ಹಳೆಯ ತೆರಿಗೆ ಪದ್ಧತಿ (Old tax system) ಸೂಕ್ತವೇ ಅಥವಾ ಹೊಸದಾದ ತೆರಿಗೆ ವ್ಯವಸ್ಥೆ ಉತ್ತಮವೇ ಎಂಬುದನ್ನು ತೆರಿಗೆದಾರರು ಟ್ಯಾಕ್ಸ್ ಕ್ಯಾಲ್ಕುಲೇಟರ್‌ನ ಸಹಾಯದಿಂದ ಪತ್ತೆಹಚ್ಚಬಹುದಾಗಿದೆ. ಯಾವುದು ಉತ್ತಮವೋ ಅದನ್ನು ತೆರಿಗೆದಾರರು ಅನ್ವಯಿಸಿಕೊಳ್ಳಬಹುದಾಗಿದೆ. 2023 ರ ಬಜೆಟ್‌ನಲ್ಲಿ (Budget 2023) ಘೋಷಿಸಲಾದ ಹೊಸ ಆದಾಯ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಉತ್ತಮವಾಗಿದೆಯೇ ಅಥವಾ ಹಳೆಯದು ಉತ್ತಮವೇ ಎಂಬುದನ್ನು ಇದೀಗ ಟ್ಯಾಕ್ಸ್ ಕ್ಯಾಲ್ಕುಲೇಟರ್ ಬಳಸಿ ನಿರ್ಧರಿಸಬಹುದು ಎಂಬುದು ತಿಳಿದುಬಂದಿದೆ. ಆದಾಯ ತೆರಿಗೆ ಇಲಾಖೆ ಪೋರ್ಟಲ್‌ನಲ್ಲಿ ಟ್ಯಾಕ್ಸ್ ಕ್ಯಾಲ್ಕುಲೇಟರ್ (Tax Calculator) ಲಭ್ಯವಿದೆ ಎಂದು ಮಾಹಿತಿ ದೊರೆತಿದೆ.
ಇಲಾಖೆ ಮಾಡಿರುವ ಟ್ವೀಟ್ ಏನು?
ತೆರಿಗೆ ಕ್ಯಾಲ್ಕುಲೇಟರ್ ತೆರಿಗೆದಾರರಿಗೆ ಲಭ್ಯವಿದೆ! 115BAC ಪ್ರಕಾರ ವೈಯಕ್ತಿಕ/HUF/AOP/BOI/ ನ್ಯಾಯಾಂಗ ವ್ಯಕ್ತಿ(AJP) ಗಾಗಿ ಹಳೆಯ ತೆರಿಗೆ ಪದ್ಧತಿಯ ವಿರುದ್ಧ ಹೊಸ ತೆರಿಗೆ ಪದ್ಧತಿಯನ್ನು ಪರಿಶೀಲಿಸಲು ಮೀಸಲಾದ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಈಗ ಆದಾಯ ತೆರಿಗೆ ವಿಭಾಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ ಎಂದು ಇಲಾಖೆ ಟ್ವೀಟ್ ಮಾಡಿದೆ.
ಇನ್‌ಕಮ್ ಟ್ಯಾಕ್ಸ್ ಕ್ಯಾಲ್ಕುಲೇಟರ್ ಎಂದರೇನು?
ಈ ಪರಿಕರ ಆನ್‌ಲೈನ್ ಟೂಲ್ ಆಗಿದ್ದು ಕೇಂದ್ರ ಬಜೆಟ್ 2023-24 ಪ್ರಕಟಣೆಯ ಆಧಾರದ ಮೇಲೆ ತೆರಿಗೆಗಳನ್ನು ಲೆಕ್ಕಾಚಾರ ಮಾಡಲು ವೈಯಕ್ತಿಕ ತೆರಿಗೆದಾರರಿಗೆ ಸಹಾಯ ಮಾಡುತ್ತದೆ. ತೆರಿಗೆ ವಿಧಿಸಬಹುದಾದ ಆದಾಯದ ವ್ಯಾಪ್ತಿಯಡಿಯಲ್ಲಿ ಬರುವ ವ್ಯಕ್ತಿಗಳು ತಮ್ಮ ನಿವ್ವಳ ವಾರ್ಷಿಕ ಆದಾಯದ ನಿರ್ದಿಷ್ಟ ಭಾಗವನ್ನು ತೆರಿಗೆಯಾಗಿ ಪಾವತಿಸಲು ಹೊಣೆಗಾರರಾಗಿರುತ್ತಾರೆ.
ಏಪ್ರಿಲ್ 1, 2023 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ ಬಜೆಟ್ ಅನ್ನು ಘೋಷಿಸಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ತೆರಿಗೆ ಪದ್ಧತಿಯನ್ನಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದು ಹಳೆಯ ತೆರಿಗೆ ಪದ್ಧತಿಯಿಂದ ಪ್ರಯೋಜನವನ್ನು ಪಡೆಯಲು ತೆರಿಗೆದಾರರಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಬಜೆಟ್ 2023 ರ ಪ್ರಕಾರ, ಹೊಸ ತೆರಿಗೆ ವಿಧವನ್ನು ಆಯ್ಕೆ ಮಾಡುವ ತೆರಿಗೆದಾರರು ತಮ್ಮ ಆದಾಯವು ವಾರ್ಷಿಕ 7 ಲಕ್ಷ ರೂಪಾಯಿಗಳನ್ನು ಮೀರದಿದ್ದರೆ ರಿಯಾಯಿತಿಯನ್ನು ಪಡೆಯುತ್ತಾರೆ.
ಇದಲ್ಲದೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಈಗಾಗಲೇ ಲಭ್ಯವಿರುವ ಹೊಸ ಆಡಳಿತದ ಕ್ರಮದಂತೆ 50,000 ರೂಪಾಯಿಗಳ ಪ್ರಮಾಣಿತ ಕಡಿತವನ್ನು ಬಜೆಟ್‌ನಲ್ಲಿ ಹಣಕಾಸು ಸಚಿವರು ಅನುಮತಿಸಿದ್ದಾರೆ. ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ರೂ 2.5 ಲಕ್ಷ ಮೂಲ ವಿನಾಯಿತಿ ಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಕ್ರಮವು ವಾರ್ಷಿಕವಾಗಿ ರೂ 7 ಲಕ್ಷದವರೆಗೆ ಗಳಿಸುವ ಮತ್ತು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ರೂ 33,800 ಉಳಿತಾಯವನ್ನು ಖಚಿತಪಡಿಸುತ್ತದೆ. ರೂ 10 ಲಕ್ಷದವರೆಗಿನ ಆದಾಯ ಹೊಂದಿರುವವರು ರೂ 23,400 ಮತ್ತು ರೂ 49,400 ಉಳಿತಾಯ ರೂ 15 ಲಕ್ಷದವರೆಗೆ ಗಳಿಸುವವರಿಗೆ ಕೂಡ ತೆರಿಗೆ ಪದ್ಧತಿ ಸೂಕ್ತ ಎಂದೆನಿಸಿದೆ.
ಆದಾಯ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಹಂತ 1: ವಾರ್ಷಿಕ ಆದಾಯವನ್ನು ನಮೂದಿಸಿ - ಸಂಬಳ, ಠೇವಣಿಗಳಿಂದ ಬಡ್ಡಿ ಆದಾಯ, ಬಂಡವಾಳ ಲಾಭ, ಮನೆ ಆಸ್ತಿಯಿಂದ ಬಾಡಿಗೆ ಮತ್ತು ಇತರ ತೆರಿಗೆಯ ಆದಾಯದಂತಹ ವಿವಿಧ ಆದಾಯದ ಅಡಿಯಲ್ಲಿ ಗಳಿಸಿದ ಆದಾಯದ ವಿವರಗಳನ್ನು ಒದಗಿಸಿ
ಹಂತ 2: ವಿನಾಯಿತಿಗಳನ್ನು ನಮೂದಿಸಿ - ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯದ ವಿರುದ್ಧ ಲಭ್ಯವಿರುವ ವಿನಾಯಿತಿಗಳ ವಿವರಗಳನ್ನು ಒದಗಿಸಿ. ಅಂತಹ ವಿನಾಯಿತಿಯು ಸಂಬಳ, ಸ್ವಯಂ-ಆಕ್ರಮಿತ ಆಸ್ತಿ ಮತ್ತು ಲೆಟ್-ಔಟ್ ಆಸ್ತಿಯ ವಿನಾಯಿತಿಗಳಾಗಿರಬಹುದು
ಹಂತ 3: ತೆರಿಗೆ ಕಡಿತಗಳು - ಸೆಕ್ಷನ್ 80C ಹೂಡಿಕೆಗಳು ಮತ್ತು ವೆಚ್ಚಗಳು, ಆರೋಗ್ಯ ವಿಮೆ, NPS, ಶಿಕ್ಷಣ ಸಾಲ ಮತ್ತು ದೇಣಿಗೆಗಳ ಅಡಿಯಲ್ಲಿ ಲಭ್ಯವಿರುವ ಕಡಿತದ ವಿವರಗಳನ್ನು ಒದಗಿಸಿ.
ಹಂತ 4: ಮೂಲ ವಿವರಗಳು - ನಿಮ್ಮ ವಯಸ್ಸು ಮತ್ತು ಹಣಕಾಸು ವರ್ಷದಲ್ಲಿ ಪಾವತಿಸಿದ ತೆರಿಗೆಗಳನ್ನು ಒದಗಿಸಿ.
ಹಂತ 5: ತೆರಿಗೆ ವಿಭಜನೆ - ಈ ಹಂತದಲ್ಲಿ, ಕ್ಯಾಲ್ಕುಲೇಟರ್ ಹೊಸ ಯೋಜನೆ ಮತ್ತು ಹಳೆಯ ಯೋಜನೆಯ ಪ್ರಕಾರ ಒಟ್ಟು ತೆರಿಗೆಯನ್ನು ಲೆಕ್ಕಾಚಾರ ಮಾಡುತ್ತದೆ. ಪರಿಣಾಮಕಾರಿ ತೆರಿಗೆ ಉಳಿತಾಯಕ್ಕಾಗಿ ಎಷ್ಟು ಹೆಚ್ಚು ಹೂಡಿಕೆ ಮಾಡಬೇಕೆಂದು ಇದು ನಿರ್ಧರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ