• Home
  • »
  • News
  • »
  • business
  • »
  • QR Code ಅಂದ್ರೇನು? ಹೇಗೆ ಕಾರ್ಯ ನಿರ್ವಹಿಸುತ್ತೆ? ನಿಮ್ಮದೇ ಕ್ಯೂಆರ್​ ಕೋಡ್​ ಮಾಡೋದೂ ಸುಲಭ

QR Code ಅಂದ್ರೇನು? ಹೇಗೆ ಕಾರ್ಯ ನಿರ್ವಹಿಸುತ್ತೆ? ನಿಮ್ಮದೇ ಕ್ಯೂಆರ್​ ಕೋಡ್​ ಮಾಡೋದೂ ಸುಲಭ

QR ಕೋಡ್

QR ಕೋಡ್

QR ಕೋಡ್ ಸಹಾಯದಿಂದ ಪಾವತಿ ಮಾಡುವುದು ಈಗ ಸುಲಭವಾಗಿದೆ. ಕೋಡ್​ನಲ್ಲಿ URL ಮತ್ತು ಮೊಬೈಲ್ ಸಂಖ್ಯೆಯನ್ನು ಮರೆ ಮಾಡಿ ಇದನ್ನು ರಚಿಸಲಾಗುತ್ತದೆ. QR ಕೋಡ್ ಮೂಲಕ ಪಾವತಿ ಮಾಡುವುದು ಸುಲಭವಾಗಿದೆ. ಆನ್‌ಲೈನ್ ಪಾವತಿಯಿಂದ ಹಿಡಿದು ವ್ಯವಹಾರದವರೆಗೆ ಎಲ್ಲವನ್ನೂ ಕ್ಯೂಆರ್ ಕೋಡ್‌ನೊಂದಿಗೆ ಮಾಡಬಹುದು. QR ಕೋಡ್ ಅನ್ನು ಹೇಗೆ ಸ್ಕ್ಯಾನ್ ಮಾಡುವುದು ಹೇಗೆ?

ಮುಂದೆ ಓದಿ ...
  • Share this:

 ನವದೆಹಲಿ(ಆ. 05): ಆನ್‌ಲೈನ್ ಪಾವತಿ ಪ್ರಕ್ರಿಯೆ ಆರಂಭವಾದಾಗಿನಿಂದ ಸಾಮಾನ್ಯ ಜನರಲ್ಲಿ ಕ್ಯೂಆರ್ ಕೋಡ್ ಎಂಬ ಮಾತು ಕೇಳಿ ಬರಲಾರಂಭಿಸಿದೆ. ನಾವು ಯಾವುದೇ ಖರೀದಿ ಅಥವಾ ಹಣವನ್ನು ವರ್ಗಾಯಿಸಿದಾಗ, QR ಕೋಡ್ ಬಳಸಿ ಪಾವತಿ ಮಾಡುವುದು ಸುಲಭ. QR ಕೋಡ್‌ಗಳು ಅನೇಕ ಪ್ಯಾಕೆಟ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿಯೂ ಕಂಡುಬರುತ್ತವೆ. ಆದರೆ ಈ QR ಕೋಡ್‌ಗಳನ್ನು ಏಕೆ ತಯಾರಿಸಲಾಗುತ್ತದೆ ಅಥವಾ ಇದರ ಅರ್ಥವೇನು? ಎಂದು ನಿಮಗೆ ತಿಳಿದಿದೆಯೇ? ಹಾಗಾದ್ರೆ ಈ ಲೇಖನದಲ್ಲಿ QR ಕೋಡ್ ಎಂದರೇನು ಮತ್ತು ಅದು ದೈನಂದಿನ ಜೀವನದಲ್ಲಿ ಹೇಗೆ ಸಹಾಯಕವಾಗಿದೆ ಎಂದು ತಿಳಿದುಕೊಳ್ಳೋಣ.


QR ಕೋಡ್ ಎಂದರೇನು?


QR ಕೋಡ್‌ ಅಂದ್ರೆ ಕ್ವಿಕ್ ರೆಸ್ಪಾನ್ಸ್​ ಕೋಡ್​(Quick Response Code) ಆಗಿದೆ. ಈ ಮೂಲಕ ಇದು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೆಸರಿನಿಂದಲೇ ತಿಳಿದು ಬರುತ್ತದೆ. QR ಕೋಡ್ ಚೌಕಾಕಾರದ ಬಾಕ್ಸ್‌ನಲ್ಲಿನ ಮಾದರಿಯಾಗಿದ್ದು, ಅದರಲ್ಲಿ URL ಮತ್ತು ಮೊಬೈಲ್ ಸಂಖ್ಯೆಯನ್ನು ಮರೆಮಾಡಲಾಗುತ್ತದೆ. ಇದು ಪ್ಯಾಟರ್ನ್ ರೂಪದಲ್ಲಿದ್ದು, ಇದರಲ್ಲಿ ಯಾವ ನಂಬರ್ ಅಥವಾ ವೆಬ್ ವಿಳಾಸ ಅಡಗಿದೆ ಎಂದು ನೋಡಿದರೂ ಅರ್ಥವಾಗುವುದಿಲ್ಲ.ಹೀಗಾಗೇ ಇಂದು ಜಗತ್ತಿನಾದ್ಯಂತ ಕಂಪನಿಗಳು ಇದನ್ನು ಬಳಸುತ್ತಿವೆ.


ಇದನ್ನೂ ಓದಿ:  QR Code Scam Alert: ಹಣ ಸ್ವೀಕರಿಸೋಕೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕೆ?


QR ಕೋಡ್ ಅನ್ನು ಎಲ್ಲಿ ಬಳಸಲಾಗುತ್ತದೆ?


ವೈಯಕ್ತಿಕ ಬಳಕೆಯ ಬಗ್ಗೆ ಹೇಳುವುದಾದರೆ, ಶಾಪಿಂಗ್ ಅಥವಾ ಯಾವುದೇ ರೆಸ್ಟೋರೆಂಟ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಯನ್ನು ಸುಲಭವಾಗಿ ಮಾಡಬಹುದು. ಇದರೊಂದಿಗೆ ಚಿಲ್ಲರೆ ಹಣ ಜೊತೆಗೊಯ್ಯುವ ಚಿಂತೆ ಇರುವುದಿಲ್ಲ. ಅಥವಾ ಕ್ಯಾಶ್​ ನಿಮ್ಮೊಂದಿಗೆ ಸಾಗಿಸುವ ಅಗತ್ಯವಿಲ್ಲ. ನಿಮ್ಮ ಫೋನ್ ಸಹಾಯದಿಂದ ಪಾವತಿ ಸುಲಭವಾಗುತ್ತದೆ.


ಕೆಲಬವು ಬಾರಿ ಮಾಹಿತಿ ಪಡೆಯಲೂ QR ಕೋಡ್ ಅನ್ನು ಬಳಸಬಹುದು. ಈ ದಿನಗಳಲ್ಲಿ ಪ್ರತಿಯೊಂದು ಉತ್ಪನ್ನಕ್ಕೂ ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ, ಯಾವುದೇ ಉತ್ಪನ್ನದ ಬಗ್ಗೆ ಮಾಹಿತಿಯನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ವ್ಯವಹಾರದಲ್ಲಿ ಕ್ಯೂಆರ್ ಕೋಡ್ ತುಂಬಾ ಸಹಾಯಕವಾಗಿದೆ. QR ಕೋಡ್ ಅನ್ನು ಬ್ಯುಸಿನೆಸ್ ಕಾರ್ಡ್ ಆಗಿಯೂ ಬಳಸಬಹುದು. ಅಲ್ಲದೆ, ಯಾವುದೇ ಉತ್ಪನ್ನವನ್ನು ಪ್ರಚಾರ ಮಾಡಲು QR ಕೋಡ್ ಅನ್ನು ಸಹ ಬಳಸಲಾಗುತ್ತದೆ.


ವೆಬ್‌ಸೈಟ್‌ಗೆ ಲಾಗ್-ಇನ್ ಮಾಡಲು ಸಹ ಇದನ್ನು ಬಳಸಬಹುದು. ಇದು ಪಾಸ್ವರ್ಡ್ ಅನ್ನು ಮತ್ತೆ ಮತ್ತೆ ನಮೂದಿಸುವ ಸಮಯವನ್ನು ಉಳಿಸುತ್ತದೆ. ನೀವು QR ಕೋಡ್‌ನ ಚಿತ್ರವನ್ನು ಸೇವ್ ಮಾಡಿ ಕೂಡಾ ಬಳಸಬಹುದು. ಈ ಮೂಲಕ ಮುಂದಿನ ಬಾರಿಯೂ ಇದನ್ನು ಬಳಕೆ ಮಾಡಬಹುದು. ವಾಟ್ಸಾಪ್ ವೆಬ್ ಇದಕ್ಕೆ ಉದಾಹರಣೆಯಾಗಿದೆ.


QR ಕೋಡ್ ಅನ್ನು ಹೇಗೆ ರಚಿಸುವುದು?


ಯಾರಾದರೂ ತಮ್ಮದೇ ಆದ QR ಕೋಡ್ ಅನ್ನು ರಚಿಸಲು ಬಯಸಿದರೆ, ಅದಕ್ಕಾಗಿ ಯಾರ ಬಳಿಯೂ ಹೋಗಬೇಕಾಗಿಲ್ಲ. ಇದನ್ನು ನಿಮ್ಮ ಫೋನ್‌ನಲ್ಲಿ ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಕೆಲವು ಹಂತಗಳಿವೆ


* ಯಾವುದೇ QR ಕೋಡ್ ಮೇಕರ್ ವೆಬ್‌ಸೈಟ್ ಅನ್ನು ಕ್ಲಿಕ್ ಮಾಡಿ.
* ಇದರ ನಂತರ ವೆಬ್‌ಸೈಟ್ ತೆರೆಯುತ್ತದೆ, ಅಲ್ಲಿ ಅನೇಕ ಆಯ್ಕೆಗಳಿವೆ- URL, ಇಮೇಜ್, VCard, ಇಮೇಲ್ ಮತ್ತು ಇನ್ನೂ ಹೆಚ್ಚಿನ ಆಪ್ಶನ್ ಇರುತ್ತವೆ.
* ನೀವು ವೆಬ್‌ಸೈಟ್ ಅಥವಾ ಇತರ ಉತ್ಪನ್ನದ QR ಕೋಡ್ ಅನ್ನು ರಚಿಸಲು ಬಯಸಿದರೆ, URL ಅನ್ನು ನಮೂದಿಸಬಹುದು.
* URL ಅನ್ನು ನಮೂದಿಸಿದ ತಕ್ಷಣ, ವೆಬ್‌ಸೈಟ್‌ನ QR ಕೋಡ್ ಯಾವುದೇ ವಿಳಂಬವಿಲ್ಲದೆ ಸಿದ್ಧವಾಗುತ್ತದೆ.
* ನೀವು QR ಕೋಡ್ ಅನ್ನು ಉಳಿಸಬಹುದು ಹಾಗೂ ಬಳಸಬಹುದು.


ಇದನ್ನೂ ಓದಿ:  QR Code Scan ಮಾಡುವಾಗ ಹುಷಾರ್! ನಿಮ್ಮ ಹಣಕ್ಕೆ ಕನ್ನ ಬೀಳದಿರಲು ಹೀಗೆ ಮಾಡಿ


QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಹೇಗೆ?


ಯುಪಿಐ ಪಾವತಿಗಾಗಿ ಹಲವು ಮೊಬೈಲ್ ಆ್ಯಪ್‌ಗಳಿವೆ, ಪ್ಲೇಸ್ಟೋರ್ ಮೂಲಕ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಸರು, ಫೋನ್ ಸಂಖ್ಯೆ, ಇಮೇಲ್ ಐಡಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು, ಪಿನ್ ಅಥವಾ ಪಾಸ್‌ಕೋಡ್, ಹಾಗೆಯೇ ಬ್ಯಾಂಕ್ ಖಾತೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಮಾಹಿತಿಯಂತಹ ಅನೇಕ ರೀತಿಯ ಮಾಹಿತಿಯನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕು. ಇದರ ನಂತರ ಅಪ್ಲಿಕೇಶನ್ ಪಾವತಿ ಮಾಡಲು ಸಿದ್ಧವಾಗುತ್ತದೆ.


ಪಾವತಿ ಮಾಡಲು, ಪಾಸ್‌ಕೋಡ್ ಅನ್ನು ಆರಂಭದಲ್ಲಿ ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕು. ಇದರ ನಂತರ, ಮೊದಲ ಸಂಖ್ಯೆಯಲ್ಲಿ ಸ್ಕ್ಯಾನ್ QR ಕೋಡ್ ಆಯ್ಕೆ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ QR ಕೋಡ್ ಸ್ಕ್ಯಾನಿಂಗ್ ಪ್ರಾರಂಭವಾಗುತ್ತದೆ. ಸ್ಕ್ಯಾನ್ ಮಾಡಲು, ಕ್ಯಾಮರಾವನ್ನು QR ಕೋಡ್ ಬಳಿ ಸರಿಸಿ.


ಅಪ್ಲಿಕೇಶನ್ ತಕ್ಷಣವೇ ಸ್ಕ್ಯಾನ್ ಮಾಡುತ್ತದೆ ಮತ್ತು ಪಾವತಿ ಮಾಡಲು ಮೊತ್ತವನ್ನು ನಮೂದಿಸುವ ಆಯ್ಕೆಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮತ್ತು ಅಂತಿಮವಾಗಿ, ಪಾಸ್ಕೋಡ್ ಅನ್ನು ನಮೂದಿಸಿದ ನಂತರ, ಪಾವತಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಯಾವುದೇ UPI ಪಾವತಿ ಅಪ್ಲಿಕೇಶನ್‌ನಲ್ಲಿ ಸ್ಕ್ಯಾನ್ ಮಾಡಲು ಇನ್ನೊಂದು ಮಾರ್ಗವಿದೆ. ಸ್ಕ್ಯಾನ್ ಮಾಡಲು ನೀವು ಅಪ್ಲಿಕೇಶನ್ ಅನ್ನು ತೆರೆದಾಗ, ಅದರಲ್ಲಿ ಗ್ಯಾಲರಿ ಆಯ್ಕೆ ಇರುತ್ತದೆ. ಈ ಗ್ಯಾಲರಿಯಲ್ಲಿ QR ಕೋಡ್‌ನ ಚಿತ್ರವನ್ನು ಹಾಕುವ ಮೂಲಕವೂ ಪಾವತಿ ಮಾಡಬಹುದು.

Published by:Precilla Olivia Dias
First published: