ನವದೆಹಲಿ(ಫೆ.01): ಬಹು ನಿರೀಕ್ಷಿತ ಕೇಂದ್ರ ಬಜೆಟ್ 2023 (Budget 2023) ಘೋಷಣೆಯಾಗಿದೆ. ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಇನ್ನು ಮಧ್ಯಮ ವರ್ಗದ ಜನರ ಹೊರೆಯನ್ನು ಸರ್ಕಾರ ಕಡಿಮೆ ಮಾಡಿದ್ದು, ಆದಾಯ ತೆರಿಗೆ ಮಿತಿಯಲ್ಲಿ ರಿಯಾಯಿತಿ ನೀಡಲಾಗಿದೆ. ಹೊಸ ತೆರಿಗೆ (Income Tax) ಪದ್ಧತಿ ಅನ್ವಯ ಇನ್ಮುಂದೆ ಏಳು ಲಕ್ಷದವರೆಗೆ ತೆರಿಗೆ ಪಾವತಿಸುವಂತಿಲ್ಲ. ಇನ್ನುಳಿದಂತೆ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೂ (Agriculture) ಅನುದಾನ ಘೋಷಿಸಲಾಗಿದ್ದು, ರೈತ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅತ್ತ ರೈಲ್ವೆಗೂ ಅನುದಾನ ಘೋಷಣೆಯಿಂದ ನೆಮ್ಮದಿ ಲಭಿಸಿದೆ. ಕರ್ನಾಟಕಕ್ಕೂ ಬಂಪರ್ ಅನುದಾನ ಲಭಿಸಿದೆ. ಇನ್ನು ಈ ಬಾರಿಯ ಬಜೆಟ್ ಬಳಿಕ ಯಾವುದು ಅಗ್ಗ, ಯಾವುದು ದುಬಾರಿಯಾಗಿದೆ?
ಈ ಎಲ್ಲವೂ ಅಗ್ಗ:
* ಮೊಬೈಲ್ ಫೋನ್ ಚಾರ್ಜರ್
* ಟಿವಿ
* ಸೈಕಲ್
* ಕ್ಯಾಮೆರಾ ಲೆನ್ಸ್
* ಇ ವಾಹನಗಳ ಬ್ಯಾಟರಿ
* ಬಟ್ಟೆಗಳು
* ಪಾಲಿಶ್ಡ್ ವಜ್ರ
ಬಜೆಟ್ ಸಂಬಂಧಿತ ಕ್ಷಣ ಕ್ಷಣದ ಮಾಹಿತಿಯ ಲೈವ್ ಬ್ಲಾಗ್: ನಿರ್ಮಲಾ ಆಯವ್ಯಯದ ಮೇಲೆ ಎಲ್ಲರ ಕಣ್ಣು
ಯಾವುದು ಏರಿಕೆ/ ದುಬಾರಿ?
* ಬಂಗಾರ
* ಬೆಳ್ಳಿ,
* ವಜ್ರ
* ಪ್ಲಾಟಿನಂ
* ಸಿಗರೇಟ್
* ತಂಬಾಕು ಉತ್ಪನ್ನ
* ಆಮದು ಮಾಡಿಕೊಂಡ ರಬ್ಬರ್
* ಬ್ರಾಂಡೆಡ್ ಬಟ್ಟೆಗಳು
* ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು
* ಛತ್ರಿ
* ಸ್ಮಾರ್ಟ್ ಮೀಟರ್
* ಸೌರ ಮಾಡ್ಯೂಲ್ಗಳು
* ಎಕ್ಸ್-ರೇ ಯಂತ್ರಗಳು
* ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳು
ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ರೂಪಾಯಿ ಅನುದಾನ
ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 2022 ರ ಬಜೆಟ್‌ನಲ್ಲಿ, ರಕ್ಷಣಾ ವಲಯಕ್ಕೆ ಒಟ್ಟು 5.25 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇದು ಸಂಪೂರ್ಣ ಬಜೆಟ್‌ನ ಒಟ್ಟು ಶೇಕಡಾ 13.31 ರಷ್ಟಾಗಿತ್ತು. ಇದೀಗ ಈ ಬಾರಿ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.94 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದು ಇದು ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಶೇಕಡಾ 16ರಷ್ಟು ಹೆಚ್ಚಿನ ಅನುದಾನವಾಗಿದೆ.
ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಗೆ ಮಹತ್ವ
ರೈಲ್ವೆಯಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಭಾರತೀಯ ರೈಲ್ವೆ, ಜಗತ್ತಿನ ಅತಿ ದೊಡ್ಡ ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಯಾಗಿ ಬೆಳೆಯುವತ್ತ ಸಾಗುತ್ತಿದೆ. 2022-23ರಲ್ಲಿ 1,973 ಕಿಮೀ ಮಾರ್ಗದ ವಿದ್ಯುದೀಕರಣ ಸಾಧಿಸಲಾಗಿದೆ. 2021-22ರ ಅವಧಿಗೆ ಹೋಲಿಸಿದರೆ ಇದು ಶೇ 41ರಷ್ಟು ಅಧಿಕವಾಗಿದೆ. ಇದರ ಜತೆಗೆ 1,161 ಮತ್ತು 296 ಕಿ.ಮೀ. ಡಬಲ್ ಲೈನ್ ಮತ್ತು ಸೈಡಿಂಗ್‌ಗಳ ವಿದ್ಯುದೀಕರಣವನ್ನು ಈವರೆಗೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ