಿ ಮಾರ್ಜಿನ್ ಖಾತೆಯೊಂದನ್ನು ಸೃಷ್ಟಿಸಿರುತ್ತಾರೆ ಹಾಗೂ ಆ ದುಡ್ಡು ಅವರ (ಬ್ರೋಕರ್) ಹೆಸರಿನಲ್ಲಿರುವ ಆ ಖಾತೆಯಲ್ಲಿಯೇ ಇರುತ್ತದೆ.
Published by:Ashwini Prabhu
First published: