• Home
  • »
  • News
  • »
  • business
  • »
  • CIBIL Score ಅಂದ್ರೆ ಏನು? ಇದನ್ನು ಜಾಸ್ತಿ ಮಾಡಿಕೊಳ್ಳೋದು ಹೇಗೆ? ಉಪಯುಕ್ತ ಮಾಹಿತಿ ಇಲ್ಲಿದೆ

CIBIL Score ಅಂದ್ರೆ ಏನು? ಇದನ್ನು ಜಾಸ್ತಿ ಮಾಡಿಕೊಳ್ಳೋದು ಹೇಗೆ? ಉಪಯುಕ್ತ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಹುತೇಕ ಜನರಿಗೆ ಸಿಬಿಲ್​ ಸ್ಕೋರ್​ ಅಂದರೆ ಏನು ಎಂದು ತಿಳಿದಿದೆ. ಇನ್ನೂ ಕೆಲವರಿಗೆ ಸಿಬಿಲ್​ ಸ್ಕೋರ್​ ಅಂದರೆ ಏನು? ಅದರಿಂದ ಆಗುವ ಪ್ರಯೋಜನಗಳೇನು? ಎಂಬುಂದರ ಬಗ್ಗೆ ಹೆಚ್ಚಾಗಿ ಅರಿವಿರುವುದಿಲ್ಲ. ಹೀಗಾಗಿ ಈ ಸ್ಟೋರಿಯಲ್ಲಿ ಸಿಬಿಲ್​ ಸ್ಕೋರ್​ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಮುಂದೆ ಓದಿ ...
  • Share this:

ನೀವು ಯಾವುದೇ ಬ್ಯಾಂಕಿ (Bank) ನಲ್ಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ (Credit Card) ತೆಗೆದುಕೊಳ್ಳಲು ಹೋದರೆ , ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಮೊದಲು ನಿಮ್ಮ CIBIL ಸ್ಕೋರ್ ಅನ್ನು ಪರಿಶೀಲಿಸುತ್ತದೆ . ನೀವು ಬ್ಯಾಂಕ್ ಅಥವಾ ಹಣಕಾಸು ಕಂಪನಿಯಿಂದ ಎಷ್ಟು ಬಡ್ಡಿ (Interest) ಯನ್ನು ಪಡೆಯುತ್ತೀರಿ, ಎಷ್ಟು ಸಾಲ (Loan) ವನ್ನು ನೀವು ಪಡೆಯುತ್ತೀರಿ ಎಂಬುದು ನಿಮ್ಮ CIBIL ಸ್ಕೋರ್ ಎಷ್ಟು ಉತ್ತಮವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ ನಿಮ್ಮ ಸಿಬಿಲ್​ ಸ್ಕೋರ್ (CIBIL Score)​ ಹೆಚ್ಚಿದ್ದೆರೆ ಮಾತ್ರ ನಿಮಗೆ ಸಾಲ ಹಾಗೂ ಕ್ರೆಡಿಟ್​ ಕಾರ್ಡ್ ನೀಡುತ್ತಾರೆ. ಬಹುತೇಕ ಜನರಿಗೆ ಸಿಬಿಲ್​ ಸ್ಕೋರ್​ ಅಂದರೆ ಏನು ಎಂದು ತಿಳಿದಿದೆ. ಇನ್ನೂ ಕೆಲವರಿಗೆ ಸಿಬಿಲ್​ ಸ್ಕೋರ್​ ಅಂದರೆ ಏನು? ಅದರಿಂದ ಆಗುವ ಪ್ರಯೋಜನಗಳೇನು? ಎಂಬುಂದರ ಬಗ್ಗೆ ಹೆಚ್ಚಾಗಿ ಅರಿವಿರುವುದಿಲ್ಲ. ಹೀಗಾಗಿ ಈ ಸ್ಟೋರಿಯಲ್ಲಿ ಸಿಬಿಲ್​ ಸ್ಕೋರ್​ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.


ಸಿಬಿಲ್​ ಸ್ಕೋರ್​ ಎಂದರೇನು? ಪ್ರಯೋಜನಗಳೇನು?


ಸರಳವಾಗಿ ಹೇಳುವುದಾದರೆ, ಸಿಬಿಲ್ ಸ್ಕೋರ್ ಉತ್ತಮವಾದಷ್ಟೂ ಬಡ್ಡಿದರ ಕಡಿಮೆಯಾಗುತ್ತದೆ. ಸಾಲ ಕೆಟ್ಟಾಗ ಸಾಲ ಸಿಗುವುದು ಕಷ್ಟ, ಸಾಲ ಪಡೆದರೆ ಹೆಚ್ಚಿನ ಬಡ್ಡಿ ದರದಲ್ಲಿ ಸಿಗುತ್ತದೆ. ಸಿಬಿಲ್ ಸ್ಕೋರ್ ವರದಿಯು ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ, ಉದ್ಯೋಗದ ವಿವರಗಳು, ಬ್ಯಾಂಕ್ ಖಾತೆ ಮತ್ತು ಹಳೆಯ ಸಾಲದ ಮಾಹಿತಿಯನ್ನು ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಿಮಾ ಕಂಪನಿಗಳು ಸಹ ಈ ಸ್ಕೋರ್ ಅನ್ನು ನೋಡುತ್ತವೆ. ಸಿಬಿಲ್ ಸ್ಕೋರ್‌ಗಳು 0 ರಿಂದ 900 ವರೆಗೆ ಇರುತ್ತದೆ. ನಿಮ್ಮ ಸ್ಕೋರ್​ ನೋಡಿ ನಿಮಗೆ ಎಷ್ಟು ಹಣ ನೀಡಬೇಕು ಎಂದು ಡಿಸೈಡ್ ಮಾಡಲಾಗುತ್ತೆ.


ಎಷ್ಟು ಸ್ಕೋರ್​ ಇದ್ದರೆ ಉತ್ತಮ?


-550 - ತುಂಬಾ ಕೆಟ್ಟದು


-550-650 - ಕೆಟ್ಟದು


-650-750 - ಒಳ್ಳೆಯದು


-750 ಕ್ಕಿಂತ ಹೆಚ್ಚು - ಉತ್ತಮ


-750-900 - ಅತ್ಯುತ್ತಮ


ಯಾವಾಗಲೂ ನಿಮ್ಮ ಸಿಬಿಲ್​ ಸ್ಕೋರ್​​ 750ಕ್ಕಿಂತ ಹೆಚ್ಚಿದರೆ ನಿಮಗೆ ಹೆಚ್ಚಿನ ಸಾಲ ಅಥವಾ ಹೆಚ್ಚಿನ ಲಿಮಿಟ್​ ಇರುವ ಕ್ರೆಡಿಟ್​ ಸಿಗಲಿದೆ.


ಇದನ್ನೂ ಓದಿ: ಮತ್ತೆ ರೆಪೋ ದರ ಏರಿಸಿದ ಆರ್​ಬಿಐ, ಇದ್ರಿಂದ ಜನಸಾಮನ್ಯರಿಗಾಗೋ ಸಮಸ್ಯೆ ಒಂದೊಂದಲ್ಲ ಬಿಡಿ!


ವಾಣಿಜ್ಯ ಕಂಪನಿಗಳಿಗ ಒಂದರಿಂದ ಹತ್ತು!


ವಾಣಿಜ್ಯ ಕಂಪನಿಗಳಿಗೆ ಸಿಬಿಲ್ ಸ್ಕೋರ್ ಒಂದರಿಂದ ಹತ್ತರವರೆಗೆ ಇರುತ್ತದೆ. ಒಂದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ 10 ಅಂಕಗಳನ್ನು ಕೆಟ್ಟದಾಗಿದೆ ಎಂದು ಪರಿಗಣಿಸಲಾಗುತ್ತದೆ. ನೀವು ಇಲ್ಲಿಯವರೆಗೆ ಸಾಲದ ಇತಿಹಾಸವನ್ನು ಹೊಂದಿಲ್ಲದಿದ್ದರೆ ಅಥವಾ ನೀವು ಬ್ಯಾಂಕ್ ಅಥವಾ NBFC ಅಥವಾ ಫಿನ್‌ಟೆಕ್ ಕಂಪನಿಯಿಂದ ಸಾಲವನ್ನು ತೆಗೆದುಕೊಳ್ಳದಿದ್ದರೆ, ನಿಮ್ಮ CIBIL ಸ್ಕೋರ್ ಶೂನ್ಯಕ್ಕಿಂತ ಕೆಳಗಿರುತ್ತದೆ. ನಿಮ್ಮ ಸಾಲವನ್ನು ನೀವು ಸಮಯಕ್ಕೆ ಮರುಪಾವತಿಸಿದರೆ, ಸಿಬಿಲ್ ಸ್ಕೋರ್ 750 ಅಥವಾ ಹೆಚ್ಚಿನದಾಗಿರುತ್ತದೆ.


ನಿಮ್ಮ ಸಿಬಿಲ್​ ಸ್ಕೋರ್​ ನಿರ್ಧಾರ ಮಾಡೋರು ಯಾರು?


CIBIL ಅಂಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು RBI ನಾಲ್ಕು ಏಜೆನ್ಸಿಗಳಿಗೆ ಅಧಿಕಾರ ನೀಡಿದೆ. ಸಿಬಿಲ್, ಎಕ್ಸ್‌ಪೀರಿಯಾ, ಅಕ್ವಿಫ್ಯಾಕ್ಸ್ ಮತ್ತು ಹಿಮಾರ್ಕ್ಸ್. ಈ ಕಂಪನಿಗಳು ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಫಿನ್‌ಟೆಕ್ ಕಂಪನಿಗಳು ಮುಂತಾದ ವಿವಿಧ ಮೂಲಗಳಿಂದ ಸಾಲ ಸೇರಿದಂತೆ ಅದರ ಮರುಪಾವತಿ ಸೇರಿದಂತೆ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅದರ ಆಧಾರದ ಮೇಲೆ ಸಿಬಿಲ್ ಸ್ಕೋರ್ ತಯಾರಿಸಲಾಗುತ್ತದೆ.


ಸಿಬಿಲ್​ ಸ್ಕೋರ್​ ಹೆಚ್ಚಿಸಿಕೊಳ್ಳುವುದು ಹೇಗೆ?


- ಸಾಲಕ್ಕಾಗಿ ನೀವು ಎಷ್ಟು ಬಾರಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ವಿಚಾರಿಸಿದ್ದೀರಿ ಎಂಬುವ ಈ ಮಾಹಿತಿಯನ್ನು ಈ ಕಂಪನಿಗಳು ಕಲೆ ಹಾಕುತ್ತವೆ.


- ಸಾಲವನ್ನು ಸಮಯಕ್ಕೆ ಪಾವತಿಸಿ. ಪ್ರತಿಯೊಂದ ಕಂತನ್ನು ತಡ ಮಾಡದೇ ಕಟ್ಟಿ


ಇದನ್ನೂ ಓದಿ: ಐಟಿ ರಿರ್ಟನ್​ಗೆ ಫೈಲ್​ ಮಾಡ್ತಿದ್ದೀರಾ? ಹಾಗಿದ್ರೆ ಈ 10 ಡಾಕ್ಯುಮೆಂಟ್ಸ್​ನ ಫಸ್ಟ್​ ರೆಡಿ ಮಾಡಿ


- ನಿಮ್ಮ ಆದಾಯದ 30% ಕ್ಕಿಂತ ಹೆಚ್ಚು ಸಾಲ ಮಾಡಬೇಡಿ


-  ಸುಖಾಸುಮ್ಮನೆ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ.


-  ನಿಮಗೆ ಅಗತ್ಯವಿರುವ ಸಾಲವನ್ನು ತೆಗೆದುಕೊಳ್ಳಿ


- ಲಾಭದಾಯಕ ಕೊಡುಗೆಗಳು ಮತ್ತು ಆಕರ್ಷಕ ಬಡ್ಡಿದರಗಳ ಕಾರಣದಿಂದಾಗಿ ಸಾಲವನ್ನು ತೆಗೆದುಕೊಳ್ಳಬೇಡಿ.


- ದೀರ್ಘಾವಧಿ ಸಾಲ ತೆಗೆದುಕೊಳ್ಳಿ. ಇದರಿಂದ ಕಂತು ಕೂಡ ಕಡಿಮೆಯಾಗುತ್ತದೆ. ಇದು ಪಾವತಿಸಲು ಸುಲಭವಾಗುತ್ತದೆ.

Published by:Vasudeva M
First published: