Cryptocurrency After Death: ಸಾವಿನ ನಂತರ ನಮ್ಮ ಹೆಸರಲ್ಲಿರುವ ಕ್ರಿಪ್ಟೋ ಕರೆನ್ಸಿ, ಎನ್‍ಎಫ್‍ಟಿ ಏನಾಗುತ್ತೆ?

ಒಂದೊಮ್ಮೆ ನಿಮ್ಮ ಸಾವಿನ ನಂತರ ನೀವು ಯಾರಿಗೆ ನಿಮ್ಮ ಡಿಜಿಟಲ್ ಸಂಪತ್ತು ಸಿಬೇಕೆಂದು ನಿರ್ಧರಿಸುವಿರೋ ತದನಂತರ ವಕೀಲರ ಸಹಾಯದಿಂದ ಆ ಕುರಿತು ವಿಲ್ ಪತ್ರ ಸಿದ್ಧಪಡಿಸಿ ಅದರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರ ನೀಡಿ.

ಕ್ರಿಪ್ಟೋ ಕರೆನ್ಸಿ

ಕ್ರಿಪ್ಟೋ ಕರೆನ್ಸಿ

  • Share this:
ಸಾವು ಎಂಬ ವಿಷಯದ ಬಗ್ಗೆ ಮಾತನಾಡಲು ಇಷ್ಟವಿಲ್ಲದಿದ್ದರೂ, ಕೆಲ ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಆ ಬಗ್ಗೆ ಯೋಚನೆ ಮಾಡಲೇಬೇಕಾಗುತ್ತದೆ. ಉದಾಹರಣೆಗೆ ಆಸ್ತಿ ವಿಷಯ ಬಂದಾಗ ಮುಂದೆ ಅದು ನೀವಿಲ್ಲದ ಸಂದರ್ಭದಲ್ಲಿ ಕ್ರಮಬದ್ಧವಾಗಿ ನೀವು ಬಯಸಿರುವ ಪ್ರೀತಿ ಪಾತ್ರದವರಿಗೆ ತಲುಪಬೇಕೆಂದಿದ್ದಲ್ಲಿ (Cryptocurrency After Death) ನೀವು ಮುಂಚಿತವಾಗಿಯೇ ಸಾವಿನ ಬಗ್ಗೆ ಯೋಚಿಸಲೇಬೇಕು. ಅದೇ ರೀತಿ ಈಗ ಎಲ್ಲೆಡೆ ನಿಧಾನವಾಗಿ ಕ್ರಿಪ್ಟೋ ಕರೆನ್ಸಿ (Cryptocurrency) ಹಾಗೂ ಎನ್‍ಎಫ್‍ಟಿಗಳು (NFT) ಡಿಜಿಟಲ್ ಸಂಪತ್ತಾಗಿ (Digital Wallets) ತಮ್ಮ ಅಧಿಪತ್ಯ ಸ್ಥಾಪಿಸುತ್ತಿದ್ದು ಅನೇಕ ಜನರು ಈಗ ಆ ಕ್ಷೇತ್ರದೆಡೆ ಆಕರ್ಷಿತರಾಗಿದ್ದು ಈ ಸಂಪತ್ತಿನ ಗಳಿಕೆಗಾಗಿ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ ರೂಢಿಯಲ್ಲಿರುವ ಸಂಪ್ರದಾಯದಂತೆ ಕಾನೂನಿನ ನಿಯಮಗಳು ಹಾಗೂ ವಿಲ್ ಪತ್ರದನುಸಾರ ವ್ಯಕ್ತಿಯೊಬ್ಬರ ಬಂಗಾರ, ಜಮೀನು ಹಾಗೂ ಇತರೆ ರೂಪದ ಆಸ್ತಿಗಳು ಯಾರಿಗೆ ಸಲ್ಲಬೇಕು ಎಂಬುದನ್ನು ಹೇಳಬಹುದಾಗಿದೆ.

ಕ್ರಿಪ್ಟೋ ಕರೆನ್ಸಿ ಹಾಗೂ ಎನ್‍ಎಫ್‍ಟಿಗಳ ಗತಿ ಮುಂದೇನಾಗಬಹುದು?
ಆದರೆ ಇದೇ ವಿಷಯ ಕ್ರಿಪ್ಟೋ ಕರೆನ್ಸಿ ವಿಷಯಕ್ಕೆ ಬಂದರೆ ಅಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಈ ಕ್ಷೇತ್ರವು ತುಂಬಾನೇ ವೊಲಟೈಲ್ ಆಗಿದ್ದು ಇಲ್ಲಿ ನಿಮ್ಮ ಸಂಪತ್ತು ಕಳೆದುಹೋಗುವ ಅಥವಾ ಮಿಸ್ ಪ್ಲೇಸ್ ಆಗಬಹುದಾದ ಸಾಧ್ಯತೆ ಬಹಳಷ್ಟಿದೆ. ವ್ಯಕ್ತಿಯ ಸಾವಿನ ನಂತರ ಆತನ ಕ್ರಿಪ್ಟೋ ಕರೆನ್ಸಿ ಹಾಗೂ ಎನ್‍ಎಫ್‍ಟಿಗಳ ಗತಿ ಮುಂದೇನಾಗಬಹುದೆಂಬುದರ ಬಗ್ಗೆ ತಿಳಿಯೋಣ.

ಡಿಜಿಟಲ್ ವ್ಯಾಲೆಟ್ ಬಳಕೆ ಏಕೆ?
ಕ್ರಿಪ್ಟೋ ಕರೆನ್ಸಿ ಹಾಗೂ ಎನ್‍ಎಫ್‍ಟಿಗಳನ್ನು ಸಂರಕ್ಷಿಸಿಕೊಂಡು ಉಳಿಸಿಟ್ಟುಕೊಳ್ಳಲು ಡಿಜಿಟಲ್ ವ್ಯಾಲೆಟ್ ಅನ್ನು ಬಳಸಬೇಕಾಗುತ್ತದೆ. ಈ ಡಿಜಿಟಲ್ ವ್ಯಾಲೆಟ್ ಅನ್ನು ಹಾಗೆ ತೆರೆಯಲು ಸಾಧ್ಯವಿಲ್ಲ.

ನಾಲ್ಕು ಮಿಲಿಯನ್ ಬಿಟ್ ಕಾಯಿನ್‌ಗಳಲ್ಲಿ ಯಾವುದೇ ವ್ಯವಹಾರಗಳಿಲ್ಲ
ಅದಕ್ಕೆ ತನ್ನದೇ ಆದ ಸುರಕ್ಷತೆ ಇದ್ದು ಸರಿಯಾದ ಪಾಸ್‌ವರ್ಡ್‌ ನಮೂದಿಸಿದಾಗ ಮಾತ್ರ ತೆರೆದುಕೊಳ್ಳುತ್ತದೆ. ಲೆಕ್ಕಾಚಾರವೊಂದರ ಪ್ರಕಾರ, ಪ್ರಸ್ತುತ ಈ ಕ್ಷೇತ್ರದಲ್ಲಿ ನಾಲ್ಕು ಮಿಲಿಯನ್ ಬಿಟ್ ಕಾಯಿನ್‌ಗಳು ಯಾವುದೇ ವ್ಯವಹಾರಗಳಿಲ್ಲದೆ ಒಂದೆಡೆ ಹಾಗೆ ಉಳಿದುಕೊಂಡುಬಿಟ್ಟಿವೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಆ ಕಾಯಿನ್‌ಗಳ ಮಾಲೀಕರು ಅದನ್ನು ವ್ಯಾಲೆಟ್‌ನಲ್ಲಿ ಶೇಖರಿಸಿದ್ದು ಹಾಗೂ ಪ್ರಸ್ತುತ ಈಗ ಜೀವಿತವಿಲ್ಲದೆ ಇರುವುದಾಗಿದೆ. ಹಾಗಾಗಿ ಡಿಜಿಟಲ್ ವ್ಯಾಲೆಟ್ ಅಕ್ಸೆಸ್ ಮಾಡುವುದು ಇದರಲ್ಲಿ ಪ್ರಮುಖವಾಗುತ್ತದೆ ಎಂಬುದನ್ನು ತಿಳಿದಿರಬೇಕು.

ಅನಿರೀಕ್ಷಿತ ಸಾವಿನ ನಂತರ ಏನಾಗುತ್ತೆ?
ಉದಾಹರಣೆಗೆ, 2018 ರಲ್ಲಿ ಮ್ಯಾಥಿ ಮೆಲ್ಲಾನ್ ಎಂಬ ಹೂಡಿಕೆದಾರ ಒಂದು ಬಿಲಿಯನ್ ಡಾಲರ್ ಮೊತ್ತದ ಕ್ರಿಪ್ಟೋ ಸಂಪತ್ತನ್ನು ಸಂರಕ್ಷಿಸಿಟ್ಟಿದ್ದ. ಆದರೆ ಅವನ ಅನಿರೀಕ್ಷಿತ ಸಾವಿನಿಂದ ಆ ಸಂಪತ್ತೆಲ್ಲ ಹಾಗೇ ಉಳಿದುಕೊಂಡು ನಷ್ಟವಾಯಿತು. ಹಾಗೂ, 2019 ರಲ್ಲಿ ಕೆನಡಾದ ಕ್ವಡ್ರಿಗಾ ಸಿಎಕ್ಸ್ ಎಂಬ ಸಂಸ್ಥೆಯ ಸಿಇಒ ಗೆರಾಲ್ಡ್ ಕಾಟನ್ ಎಂಬುವವರು ಮಾತ್ರ 190 ಮಿಲಿಯನ್ ಡಾಲರ್ ಮೊತ್ತದ ಇಥಿರಿಯಂ ಇರುವ ವ್ಯಾಲೆಟ್‌ಗೆ ಅಕ್ಸೆಸ್ ಹೊಂದಿದ್ದರು ಹಾಗೂ ಅವರ ಅನಿರೀಕ್ಷಿತ ಸಾವಿನಿಂದ ಆ ಮೊತ್ತವೂ ಯಾರಿಗೂ ಸಿಗಲಿಲ್ಲ.

ಸುರಕ್ಷಿತವಾದ ಒಂದು ಪಾಸ್‌ವರ್ಡ್‌ ಇರುತ್ತದೆ
ಮೇಲಿನ ಎರಡು ಉದಾಹರಣೆಗಳಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ ಕ್ರಿಪ್ಟೋ ಸಂಪತ್ತನ್ನು ಕ್ರಿಪ್ಟೋ ವ್ಯಾಲೆಟ್‌ನಲ್ಲಿ ಸಂರಕ್ಷಿಸಿಡಬಹುದಾಗಿದ್ದು, ಅದನ್ನು ತೆರೆಯಲು ಸುರಕ್ಷಿತವಾದ ಒಂದು ಪಾಸ್‌ವರ್ಡ್‌ ಇರುತ್ತದೆ.

ಪಾಸ್​ವರ್ಡ್ ತಿಳಿಸಿಡಿ
ಈ ಎಲ್ಲ ವ್ಯವಸ್ಥೆಯು ಬ್ಲಾಕ್ ಚೈನ್ ತಂತ್ರಜ್ಞಾನದ ಆಧಾರದಲ್ಲಿ ನಿರ್ಮಿಸಲಾಗಿರುತ್ತದೆ. ಹಾಗಾಗಿ ನೀವೇನಾದರೂ ನಿಮ್ಮ ಸಂಪತ್ತಿನ ಅಕ್ಸೆಸ್ ನಿಮ್ಮ ಪ್ರೀತಿ ಪಾತ್ರದವರಿಗೆ ಮುಂದೆ ಸಿಗಬೇಕೆಂದರೆ, ಆ ಬಗ್ಗೆ ನೀವು ಮುಂಚೆಯೇ ಯಾರಿಗೆ ಸಿಗಬೇಕೆಂಬುದನ್ನು ಖಚಿತವಾಗಿ ದೃಢಪಡಿಸಿಕೊಂಡು ತದನಂತರ ನಿಮ್ಮ ಪಾಸ್‌ವರ್ಡ್‌ ಅನ್ನು ಅವರಿಗೆ ನೀಡಿದರೆ ಉತ್ತಮ. ಇಲ್ಲಿ ನೀವು ನಿಮ್ಮಿಚ್ಛೆಯಂತೆ ನಿಮ್ಮ ಆಸ್ತಿಯ ಹಕ್ಕುದಾರರಾಗುವವರು ನಿಮ್ಮ ರೀತಿಯಲ್ಲೇ ಈ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ಅರಿವು ಉಳ್ಳಬೇಕಾಗಿರುವುದು ಅವಶ್ಯಕ, ಇಲ್ಲದಿದ್ದರೆ ಇಲ್ಲೂ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಡಿಜಿಟಲ್ ವ್ಯಾಲೆಟ್ ಎಲ್ಲಿ ಇರುತ್ತದೆ?
ಉದಾಹರಣೆಗೆ, ಸುರೇಶ್ ಎಂಬ ವ್ಯಕ್ತಿಯ ಬಳಿ ನಾಲ್ಕು ಬಿಟ್ ಕಾಯಿನ್ ಸಂಪತ್ತಿದೆ ಎಂದಿಟ್ಟುಕೊಳ್ಳಿ. ಅವರು ಕಾರಣಾಂತರಗಳಿಂದ ತನ್ನೆಲ್ಲ ಬಿಟ್ ಕಾಯಿನ್ ತನ್ನ ಸಹೋದರ ರಮೇಶ್ ಪಡೆಯಬೇಕೆಂದು ಇಚ್ಛೆ ವ್ಯಕ್ತಪಡಿಸಿ ಸಾವಿಗೀಡಾಗುತ್ತಾನೆ. ಆಗ ರಮೇಶನಿಗೆ ಸುರೇಶ್ ತನಗಾಗಿ ಬಿಟ್ಟು ಹೋಗಿರುವ ಬಿಟ್ ಕಾಯಿನ್ ಬಗ್ಗೆ ಗೊತ್ತಿದೆಯಾದರೂ ಅದು ಸಂರಕ್ಷಿಸಲ್ಪಟ್ಟ ವ್ಯಾಲೆಟ್ ಅನ್ನು ಹೇಗೆ ತೆರೆಯಬೇಕು? ಅದು ಎಲ್ಲಿ ಇರುತ್ತದೆ ಎಂಬುದರ ಬಗ್ಗೆ ಜ್ಞಾನವಿಲ್ಲವಾಗಿರುತ್ತದೆ. ಹಾಗಾಗಿ ರಮೇಶ್ ಇನ್ನೊಮ್ಮೆ ತಂತ್ರಜ್ಞನನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಆದರೆ, ಆ ತಂತ್ರಜ್ಞ ಸುರೇಶನ ವ್ಯಾಲೆಟ್ ಅಕ್ಸೆಸ್ ಮಾಡಿ ರಮೇಶನಿಗೆ ಗೊತ್ತಾಗದಂತೆಯೇ ಎಲ್ಲ ಸಂಪತ್ತನ್ನು ತನ್ನ ವ್ಯಾಲೆಟ್‌ಗೆ ವರ್ಗಾಯಿಸುವ ಅಪಾಯ ಅಥವಾ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಪಾಯ ಇಲ್ಲವೇ ಇಲ್ಲವೇ?
ಹಾಗಾಗಿ ಈ ಕ್ಷೇತ್ರದಲ್ಲಿ ವೈಯಕ್ತಿಕವಾದ ಕೀ ಪಾಸ್‌ವರ್ಡ್‌ ಅನ್ನು ಒಬ್ಬರಿಗೆ ಕೊಡುವುದು ಅತಿಯಾದ ಅಪಾಯ ಎಂದು ಭಾವಿಸಲಾಗಿದ್ದು ಬಹುತೇಕರು ಈ ಬಗ್ಗೆ ವ್ಯಾಲೆಟ್ ಹೊಂದಿರುವ ಮಾಲೀಕರು ತಮ್ಮ ವಿಶ್ವಾಸಕ್ಕೆ ಪಾತ್ರವಾದ ಹಲವು ಜನರಲ್ಲಿ ಒಂದೊಂದು ಭಾಗದ ಕೀ ಮಾಹಿತಿ ನೀಡುವುದು ಉತ್ತಮ ಎಂದು ಭಾವಿಸಲಾಗುತ್ತದೆ. ಆದರೂ ಇದರಲ್ಲಿ ಅಪಾಯ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಹಾಗಾದರೆ ಸಂಪತ್ತನ್ನು ಸುರಕ್ಷಿತವಾಗಿರಿಸಲು ಏನೆಲ್ಲ ಮಾಡಬಹುದು?
* ಮೊದಲಿಗೆ ಆನ್‌ಲೈನ್‌ ವ್ಯಾಲೆಟ್ ಬದಲು ಭೌತಿಕವಾದ ವ್ಯಾಲೆಟ್ ನಿರ್ಮಿಸುವ ನಿರ್ಧಾರ ಮಾಡಿ. ಆನ್‌ಲೈನ್‌ನಲ್ಲಿ ವ್ಯಾಲೆಟ್ ಸೃಷ್ಟಿ ಹಾಗೂ ಬಳಕೆ ಬಲು ಸರಳ. ಅಲ್ಲದೆ, ಸೈಬರ್ ಆಕ್ರಮಣಗಳಿಗೂ ಆನ್‌ಲೈನ್‌ ವ್ಯಾಲೆಟ್‌ಗಳು ಬಲಿಯಾಗುವ ಸಾಧ್ಯತೆ ಹೆಚ್ಚು. ಭೌತಿಕ ರೂಪದ ವ್ಯಾಲೆಟ್ ಖಾಸಗಿ ಕೀ ಗಳನ್ನು ಉಪಕರಣಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿರುತ್ತದೆ. ಈ ಮೂಲಕ ಯಾವುದೇ ಹ್ಯಾಕರ್ ಇದನ್ನು ಭೇದಿಸುವುದು ಅತ್ಯಂತ ಕಠಿಣ ಅಥವಾ ಹೆಚ್ಚು ಕಡಿಮೆ ಸಾಧ್ಯವೇ ಇಲ್ಲ.

ಇದನ್ನೂ ಓದಿ: LIC IPO Release Date: ಎಲ್​ಐಸಿ ಐಪಿಒ ಬಿಡುಗಡೆ ದಿನಾಂಕ ಖಚಿತ, ಯಾವತ್ತು ಬಿಡುಗಡೆ ತಿಳಿಯಿರಿ

* ತದನಂತರ ನಿಮ್ಮ ಪ್ರೀತಿಪಾತ್ರದವರಿಗೆ ನಿಮ್ಮ ಕ್ರಿಪ್ಟೋ ಸಂಪತ್ತು ಯಾವುದೇ ರೀತಿಯ ಅಡಚಣೆಯಿಲ್ಲದೆ ಸಿಗುವಂತೆ ನಿಮ್ಮ ವ್ಯಾಲೆಟ್ ಅನ್ನು ಹೇಗೆ ಅಕ್ಸೆಸ್ ಮಾಡಬಹುದೆಂಬುದರ ಬಗ್ಗೆ ಹಂತ ಹಂತವಾಗಿ ಒಂದೆಡೆ ಬರೆದಿಟ್ಟು ಅದನ್ನು ಪಾಸ್‌ವರ್ಡ್‌ ಆಧಾರಿತ ಡಿಸ್ಕ್‌ನಲ್ಲಿ ಸಂರಕ್ಷಿಸಿಟ್ಟು ಆ ಬಗ್ಗೆ ಅವರಿಗೆ ಗೊತ್ತಾಗುವಂತೆ ಕ್ರಮ ತೆಗೆದುಕೊಂಡಿರಿ.

ಸ್ಪಷ್ಟವಾಗಿ ಬರೆದಿಡಿ.

* ನೀವು ನಿಮ್ಮ ಪ್ರೀತಿ ಪಾತ್ರದವರಿಗೆ ಕ್ರಿಪ್ಟೋ ಮಾಹಿತಿ ನೀಡುವಾಗ ಅವರಿಗೆ ಈ ಬಗ್ಗೆ ಏನೂ ಗೊತ್ತೇ ಇಲ್ಲ ಎಂಬುದನ್ನು ಪರಿಕಲ್ಪಿಸಿಕೊಂಡು ಒಬ್ಬ ಪ್ರಾರಂಭಿಕ ಆ ಕ್ಷೇತ್ರವನ್ನು ಹೇಗೆ ಅರ್ಥೈಸಿಕೊಂಡು ಅದರಲ್ಲಿನ ವ್ಯಾಲೆಟ್ ಅಕ್ಸೆಸ್ ಮಾಡಬಹುದು ಎನ್ನುವುದನ್ನು ಸ್ಪಷ್ಟವಾಗಿ ಬರೆದಿಡಿ.

* ನೀವು ಬಹು ಪರದೆಯ ಸುರಕ್ಷಿತ ಕವಚ ಹೊಂದಿದ್ದಲ್ಲಿ ಅದನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ. ಒಟಿಪಿ ಮೂಲಕ ದೃಢಪಡಿಸುವಿಕೆಯಿದ್ದಲ್ಲಿ ಸ್ಥಳ ಹಾಗೂ ಅದಕ್ಕೆ ಬಳಸಲ್ಪಡುವ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಿ.

ಒಟ್ಟಿನಲ್ಲಿ ನಿಮ್ಮ ಪ್ರೀತಿ ಪಾತ್ರದವರು ಯಾವ ಮೂರನೇ ವ್ಯಕ್ತಿಯ ಸಹಾಯವಿಲ್ಲದೆ ಸ್ವಯಂ ಆಗಿಯೇ ಅವರು ಕ್ರಮಗಳನ್ನು ಪಾಲಿಸುವ ಮೂಲಕ ನಿಮ್ಮ ವ್ಯಾಲೆಟ್ ಪಡೆಯುವಂತೆ ಸೂಚನೆಗಳನ್ನು ಸ್ಪಷ್ಟವಾಗಿ ಬರೆದಿಟ್ಟು ಅದನ್ನು ಸುರಕ್ಷಿತವಾಗಿರಿಸಿ.

ಆಸ್ತಿ ಪತ್ರ
ಒಂದೊಮ್ಮೆ ನಿಮ್ಮ ಸಾವಿನ ನಂತರ ನೀವು ಯಾರಿಗೆ ನಿಮ್ಮ ಡಿಜಿಟಲ್ ಸಂಪತ್ತು ಸಿಬೇಕೆಂದು ನಿರ್ಧರಿಸುವಿರೋ ತದನಂತರ ವಕೀಲರ ಸಹಾಯದಿಂದ ಆ ಕುರಿತು ವಿಲ್ ಪತ್ರ ಸಿದ್ಧಪಡಿಸಿ ಅದರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರ ನೀಡಿ.

ಇದನ್ನೂ ಓದಿ: Workforce Stop: ಕೆಲಸ ಹುಡುಕೋದನ್ನೇ ನಿಲ್ಲಿಸ್ತಿದ್ದಾರೆ ಭಾರತೀಯರು! ಏನಪ್ಪಾ ವಿಷ್ಯ ಇದು?

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ನೀವು ನಿಮ್ಮ ವಿಲ್‌ನಲ್ಲಿ ಕ್ರಿಪ್ಟೋ ಕುರಿತು ದಾಖಲಿಸದಿದ್ದರೆ ಅದು ನಿಮ್ಮ 'ರೆಸಿಡ್ಯೂ' ಆಸ್ತಿಯಾಗಿ ಯಾರಿಗೂ ಹೋಗದೆ ಹಾಗೇ ಉಳಿದುಬಿಡುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರವಿರಲಿ. ನಿಮ್ಮ ಕ್ರಿಪ್ಟೋ ಆಸ್ತಿ ಯಾರಿಗೆ ಸೇರಬೇಕು ಹಾಗೂ ಅವರು ಅದನ್ನು ಎಲ್ಲಿ ಪರಿಶೀಲಿಸಬಹುದು ಎಂಬುದರ ಬಗ್ಗೆ ವಿಲ್ ಪತ್ರದಲ್ಲಿ ವಿವರವಾಗಿ ಬರೆದಿಡಬಹುದು.
Published by:guruganesh bhat
First published: